ವಿಷಯಕ್ಕೆ ಹೋಗು

ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

-೬೫-

ಒಂದು ಪ್ರದೇಶದ ಹವೆಯ ಒತ್ತುವಿಕೆಯು ಅಡಿಗಡಿಗೆ ಏಕೆ ವ್ಯತ್ಯಾಸವನ್ನು ಹೊಂದುತ್ತದೆ? ಇದಕ್ಕೆ ಎರಡು ಕಾರಣಗಳಿರುತ್ತವೆ.

(ಅ)ಹವೆಯು ಕಾಯುವದು:- ಹವೆಯು ಕಾದರೆ ವಿಸ್ತಾರವಾಗುತ್ತದಷ್ಟೇ. ಒಂದು ಘನ ಅಡಿ ಹವೆಯನ್ನು ಒಳಗೊಳ್ಳುವ ಒಂದು ಪೆಟ್ಟಿಗೆಯನ್ನು ತಂದು ಕಾಸಿದರೆ ಅದರಲ್ಲಿರುವ ಹವೆಯ ಒಂದು ಭಾಗವು ಹೊರಗೆ ಹೋಗುವದು; ಆಗ ಪೆಟ್ಟಿಗೆಯ ಭಾರವು ಮೊದಲಿನ ಭಾರಕ್ಕಿಂತ ಕಡಿಮೆಯಾಗುವದು. ಪೆಟ್ಟಿಗೆಯು ತಣ್ಣಗಾದ ಕೂಡಲೆ ಅದರಲ್ಲಿರುವ ಹವೆಯು ಆಕುಂಚಿತವಾಗಿ ಹೊರಗಿನ ಹವೆಯು ತುಂಬುವದರಿಂದ ಮೊದಲಿನಷ್ಟೇ ತೂಗುವದು, ಇದೇ ರೀತಿಯಲ್ಲಿ ಹಳೆಯ ಉಷ್ಣಮಾನವು ಆಗಾಗ್ಗೆ ವ್ಯತ್ಯಾಸವಾಗುತ್ತಿರುವದರಿಂದ, ಹವೆಯ ಒತ್ತುವಿಕೆಯು ವ್ಯತ್ಯಾಸವಾಗಲೇಬೇಕು. ಉಷ್ಣ ಮಾಪಕಯಂತ್ರಕ್ಕೂ ಭಾರಮಾಪಕಯಂತ್ರಕ್ಕೂ ಪರಸ್ಪರವಿರುವ ಸಂಬಂಧವನ್ನು ಹೇಳಬೇಕಾದರೆ, ಉಷ್ಣ ಮಾಪಕ ಯಂತ್ರದಲ್ಲಿ ಪಾರಜವು ಮೇಲಕ್ಕೆ ಏರುತ್ತಾ ಭಾರಮಾಪಕಯಂತ್ರದ ಪಾರಜವು ಕೆಳಗೆ ಇಳಿಯುವದು. ಉಷ್ಣ ಮಾಪಕಯಂತ್ರದ ಪಾರಜವು ಕೆಳಗೆ ಇಳಿದರೆ ಭಾರಮಾಪಕಯಂತ್ರದ ಪಾರಜವು ಮೇಲಕ್ಕೆ ಏರುವದು.

(ಬ)ಉಗಿಯ ಪ್ರಮಾಣ:- ನೀರಿನ ಉಗಿಯು ಹವೆಗಿಂತ ಹಗುರವಾಗಿರುತ್ತದೆ. ಆದ್ದರಿಂದ ರುಕ್ಷ(ಒಣ) ಹವೆಯು ಆರ್ದ್ರತೆಯುಳ್ಳ ಹವೆಗಿಂತ ಹೆಚ್ಚು ಭಾರವುಳ್ಳದ್ದಾಗಿರುತ್ತದ್ದೆಂದು ಹೇಳಬೇಕಾದುದಿಲ್ಲ. ಹವೆಯಲ್ಲಿ ಉಗಿಯ ಪ್ರಮಾಣವು ಹೆಚ್ಚಿದರೆ, ಹವೆಯ ಒತ್ತುವಿಕೆಯು ಕಡಿಮೆಯಾಗುವದು. ಆದ್ದರಿಂದ ಹವೆಯಲ್ಲಿ ಉಗಿಯ ಪ್ರಮಾಣವು ಹೆಚ್ಚು ಕಡಿಮೆಯಾದ ಹಾಗೆಲ್ಲ ಭಾರಮಾಪಕ ಯಂತ್ರದ ಪಾರಜವು ಇಳಿಯುತ್ತಲೂ ಏರುತ್ತಲೂ ಇರುವದು.

ಒಂದು ಪ್ರದೇಶದಲ್ಲಿ ಭಾರಮಾಪಕ ಯಂತ್ರದ ಸಾರಜವು ಹೆಚ್ಚು ಎತ್ತರದಲ್ಲಿರುವವರೆಗೂ ಅಲ್ಲಿ ಹವೆಯು ಶೀತವಾದದ್ದಾಗಿಯೂ ಒಣಗಿದ್ದಾಗಿಯೂ ಇರುತ್ತದೆಂದು ತಿಳಿಯಬಹುದು. ಭಾರಮಾಪಕ ಯಂತ್ರದ ಪಾರಜವು ಕೆಳಗೆ ಇಳಿದರೆ, ಅಲ್ಲಿ ಹವೆಯು ಉಷ್ಣಮಾನವು ಹೆಚ್ಚಿರುವದು ಅಥವಾ ಉಗಿಯ ಅಂಶವು ಹೆಚ್ಚಿರುವದೆಂದು ತಿಳಿಯಬಹುದು. ಸೆಕೆಯು ಬಹಳ ಹೆಚ್ಚಾದರೆ, ಹವೆಯು ವಿರಲವಾಗಿ ಮೇಲಕ್ಕೇರಿ ಅದರ ಸ್ಥಳವನ್ನು ಸುತ್ತು ಮುತ್ತಲಿನ ಹವೆಯು ಆಕ್ರಮಿಸಿಕೊಳ್ಳುವದರಿಂದ ಭಾರಮಾಪಕ ಯಂತ್ರದ ಪಾರಜವು ಬಹಳ ಕೆಳಗೆ ಇಳಿದರೆ

5