ವಿಷಯಕ್ಕೆ ಹೋಗು

ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೬೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

هيها ಯವನ ಯಾಮಿನೀ ವಿನೋದ ಎಂಬ, wwನು, ಬಳಿಕ ರಾಜಕುಮಾರನು ರತ್ನಪಡಿ ಮೈದಾರಿಯನ್ನು ಕುರಿತು, ಅಯಾ ! ನಾನು ಹೇಗಿದ್ದರೂ, ಸಾಯತಕ್ಕನನೇಹೊರತು, ಬದುಕತಕ್ಕವನೆಂದಿಗೂ ಅಲ್ಲ. ಇದುವರಿಗೆ ರಾಣಿಯಾದ ಸೇರುಸೆಲ್‌ನೆಹ ರಳು ಸತ್ತುಹೋಗಿರಬೇಕು. ಆದುದರಿಂದ ನಾನಿನ್ನು ಬಾ ಣವನ್ನುಳಿಸಿ ಕಂಡಿರಲಾರನೆಂದು ನುಡಿಯಲು, ರತ್ನ ಪಡಿವಾನರಿಯು ಬಹಳವಾಗಿ ಬೇಡಿಕೊಂಡುದರಿಂದ, ಬಹುಪ್ರಯಾಸದಿಂದ ಸಮ್ಮತಿಸಿ, ಮುಂದೆ ನಡೆದು ಬಂದು, ಒಂದಾನೊಂದು ಮಸೀದಿಯನ್ನು ಕಂಡು, ಅದನ್ನು ಒಳಹೊಕ್ಕು ರಾತ್ರಿಯನ್ನು ಕಳೆದರು. ನಂತರ, ಬೆಳಗಿನ ಜಾವದಲ್ಲಿ ಪ್ರಾರ್ಥನೆಗಾಗಿ ಬಂದ ಒಬಾನೊಬ್ಬ ದೊಡ್ಮನುಷ್ಯನನ್ನು ಕಂಡು, ರತ್ನ ಪಡಿವಾನಾ ರಿಯು ವಾದಿಸಿದನು. ಆಗ ಆತನು ರತ್ನಪಡಿ ವ್ಯಾಪಾರಿಯನ್ನು ನೋಡಿ, ನಿನ್ನನ್ನು ನೋಡಿದರೆ, ವಿನೋದಗಾರನಂತೆ ತೋರುವುದೆನಲು, ಅಯ್ಯೋ ! ವಿನೋದವೇ ! ನಿನ್ನೆ ರಾತ್ರಿ ನಾವು ದಂಗೆಕೋರರ ಕೈಗೆ ಸಿಕ್ಕಿ, ಬಲವಾದ ಪೆಟ್ಟುಗಳನ್ನು ತಿಂದು, ನಮ್ಮ ಪದಾರ್ಥವನ್ನೆಲ್ಯಾ ಸೂರೆಗೊಟ್ಟು, ಉಡವುದಕ್ಕೆ ನನ್ನಪೂ ಕೂಡ ಇಲ್ಲದೆ ಇಲ್ಲಿಗೆ ಬಂದು ಯಾರಬಳಿಗೆ ಗೋಣ ! ಏನುಮಾಡೋಣವೆಂದು ಚಿಂತಿಸುತ್ತಿದ್ದ ಕಾಲದಲ್ಲಿ, ಭಗವದ್ರವ ದಿಂದ ನೀನು ಕಾಣಿಸಿಕೊಂಡೆ ಎಂದು ನುಡಿಯಲು ಆತನು ಅಯಾ ! ನೀವು ನಂಬಿಕೆಯಿಂದ ನನ್ನ ಮನೆಗೆ ಬರುವುದಾದರೆ, ನನ್ನ ಕೈಲಾದ ಸಹಾ ಯವನ್ನು ಮಾಡುವೆನೆಂದು ಹೇಳಿದನು. ರತ್ನ ವಡಿವಾಪಾರಿಯು ರಾಜಪುತ್ರ ನಕಡೆಗೆ ತಿರುಗಿ ಆತನ ಅಭಿ ಸಾಯವನ್ನು ಕೇಳಲು, ನಿನ್ನಿಸನುಸಾರವಾಗಿ ನಡೆಸುವುದೇ ನನ್ನಲ್ಲಿ ಮತವೆಂದುಆತನು ಹೇಳಲು, ಇವರಿಬ್ಬರ ವಾಗ್ವಾದವನ್ನು ನೋಡಿದವ ನಾದ, ಆ ಮಸೀದಿಯಲ್ಲಿದ್ದ ಮನುಷ್ಯನು, ಏನಯಾ ! ನನ್ನ ಗೃಹಕ್ಕೆ ಬರುವುದರಲ್ಲಿ ನಿಮ್ಮಭಿಮಾ ಯವೇನೆನಲು, ಅಯಾ ನಾವು ನಿಮ್ಮ ಮನಗೆ ಬರುವುದರಲ್ಲಿ ಸಂಶಯವೇನೂ ಇಲ್ಲ. ಆದರೆ ಬೀದಿಯಲ್ಲಿ ನಿರ್ಮಾಣ ಯುಕ್ತರಾಗಿ ಬರಬೇಕಲ್ಲಾ! ಎಂದು ಚಿಂತಿಸುತ್ತಿರುವೆವು ಎಂದು ಹೇಳಿ ದನು. ನಂತರ ಅದೃಷ್ಟವಶದಿಂದ ಆತನಬಳಿಯಲ್ಲಿ ವಸ್ತ್ರಗಳನ್ನು ಧರಿಸಿ ಕೊಂಡು, ಅವನಸಂಗಡಲೇ ಮನೆಗೆ ಹೋಗಲು, ಆತನು ಇವರಿಬ್ಬರಿಗೂ