________________
ಸಮಗ್ರ ಕಾದಂಬರಿಗಳು ೨೭೫ ಬರುತ್ತಿರಲಿಲ್ಲವಾದ್ದರಿಂದ ಬೇಸರಗೊಂಡು, “ಹೀಗೇ ಅಭ್ಯಾಸ ಮಾಡ್ತಾ ಮಾಡ್ತಾ ಬರತ್ತೆ, ಇದೇನು ಬ್ರಹ್ಮವಿದ್ಯೆ ಅಲ್ಲ... ನೀನಿನ್ನೂ ಚಿಕ್ಕೋಳು. ಇನ್ನೂ ಸ್ವಲ್ಪ ದೊಡ್ಡವಳಾದರೆ, ನನಗಿನ್ನ ಚೆನ್ನಾಗೇ ಹೆಣೀತೀಯೆ” ಎನ್ನುತ್ತ, ರುಕ್ಕಿಣಿ ಅವಳನ್ನು ಅಪ್ಪಿ, ಮುದ್ದಿಟ್ಟು ತನ್ನ ತೊಡೆಯ ಮೇಲೆ ಮಲಗಿಸಿಕೊಂಡಳು. ರುಕ್ಕಿಣಿಯ ತೊಡೆಯ ಮೇಲೆ ಒರಗಿ, ಅವಳ ಬೆರಳುಗಳು ಆಡಿವುದನ್ನೇ ಗಮನಿಸುತ್ತಿದ್ದ ಸರಸಿಯ ಕಣ್ಣುಗಳು ನೋಡನೋಡುತ್ತಿದ್ದಂತೆಯೆ ಬಾಡಿ ಹೋದವು. ರುಕ್ಕಿಣಿಯ ಬೆರಳುಗಳು ತಾರಾಳೆ ಹೆಣೆಯುತ್ತಿರುವಂತೆ, ಅವಳ ಅಂತರಂಗ ಎಂಥೆಂಥವೋ ಯೋಚನೆಗಳನ್ನು ಹೆಣೆಯುವುದರಲ್ಲಿ ಮಗ್ನವಾಗಿತ್ತು... ತನ್ನ ಬಗ್ಗೆ ತನ್ನ ಬೆನ್ನಿನ ಹಿಂದೆ ನಡೆಯುತ್ತಿದ್ದ ಕುಶ್ಚಿತ ಟೀಕೆಯ ಶಾಖ ರುಕ್ಕಿಣಿಯನ್ನು ಆಗಾಗ ತಪ್ಪದೆ ಇರಲಿಲ್ಲ.... ಮೊನ್ನೆ ಕೇಶವಯ್ಯನ ಪಕ್ಕದಮನೆಯ ಶಾರಮ್ಮ ಬಂದಿದ್ದಳು. ಎಂದೋ ಅಪರೂಪಕ್ಕೆ ಬರುತ್ತಿದ್ದವಳು ಈಗ ಬಂದು, “ನೋಡ್ರಿ ರುಕ್ಕಿಣಿ, ಆ ಕೇಶವಯ್ಯನ ಹೆಂಡತಿಗೆ ಪಾಪ, ನೀವೇನು ಮಾಡಿದ್ದಿರಿ?- 'ಆ ರುಕ್ಕಿಣಿಗೆ ವಿಪರೀತ ಠೇಂಕಾರ ಬಂದಿತ್ತು ತೆಂಗಿನ ಮರದ ಸುಳಿಗೆ ಹತ್ತಿ ಕುಳಿತಿದ್ದಳು. ಈಗ ಸದ್ಯ, ನನ್ನ ಕಣ್ಣ ಮುಂದೇನೆ ಜಾರಿ ಕೆಳಗೆ ಬಿದ್ದಳು. ನನಗಂತೂ ಹಾಲು ಕಿಡಿದಷ್ಟು ಸಮತೋಷವಾಗಿದೆಯಮ್ಮ'- ಹೀಗೆಲಲ್ಲ ನನ್ನ ಸಂಗಡ ಅನ್ನೋದೆ?” ಎಂದು, ಕೇಶವಯ್ಯನ ಹೆಂಡತಿ ಹೇಳಿರಬಹುದಾದುದಕ್ಕೆ ಇನ್ನೂ ಸ್ವಲ್ಪ ಒಗ್ಗರಣೆಕೊಟ್ಟು ರುಚಿಕೊಟ್ಟುಮಾಡಿ, ತನಗೆ ತಲುಪಿಸಿ ಹೋಗಿದ್ದಳು!... - ಬ್ರಾಹ್ಮಣ ಕೇರಿಯಲ್ಲಿ ತನ್ನನ್ನು ನಾನಾ ರೀತಿಯಲ್ಲಿ ದೂಷಿಸುತ್ತಿದ್ದುದು ನಾಗಲಕ್ಷ್ಮಿಯ ಮೂಲಕ ಅಲ್ಪಸ್ವಲ್ಪ ತಿಳಿಯುತ್ತಿತ್ತು. ಈ ದೂಷಣೆಯಲ್ಲಿ, ಬ್ರಾಹ್ಮಣಕೇರಿಯ ಇತರ ಹೆಂಗಸರಿಗಿನ್ನ ತಲೆ ಬೋಳಿಸಿದ ವಿಧವೆಯರ ಪಾತ್ರವೇ ಅತಿ ಕಠೋರವಾದುದಾಗಿತ್ತು: “ನಮ್ಮ ಮಂಡೆ ಬೋಳಿಸಿದಾಕ್ಷಣ, ನಮಗೇನು ಪ್ರಾಯ ಹೊರಟುಹೋಗಿದೆಯೇ?... ನಾವು ಕಚ್ಚೆಯನ್ನ ಬಿಗಿಯಾಗಿ ಕಟ್ಟಿಕೊಂಡಿಲ್ವೆ?... ಇವಳೊಬ್ಬಳೇನ ಹೆಂಗಸೇ?.... ನಮ್ಮ ಹಾಗೆ ಮಂಡೆ ಬೋಳಿಸಿ, ಮಡಿ ಸೀರೆ ಉಟ್ಟು, ದೇವಸ್ಥಾನಗಳಿಗೆ ಹೋಗಿ ಪುರಾಣ ಪುಣ್ಯ ಕಥೆಗಳ ಶ್ರವಣ ಮಾಡಿದ್ದರೆ, ಇವಳಿಗೆ ಈ ಗತಿ ಬರುತ್ತಿತ್ತೆ?...” ತನ್ನ ವಿಷಯ ಕೇವಲ ಬ್ರಾಹ್ಮಣಕೇರಿಗೆ ಸೀಮಿತವಾಗಿದ್ದರೂ ಹೇಗೋ ಸಹಿಸಬಹುದಿತ್ತು. ಆದರೆ ಇದು ಊರಿನ ಕೇರಿಕೇರಿಯ ಕೊಳಕು ಕೊಚ್ಚೆಯಲ್ಲೂ