________________
ಬಾಳ ಪ್ರೇಮ ೧೦೬ ಅರ್ಧ ಘಂಟೆಯಾದ ಮೇಲೆ ಅವನಿಗೆ ಎಚ್ಚರವಾಯಿತು. ತನ್ನ ಗಂಟಲಲ್ಲಿ ಏನೋ ಒಂದು ರೀತಿಯ ಹಿತಕರವಲ್ಲದ ಚುಚ್ಚು ನೋವು ಕಾಣಿಸಿಕೊಂಡಿರು ವುದಲ್ಲ ! ದ್ರವರೂಪದ ಸೀಸವನ್ನು ಹೊಟ್ಟೆಗೆ ತುರುಕಿದಂತಿತ್ತು ; ಕೇವಲ ಮನೋಬಲದಿಂದ ನಡೆದ ಕೆಲಸವದು. ಆಮೇಲೆ ಮನುಷ್ಯ ಹೊರಳುತ್ತಾ ಅಂಗಾತಾಗಿ ಮಲಗಿದನು. ಜಲಚರಗಳ ಬೇಟೆಗಾಗಿ ಹೊರಟ * ಬೆಡ್ಫೋರ್' ಹಡಗಿನಲ್ಲಿ ವೈಜ್ಞಾನಿಕ ತಂಡದ ಕೆಲವು ಸದಸ್ಯರೂ ಇದ್ದರು. ಅವರು ಹಡಗಿನ ಅಟ್ಟದ ಮೇಲೆ ನಿಂತು ಸುತ್ತಲೂ ನೋಡಿದರು; ಆಶ್ಚರ್ಯಕರವಾದ ವಸ್ತುವೊಂದು ಕಡಲ ದಂಡೆಯ ಮೇಲಿದ್ದಂತೆ ಕಾಣಿಸಿತು. ಅದು ಉರುಳಿಕೊಂಡು ನೀರಿನ ಅಂಚಿಗೆ ಬರುತಿತ್ತು. ಆ ವಸ್ತು ಯಾವುದೆಂದು ದೂರದಲ್ಲೇ ನಿಂತು ಹೇಳಲು, ಅವರಿಗೆ ಸಾಧ್ಯವಾಗಲಿಲ್ಲ. ವಿಜ್ಞಾನಿಗಳಾದ್ದರಿಂದ ಸಹಜ ಕುತೂಹಲ ಕೆರಳಿತು. ತಕ್ಷಣ ಹಡಗಿನಲ್ಲಿದ್ದ ದೋಣಿಯನ್ನು ಹೊರತೆಗೆದರು. ಕೆಳಕ್ಕಿಳಿ ಸಿದರು. ಅದರಲ್ಲಿ ಕುಳಿತು ದಡದ ಕಡೆ ಹೊರಟರು. ಅವರು ಕಂಡದ್ದು ವಿಚಿತ್ರವಾಗಿದ್ದರೂ ಉಸಿರಾಡುತ್ತಿತ್ತು. ಆದರೆ ಅದನ್ನು ಮನುಷ್ಯನೆಂದು ಹೇಳಲು ಯಾವ ಹೋಲಿಕೆಯೂ ಇರಲಿಲ್ಲ. ಅದು ಕುರುಡಾಗಿತ್ತು ; ಜೊತೆಗೆ ಸ್ಕೃತಿಯೂ ತಪ್ಪಿತ್ತು. ರಾಕ್ಷಸ ಸ್ವಭಾವದ ದೊಡ್ಡ ಹುಳುವಿನಂತೆ ಮಿಲಿ ಮಿಲಿ ಒದ್ದಾಡುತಿತ್ತು. ಮುಂದು ಮುಂದಕ್ಕೆ ಹೋಗಲು ಶತಪ್ರಯತ್ನ ಮಾಡುತಿತ್ತು ; ಫಲಕಾರಿಯಾಗದಿದ್ದರೂ, ಸುಮ್ಮನಿರುವ ಸ್ವಭಾವವಂತೂ ಇಲ್ಲವೇ ಇಲ್ಲ. ಮೈ ತಿರುಚಿಸಿಕೊಂಡು ತೀವ್ರ ವೇದನೆ ಪಡುತ್ತಿದ್ದರೂ, ಗಂಟೆಗೆ ಸುಮಾರು ಇಪ್ಪತ್ತು ಅಡಿಗಳನ್ನಾದರೂ ಸಾಗಿಸುತಿತ್ತು. . ಮೂರು ವಾರಗಳು ಕಳೆದವು. ' ಬೆಡ್ಫೋರ್ಡ್'ನ ಇರುಕಲು ತೊಟ್ಟಿ ಯೊಂದರಲ್ಲಿ ಮನುಷ್ಯ ಮಲಗಿದ್ದನು. ಬತ್ತಿ ಹೋಗಿದ್ದ ಕೆನ್ನೆಗಳ ಮೇಲೆ ಕಣ್ಣೀರು ಸುರಿಯುತಿತ್ತು. ತಾನು ಯಾರೆಂಬುದನ್ನು ತಿಳಿಸಿದನು. ಅಲ್ಲಿಯ ತನಕ ತಾನು ಪಟ್ಟಿದ್ದ ಕಷ್ಟದ ಕಥೆಯನ್ನು ಹೇಳಿದ್ದಾಯಿತು. ಬಾಲ್ಯದ ನೆನಪುಗಳನ್ನು ಹೇಳುವಾಗ ಅವನ ಮಾತು ಅಸಂಬದ್ದವಾಗಿ ತೊದಲುತಿತ್ತು ....ತನ್ನ ತಾಯಿ ! ಸೂರ್ಯನಿಂದ ಪ್ರಕಾಶಮಾನವಾದ ದಕ್ಷಿಣ ಕ್ಯಾಲಿ ಫೋರ್ನಿಯ ತನ್ನ ವಾಸಸ್ಥಳ ! ಹೂವು ಹಣ್ಣುಗಳ ಗೊಂಚಲ ಮಧ್ಯೆ ತನ್ನ ಮನೆ !.... 0 0 0 0 0 0