ವಿಷಯಕ್ಕೆ ಹೋಗು

ಪುಟ:ಬಾಳ ನಿಯಮ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ಪ್ರೇಮ ಹೀಗೆ ಕರಡಿಯು ಯೋಚಿಸಿರಬೇಕು. ಆದರೆ ಮನುಷ್ಯ ಓಡಲೇ ಇಲ್ಲ. ಇದ್ದ ಜಾಗಬಿಟ್ಟು ಕದಲಲಿಲ್ಲ. ಮಿತಿ ಮಾರಿದ ಹೆದರಿಕೆಯುಂಟಾದರೆ, ಅತಿ ಧೈರ್ಯ ತಾಳುವ ಸಂಭವವೂ ಉಂಟು. ಹಾಗೆಯೆ ಮನುಷ್ಯನೂ ಧೈರ್ಯ ತಂದು ಕೊಂಡನು. ಪ್ರಾಣಿಯಂತೆಯೆ ಅವನೂ ಭೀಕರವಾಗಿ ಗುರುಗುಟ್ಟಿದನು. ತನ್ನ ಜೀವಮೂಲಕ್ಕೆ ಸಂಬಂಧಿಸಿದ ಹೆದರಿಕೆಯಿದ್ದರೂ, ತೋರ್ಪಡಿಸದೆ ಸೂಕ್ತ ಮುಖವಾಡವನ್ನೇ ಹಾಕಿದ್ದನು. ಕರಡಿಯು ಒಂದು ಪಕ್ಕಕ್ಕೆ ಸರಿಯಿತು ; ಭಯವಿಲ್ಲದೆ ನೆಟ್ಟಗೆ ನಿಂತಿದ್ದ ಸಮಸ್ಯಾತ್ಮಕ ಪ್ರಾಣಿಯನ್ನು ನೋಡಿ ಗಾಬರಿಪಟ್ಟಿರಬೇಕು ! ವಿಪತ್ತು ಸೂಚಿಸುವಂತೆ ಹೌಹಾರುತ್ತ ಹೊರಟುಹೋಯಿತು. ಅಷ್ಟಾದರೂ ಮನುಷ್ಯ ಚಲಿಸಲಿಲ್ಲ. ಅಪಾಯದ ಸಂಭವ ಕೊನೆಗಾಣುವ ತನಕ ಶಿಲಾವಿಗ್ರಹದಂತೆ ನಿಂತಿದ್ದನು. ಆಮೇಲೆ ಧೈರ್ಯದಿಂದ ಸಡಿಲಗೊಂಡರೂ, ದೇಹ ನಡುಗುತಿತ್ತು. ತೇವಗೊಂಡ ಪಾಚಿಯ ಮೇಲೆಯೇ ಕುಸಿದುಬಿದ್ದನು. ಈಗ ಅವನಿಗೆ ಹೊಸ ರೀತಿಯ ಹೆದರಿಕೆಯುಂಟಾಯಿತು....ಹೊಟ್ಟೆ ಗಿಲ್ಲದೆ ತಾನು ಸಾಯಬಹುದು ; ಅದರಲ್ಲಿ ಅವನಿಗೆ ಸ್ವಲ್ಪವೂ ಭಯವಿಲ್ಲ. ಆದರೆ ಇಷ್ಟು ಬೇಗ ತಾನು ಕೊನೆಗಾಣುವುದೇ ! ಹಸಿದಿದ್ದರೂ, ಬದುಕಿ ಬಾಳ ಬೇಕೆಂಬ ಸ್ಫೂರ್ತಿಯುತ ಅಂಶಗಳು ತನ್ನಲ್ಲಿ ಇನ್ನೂ ಉಳಿದಿವೆ. ಅವುಗಳ ಸಂಪೂರ್ಣ ಪ್ರಯೋಜನ ಪಡೆಯುವುದಕ್ಕಿಂತ ಮುಂಚೆ, ತಾನು ಯಾವುದೋ ಪ್ರಬಲ ಶಕ್ತಿಗೆ ಸಿಕ್ಕಿ ದೇಹವನ್ನು ನಾಶಪಡಿಸಿಕೊಂಡರೆ ತುಂಬಾ ಅನ್ಯಾಯ!.... ಕರಡಿಯೇನೋ ಬಂದ ದಾರಿ ಹಿಡಿಯಿತು; ಆದರೆ ಈ ಪ್ರದೇಶದಲ್ಲಿ ಬೇಕಾದಷ್ಟು ತೋಳಗಳಿವೆ! ಶೂನ್ಯ ವಾತಾವರಣದಲ್ಲಿ ಅವುಗಳ ಕೂಗಾಟ, ವಿಪತ್ತು ಸೂಚಿಸುವ ಡಂಗುರದಂತಿತ್ತು. ಬಿರುಗಾಳಿಗೆದ್ದ ಡೇರೆಯನ್ನು ಹಿಡಿದು ಜಗ್ಗಿಸುವಂತೆ ಅವನು ಗಾಳಿಯೊಡನೆ ಗುದ್ದಾಡಿದನು.

  • ಆಗಾಗ ಎರಡೆರಡು ಅಥವಾ ಮೂರು ಮೂರು ತೋಳಗಳು ಅವನ ದಾರಿಗೆ ಅಡ್ಡಲಾಗಿ ಸಾಗುತಿದ್ದವು. ಅವನನ್ನು ನೋಡಿದರೂ ನೋಡದ ಹಾಗೆ ದೂರ ಸರಿಯುತಿದ್ದವು ! ಇದಕ್ಕೆ ಎರಡು ಕಾರಣಗಳಿದ್ದುವು ; ಗುಂಪಿನಲ್ಲಿ ಸಾಕಷ್ಟು ತೋಳಗಳ ಸಂಖ್ಯೆ ಇಲ್ಲದಿದ್ದುದು, ಒಂದು ; ಎರಡನೆಯದಾಗಿ ಅವು ಕ್ಯಾರಿಬೌ ಪ್ರಾಣಿಯನ್ನು ಬೇಟೆಯಾಡುತಿದ್ದುವು. ಎಷ್ಟಾದರೂ ಕ್ಯಾರಿಬೌ ಎದುರುಬಿದ್ದು ಕಾದಾಡುವ ಪ್ರಾಣಿಯಲ್ಲ. ಆದರೆ ನೆಟ್ಟಗೆ ನಡೆಯುತ್ತಿರುವ ಈ ನವೀನ ಪ್ರಾಣಿಯಾದರೋ ಆಶ್ಚರ್ಯಕರವಾಗಿದೆ ; ಕಾಲುಕೆರೆದು ಕಚ್ಚ