ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೫೪ ವೈಶಾಖ ತಟ್ಟನೆ ಅವಳ ಆಲೋಚನೆಗೆ ಬೇರೊಂದು ವೇದನೆಯ ಆಯಾಮ ಕೂಡಿತು. ತನ್ನ ಹೊಟ್ಟೆಯಲ್ಲಿ ಪ್ರತಿ ಹೆಣ್ಣೂ ಬಯಸುವ ಗರ್ಭ!... ತನ್ನ ಈ ಕೂರ ಪರಿಸ್ಥಿತಿಗೆ ಯಾರನ್ನು ದೂಷಿಸಬೇಕು?- ಮಾವನವರ ಸಂಯಮರಾಹಿತ್ಯದತ್ತ ಬೆರಳು ಮಾಡಿ ತೋರಬಹುದಾದರೂ ಲಕ್ಕನ ವಿಷಯದಲ್ಲಿ ನಾನೆಷ್ಟು ಸಂಯುಮಿಯಾಗಿದ್ದ? ಎಂದು ಆತ್ಮನಿಂದೆಯಲ್ಲಿ ತೊಡಗುವಳು... ಒಟ್ಟಿನಲ್ಲಿ ಎಲ್ಲವೂ ಗೋಜಲು, ಕಗ್ಗಂಟು. ತನಗೆ ಮುಕ್ತಿಯಿಲ್ಲ ಎಂದು ಹಲಬುತ್ತ ತಲೆದಿಂಬನ್ನು ತೇವ ಮಾಡಿದಳು... ತಾಯಿಯ ನೆನಪಾಯಿತು. ಅಮ್ಮ ಇದ್ದಿದ್ದರೆ ತನಗೆ ಈ ದುರವಸ್ಥೆ ಬರುತ್ತಿರಲಿಲ್ಲವೇನೊ. ಬಂದಿದ್ದರೆ ಅವಳ ಮಮತೆಯ ಮಡಿಲಲ್ಲಿ ತಲೆಯನ್ನಿಟ್ಟು ಲೋದವನ್ನೇ ಮರೆದು ಇರಬಹುದಿತ್ತೇನೊ... ಅಮ್ಮನೀನು ನನಗೆ ಸರ್ವಸ್ವವಾಗಿದ್ದೆ. ನೀನು ಸತ್ತರೆ, ನಾನು ನಿಶ್ಚಯವಾಗಿಯೂ ಬದುಕುವುದೇ ಇಲ್ಲವೆಂದು ಭಾವಿಸಿದ್ದೆ. ಆದರೆ ನನ್ನ ಭಾವನೆ ಹುಸಿಯಾಯಿತುನೀನು ಹೋದೆ; ನಾನು ಬದುಕಿ ಉಳಿದೆ... ನೀನು ಸತ್ತಾಗ-ನೀನು ಬಹುವಾಗಿ ಪ್ರೀತಿಸುತ್ತಿದ್ದ, ಮಲಗುವಾಗಲೆಲ್ಲ ನಿನ್ನ ಜೊತೆಗೇ ಮಲಗುತ್ತಿದ್ದ, ಬೆಕ್ಕು ಕೂಡ ಮನೆಯ ಮಾಡಿನ ಮೇಲೆ ಹತ್ತಿ ಕುಳಿತು ಹಾಲು ಅನ್ನ ಯಾವುದನ್ನೂ ಮುಟ್ಟದೆ ಉಪವಾಸವಿದ್ದು ಅಸು ನೀಗಿತಲ್ಲ?- ನಾನು ಏಕೆ ಹಾಗೆ ಸಾಯಲಿಲ್ಲ?... ಸತ್ತಿದ್ದರೆ, ಈ ಗೊಂದಲವೆ ಉದ್ಭವಿಸುತ್ತಿರಲಿಲ್ಲ, ಅಲ್ಲವೆ?... ಕೋಭೆಗೊಳಗಾದ ಅವಳ ಚಿತ್ತ ಹೀಗೆ ಎಲ್ಲಿಂದೆಲ್ಲಿಗೊ ಜಿಗಿದು ಚಿಂತೆಯ ಸಾವಿರ ಸುಳಿಗಳಲ್ಲಿ ಸಿಕ್ಕಿ ಪರಿತಪಿಸುತ್ತಿರುವಾಗ, ಹಕ್ಕಿಗಳ ಚಿಲಿಪಿಲಿಯೊಂದಿಗೆ ಆಕಳಿಸುತ್ತ ಎದ್ದ ಸರಸಿ, ರುಕ್ಕಿಣಿಯ ಎದೆಯ ಮೇಲಿಂದ ಕೈ ತೆಗೆದು ತನ್ನೆರಡೂ ಅಂಗೈಗಳನ್ನು ಪದ್ಧತಿಯಂತೆ ಉಜ್ಜಿ ನೋಡಿಕೊಳ್ಳುತ್ತ, “ಉತ್ತಷ್ಟೋತ್ತಿಷ್ಟ ಗೋವಿಂದ...” ಹೇಳಲು ಉಪಕ್ರಮಿಸಿದಳು. ೨೪ ಮಾರನೆ ಮದ್ದಿನ ಲಕ್ಕ ಹುಣಸೂರು ಪ್ಯಾಟಿಂದ ದರುಮನಳ್ಳಿಗೆ ಇಂತಿರುಗಿದ್ದ. ಔಸ್ಥ ಕ್ವಡೊ ಬೂಬಮ್ಮನ ಉಡುಕೊದಲ್ಲೇಯ ಹಿಂದ್ರ ಜಿನ ದೂರ ಕಳುದೋಗಿತ್ತು. ಅವಳು ಸಿಕ್ಕದ್ದೂ ನಾತ್ರೆಗೆ. ಅವಳು ಮದ್ದು ಮಾಡಿ ಕ್ವಡಾದಲ್ಲಿ ಮಾರನೆ ಜಿನ ಸ್ವಾಮಿ ನೆತ್ತಿಗೆ ಬಂದಿದ್ದ. ಅದೂ ಒಂದು ಕಲ್ಕಿಚೀಲದಾಗೆ ಜ್ವಾಪಾನಾಗಿ ಇಟ್ಟಕಂಡು ತಮ್ಮೂರೆ ಬಂದ. ಬಂದೋನು ಹೋಲಗೇರಿಗೆ ಮೊದ್ಲು ವೋಗನಿಲ್ಲ. ಔಸದವ ಬ್ಯಾಗ ರುಕ್ಕಿಣವ್ವಂಗೆ ತಲುಪಿಸೊ ಅತ್ರ ಅವನಿಗೆ. ಕೇರಿಕೇರಿನೂ ದಾಡ್ತಾ ಬಂದ. ದೇವಗಣಗ್ಗೆ ಮರದ ಕಟ್ಟೆ ಸಿಕ್ತು. ಅಲ್ಲಿ ಕೆಲವು