ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೩೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೮೨ ವೈಶಾಖ ಆಮ್ಯಾಕೆ ಕಾಡಾದೀಲಿ ಬತ್ತಾ ಇರಬೇಕಾರೆ, ಮುಟ್ಟಿದರೆ ಮುನಿ ಗಿಡ ಸಿಕ್ತವೆ ಅಂದರೆ ಅವಳಿಗೆ ಬೋ ಸಂತೋಷ. ಆ ಗಿಡಗಳ ಮುಟ್ಟಿದೇಟಿಗೆ ಕೆಲವು ವಳೀಕೆ ಮುಚ್ಚಿಗತ್ತವೆ, ಕೆಲವು ವೊರೀಕೆ ಮುಚ್ಚಿಗತ್ತವೆ. ವಳಮುಚ್ಚದ ಗಿಡ ಕಂಡರೆ, ಅಲ್ಲಿ ನಿಂತುಕಳಾದು. “ವಳಮುಚ್ಚುಗ, ವಳಮುಚ್ಚಗ- ನಿನ್ನ ಮೊಕ ಮುಚ್ಚ “ಅಂದು ಆ ಗಿಡವ ಮುಟ್ಟಿಗೊಂದ್ರೆ, ಆ ಗಿಡದ ಪುಟ್ಟಪುಟಾಣಿ ಎಲೆಗೋಳೆಲ್ಲ ಸರಕ್ಕೆ ವಳೀಕೆ ಮುಚ್ಚಕೊಳೋವು! ಆಮ್ಯಾಕೆ ಅಂಗೇಯ ವೊರಮುಚ್ಚುಗದ ಗಿಡದ ಮುಂದೆ ನಿಂತು, “ವೊರಮುಚ್ಚುಗ, ವೊರಮುಚ್ಚುಗ- ನಿನ್ನ ಕುಂಡಿ ಮುಚ್ಚ” ಅಂದು,ಆ ಗಿಡ ಮುಟ್ಟಿತೊಂದ್ರೆ ಆ ಗಿಡದ ಎಲೆಗೋಳೆಲ್ಲ ವೊರೀಕೆ ಮೊಡಚಿಕೊಳ್ಳೂವು!... ಅದ ಕಂಡು ಅವಳು ಕೇಕೆ ಆಕಿದ್ದೂ ಆಕಿದ್ದೇ, ಮುನಾ ಪುನಾ ಅಂತಾ ಗಿಡ ಎಲ್ಲೆಲ್ಲಿ ಕಾಡ್ತಾವೆ ಅಲ್ಲೆಲ್ಲ ನಿಂತು ನಿಂತು, ಅವಳು ಇದೇ ಆಟ ಆಗೋದು !... ಗೌರಿ ತಿಂಗಳು ಬಂತು ಅಂದರೆ, ಅವಳು ನಾನು ಇಬ್ಬರೂವೆ ಸೀತಪಲದ ಹಣ್ಣ ಬಿಟ್ಟದಕಿಬ್ಬಿ ತಾಮ್ಮಿಂದ ಕಿತ್ತುಗಂಬಂದ ಬೇಲಿ ವಳಾಗಡೆ ಇಟ್ಟು ಅಡ ಹಾಕೋವು, ಅವು ಕಣ್ಣಾಗಬುಟ್ಟಾಗ ಅದೇಟು ಕಿಲಿಕಿಲೀಂತ ತಿನ್ನೋಳು!..... ಜೇನುತುಪ್ಪ ಅಂದರೂ ಅವಳಿಗೆ ಅಪೇಕ್ಷೆ. ನಾನು ಕಾಡಿಗೆ ದನ ಅಟ್ಟಗಂಡು ಹ್ಯಾದಾಗ ಯವಾಗಲಾರೂ ಕೋಲುಜೇನುತುಪ್ಪಾನೊ ತುಡುವೆ ಜೇನುತುಪ್ಪಾನೊ ತಂದು ಕಟೆ ನನ್ನ ತಬ್ಬಿಕಂಡು ನನ್ನ ಸುತ್ತ ಕುಣಿದಾಡೋಳು... ಹಂಗೇಯ ಗಿಜಗನ ಗೂಡು ತಂದು ಕ್ವಡೊ ಅಂತ ಒಂದು ಜಿನ ಗಂಟು ಬಿದ್ದಿದ್ದು, ಯಾರ ದನನು ಮೇಯಿಸಕ್ಕೋಗದಿದ್ದ ಒಂದು ಜಿನ, ಅವಳು ನಾನು ಇಬ್ಬರೂವೆ ಅತ್ತಿರದ ಕಾಡಿಗೆ ಪುಳ್ಳೆ ಮುರಿಕಂಡು ಬರಕ್ಕೋಗಿ, ಕೆರೆ ಆಚೆಗಿದ್ದ ಕಾಡಲ್ಲಿ ಸಮೀಪಕ್ಕೆ ಒಂದು ಮರದಲ್ಲಿ ಮಸ್ತಾಗಿ ಗೀಜಗಳ ಹಕ್ಕಿಗಳು ಗೂಡ ಕಟ್ಟಿದ್ದೂ, ತಂಗೆಮ್ಮ ನೋಡಿಬುಟ್ಟಲು. ಅದರಲ್ಲಿ ಒಂದು ಗೂಡ ಕಿತ್ತುಕೊಡೊ, ಕಿತ್ತುಕೊಡೊಅಂತ ಇಂವುನೆ ಮಾಡಿದ್ದು, ಆ ಗೂಡಗಳತ್ತ ಮೊಪಟೇನೂ ಮರಿಗಳನ್ನೂ ತಿನ್ನಕೆ ಸರ್ಪಗಳು ಬತ್ತವೆ. ನಾನು ಆ ದೊಡ್ಡ ಮರ ಅತ್ತ, ಆ ರೆಂಬೆಗೆ ತೂಗುಬಿದ್ದಿರೊ ಗೂಡ ಬಿಚ್ಚಂಡು ಬರಕ್ಕೆ ಎದುರಿಕಾಯ್ತದೆ, ಅಂದೆ... ಅವಳೆ ಕ್ವಾಪ ಕೆನ್ನೆಯ ವೋಟು ದಪ್ಪ ಊದಿಸ್ಕಂಡು, “ಒಂದು ಮರ ಅತ್ಯ, ಗೀಜನಗನ ಗೂಡ ಕಿತ್ತು ಗಂಡು ಬರನರದೋನು, ನೀ ಯಾವ ಸೀಮೆ ಗಂಡಸ?” ಅಂದೇ ಬುಟ್ಟಲು! ಆ ಚೋಟುದ್ದ ಎಣ್ಣಿನ ಕೈಲಿ ಈ ಮಾತ ಕೇಳಿ, ನಂಗೆ ನಾಚಿಕಾಯ್ತು.