ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೨೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೩೪ ವೈಶಾಖ ಬೆಂಕಿಕಡ್ಡಿ ಗಿರಿ, ಬೀಡಿ ಕತ್ತಿಸಿ “ಚೋಟು ಉದ್ದುದೋರಿಂದ ಇಡುದು ವೋಟುದ್ದ ಇರೋವಲ್ಲೂ ನಂಗೆ ಬುದ್ದಿ ಯೋಳೋರೇಯ, ಗಮ್ಯನೆ ನಿಮ್ಮ ನಿಮ್ಮ ಕೇಮೆ ಮಾಡಿರಮ್ಮಿ” ಅಂದು, ಟಗರೂರ ದಮ್ಮೇಳೀತ ಕುಂತು, ಕಾಲ ನೀಡಿದ್ದಂತೆ. ವಸಿ ವೋಡ್ನಲ್ಲೆ ಕಣ್ಣು ಎಳದಂಗಾಗಿ ಬಿಡಿಯ ಜಟಜಟ್ಟೆ ಸೇದಿ, ತುಂಡು ಆಚೆಗಸ್ತು, ಬಿದ್ದು ಕಂಡನಂತೆ... ಅಡುಗೆ ಆದ ಕೂಡ್ಲೆ ಅಯ್ಯಂಗೆ ಕಕಾಲು ತೊಳಸಿ ಉಣಕ್ಕೆ ಕುಂದರಿಸಿದ್ದು. ಹುಚ್ಚಬೋರಿ ತಗತಗ್ಗು ಇಡುತ್ತಾ ಇದ್ದರೆ, ಅಹ್ ಅದ್ಧಾಂತ ಚಪ್ಪರಸ್ತ ಗಡದ್ದಾಗಿ ಹೈಡದು, ಪುನಾ ಕಾಲು ನೀಡಿ ಬಿದ್ದು ಕಂಡನಂತೆ... ಈ ಇಚಾರನೆಲ್ಲ ಚಾಚೂ ತಪ್ಪದ ರೀತಿ, ಹುಚ್ಚುಬೋರಿ ಅದು ನಡದ ನಾಕನೆ ನಾ, ಲಕ್ಕನ ಅವನ ಕುಟ್ಟೆ ವರದಿ ತಪ್ಪಿಸಿದ್ದು. ಲಕ್ಕನ ಅವ್ವ ಕಲ್ಯಾಣಿಯೇನೊ ಗುಟ್ಟುಗಾತಿ. ಒಬ್ಬರು ಯೋಳಿ ಇನ್ನೊಬ್ರ ಕುಟ್ಟೆ ಯೋಳೊ ಸೋಬಾವದೋಳಲ್ಲ. ಆದ್ರೆ ಹುಚ್ಚುಬೋರೀದು ತುಡುಮಿಡಕೆ ಜೀವ. ಯೇನಾರ ಕಿವಿಗೆ ಬೀಳೋದೆ ತಡ, ಅಪ್ಪ ಊರಲ್ಲೆಲ್ಲ ಸಾರುತಾ ಬರಬೇಕು. ಮಾತಾಡ್ತಾ ಇದ್ದರೂ ವೋಟೇಯಮಾತಾಡ್ತಾನೆ ಇರಬೇಕು. ನಗಾಡ್ತ ಇದ್ದರೂ ವೋಟೇಯ, ನಗಾಡ್ತಾನೆ ಇರಬೇಕು. ಅದುಕೇ ಊರಲ್ಲಿ ಎಲ್ಲರೂವೆ ಬೋರಿ ಅನ್ನೋ ಹೆಸರಿನ ಜ್ವತೆ ಹುಚ್ಚು ಅಂತಾನು ಸೇರಿಸಿದ್ದು... ಹುಚ್ಚಬೋರಿ ಈ ಇಸ್ಯವ ಬೋ ಗುಟ್ಟಾಗಿ ಇಟ್ಟುಕಾಬೇಕು ಅಂತಾ ಕುಂಡಿಮಾದಿ, ದೈವಾಜಿ, ಪುಟ್ಟಿ, ಚೌಡಿ, ರಂಗಿ, ಯೆಲ್ಲಾರತ್ರವೂ” ಗುಟ್ಟುಇನ್ಯಾರೂ ಯೋಳಬ್ಯಾಡಿ” ಅಂತ ಬಿತ್ತುಬುಟ್ಲು... ದ್ಯಾವಾಜಿ ಒಬ್ಬಳ ಕಿವಿಗೆ ಬಿದ್ದರೆ ಸಾಕಾಗಿತ್ತು. ಇನ್ನು ಈಟು ಮಂದಿ ಕಿವಿಗೆ ಬಿದ್ದರೆ ಕ್ಯಾಳಬೇಕ?ಊರೊಳಗೆಲ್ಲ ಟಾಂ ಠಾಂ ಆಗೋಯ್ತು, ಪಂಚಾತಿಗೆ ಕುಂದರಿಸಿದ್ದು, ಟಗರೂರ “ನನ್ನೆಡತಿಗೆ ಹುಚ್ಚು-ಗ್ಯಾನಗೆಟ್ಟಂಗೆ ಯೇನೇನೊ ಮಾತಾಡಿಬುಡ್ತಾಳೆ... ಈ ಇಸ್ಯ ನಾ ಯೇನೇನೂ ಕಾಣನೇ ಕಾಣೆ. ನನ್ನ ಕಣ್ಣಾಣೆಗೂವೆ, ಇರಾ ನನ್ನೊಬ್ಬಳ ಮಗಳಾಣೆಗೂವೆ” ಅಂತ ಬಟ್ಟಾಡಿದ- ಪಂಚಾತಿಯೋರು ವಷ್ಟುನಿಲ್ಲ. ಇಪ್ಪತ್ತು ರೂಪಾಯಿ ದಂಡ ಆಕೆ ಆಕಿದು... - ಅಂತು ಒಟ್ನಲ್ಲಿ ಟಗರೂಕ್ನಿಂದ ಒಂದು ಚೆಂದುಳ್ಳಿ ಹೈದ ಮಣ್ಣಾಯ್ತು, ಅನ್ನಾ ಮಾತು ಊರಲ್ಲಿ ಗಟ್ಯಾಗಿ ನಿಂತೋಯ್ತು. ಆದೆ ತಿಂಗಳೊಪ್ಪತ್ತು ಕಳೆಯೋದಲ್ಲೆ ಲಕ್ಕಂಗೆ ಹೃಸ ಇಚಾರವೊಂದು ತಿಳಿದು ಬೆಪ್ಪಗೂಡೋದ! ಹಜಾಮರ