________________
ಸಮಗ್ರ ಕಾದಂಬರಿಗಳು ಕ್ವಾಡ್ರ ಬೆಪ್ಪಾಗಿ ಗೂಟ ವೊಡದಂತೆ ನಿಂತೆಬುಟ್ಟ ಲಕ್ಕ!... ಒಂದು ಎಣ್ಣಾನೆ ಒಂದು ಮರಿಯ ಈಯಿತಾ ಇತ್ತು. ಇಂದುಗಡಿಂದ ತಲೆ ಆಗ್ಲೆ ಈಚೆ ಕಡಕಂಡಿತ್ತು. ಹಿಂಡಾನೆಗೊಳು ಆ ಎಣ್ಣಾನೆ ವತ್ತಾಸ್ಯಾಗಿ ನಿಂತು ಅದು ಮರಿ ಆಕಕ್ಕೆ ಸಾಯ ಮಾಡ್ತಿದ್ದೋ... ಆನೆ ಮರಿ ಆದ ಲಕ್ಕ ಯಾವತ್ತೂವೆ ಕಂಡೋನೆ ಅಲ್ಲ. ಆ ಮರಿ, ಬಾಕಿ ಆನೆಗಳ ಸಾಯದಿಂದ ತಲೆ ಮುನಾಗಿ, ವಸಿವಾಗಿ ಈಚೆ ಕಡದು ಕೊನೀಕೆ ತಪ್ಪನೆ ನೆಲಕ್ಕೆ ಉಬ್ಬಿಕೊಂಬಿತ್ತು. ಬಾಕಿ ಆನೆಗೊಳು ಆ ಮರಿ ಮೈಯ್ಕೆಲ್ಲಾನೂವೆ ತಮ್ಮ ಸೊಂಡಿಲ್ಸಿಂದ ಆದಷ್ಟು ಮಡಿ ಮಾಡೊ, ಆಮ್ಯಾಕೆ, ತುಸ ವೊತ್ತು ಆ ಮರಿ ಸುದರಾಯಿಸಿಕಂಡಮ್ಯಾಲೆ, ಅದ್ರ ಬಾಕಿ ಆನೆಗಳು ಎತ್ತಿ ನಿಲ್ಲಿಸ್ಕೋ. ಅದ್ರೆ ಅವು ನಿಲ್ಲುದ್ದ ಕೂಡ್ಲೆ ಆ ಮರಿ ಪುತಕ್ಕೆ ಬಿದ್ದು ಕತ್ತು. ಮನಾ ಆ ಆನೆಗಳು ಅನ್ನ ಎತ್ತಿ ನಿಲ್ಲಿಸೋದು, ಅದು ಮನಾ ಕೆಳಗೆ ಬಿದ್ದ ಕೊಳಾದು-ಇಂಗೆ ಏಟೋ ಸರ್ತಿ ನಡೀತು. ಆಮ್ಯಾಕೆ ಅದ್ರೆ ತಾಯಿ, ಆ ಮರಿಯ ತನ್ನ ಕಾಲುಸಂದಿಗೆ ಸೇರುಸ್ಕಂಡು, ಮರಿ ಮತ್ತೆ ಪುಸ್ತೆ ಬಿದ್ದು ಕತ್ತು. ಅಪ್ಪ ಬ್ಯಾರೆ ಆನೆಗೋಳು ಪುನಾ ಮ್ಯಾಕ್ಕೆತ್ತಿ ನಿಲ್ಲುತ್ತೊ, ಪುನಾ ಬಿತ್ತು. ಮನಾ ನಿಲ್ಲಸ್ಟೋ, ಇಂಗೇ ಏಟೋ ವೊತ್ತು ಕಳೀತು. ಆಮ್ಯಾಕೆ ವಸವಸ್ಯಾಗಿ ಆ ಮರೀಗೆ ನಿಂತ್ಕಳೋ ತಾಣ ಬಂತು. ಅಂಗೇ ಇನ್ನೂ ವಸಿ ಮೊತ್ತ ಕಳುದಮ್ಮಾನೆ ತಾಯಾನೆ ಮೆತ್ತ ಮೆತ್ತಗೆ ಆ ಮರೀಯ, ತನ್ನ ಮುಂದೆ ತಕ್ಕಂಡು, ತಾನೂವೆ ತನ್ನ ಸೊಂಡ್ಲಿಂದ ಅಪ್ಪ ಮಡಿ ಮಾಡಕ್ಕೆ ಮುಟ್ಟಗಂತು. ಆಗ ಆ ಗುಂಪಿಗೆಲ್ಲ ಯಜಮಾನ ಸಲಗ, ಆ ಎಣ್ಣಾನೆ ಹೆರಿಗೆ ಆಗೋವರೂ, ಅ ವೊರಗದಿಂದ ಯಾವ ಅಪಾರನೂವೆ ತಟ್ಟದಂಗೆ ಕಾವಲುಕಾಯ್ತ ಸುತ್ತಾಲು ಗಸ್ತಾಕ್ತಾ ಇದ್ದದ್ದು, ಒಂದು ಸಲ ಜೋರಾಗಿ ಕೂಗು.... ಲಕ್ಕ ಬೆಟ್ಟೋದ. ಆಮ್ಯಾಕೆ, ಆ ಇಚಿತ್ರಾನೆಲ್ಲಾನು ಕ್ವಾಡಿಕಂಡು ಲಕ್ಕ ಅಲ್ಲಿಂದ ಎಜ್ಜೆ ಕಿತ್ತಂಗೆ, ಬತ್ತಾ ಬತ್ತಾ ಹಿಂದಿನದೆಲ್ಲ ಮರತೋದಂಗಾಗಿ, ಬ್ಯಾರೆ ಲೋಕ್ಕೇ ಅವನ್ನ ಕರಕೊಂಡೋಯ್ತಿತ್ತು... ಲಕ್ಕನ ಅಂತರಾಳಲ್ಲಿ ಇಲ್ಲಿಗಂಟ ಪೊಳೆವೋಟ್ಯಾಗಿ ಅರಿಕಂಡೋಯ್ತ ಇದ್ದ ಯೋಚ್ಛೆ ಈಗ ನಿಂತೋಗಿ ಅವನ್ನ ಮನಸ್ಸು ಒಂದು ಸಮಾದಾನ ಸ್ತಿತಿಯ ಮುಟ್ಟಿತ್ತು... ಆಗ-ಕಾಡಿನ ಒಡಲು ವಳಗ್ನಿಂದ ಯಾವುದೊ ಹಕ್ಕಿ ಸಿಳ್ಳು ಆಕಿದಂಗೆ ಹಾಡು, ಲಕ್ಕನೂವೆ, ಅದ್ರೆ ಪರ್ತಿಯಾಗಿ ಜಬಾಬು ಕ್ವಟ್ಟಂಗೆ, ಸಿಲ್ಲಿ ಆಕ್ಷ...