________________
ಬಾಳ ಪ್ರೇಮ ತಿಳಿಯದು! ಹೋಗಲಿ ; ಇದನ್ನಾದರೂ ಸಮುದ್ರದ ಹಡಗಿಗೆ ಒಯ್ಯಲು ನಾನು ಜೀವಿಸಿದ್ದೇನೆ.... ಅವನ ಸಂತೋಷ ವಿಚಿತ್ರ ರೀತಿಯದು. ಧ್ವನಿ ಹಗುರವಾಗಿರದೆ ಭಾರವಾಗಿತ್ತು, ಮುಖದಲ್ಲಿ ಕಳೆಯಿರದೆ ವಿವರ್ಣತೆಯಿತ್ತು. ದುಶ್ಯ ಕುನ ಸೂಚಿಸುವ ದೊಂಬ ಕಾಗೆಯ ಧ್ವನಿಯನ್ನು ಒರಟಾಗಿತ್ತು, ಅವನ ಕೂಗಾಟ, ರೋಗಿಷ್ಟ ತೋಳ ಸುಮ್ಮನಿರಲಿಲ್ಲ; ಅದೂ ಕೂಡ ಹಿಂಬಾಲಿಸುತ್ತಾ ಗಟ್ಟಿಯಾಗಿ ಕೂಗುತಿತ್ತು, ತಾನು ಮಾಡುತ್ತಿರುವುದೇನು ? ಎಂದು ಮನುಷ್ಯ ಯೋಚಿಸಿದನು. ತಲೆಗೆ ಏನು ತಾಕಿತೊ ; ತಕ್ಷಣ ವಿಕಟ ನಗು ನಿಂತು ಹೋಯಿತು. ಒಂದು ವೇಳೆ ಇದು ಬಿಲ್ನ ಅವಶೇಷಗಳೇ ಆಗಿದ್ದ ಪಕ್ಷದಲ್ಲಿ, ತಾನು ನಗುತ್ತಿರುವುದರ ಅರ್ಥವೇನು ? ಸ್ವಚ್ಛವಾದ ನಸುಗೆಂಪಿನ ಛಾಯೆ ಹೊಂದಿರುವ ಈ ಬಿಳೀ ಮೂಳೆಗಳು ಅವನದೇ ಇರಬಹುದಲ್ಲವೇ ?.... ಅವನು ಪಕ್ಕಕ್ಕೆ ತಿರುಗಿಕೊಂಡು ಯೋಚಿಸಿದನು : ಎಲ್ಲಾ ತಿಳಿದ ಹಾಗಾಯಿತು. ತನ್ನನ್ನು ಬಿಲ್ ಕೈ ಬಿಟ್ಟದ್ದು ಅಕ್ಷರಶಃ ಸತ್ಯ. ಆದರೂ ತಾನು ಅವನ ಚಿನ್ನವನ್ನು ಕದಿಯುವುದಿಲ್ಲ. ಇನ್ನು ಆ ಎಲುಬುಗಳನ್ನು ಜಗಿಯುತ್ತೇನೆಯೇ? ಖಂಡಿತ ಇಲ್ಲ....ಈ ಪ್ರಸಂಗ ತಿರುಗ ಮುರುಗ ಆಗಿದ್ದರೆ, ಬಿಲ್ ಮಹಾಶಯ ತನ್ನಂತೆ ವರ್ತಿಸುತ್ತಿರಲಿಲ್ಲ !.... ಹೀಗೆ ಚಿಂತಿಸುತ್ತಾ ತೂರಾಡಿಕೊಂಡು ಮುಂದುವರಿದನು. ಒಂದು ತುಂಬಿದ ಕೊಳದ ಬಳಿ ಬಂದನು. ಮಿನೋ ಮಾನುಗಳನ್ನು ಹುಡುಕಲು ಬಗ್ಗಿದನು. ತಕ್ಷಣ ಅವನ ತಲೆ ಹಿಂದಕ್ಕೆ ಜಗ್ಗಿತು. ಯಾರಾದರೂ ಚುಚಿರಬಹುದೇ ?....ಅವನು ತನ್ನ ಮುಖದ ಪ್ರತಿಬಿಂಬವನ್ನು ನೀರಿನಲ್ಲಿ ಕಂಡನು. ತಲೆಯನ್ನು ಹಿಂದಕ್ಕೆ ಜಗ್ಗಿಸುವಷ್ಟು ನರಗಳು ಅವಕಾಶಕೊಟ್ಟುವು. ಅಂದರೆ ಅವನ ಪ್ರತಿಬಿಂಬ ಅಷ್ಟೇ ಭೀಕರವಾಗಿತ್ತು ! ಕೊಳದಲ್ಲಿ ಮೂರು ಮಿನೋಗಳಿದ್ದವು. ಆದರೆ ಆ ದೊಡ್ಡ ಕೊಳವನ್ನು ಬರಿದುಮಾಡಲು ಸಾಧ್ಯವಿಲ್ಲ. ಆದರೂ ಟನ್ನು ಬಕೆಟ್ಟಿನಲ್ಲಿ ಮಿಾನು ಹಿಡಿಯಲು ವ್ಯರ್ಥ ಪ್ರಯತ್ನಗಳನ್ನು ನಡೆಸಿದನು. ಕಡೆಗೆ ಅವನು ಹೆದರಿದನು. ದೌರ್ಬಲ್ಯ ಜಾಸ್ತಿಯಾಗಿತ್ತು. ಈ ಮಧ್ಯೆ ಕೆಳಕ್ಕೆ ಜಾರಿ ಪ್ರಾಣಬಿಟ್ಟರೆ ಏನು ಗತಿ ? ಆ ತಂಟೆಯೇ ಬೇಡ....ನದಿಯ ಮರಳುಗಡ್ಡೆಯ ಮೇಲೆ ಎಷ್ಟೋ ಮರದ ದಿಮ್ಮಿ ಗಳಿದ್ದವು. ಅವನ್ನು ನೀರಿಗೆಸೆದು ನದಿಯ ಮೇಲೆಯೆ ವೇಗವಾಗಿ ಪ್ರಯಾಣ 10