ಆ HY 88 - ಗಳು ಗಳುಳ್ಳದ್ದು; ಹೊರಗೆ ಶೀತ; ತ್ಯಾ ವವನ್ನುಂಟುಮಾಡುತ್ತದೆ; ಮತ್ತು ಸಾಧಾರಣವಾಗಿ ಹಿತ ಕಾಣುವಂಥಾದ್ದು. ಈ ಗುಣಗಳುಳ್ಳದ್ದಾದಾಗ್ಯೂ, ಅದೊಂದನ್ನೇ ಅತಿಯಾಗಿ ಸೇವಿಸಿದ್ದಲ್ಲಿ ಹಲ್ಲು ಜುಮ್ಮು, ಕಣ್ಣು ಮುಚ್ಚುವದು, ರೋಮ ನೆಟ್ಟಗಾಗುವದು, ಕಫ ನಾಶಮಾಡುವದು, ಶರೀರವನ್ನು ಸಡಿಲುಮಾಡುವದು, ಈ ದುರ್ಗುಣಗಳುಂಟಾಗುವವು, ಮತ್ತು ನೋಯಿಸಿದ, ಹೊಡೆದ, ಸುಟ್ಟ, ಕಚ್ಚಿದ, ಒಡೆದ, ಬಾತ, ಬೊಗ್ಗಿದ, ಜಾರಿದ (ವಿಷಜಂತುಗಳಿಂದ ಮೂತ್ರಿಸ ಲ್ಪಟ್ಟ, (ವಿಷಜಂತು ಮೊದಲಾದ್ದನ್ನು ಮುಟ್ಟಿ) ಹರಿದುಬಂದ, ಕಡಿದ, ಒಡೆದ, ಚುಚ್ಚಿದ, ಪುಡಿ ಯಾದ ಅಧವಾ ಅರಚಿದ ದೋಷಗಳನ್ನು ಪಾಚನಮಾಡುತ್ತದೆ. ಮತ್ತು ಅದರ ಆಗ್ನೆಯ ಸ್ವಭಾವದಿಂದ ಕಂರದಲ್ಲಿ, ಎದೆಯಲ್ಲಿ ಮತ್ತು ಹೃದಯದಲ್ಲಿ ಉರಿಯನ್ನುಂಟುಮಾಡುತ್ತದೆ. 13. ಲವಣಃ ಸಂಶೋಧನಃ ಪಾಚನೋ ವಿಶ್ಲೇಷಣ ಕ್ಷೇದನಃ ಶೈಧಿಕ್ಕದು ಸ್ಥಃ ಸರ್ವರಸಪ್ರತ್ಯಕೋ ಮಾರ್ಗವಿಶೋಧನಃ ಸರ್ವಶರೀರಾವಯವ ಉಪ್ಪು ರಸದ ಮಾರ್ದವಕರಶೇತಿ ಸ ಏವಂ ಗುಣೋಪೈಕ ಏವಾತ್ಯರ್ಧಮಾ ಗುಣದೋಷ ಸೇವ್ಯಮಾನೋ ಗಾತ್ರಕಂಡೂ-ಕೋರೆ-ಶೋಭ-ವೈವರ್ಣ-ಪುಂಸ್ಕೋಪ ಘಾತೇಂದ್ರಿಯೋಪತಾಪಾನ್ ತಧಾ ಮುಖಾಕ್ಷಿಪಾಕಂ ರಕ್ತ-ಪಿತ್ತ ವಾತಶೋಣಿತಾಬ್ದ ಕಾತ್ರಧೃತೀನಾಪಾದಯತಿ | (ಸು. 157, ಉಪ್ಪು ರಸವು ದೇಹ ಶೋಧನೆ ಮಾಡುವ, ಪಾಕಮಾಡುವ, ಬಡಿಸುವ, ದ್ರವವನ್ನು ಸುರಿ ಸುವ, ಸಡಿಲುಮಾಡುವ, ಗುಣವುಳ್ಳದ್ದು, ಉಷ್ಣ, ಸರ್ವ ರಸಗಳಿಗೂ ಶತ್ರು, (ಮೂತ್ರನಾಡಿ ಮುಂತಾದ) ಮಾರ್ಗಗಳನ್ನು ಶೋಧನೆಮಾಡುತ್ತದೆ, ಮತ್ತು ಶರೀರದ ಸರ್ವ ಅವಯವಗಳನ್ನು ಮೃದುಮಾಡುತ್ತದೆ. ಈ ಗುಣಗಳುಳ್ಳದ್ದಾದರೂ, ಅದನ್ನು ಒಂದನ್ನಾಗಿಯೇ ಅತಿಯಾಗಿ ಸೇವಿಸಿದರೆ, ಶರೀರದಲ್ಲಿ ತುರಿ, ಕೋಷ್ಠ, ಶೋಭೆ, ವರ್ಣವಿಕಾರ, ಪುರುಷತ್ವ ನಾಶ, ಶುಕ್ರ ನಾಶ, ಇಂದ್ರಿಯಗಳಲ್ಲಿ ಉರಿ, ಇವುಗಳನ್ನು, ಹಾಗೆಯೇ ಬಾಯಿಯ ಮತ್ತು ಕಣ್ಣುಗಳ ಕರ್ಮಹಾನಿ, ರಕ್ತಪಿತ್ತ, ವಾತರಕ್ತ, ಹುಳಿತೇಗು ಮುಂತಾದ ರೋಗಗಳನ್ನು ಉಂಟು ಮಾಡುತ್ತದೆ. ಕಟುಕೋ ದೀಪನಃ ಪಾಚನೋ ರೋಚನಃ ಶೋಧನಃ ಸೌಲಾಲಸ್ಯಕಫ-ಕೃಮಿ-ವಿಷ-ಕುಷ್ಠ-ಕಂಡೂಪಶಮನಃ ಸಂಧಿಬಂಧವಿಚ್ಛೇದನೋ 5ವಸಾದನಃ ಸ್ವನ-ಶುಕ್ರ-ಮೇದಸಾಮುಪಹಂತಾ ಚೇತಿ ಸ ಏವಂ ಗು ಪ್ರೇಕ ಏವಾತ್ಯರ್ಧಮುಪಸೇವ್ಯಮಾನೋ ಭ್ರಮ-ಮದ-ಗಲಗುಣ ದೋಷ ತಾಲ್ಗೊಷ್ಠ -ಶೋಭ-ಗಾತ್ರಸಂತಾಪ-ಬಲವಿಘಾತ-ಕಂಪ-ತೋದ-ಭೇದ ಕೃತ್ ಕರ-ಚರಣ-ಪಾರ್ಶ್ವ-ಪೃಷ್ಣ ಪ್ರಕೃತಿಷು ಚ ವಾತಶೂಲಾನಾಪಾದ ಯತಿ | (ಸು. 157.) ಖಾರವು ಅಗ್ನಿ ಉಂಟುಮಾಡುವ, ಪಚನಮಾಡುವ, ರುಚಿಕೊಡುವ, ಶೋಧಿಸುವ, ಸ್ಕೂಲತೆಯನ್ನೂ, ಆಲಸ್ಯವನ್ನೂ, ಕಫವನ್ನೂ, ಕ್ರಿಮಿಯನ್ನೂ, ವಿಷವನ್ನೂ, ಕುಷ್ಠವನ್ನೂ, ತುರಿಯನ್ನೂ, ಶಮನಮಾಡುವ, ಸಂದುಕಟ್ಟುಗಳನ್ನು ಕಡಿಯುವ, ಉತ್ಸಾಹವಿಲ್ಲದ ಹಾಗೆ 14. ಖಾರರಸದ ಗಳು,
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೭೮
ಗೋಚರ