ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

e VI - 136 - ಕಫಗಳ ವಿಷಮಭಾವವನ್ನು ತರುತ್ತದೆ. ನಿಜ ರೋಗದಲ್ಲಿ ಯಾದರೆ, ಆದಿಯಲ್ಲಿಯೇ ವಾತ ಪಿತ್ತ ಕಫಗಳು ವಿಷಮಭಾವವನ್ನು ಹೊಂದಿ, ಅನಂತರ ವ್ಯಧೆಯನ್ನು ತರುತ್ತವೆ.

21. ಪ್ರಸಂಗಾದ್ಗಾತ್ರಸಂಸ್ಪರ್ಶಾನ್ನಿಃಶ್ವಾಸಾತ್ಸಹಭೋಜನಾತ್ | ಸಾಂಕ್ರಮಿಕ ಸಹಶಯ್ಯಾಸನಾಚ್ಚಾಪಿ ವಸ್ತ್ರ​ಮಾಲ್ಯಾನುಲೇಪನಾತ್ || ರೋಗಗಳು ಕುಷ್ಠಂ ಜ್ವ​ರಶ್ಚ​ ಶೋಷಶ್ಚ​ ನೇತ್ರಾಭಷ್ಯಂದ ಏವ ಚ |

            ಔಪಸರ್ಗಿಕರೋಗಾಶ್ಚ ಸಂಕ್ರಾಮಂತಿ ನರಾನ್ನರಂ || (ಸು. 264.) 

ಮೈಧುನ, ಮೈ ಮುಟ್ಟುವದು, ಹೊರಶ್ವಾಸ, ಒಟ್ಟಿಗೆ ಉಣ್ಣುವದು, ಒಟ್ಟಿಗೆ ಮಲಗು ವದು, ಒಟ್ಟಿಗೆ ಕೂತುಕೊಳ್ಳುವದು, ವಸ್ತ್ರ, ಮಾಲೆ, ಗಂಧಾದಿಲೇಪನ, ಇವುಗಳ ಮೂಲಕ ಸಂಪರ್ಕ, ಇವುಗಳಿಂದ ಕುಷ್ಠವ್ಯಾಧಿ, ಜ್ವರ, ಕ್ಷಯ, ನೀರು ಸುರಿಯುವ ಕಣ್ಣಿನ ವ್ಯಾಧಿ, ಮತ್ತು ಆಧಿದೈವಿಕರೂಪವಾದ ಮೈಲಿಗೆ, ಕೋರ ಮುಂತಾದ ರೋಗಗಳು ಜನದಿಂದ ಜನಕ್ಕೆ ಬದಲಿಬರುತ್ತವೆ.

ಷರಾ ಮೇಲಿನ 2ನೇ ಶ್ಲೋಕದ ಪ್ರಥಮ 2 ಚರಣಗಳ ಸ್ಥಾನದಲ್ಲಿ .

“ಕಂಡೂಕುಷ್ಠೋಪದಂಶ​ಶ್ಚ ಭೂತೋನ್ಮಾದವ್ರ​ಣಒ್ವ​ರಾಃ” | ಎಂತ (ಭಾ ಪ್ರ 539 )

ಇದರಿಂದ ತುರಿ ಖಜ್ಜಿ, ಉಪದಂಶ (ಸ್ತ್ರೀಸಂಗಾದ ವ್ಯಾಧಿ), ದೈವಜ ಹುಚ್ಚು ಮತ್ತು ವ್ರಣ ಇವು ಸಹ ಸಾಂಕ್ರಾಮಿಕ ವ್ಯಾಧಿಗಳೆಂತ ಹೇಳಿದಂತಾಯಿತು 'ಪ್ರಸಂಗಾತ್' ಅಂದರೆ ಪದೇಪದೇ ಅಭ್ಯಾಸವಾಗಿ ಮಾಡಿದ ಎಂಬ ಅರ್ಥ ಬರೆದದ್ದು ಕಾಣುತ್ತದೆ ಅದು ಸರಿ ಕಾಣುವದಿಲ್ಲ
          ಗಂಧರೋಗಃ ಫಿರಂಗೋಽಯಂ ಜಾಯತೇ ದೇಹಿನಾಂ ಧ್ರುವಂ | 
          ಫಿರಂಗಿನೋಽ೦ಗಸಂಸರ್ಗಾತ್ ಫಿರಂಗಿಣ್ಯಾ ಪ್ರಸಂಗತಃ ||              

ಗಂಧರೋಗ ವ್ಯಾಧಿರಾಗಂತುಬೋ ಹ್ಯೇಷ ದೋಷಾಣಾಮತ್ರ ಸಂಕ್ರಮಃ |

          ಭವೇತ್ರಂ ಲಕ್ಷಯೇತ್ತೇಷಾಂ ಲಕ್ಷಣೈರ್ಭಿಷಜಾಂ ವರಃ | (ಭಾ ಪ್ರ 562.) 

 ಫಿರಂಗಿರೋಗ ಉಳ್ಳವನ ಮೈಮುಟ್ಟುವದರಿಂದ, ಅಧವಾ ಫಿರಂಗಿರೋಗ ಉಳ್ಳವಳ ಸಹ ವಾಸದಿಂದ, ಫಿರಂಗಿ ಎಂಬ ರೋಗವು ಮನುಷ್ಯರಿಗೆ ನಿಶ್ಚಯವಾಗಿ ಬರುತ್ತದೆ. ಅದು ಗಂಧ ರೋಗ ಮತ್ತು ಆಗಂತುಕ. ಅದರಲ್ಲಿ ದೋಷಗಳು ಬದಲಿಬರುತ್ತವೆ. ಅವುಗಳ ಲಕ್ಷಣ ಗಳಿಂದ ಅದನ್ನು ವೈದ್ಯಶ್ರೇಷ್ಯನು ಪರೀಕ್ಷಿಸಬೇಕು

22. ಸ್ನೇಹಾದಿ ದ್ವಿವಿಧಾ ವ್ಯಾಧರ್ಯ ಶಸ್ತ್ರ ಸಾಧ್ಯಾ ಸ್ನೇಹಾದಿ ಕ್ರಿಯಾ ಕ್ರಿಯಾಸಾಧ್ಯ ಸಾಧ್ಯಾತ್ವ | ತತ್ರ ಶಸ್ತ್ರಸಾಧ್ಯೕಷು ಸ್ನೇಹಾದಿಕ್ರಿಯಾ ನ ವ್ಯಾಧಿಗಳಲ್ಲಿ ಪ್ರತಿಷಿಧ್ಯತೇ | ಸ್ನೇಹಾದಿಕ್ರಿಯಾಸಾಧ್ಯೕಷು ಶಸ್ತ್ರಕರ್ಮ ನ ಶಸ್ತ್ರಕರ್ಮ​ ಕ್ರಿಯತೇ | (ಸು. 93 ) ಅಪ್ರಶಸ್ತ

    ವ್ಯಾಧಿಗಳು ಶಸ್ತ್ರಪ್ರಯೋಗದಿಂದ ಸಾಧ್ಯವಾದವು, ಸ್ನೇಹಾದಿಕ್ರಿಯೆಗಳಿಂದ ಸಾಧ್ಯ ವಾದವು ಎಂತ ಎರಡು ವಿಧ. ಅವುಗಳಲ್ಲಿ ಶಸ್ತ್ರಸಾಧ್ಯವಾದ ವ್ಯಾಧಿಗಳಿಗೆ ಸ್ನೇಹಾದಿ ಕ್ರಿಯೆಯು ನಿಷೇಧಿಸಲ್ಪಟ್ಟಿರುವದಿಲ್ಲ, ಆದರೆ ಸ್ನೇಹಾದಿಕ್ರಿಯೆಗಳಿಂದ ಸಾಧ್ಯವಾದ ರೋಗ ಗಳಲ್ಲಿ ಶಸ್ತ್ರಕರ್ಮವು ನಡಿಸಲ್ಪಡುವದಿಲ್ಲ.