ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನನ್ನ ಸಂಸಾರ -+೨@- ನಾನು ರಂಗಪುರದಲ್ಲಿ ಹುಟ್ಟಿದೆನು, ನಮ್ಮ ಪೂರ್ವಿಕರು ಪ್ರೋತ್ರಿಯರೆಂದು ಕೇಳಿ ಬಲ್ಲೆನು. ಅದು ಬಹು ದಿನದ ಮಾತು, ಸುಮಾರು ನೂರಾರು ವರ್ಷ ಕಳೆದು ಹೋಗಿರ ಬಹುದು. ಈಗಿನ ಸ್ಥಿತಿಯಲ್ಲಿ ಅದನ್ನು ಕಥೆಯೆಂದು ಹೇಳಿದರೆ ಸಾಕಾಗಿದೆ. ನಾನು ಈಗಿನ ಹುಡುಗಿ, ನನಗೆ ಅದೆಲ್ಲಾ ತಿಳಿಯದು, ನನಗೆ ತಿಳಿದಿರುವಷ್ಟನ್ನು ಮಾತ್ರ ನಮ್ಮ ಸೋದರಿಯರಿಗೆ ವಂಚನೆಯಿಲ್ಲದೆ ಹೇಳಿಬಿಡುವೆನು, ನನ್ನ ಹೆಸರು ಮಹಾಲಕ್ಷ್ಮಿ ನಮ್ಮ ತಂದೆಗೆ ಎಷ್ಟು ಮಿತ್ರರೆಂದು ನಾಮಧೇಯವು, ನಮ್ಮ ಪಿತಾಮಹರು ಕೃಷ್ಣಮಿಶ್ರರೆಂದು ಪ್ರಸಿದ್ಧರಾದವರು, ನಮ್ಮ ಮುತ್ತಾತಂದರ ಕಾಲದಲ್ಲಿ ನಮ್ಮ ಮನೆಯಲ್ಲಿ ಸರ್ವದಾ ಐಶ್ವರ್ಯ ಲಕ್ಷ್ಮಿಯ ತಾಂಡವ ವಾಡುತ್ತಿದ್ದಂತೆ ? ಆ ಕಾಲ ದು ಮನೆಯಲ್ಲಿ ಒಯಮಂದಿ ಶಿಷ್ಟರು ಪಾಠಪ್ರವಚನ ಮಾಡುತ್ತಾ ನಮ್ಮ ಮನೆ ಯಲ್ಲೇ ವಾಸಮಾಡಿಕೊಂಡಿದ್ದರಂತೆ ? ಕರಾವಗಳು ಬಹಳವಾಗಿದ್ದವಂತೆ ? : ನಿನ್ನದ ರಾಶಿಯು ಯಾವಾಗ ನೋಡಿದರೂ ಮೂಲೆ ಮೂಲೆಯಲ್ಲಿ ಸುರಿದಿರುತ್ತ ಇದು `ಂತೆ? ಅತಿಥಿ ಅಭ್ಯಾಗತರ ಸೇವೆಯ ವೇದಾಧ್ಯಯನ ಘೋಷವೂ, ಅಗ್ನಿಹೋತಾ ಗಳ ಸಮಾರಂಭವೂ ನಮ್ಮ ಮನೆಯ ಕಾಂತಿಯನ್ನು ವಿಶೇಷತಃ ಅಭಿವೃದ್ಧಿ ಪಡಿಸು " ವಂತೆ ! ಈಗಣ ಕಾಲದಲ್ಲಿ ನಾನೆಲ್ಲ ಯ ಇದನ್ನು ನೋಡಿದವಳೇ ಅಲ್ಲ, ಈ ಅಂತಹ ಪ್ರಣ್ಯವಂತರು ಅಲ್ಲಲ್ಲಿಯೇ ಇರುವರೆಂದು ಕೇಳುತ್ತೇನೆ-ಅಂತಹ ಮಹಾ ಗೆ ಸಹಸ್ರಶಃ ನಮಸ್ಕಾರ ಮಾಡುತ್ತೇನೆ. ಈಗ ನಮ್ಮ ಮನೆಯಲ್ಲಿ ಆ ಭಾಗ್ಯವು ಇಲ್ಲ. ಆ ಐಶ್ವರ್ಯಲಕ್ಷ್ಮಿಯು, ನಾ ಪಿ ಜನ್ನಿಸುವದಕ್ಕಿಂತ ಐವತ್ತು ವರ್ಷಗಳ ಹಿಂದೆಯೇ ನಮ್ಮ ಮನೆಯನ್ನು ಬಿಟ್ಟು ಪ್ರಯ ಣಮಾಡಿ ಬಿಟ್ಟಳಂತೆ ! ನಮ್ಮ ತಾತ ಕೃಷ್ಣಮಿಶ್ರರು ಬಡವರಾದಾಗ್ಯೂ ಅವರ ಪೂರ್ವಿಕರ ಸದ್ಗುಣಗಳು ರಾರಾಜಿಸುತ್ತಿದ್ದುವು. ನಾನು ಚಿಕ್ಕ ಮಗುವಾಗಿದ್ದಾಳೆ , ಅವರುಸಾಯಂಕಾಲದಹೊತ್ತು ನನ್ನನ್ನು ತಮ್ಮ ಬಳಿಯಲ್ಲಿ ಕುಳ್ಳಿರಿಸಿಕೊಂಡು ಸ್ಟೋರ್ ಗಳನ್ನು ಹೇಳಿಕೊಡುತ್ತಿದ್ದರು, ಆಗಾಗ್ಗೆ ಅವರು ತಮ್ಮ ಪೂರ್ವಿಕರ ಮಹಿಮೆಯನ್ನೂ