ವಿಷಯಕ್ಕೆ ಹೋಗು

ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

-೬೩-

ದರಿಂದ ಅದರೊಳಗೆ ಸಂಚರಿಸುವ ನಮಗೆ ಅದರ ಭಾರವು ತೋರುವರಿಲ್ಲ.* ಸಮುದ್ರ ಮಟ್ಟದಿಂದ ಮೇಲೆ ಹೋದಂತೆ ಹವೆಯು ವಿರಲವಾಗುವದರಿಂದ ಅದರ ಒತ್ತುವಿಕೆಯು ಕಡಿಮೆಯಾಗುತ್ತ ಹೋಗುವದು.

ಭಾರಮಾಪಕ ಯಂತ್ರ.

ಯಾವದೊಂದು ಸ್ಥಳದಲ್ಲಿ ಹವೆಯ ಒತ್ತುವಿಕೆಯು ಎಷ್ಟಿರುತ್ತದೆಂಬುವದನ್ನು ತಿಳಿಸುವದಕ್ಕೆ ಒಂದು ಸಾಧನವು ಇರುತ್ತದೆ. ಅದನ್ನು ಹವೆಯ ಭಾರಮಾ ಪಕ ಯಂತ್ರ (Barometer ಬ್ಯಾರೋ ಮೀಟರ್) ವೆಂದು ಕರೆಯುತ್ತಾರೆ. ಇದರ ರಚನೆಯೇನಂದರೆ:- ೩೪ ಅಂಗುಲ ಉದ್ದವಾಗಿಯೂ ಮೇಲಿನ ತುದಿಯಿಂದ ಬುಡದವರೆಗೂ ಸಮನಾದ ವ್ಯಾಸವುಳ್ಳದ್ದಾಗಿಯೂ ಒಂದು ತುದಿಯು ಮುಚ್ಚಿದ್ದಾಗಿಯೂ ಇರುವ ಒಂದು ಗಾಜಿನ ಕೊನೆಯ ತುಂಬ ಪಾರಜ(ಪಾದರಸ)ವನ್ನು ತುಂಬಬೇಕು. ಅನಂತರ ಅದರ ಬಾಯಿಯನ್ನು ಬೆರಳಿನಿಂದ ಮುಚ್ಚಿ ಸಾರಜ ತುಂಬಿರುವ ಅಗಲವಾದ ಒಂದು ಬಟ್ಟಲಲ್ಲಿ ಕೊಳಿವೆಯನ್ನು ತಲೆ ಕೆಳಗೆ ಇಟ್ಟು ಕೈ ಬೆರಳನ್ನು ತೆಗೆಯಬೇಕು. ಆಗ ಕೊಳಿವೆಯಲ್ಲಿರುವ ಪಾರಜವು ಸ್ವಲ್ಪ ಕೆಳಗೆ ಇಳಿದು ಒಂದು ಮಟ್ಟದಲ್ಲಿ (ಎತ್ತರದಲ್ಲಿ) ಸ್ಥಿರವಾಗಿ ನಿಲ್ಲುವದು, ಕೊಳಿವೆಯಲ್ಲಿ ಸಾರಜದ ಮೇಲಿರುವ ಭಾಗದಲ್ಲಿ ಹವೆಯು ಇರದೇ ಅದು ಬರೇ ಸ್ಥಳವಾಗಿರುವದು. ನಾವು ಕೊಳಿವೆಯನ್ನು ತಲೆಕೆಳಗೆಮಾಡಿ ಕೈ ಬೆರಳನ್ನು ತಗೆದಕೂಡಲೆ ಕೊಳಿವೆಯಲ್ಲಿರುವ ಪಾರಜವು ಪೂರ್ತಿಯಾಗಿ ಏಕೆ ಕೆಳಗೆ ಇಳಿಯುವದಿಲ್ಲವೆಂದು ಕೇಳಬಹುದು. ಪಾತ್ರೆಯಲ್ಲಿರುವ ಸಾರಜವನ್ನು ಹವೆಯು ಒತ್ತುತ್ತಿರುವದರಿಂದ ಈ ಪಾರಜವು ಕೊಳಿವೆಯಲ್ಲಿರುವ ಪಾರಜವನ್ನು ಕೆಳಗೆ ಇಳಿಯಗೊಡಿಸುವದಿಲ್ಲ. ಅಂದರೆ ಹವೆಯ ಒತ್ತುವಿಕೆಯ ಶಕ್ತಿಯಿಂದ ಪಾತ್ರೆಯಲ್ಲಿರುವ ಪಾರಜವು ಕೊಳಿವೆಯಲ್ಲಿರುವ ಪಾರಜವನ್ನು ಕೆಳಗೆ ಇಳಿಯದ ಹಾಗೆ ತಡೆಯುತ್ತದೆ. ಕೋಳಿವೆಯಲ್ಲಿರುವ ಪಾರಜವು ಕೆಳಗೆ ಇಳಿದರೆ ಪಾತ್ರೆಯಲ್ಲಿ ಪಾರಜವು ಮೇಲಕ್ಕೇರಿ ಹವೆಯನ್ನು


*ಹವೆಯು ಘನಪದಾರ್ಥಗಳ ಹಾಗೆ ಕೆಳಗಡೆಗೆ ಮಾತ್ರ ಒತ್ತುತ್ತಿದ್ದರೆ ನಾವು ಅದರ ಭಾರದಿಂದ ಕುಗ್ಗಿ ಹೋಗುತ್ತಿದ್ದೆವು. ಇದೇ ರೀತಿಯಲ್ಲಿ ನೀರಿನಲ್ಲಿ ಎಲ್ಲಾ ಕಡೆಗಳಲ್ಲಿ ಒಂದೆ ಸಮನಾದ ಒತ್ತುವಿಕೆ ಇರುತ್ತದೆ. ಆದುದರಿ೦ದಲೆ ನೀರಿನಲ್ಲಿ ಎಷ್ಟು ಆಳದಲ್ಲಿಯಾದರೂ ಜಲಚರ ಪಣಿಗಳು ಸಹಜವಾಗಿ ಸಂಚರಿಸುತ್ತವೆ.