ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 - 98 - & lv

   ಗ್ರಾಮವಾಸಿಯಾದ ಪ್ರಾಣಿಗಳ ಮತ್ತು ಜಲಾಶಯ ಪ್ರಾಣಿಗಳ ಮಾಂಸಗಳನ್ನು ಜೇನು, ಎಳ್ಳು, ಬೆಲ್ಲ, ಹಾಲು, ಉದ್ದು, ಮುಲ್ಲಂಗಿ, ನೈದಿಲೆದಂಟು ಮತ್ತು ಮೊಳಿಕೆ ಬರಿಸಿದ ಧಾನ್ಯ ಇವುಗಳೊಂದಿಗೆ ಒಟ್ಟಾಗಿ ತಿನ್ನಬಾರದು ಹಾಗೆ ತಿಂದದ್ದರ ಮೂಲವಾಗಿ ಕಿವುಡ ತನ, ಕುರುಡತನ, ನಡುಕು. ಚಾ ಗಲಿಬಿಲಿ, ಮೂಕತನ, ಮಿನಿಣೀಸರ, ಇವು ಅಥವಾ ಮರಣಪ್ರಾಪ್ತಿಯಾಗುವದು.
      ನ ಮೂಲಕಲಶುನಕೃಷ್ಣ ಗಂಧಾರ್ಜಕಸುಮುಖಸುರಸಾದೀನಿ ಭಕ್ಷಯಿ
      ಪಯಃ ಸೇವಂ ಕುಷ್ಟಬಾಧಭಯಾತ್ || (ಚ 151) 
 ಮೂಲಂಗಿಗಡೆ, ಬೆಳ್ಳುಳ್ಳಿ, ನುಗ್ಗೆಕೊ, ಬಿಳೇ ತುಳಸಿ, ಕಾಡು ತುಳಸಿ, ಕರೇ ತುಳಸಿ, ಇತ್ಯಾದಿಗಳನ್ನು ತಿಂದು ಹಾಲು ಕುಡಿಯಬಾರದು ಅದರಲ್ಲಿ ಕುಷ್ಠರೋಗ ಬಾಧೆಯ ಭಯ ವಿರುತ್ತದೆ.
      ನ ವಾಸ್ತುಶಾಕಂ ನ ಲಿಕುಚಂ ಪಕ್ವಂ ಮಧುಪಯೋಭ್ಯಾಂ ಸಹೋಪಯೋ 
      ಜ್ಯಮ | ಏತದ್ದಿ ಮರಣಾಯಾಧವಾ ಬಲವರ್ಣತೇಜೋವೀರ್ಯೋಪ 
      ರೋಧಾಯಾಲಘುವ್ಯಾಧಯೇ ಪಾಂಡ್ಯಾಯ ಚ || (ಚ. 151.)
   ಚಕ್ಕೋತ ಸೊಪ್ಪಾಗಲ, ಹೆಬ್ಬಲಸಿನ ಹಣ್ಣಾಗಲಿ, ಜೇನು ಮತ್ತು ಹಾಲುಗಳೊಂದಿಗೆ ಉಪಯೋಗಿಸಲ್ಪಡಬಾರದು, ಇದರಿಂದ ಮರಣ ಅಧವಾ ಬಲವರ್ಣತೇಜಸ್ಸು ವೀರ್ಯಗಳ ಹಾನಿ, ಲಘುವಲ್ಲದ ವ್ಯಾಧಿ ಮತ್ತು ಕ್ಲೀಬತ ಉಂಟಾಗುತ್ತದೆ.
  ಶರಾ ಲಿಕುಚ ಎಂಬ 'ಓಟೆಹುಳಿ" ಎಂತ ಕೆಲವು ಗ್ರಂಥಗಳಲಿ ಕಾಣೀಸಿಯೆದ

ಆದರೆಆದರಗುಣಫಾರುವೂ, ಕ್ಷುದ್ರ ಪನಸ (ಸಣ್ಣ ಹಲಸು) ಎಂಬ ನಾಮವೂ, ಹೆಬ್ಬಲಸಿಗೇನೇ ಒಪ್ಪುತ್ತವೆ

     ತದೇವ ಲಿಕುಚಪಕ್ಷಂ ನ ಮಾಷಸೂಪಗುಡಸರ್ಪಿಭೀಃಸಹೊಪಯೋಜಂ
     ವೈರೋಧಕತ್ವಾತ್ | (ಜ 152.)
 ಅದೇ ಹೆಬ್ಬಲಸಿನ ಹಣ್ಣನ್ನು ಉದ್ದಿನ ತೋವೆ, ಬೆಲ್ಲ ಮತ್ತು ತುಪ್ಪಗಳೊಂದಿಗೆ, ವಿರೋಧ ಮಾಡುವ ಗುಣವಿರುವದರಿಂದ, ಉಪಯೋಗಿಸಬಾರದು.
   ತಧಾಮಾತಕಮಾತುಲುಂಗಲಿಕುಚಕರಮರ್ದಮೋಚದನ ಶರಬದರಕೋ ಶಾಮೃಭವ್ಯ ಚಾಂಬವಕಪಿತತಿನ್ನಿಡೀಕಪಾರಾವತಾಕೋಟಪನಸನಾಲಿಕೇರ ದಾಡಿಮಾಮಲಕಾನೇವಮ ಕಾರಾಣಿ ಚಾನ್ಯಾನಿ ಸರ್ವಂ ಚಾಮಂ ದ್ರವಂ ಅದ್ರವಂ ಚ ಪಯಸಾ ಸಹ ವಿರುದ್ದಮ್   (ಚ. 152.) 

ಅಂಬಟೆಹಣ್ಣು, ಮಾದಳಹಣ್ಣು, ಹೆಬ್ಬಲಸಿನಹಣ್ಣು, ಕರಂಡೆ(ಕಮರಿಕೆ) ಹಣ್ಣು, ಬಾಳೆ ಹಣ್ಣು, ದೊಡ್ಡುಳೀಹಣ್ಣು, ಬೊಗರಿಹಣ್ಣು, ಕೋಶಾಮ (ಜೂರಿಮಾವು) , ಭವ್ಯ (ದೇವಗರಿಗೆ, ಹಿರೇಕಣಿಗು), ನೇರಳೇಹಣ್ಣು, ಬೆಳವಲಹಣ್ಣು, ಹುಣಸೆಹಣ್ಣು, ಪಾರಾವತಹಣ್ಣು, ಅಖರೋಟು, ಹಲಸಿನಹಣ್ಣು, ತೆಂಗಿನಕಾಯಿ, ದಾಳಿಂಬದ ಹಣ್ಣು, ನೆಲ್ಲಿ ಹಣ್ಣು, ಹೀಗಿರುವ ಬೇರೆಯವುಗಳು ಮತ್ತು ಸರ್ವ ಹುಳಿ ವಸ್ತು, ಹಸಿಯಾಗಲಿ, ಒಣಗಿದ್ದಾಗಲಿ, ಹಾಲಿನೊಂದಿಗೆ ಉಪಯೋ ಗಿಸಲ್ಪಟ್ಟಲ್ಲಿ ವಿರೋಧ ಉಂಟಾಗುತ್ತದೆ. ಷರಾ ಹಾಲಿನೊಂದಿಗೆ ಉಪ್ಪನ್ನು ಸಹ ಉಪಯೋಗಿಸಬಾರದಾಗಿ ಸುತ್ತುತದಲ್ಲಿ ಹೇಳಿದೆ ಪ್ರ 78