ಪುಟ:ಸೃಷ್ಟಿವ್ಯಾಪಾರಗಳ ನಿರೀಕ್ಷಣೆ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದರಿಂದ ಅದರೊಳಗೆ ಸಂಚರಿಸುವ ನಮಗೆ ಅದರ ಭಾರವು ತೋರುವರಿಲ್ಲ.* ಸಮುದ್ರ ಮಟ್ಟದಿಂದ ಮೇಲೆ ಹೋದಂತೆ ಹವೆಯು ವಿರಲವಾಗುವದರಿಂದ ಅದರ ಒತ್ತುವಿಕೆಯು ಕಡಿಮೆಯಾಗುತ್ತ ಹೋಗುವದು. - ಭಾರಮಾಪಕ ಯಂತ್ರ. ಯಾವದೊಂದು ಸ್ಥಳದಲ್ಲಿ ಹವೆಯ ಒತ್ತುವಿಕೆಯು ಎಷ್ಟಿರುತ್ತದೆಂಬುವ ದನ್ನು ತಿಳಿಸುವದಕ್ಕೆ ಒಂದು ಸಾಧನವು ಇರುತ್ತದೆ, ಅದನ್ನು ಹವೆಯ ಭಾರಮಾ ಪಕ ಯಂತ್ರ (Barometer ಬ್ಯಾರೋ ಮೀಟರ್ ) ವೆಂದು ಕರೆಯುತ್ತಾರೆ. ಇದರ ರಚನೆಯೇನಂದರೆ:- ೩೪ ಅಂಗುಲ ಉದ್ದವಾಗಿಯೂ ಮೇಲಿನ ತುದಿ ಯಿಂದ ಬುಡದವರೆಗೂ ಸಮನಾದ ವ್ಯಾಸವುಳ್ಳದ್ದಾಗಿಯೂ ಒಂದು ತುದಿಯು ಮುಚ್ಚಿದ್ದಾಗಿಯೂ ಇರುವ ಒಂದು ಗಾಜಿನ ಕೊನೆಯ ತುಂಬ ಪಾರಜ ( ಸಾದ ರಸ ) ವನ್ನು ತುಂಬಬೇಕು. ಅನಂತರ ಅದರ ಬಾಯಿಯನ್ನು ಬೆರಳಿನಿಂದ ಮುಚ್ಚಿ ಸಾರಜ ತುಂಬಿರುವ ಅಗಲವಾದ ಒಂದು ಬಟ್ಟಲಲ್ಲಿ ಕೊಳಿವೆಯನ್ನು ತಲೆ ಕೆಳಗೆ ಇಟ್ಟು ಕೈ ಬೆರಳನ್ನು ತೆಗೆಯಬೇಕು. ಆಗ ಕೊಳಿವೆಯಲ್ಲಿರುವ ಪಾರಜವು ಸ್ವಲ್ಪ ಕೆಳಗೆ ಇಳಿದು ಒಂದು ಮಟ್ಟದಲ್ಲಿ ( ಎತ್ತರದಲ್ಲಿ ) ಸ್ಥಿರವಾಗಿ ನಿಲ್ಲುವದು, ಕೊಳಿವೆಯಲ್ಲಿ ಸಾರಜದ ಮೇಲಿರುವ ಭಾಗದಲ್ಲಿ ಹವೆಯು ಇರದೇ ಅದು ಬರೇ ಸ್ಥಳವಾಗಿರುವದು. ನಾವು ಕೊಳಿವೆಯನ್ನು ತಲೆಕೆಳಗೆಮಾಡಿ ಕೈ ಬೆರಳನ್ನು ತಗೆದಕೂಡಲೆ ಕೊಳಿವೆಯಲ್ಲಿರುವ ಪಾರಜವು ಪೂರ್ತಿಯಾಗಿ ಏಕೆ ಕೆಳಗೆ ಇಳಿಯುವದಿಲ್ಲವೆಂದು ಕೇಳಬಹುದು. ಪಾತ್ರೆಯಲ್ಲಿರುವ ಸಾರಜವನ್ನು ಹವೆಯು ಒತ್ತುತ್ತಿರುವದರಿಂದ ಈ ಪಾರಜವು ಕೊಳಿವೆಯಲ್ಲಿರುವ ಪಾರಜವನ್ನು ಕೆಳಗೆ ಇಳಿಯಗೊಡಿಸುವದಿಲ್ಲ. ಅಂದರೆ ಹವೆಯ ಒತ್ತುವಿಕೆಯ ಶಕ್ತಿಯಿಂದ ಪಾತ್ರೆಯಲ್ಲಿರುವ ಪಾರಜವು ಕೊಳಿವೆ ಯಲ್ಲಿರುವ ಪಾರಜವನ್ನು ಕೆಳಗೆ ಇಳಿಯದ ಹಾಗೆ ತಡೆಯುತ್ತದೆ, ಕೋಳಿವೆಯಲ್ಲಿ ರುವ ಪಾರಜವು ಕೆಳಗೆ ಇಳಿದರೆ ಪಾತ್ರೆಯಲ್ಲಿ ಪಾರಜವು ಮೇಲಕ್ಕೇರಿ ಹವೆಯನ್ನು - ಹವೆಯು ಘನಪದಾರ್ಥಗಳ ಹಾಗೆ ಕೆಳಗಡೆಗೆ ಮಾತ್ರ ಒತ್ತುತ್ತಿದ್ದರೆ ನಾವು ಅದರ ಭಾರದಿಂದ ಕುಗ್ಗಿ ಹೋಗುತ್ತಿದ್ದೆವು. ಇದೇ ರೀತಿಯಲ್ಲಿ ನೀರಿನಲ್ಲಿ ಎಲ್ಲಾ ಕಡೆಗಳಲ್ಲಿ ಒಂದೆ ಸಮ ನಾದ ಒತ್ತುವಿಕೆ ಇರುತ್ತದೆ. ಆದುದರಿ೦ದಲೆ ನೀರಿನಲ್ಲಿ ಎಷ್ಟು ಆಳದಲ್ಲಿಯಾದರೂ ಜಲಚರ ಪಣಿಗಳು ಸಹಜವಾಗಿ ಸಂಚರಿಸುತ್ತವೆ,