XL Vi ಉಪೋದ್ಘಾತ
8. ಆರೋಗ್ಯದ ಕಾಪಾಡುವಿಕೆಗಾಗಿ ಸರ್ವ ಜನರು ತಿಳಿದು ಸದಾ ಆಚರಿಸಬೇಕಾದ ಆಯುರ್ವೇದೀಯ ತತ್ವಗಳು ಮತ್ತು ಅವುಗಳ ಆಚರಣೆಯ ವ್ಯತ್ಯಾಸದಿಂದ ಉಂಟಾಗುವ ಅಲ್ಪ ಅಸುಖಗಳಿಗೆ ತಕ್ಕವಾದ ಪರಿಹಾರಜ್ಞಾನ ಈ ಭಾರತೀಯರಲ್ಲಿ ಅನಾದಿಯಿಂದ ಪರಂಪರೆಯಾಗಿ ಬಂದು ಅವರು ಪ್ರಯೋಜನ ಪಡುತ್ತಿದ್ದರು. ಇಲ್ಲಿ ಆಚರಣೆಯಲ್ಲಿದ್ದ ಶುದ್ಧಮುದ್ರಿಕೆ, ಪೂಜೆಪುನಸ್ಕಾರ, ಭೋಜನನಿಯಮ, ಸ್ನಾನ, ಅಭ್ಯಂಗ, ಶೌಚ, ಸೂತಿಕಾಚರಣೆ, ಉಪವಾಸ ಮುಂತಾದವುಗಳಿಗೆಲ್ಲ ಆರೋಗ್ಯಶಾಸ್ತ್ರವೇ ಬುನಾದಿ. ಅರುಣೋದಯದಲ್ಲಿ ಮನೆ ಸ್ತ್ರೀಯರು ಶಂಖ ಊದುವ ವಾಡಿಕೆಯು ಮನೆಯವರು ಅಷ್ಟರಲ್ಲಿಯೇ ಏಳಬೇಕೆಂಬ ಉದ್ದೇಶದಿಂದ ಮತ್ತು ಸಂಜೆಯ ಶಂಖ ಊದುವಿಕೆ ಅವಶ್ಯವಿಲ್ಲದ ಕಿಟಿಕಿ ಬಾಗಲುಗಳನ್ನು ಹಾವುಗಳ, ಕಳ್ಳರ ಮತ್ತು ರಾತ್ರಿಯ ತಂಪಾದ ಗಾಳಿಯ ಭಯಕ್ಕಾಗಿ ಮುಚ್ಚಬೇಕೆಂಬ ಉದ್ದೇಶದಿಂದ, ಉಂಟಾದ್ದೆಂತಕಾಣುತ್ತದೆ. ಇಂಧಾ ಆಚರಣೆಗಳೆಲ್ಲ ಮಿಧ್ಯಾಧರ್ಮಕ್ಕೆ ಸೇರಿದವು ಮತ್ತು ಅಪಾರ್ಥ ಎಂತಪಾಶ್ಚಾತ್ಯ ವಿದ್ಯೆಯ ಪ್ರಬಲತ್ವದಿಂದುಂಟಾದ ದೃಷ್ಟಿದೋಷಕ್ಕೆ ಕಂಡು ಅವುಗಳಲ್ಲಿ ನಮ್ಮವರ ಶ್ರದ್ದೆಯು ದಿನೇ ದಿನೇ ಕಡಿಮೆಯಾಗುತ್ತಾ ಬರುತ್ತದೆ ಪ್ರತಿ ಮನೆಯಲ್ಲಿ ವೃದ್ದರಾದ ಸ್ತ್ರೀಪುರುಷರುಗಳಿಗೆ ಸಾಧಾರಣವಾಗಿ ಉಂಟಾಗುವ ದೇಹದ ಅಸುಖವು ಯಾವ ದೋಷದಿಂದ ಮತ್ತು ಅದಕ್ಕೆ ಸುಲಭವಾದ ಪ್ರತಿಕ್ರಿಯೆ ಯಾವದು ಎಂಬದು ಮತ್ತು ಸಾಧಾರಣವಾಗಿ ಉಪಯೋಗಿಸಲ್ಪಡುವ ಅನ್ನಪಾನಭಕ್ಷ್ಯಭೋಜ್ಯಾದಿಗಳ ಗುಣದೋಷಗಳು ತಿಳಿದೇ ಇದ್ದವು. ಅವರ ಅನುಭವವು ಈಗಿನ ಪಾಶ್ಚಾತ್ಯ ವಿದ್ಯಾಭೂಷಣವನ್ನು ಧರಿಸಿಕೊಂಡ ತರುಣರ ದೃಷ್ಟಿಗೆ ಅನರ್ಧವಾಗಿ ಕಂಡು, ಉಪಯೋಗಿಸಲ್ಪಡದ ಕಬ್ಬಿಣದ ಶಸ್ತ್ರದಂತೆ, ಕ್ಷಯಿಸುತ್ತಾ ಬಂತು ಮನೆಯ ಸಮೀಪದಲ್ಲಿ ತನ್ನಂತೆ ಬೆಳೆಯುವ ಗಿಡಮೂಲಿಕೆಗಳ ಪ್ರಯೋಜನವನ್ನು ತಿಳಿಯದೆ, ಅವುಗಳನ್ನು ಕಿತ್ತು ಬಿಸಾಡುತ್ತಾರೆ. ಈ ದಿವಸಗಳಲ್ಲಿ ಹಳ್ಳಿಯ ಹೆಂಗಸರೊಳಗೆ ಸಹ 'ಗರುಗ' ಅಂದರೆ ಯಾವದು? 'ಹೊನಗನೆ' ಎಂದರೆ ಯಾವದು? ಎಂಬ ತಿಳಿವಳಿಕೆ ಇಲ್ಲದವರು ಅನೇಕರಿದ್ದಾರೆ ಆಯುರ್ವೇದ ತಿಳಿದವನಿಗೆ ಅಂಧಾ ರೂಢಿಯಾಗಿ ಬಹು ಕಡೆಗಳಲ್ಲಿ ಬೆಳೆಯುವ ಗಿಡಗಳಿಂದಲೇ ಅನೇಕ ರೋಗಗಳನ್ನು ವಾಸಿಮಾಡುವದಕ್ಕೆ ಸಾಧ್ಯವಾಗುತ್ತದೆ.
9. ಆಯುರ್ವೇದೀಯ ಜ್ಞಾನದ ಕ್ಷಯಕ್ಕೆ ಇನ್ನೊಂದು ಕಾರಣ ಸರಕಾರಿ ಆಸ್ಪತ್ರಿಗಳ ಸಂಖ್ಯಾಭಿವೃದ್ಧಿ. ಆಯುರ್ವೇದಾಂಗವಾದ ಶಲ್ಯತಂತ್ರವನ್ನು ಸುಶ್ರುತನ ಉಪದೇಶದಂತೆ ಕ್ರಮವಾಗಿ ಕಲಿತ ಪಂಡಿತರು ನಮ್ಮ ದೇಶದಲ್ಲಿಲ್ಲದೆ ಹೋಗಿ ಬಹುಕಾಲವಾಯಿತು. ಆದ್ದರಿಂದ ವ್ರಣಗಳನ್ನು ಕೊಯ್ಯಿಸಲಿಕ್ಕೆ, ಕಂತಿದ ಮುಳ್ಳು ಮೊಳೆಗಳನ್ನು ತೆಗಿಸಲಿಕ್ಕೆ, ತುಂಡಾದ ಅಧವಾ ಚೂರಾದ ಎಲುಬುಗಳನ್ನು ಸರಿಪಡಿಸಿ ಬೋಡಿಸಲಿಕ್ಕೆ ಮುಂತಾದ ಎಲ್ಲಾ ಶಸ್ತ್ರಸಾಧ್ಯವಾದ ಸಂಕಷ್ಟಗಳ ನಿವೃತ್ತಿಗೆ ಸ್ವಾಭಾವಿಕವಾಗಿ ಜನರು ಆಸ್ಪತ್ರಿಗಳಿಗೆ ಹೋಗ ಬೇಕಾಯಿತು. ಅಲ್ಲಿ ಸಿಕ್ಕುವ ಅತಿ ಸುಲಭವಾಗಿ ಸೇವಿಸಬಹುದಾದ ಸೆಂಟೊನಿನ್ ಎಂಬ ಔಷಧವು ಹೊಟ್ಟೆ ಹುಳ ತೆಗೆಯುವದರಲ್ಲಿ ಮತ್ತು ಕ್ವಿನೀನ್ ಎಂಬ ಭಸ್ಮವು ವಿಷಮಜ್ವರದಲ್ಲಿ ಮಾಡುವ ಕೆಲಸವು ಅತ್ಯದ್ಭುತವಾಗಿ ಕಂಡಿತು. ಬಾಟ್ಲಿಯೊಂದು ಕೈಯಲ್ಲಿದ್ದರೆ ಯಾವ ರೋಗಕ್ಕಾದರೂ ಸುಲಭಸೇವ್ಯವಾದ ಔಷಧವು ಧರ್ಮವಾಗಿ ದೊರೆಯುತ್ತಿತ್ತು. ಇಷ್ಟ ರಲ್ಲಿ ಜನಸಾಮಾನ್ಯವು ತನ್ನ ನಿತ್ಯಾಚರಣೆಗೆ ಮೇಲುಪಂಕ್ತಿಯಾಗಿಟ್ಟುಕೊಳ್ಳಬೇಕಾಗಿದ್ದ