—
-
e v
ವಾತವು ಕ್ಷೀಣವಾದಾಗ್ಗೆ ಅಂಗಚೇಷ್ಟೆಗಳು ಮಂದವಾಗುತ್ತವೆ ಮತ್ತು ಅಲ್ಪಭಾಷಣ,
ಅಲ್ಪಹರ್ಷ, ಮೂಢವಾದ ಎಚ್ಚರ ಸಹ ಉಂಟಾಗುತ್ತವೆ, ಪಿತ್ತವು ಕ್ಷಯವಾದಾಗ್ಗೆ, ಮಂದವಾದ ಬಿಸಿ, ಮಂದವಾದ ಅಗ್ನಿ, ವರ್ಚಸಿಲ್ಲದಿರೋಣ, ಮತ್ತು ಕಫವು ಕ್ಷಯವಾ ದಾಗ್ಗೆ ರೂಕ್ಷತ್ವ, ಒಳಗೆ ಉರಿ, ಆಮಾಶಯವಲ್ಲದ ಇತರ ಆಶಯಗಳಲ್ಲಿಯೂ, ಶಿರಸ್ಸಿನಲ್ಲಿ ಯೂ ಶೂನ್ಯಭಾವ, ಸಂದುಗಳು ಸಡಿಲಾಗಿರೋಣ, ಬಾಯಾರಿಕೆ, ಬಲಹೀನತೆ, ನಿದ್ರೆಯಿಲ್ಲ ದಿರೋಣ, ಸಹ ಉಂಟಾಗುತ್ತವೆ ಈ ದೋಷಗಳಿಗೆ ಆಯಾ ಯೋನಿಯನ್ನು ವರ್ಧಿಸುವ ದ್ರವ್ಯಗಳೇ ಪ್ರತಿಕಾರವಾಗಿರುತ್ತವೆ.
ಕರ್ಮಗಳು
43. ರಸಃ ಪ್ರೀಣಯತಿ ರಕ್ತ ಪುಷ್ಟಿ೦ ಚ ಕರೋತಿ | ರಕ್ತಂ ವರ್ಣಪ್ರಸಾದಂ
ಮಾಂಸಪುಷ್ಟಿಂ ಜೀವಯತಿ ಚ | ಮಾಂಸಂ ಶರೀರಪುಷ್ಟಿಂ ಮೇದಸಶ್ವ | ಸಪ್ತಧಾತುಗಳ
ಮೇದಃ ಸ್ನೇಹಸ್ವೆದೌ ದೃಢತ್ವಂ ಪುಷ್ಟಿ ಮಸ್ಧ್ನಾಂ ಚ | ಅಸ್ಥಿ ದೇಹಧಾ ರಣಂ ಮಙ್ಗಃ ಪುಷ್ಟಿ ಚ | ಮಚ್ಛಾ ಪ್ರೀತಿಂ ಸ್ನೇಹಂ ಬಲಂ ಶುಕ್ರ ಪುಷ್ಟಿಂ ಪೂರಣಮಸ್ಧ್ಮಾಂ ಚ ಕರೋತಿ | ಶುಕ್ರಂ ಧೈರ್ಯಂ ಚ್ಯವನಂ
ಪ್ರೀತಿಂ ದೇಹಬಲಂ ಹರ್ಷಂ ಬೀಬಾರ್ಧಂ ಚ | (ಸು. 52.) . ರಸಧಾತುವು ತೃಪ್ತಿಯನ್ನೂ, ರಕ್ತ ಪುಷ್ಟಿಯನ್ನೂ ಉಂಟುಮಾಡುತ್ತದೆ. ರಕ್ತವು ವರ್ಣ ಶುದ್ಧತೆಯನ್ನೂ, ಮಾಂಸಪುಷ್ಟಿಯನ್ನೂ ಕೊಟ್ಟು ಬದುಕಿಸುತ್ತದೆ ಮಾಂಸವು ಶರೀರದ ಮತ್ತು ಮೇದಸ್ಸಿನ ಪುಷ್ಟಿಯನ್ನುಂಟುಮಾಡುತ್ತದೆ ಮೇದಸ್ಸು ಜಿಡ್ಡ ನ್ನು, ಬೆವರನ್ನೂ, ದೃಢತೆಯನ್ನೂ, ಎಲುಬುಗಳ ಪುಷ್ಟಿಯನ್ನೂ ಉಂಟುಮಾಡುತ್ತದೆ ಅಸ್ಥಿ ಧಾತುವು ದೇಹದ ಆಧರಿಸುವಿಕೆಯನ್ನೂ, ಮಚ್ಚಾ ಧಾತುವಿನ ಪುಷ್ಟಿಯನ್ನೂ ಮಾಡುತ್ತದೆ. ಮಚಧಾತುವು ಪ್ರೀತಿ ಯನ್ನೂ, ಸ್ನೇಹವನ್ನೂ, ಬಲವನ್ನೂ, ಶುಕ್ರಪುಷ್ಟಿಯನ್ನೂ, ಅಸ್ಥಿಗಳ ಪೂರ್ತಿಯನ್ನೂ ಮಾಡುತದೆ. ಶುಕ್ರವು ಧೈರ್ಯವನ್ನೂ, ಶೀಘ್ರವಾಗಿ ಸ್ರಾವವನ್ನೂ, ಪ್ರೀತಿಯನ್ನೂ, ದೇಹದ ಬಲ ವನ್ನೂ, ಹರ್ಷವನ್ನೂ, ಬೀಬಾರ್ಧವನ್ನೂ ಸಂಪಾದಿಸುತ್ತದೆ.
44.
ಆಕ್ಷಯಲಕ್ಷಣ
ರಸಕ್ಷಯೇ ಹೃತ್ಪೀಡಾ ಕಂಪಃ ಶೂನ್ಯತಾ ತೃಪ್ಲಾ ಚ | ಶೋಣಿತಕ್ಷಯೇ ತ್ವಕ್ಷಾರುಷ್ಯ ಮಮ್ಲ ಶೀತಪ್ರಾರ್ಥನಾ ಸಿರಾಶೈಧಿಲ್ಯಂ ಚ | ಮಾಂಸಕ್ಷಯೇ ಸ್ಛಿಗ್ಗಂಡೌಷ್ಟೋಪಸ್ಥೊರುವಕ್ಷಕಕ್ಷಾಪಿಂಡಿಕೋದರಗ್ರೀವಾಶುಷ್ಕತಾ ರೌಕ್ಷ್ಯತೋದೌ ಗಾತ್ರಾಣಾಂ ಸದನಂ ಧಮನೀಶೈಥಿಲ್ಯಂ ಚ | ಮೇ ದಃಕ್ಷಯೇ ಪ್ಲೀಹಾಭಿವೃದ್ಧಿ: ಸಂಧಿಶೂನ್ಯತಾ ರೌಕ್ಷ್ಯಂ ಮೇದುರಮಾಂಸ ಪ್ರಾರ್ಥನಾ ಚ | ಅಸ್ಥಿಕ್ಷಯೇಽತೋದೋ ದಂತನಖಭಂಗೋ ಕ್ಷ್ಯಂ ಓಂ ಚ | ಮಜ್ಜ ಕ್ಷಯೇಽಲ್ಪ ಶುಕ್ರತಾ ಪರ್ವಭೇದೊಽಸ್ಥಿನಿಸ್ತೊ ದೋಽಸ್ಥಿ ಶೂನ್ಯತಾ ಚ | ಶುಕ್ರಕ್ಷಯೇ ಮೇಢ್ರವೃಷಣವೇದನಾಽಶಕ್ತಿ
ರ್ಮೈಧುನೇ ಚಿರಾದ್ವಾ ಪ್ರಸೇಕಃ ಪ್ರಸೇಕೇ ಚಾಲ್ಪ ರಕ್ತಶುಕ್ರದರ್ಶನಂ ಚ | ತತ್ರಾಪಿ ಸ್ವಯೋನಿವರ್ಧನದ್ರವ್ಯೂಪಯೋಗಃ ಪ್ರತೀಕಾರಃ | (ಸು. 53.)
16