ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೨೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೪೦ ವೈಶಾಖ “ಅಂದರೆ ಈ ಕೂಟದಲ್ಲಿ ನೀವು ಮಾತ್ರ ಭಾಗಿಯಾಗಿಲ್ಲ. ಆದರೆ ಅದರಲ್ಲಿ ನಿಮ್ಮನ್ನು ಬಿಟ್ಟು ಈ ಪಟೇಲರು, ನಂಜೇಗೌಡರು, ಇತರೆ ಯಜಮಾನರು, ಇವರೆಲ್ಲ ಭಾಗಿಗಳು ಎಂದು ನೀವು ರುಜುವಾತುಪಡಿಸಿದ ಹಾಗಾಯ್ತು.” ತಾನು ಕಲಿತಿದ್ದ ಲಾ ಹೇಗೆ ಪ್ರಯೋಜನಕ್ಕೆ ಬಂತು ಎಂದು ಗೂಳಪ್ಪ ಒಳಗೊಳಗೇ ಹಿಗ್ಗಿದ್ದ. “ಹಾಗಲ್ಲ ಇನ್‌ಸ್ಪೆಕ್ಟರ್‌, ನಾನು ಹೇಳಿದ್ದು....ನಾನು ಏನು ಹೇಳಬೇಕು ಎಂದಿದ್ದೆ ಅಂದರೆ ಈ ಊರಿನ ಯಾವ ವ್ಯವಹಾರದಲ್ಲೂ ನಾನು ಭಾಗವಹಿಸಿಲ್ಲ... ನಾನಾಯ್ತು, ನನ್ನ ತೋಟವಾಯ್ತು. ನೀವು ಹೇಳಿರೋದು ನಮಗೆ ಗೊತ್ತೇ ಇಲ್ಲ....”- ಶ್ಯಾನುಭೋಗರ ನುಣಚಿಕೊಳ್ಳುವ ದುರ್ಬಲ ಪ್ರಯತ್ನ ಹೀಗೆ ಪ್ರಕಟವಾಗಿತ್ತು. “ಊರಿನಲ್ಲಿ ನಡೆಯೋ ಯಾವ ವಿಷಯವೂ ನಿಮ್ಮ ಗಮನಕ್ಕೆ ಬರದೇ ಹೋಯ್ತು ಅಂದ ಬಳಿಕ, - ಸೀತರಾಮಯ್ಯನೋರೆ, ನೀವು ನಿಮ್ಮ ಶ್ಯಾನುಬೋಗಿಕೇತನ ಊರಿನಲ್ಲಿ ಬೇರೆ ಇನಯಾರಿಗಾದರೂ ಬಿಟ್ಟು ಕೊಟ್ಟು ಸ್ವಸ್ಥವಾಗಿ ನಿಮ್ಮ ತೋಟತುಡಿಕೆ ನೋಡಿಕೋತ ಆರಾಮಾಗಿ ಇರಬಹುದಲ್ಲ?” ಗೋಡೆಗೆ ಮೊಳೆ ಹೊಡೆಯುವ ರೀತಿಯಲ್ಲಿ ಗೂಳಪ್ಪ ಮಾತುಗಳನ್ನೆಸೆದ. ಶ್ಯಾನುಭೋಗರು ಹೆಚ್ಚಾಗಿ, “ಅಯ್ಯೋ, ಕಾಲಾದಿಂದ ವಂಶಪಾರಂಪರ್ಯವಾಗಿ ನಡೆದುಬಂದದ್ದು ಈಗ ಇಷ್ಟು ಚಿಲ್ಲರೆ ವಿಷಯಕ್ಕೆಲ್ಲ ಬಿಟ್ಟು ಬಿಡೋದು ಅಂದರೆ...” ಎನ್ನುತ್ತ, ಕೈ ಕೈ ಹೊಸೆಯುತ್ತ ಹಲ್ಲುಕಿರಿದರು. “ಸರಿ” ಎಂದ ಗೂಳಪ್ಪ, “ವಿಷಯ ತಿಳಿದ ಹಾಗಾಯ್ತು. ಮುಂದೆ ಕಾನೂನಿನ ಪ್ರಕಾರ ಏನೇನು ಖಡ್ಡೆ ತಗೋಬೇಕೊ ಅದೆಲ್ಲ ತಗೋತೀನಿ”ನಿರ್ಧಾರವಾಗಿ ನುಡಿದ. ನಂಜೇಗೌಡನಿಗೆ ಇನ್ನು ಸುಮ್ಮನೆ ಕೂರುವುದು ಸಾಧ್ಯವಾಗಲಿಲ್ಲ. ಅವರು ಎದ್ದು ನಿಂತು, “ಈಗ ನಮ್ಮೂರಲ್ಲಿ ಯಾವಾಗದೆ ಅಂತ್ಥ, ಇನ್‌ಸ್ಪೆಕ್ಟರ್‌?... ಯಾರೋ ಹಲಾಲ್ ಕೋರು ನಿಮ್ಮೆ ಸುಳ್ಳು ಸುದ್ದಿ ಕ್ವಟ್ಟು, ಪಾಪ ನಿಮ್ಮ ಇಲ್ಲೀತಂಕ ದಣಿಸಿ, ಎಂಕಿ ಹೈದಂಗೆ ಅದೆಂತಾದ್ದೋ ಯೋಳ್ತಾರಲ್ಲ.... ನಿವೊನಿ, ಊ ನಿವೊನಿ ಜೋರಾನೊ ಯೇನೊ, ಆದಾಗಿತ್ತು. ಹೈದ ತೀರಿಕತ್ತು... ಹೆಣವ ಅಂಗೇ ಬೋ ಕಾಲ ಇಟ್ಟರೆ, ಕೊಳತು ನಮ್ಮೂರ ಬ್ಯಾರೆ ಹೈಕಳಗೂವೆ ಈ