________________
ಸಮಗ್ರ ಕಾದಂಬರಿಗಳು ೩೨೩, ಇಲ್ಲ!” ಅಂತ ಘೋಷಿಸಿದ. “ನನಗೆ ಹುಟ್ಟೂ ಇಲ್ಲ, ಬೆಳ್ಳೂ ಇಲ್ಲ. ನಾನು ಹೇಳುವ ಮಾತು ನಂಬಿ” ಎಂದು ಶಾಸ್ತ್ರಿಗಳು ಪೇಚಿದರು. “ಇದು ನಿಜವಾದ ಬುದ್ಧಭ್ರಮಣೆ!” ಅಲ್ಲಿ ನೆರೆದ ಬ್ರಾಹ್ಮಣವೃಂದ ಹುಯಿಲಿಟ್ಟಿತು. ಒಬ್ಬ ವಿದ್ವಾಂಸ ವಿಪ್ರ ಮಾತು ಸೇರಿಸಿದ: “ಅದಕ್ಕೇ ಜನ ಅನ್ನೋದು: ವಿಪ್ರಾತ್ ಪಶ್ಚಿಮಬುದ್ದಯಃ ಎಂದು!” “ನೀವು ನನಗೆ ಭ್ರಮಣೆ ಅನ್ನಿ. ನಾನು ಅವಿವೇಕಿ ಅನ್ನಿ. ನಾನು ನುಡಿದಿರೋದು ಸತ್ಯಸಂಗತಿ, ನೀವು ನಂಬಲೇಬೇಕು... ಆ ನಿರಪರಾಧಿಯನ್ನು ಸುಳ್ಳು ಆಪಾದನೆಯಿಂದ ಮುಕ್ತಗೊಳಿಸಲೇಬೇಕು. ಹಾಗೆ ಮಾಡಿದಾಗಲೆ, ನನ್ನೆದೆಯ ಮೇಲಿನ ಭಾರವನ್ನು ಇಳುಕಿದಂದಾಗತ್ತೆ....” ಹೀಗೆ ಶಾಸ್ತ್ರಿಗಳು ಪರಿತಪಿಸುತ್ತಲೇ ಇದ್ದರು. 'ಈವಯ್ಯ ಉಚ್ಚು ಇಳೀಬೇಕಾದರೆ ಇವರ ಕುಂಡರಿಸಿ ಮಂಡೆಗೆ ಲಿಂಬಿಅಣ್ಣು ತಿಕ್ಕಿ ನೂರೊಂದು ಚರಿಗೆ ನೀರ ಉಯ್ಯಲೇಬೇಕು' ಎಂದು ಗಂಗಪ್ಪ ಉಗ್ಗಡಿಸಿದ ಪಂಚಾಯಿತದಾರರು ಅವರವರಲ್ಲೆ ವಿಚಾರ ವಿನಿಯಮಯ ಮಾಡಿಕೊಂಡರು. ಶಾಸ್ತ್ರಿಗಳ ಚಿತ್ತಸ್ವಸ್ಥ ಹತೋಟಿ ತಪ್ಪಿದೆ ಎನ್ನುವ ನಿರ್ಧಾರಕ್ಕೆ ಬಂದಿದ್ದರು... ಥಟ್ಟನೆ ವೆಂಕಣ್ಣಜೋಯಿಸರು, ಶ್ಯಾನುಭೋಗರು, ಕೇಶವಯ್ಯ, ನಂಜೇಗೌಡ, ಬುಳಪ್ಪ, ಗಂಗಪ್ಪ, ಪಟೇಲ ಇವರುಗಳು ಚಾವಡಿಯಿಂದ ಎದ್ದು, ಶಾಸ್ತಿಗಳು ನಿಂತ ಜಾಗಕ್ಕೆ ಇಳಿದು ಬರುತ್ತಿರುವಾಗ, ಕೃಷ್ಣ ಶಾಸ್ತ್ರಿಗಳು ತಮಗೆ ಅರಿವಿಲ್ಲದೆಯೆ ಎಂಬಂತೆ. “ಒಂದು ಕೆಟ್ಟ ಘಳಿಗೇಲಿ.....” ಎಂದು ಬಿಕ್ಕಿ, ಅಲ್ಲಿಯತನಕ ಅವರ ಎದೆಯೊಳಗೆ ಮೊರೆಯುತ್ತಿದ್ದ ವೇದನೆಯನ್ನು, “ನನ್ನ ಸೊಸೆಯ ಶೀಲಹರಣ..... ಮಹಾಪಾಪಿ ನಾನು... ಲಕ್ಕನಿಗೂ ಈ ಅಪರಾಧಕ್ಕೂ ಯಾವ ಸಂಬಂಧವೂ ಇಲ್ಲ”- ಎಂಬ ಮಾತುಗಳ ಮೂಲಕ ಪ್ರಕಟಗೊಳಿಸಿದರು. “ ಈ ಹುಚ್ಚಿಗೆ ಔಷಧಿಯೇ ಇಲ್ಲ”- ಎಂಬ ಆ ಯಜಮಾನರೆಲ್ಲರೂ ಶಾಸ್ತಿಗಳನ್ನು ಸುತ್ತುವರಿದರು. “ನೇಮನಿಷ್ಠೆಗೆ, ಸದಾಚಾರ ಸದ್ವರ್ತನೆಗೆ ಹೆಸರಾದ ನೀವು, ಇಂಥ ಹೀನಕಾರ್ಯ ಮಾಡಿದೆ ಅಂತ ನಡುನೀರಿನಲಿ ನಿಂತು ಪ್ರಮಾಣ ಮಾಡಿದರೂ ನಾವು ನಂಬಲ್ಲ... ಯಾಕೆ ಸುಮ್ಮನೆ ಚಪಲ ಪಡುತ್ತೀರಿ?... ಸುಮ್ಮನೆ