________________
೨೫೬ ವೈಶಾಖ ಹೋಗಕೂಡದು ಎಂದು ಕಟ್ಟ ಆಗಿದೆ.” ಇಷ್ಟು ಹೇಳಿ ಕೇಶವಯ್ಯ ಅಲ್ಲಿಂದ ತೆರಳಿದ. ಇದು ಯಾವ ಕಟ್ಟು, ಯೇನು ಕತೆ?- ಲಕ್ಕಂಗೆ ಇದ್ದ ಕುರಿತು ಯೋಚಿಸಕ್ಕೂ ಕುಡ ಸಾಧ್ಯ ಆಗನಿಲ್ಲ. ಊ ನೋಡಾವ' ಅಂದು ಕೃಷ್ಣಶಾಸ್ತ್ರಿಗಳ ಮನೆ ಮುಟ್ಟಿದ. ಅಲ್ಲಿ ಮತ್ತೊಂದು ಚೋಜಿಗ ಅವನ್ನ ಕಾದಿತ್ತು ಈ ಮದ್ದನ್ನದ ವ್ಯಾಳ್ಯದಲ್ಲಿ ಸಾದಾರಣಾಗಿ ಯಾವೊತ್ತೂವೆ ಶಾಸ್ತ್ರಿಗಳು ತಮ್ಮ ಅಟ್ಟಲಿ ಉಳಿದೋರಲ್ಲ. ಈ ವೊತ್ನಲ್ಲಿ ತ್ವಾಟದಲ್ಲಿ ಸಾಸ್ತಿಗಳ ಮೊಕ್ಕಾಮು!- ಇದೇನ ಈ ಜಿನ ಅಟ್ಟಲೆ ಉಳಿದವರೆ?... ಅದೂವೆ ಜಗಲೀಲೆ ಕುಂತು ಯಾವುದೊ ಪುಸ್ತಕ ಓಡ್ತಾ ಇರೋವಂಗಿದೆ! ಲಕ್ಕ ಇನ್ನೂ ಅಷ್ಟು ದೂರವಿರುವಾಗಲೆ, ಕೃಷ್ಣಶಾಸ್ತ್ರಿಗಳ ಇವನ ಆಗಮವನ್ನು ಗಮನಿಸಿದರೂ ಸಹ, ತಮ್ಮ ಬಳಿಗೆ ಬರುವವರೆಗೂ ತಾವು ಓದುತ್ತಿದ್ದ ಭಗವದ್ಗೀತೆಯಲ್ಲಿ ತಲ್ಲೀನರಾದಂತಿದ್ದರು. ಅವನು ಹತ್ತಿರ ಬಂದಾಗ, ನಿಧಾನವಾಗಿ ಕತ್ತೆತ್ತಿ. “ಔಷದಿ ತಂದಿದೀಯೇನಪ್ಪ?- ಕೇಳಿದರು. ಅವರ ಸ್ವರ ಬಳಲಿತ್ತು. ಲಕ್ಕಂಗೆ ಜೋಜಿಗ, ತಾನು ಔಸ್ಥ ತರಕ್ಕೋಗಿದ್ದ ಇಸ್ಯ ಈ ಸಾಸ್ತಿಗಳಿಗೆ ಎಂಗೆ ಗ್ವತ್ತಾಯ್ತು?... ರುಕ್ಕಿಣದ್ವಾರು ಯೇನಾರ...? ಚೆ, ಚೆ, ಅದು ಸಾದ್ಯಾನೆ ಇಲ್ಲದ ಮಾತು... ಲಕ್ಕ ಅಲವು ಪರಿ ಚಿಂತಿಸ್ಥ, ಇದು ರುಕ್ಕಿಣ್ವವಂಗೆ ಮತ್ತೆ ತನಗೆ-ನಾವಿಬ್ಬರ ಬುಟ್ಟರೆ ಈ ಜಗತ್ತಿನಾಗೆ ಬ್ಯಾರೆಯೋರೆ ತಿಳಿಯೊ ದಾರೀನೆ ಇಲ್ಲವಲ್ಲ?... ತಬ್ಬಿಬ್ಬಾಗಿ “ತಂದಿಮ್ಮಿ” ಎಂದಷ್ಟೆ ಬಾಯಿಬಿಟ್ಟ. “ಅದನ್ನು ರುಕ್ಕಿಣಮ್ಮನೋರಿಗೆ ಕೊಡಬೇಡ, ತೆಗೆದುಕೊಂಡು ಹೋಗಿ ಎಲ್ಲಾದರೂ ಚೆಲ್ಲಿಬಿಡು.” ಶಾಸ್ತಿಗಳ ಕಂಠ ಗಡುಸಾಗಿತ್ತು. ಎಂದೂ ಅವರು ಲಕ್ಕನೊಡನೆ ಕಠೋರವಾಗಿ ವರ್ತಿಸಿದವರಲ್ಲ. ಏನೂ ಅಚಾತುರ್ಯವಾಗಿದೆ ಎನ್ನುವುದ ಅವನಿಗೆ ಮನವರಿಕೆಯಾಯಿತು. ಆದರೆ ಏನು ಎನ್ನುವುದು ಮಾತ್ರ ಅವನಿಗೆ ಗುಢವಾಗಿಯೇ ಉಳಿಯಿತು. ಶಾಸ್ತಿಗಳು ಇನ್ನೇನಾದರೂ ಹೇಳುವರೇನೋ ಎಂದು ಕಾದು ನಿಂತ. ಅವರು ಪುನಹ ಭಗವದ್ಗೀತೆಯ ಪುಸ್ತಕದಲ್ಲಿ ತಮ್ಮ ದೃಷ್ಟಿಯನ್ನು ಅಡುಗಿಸಿ, ಲಕ್ಕನ ಎರುವಿಕೆಯನ್ನೆ ಮರೆತಂತಿತ್ತು... ಇನ್ನು ರುಕ್ಕಿಣದ್ವಾರ ಸ್ವಾಡಾದಾದ್ರೂ