ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 323 - ಆ XVII (೧) | ಭುಕ್ತಕ್ರೋಷ್ಟುಗತಿರ್ನಾಡೀ ಚಾಂಚಲ್ಯಗತಿಸಂಯುತಾ | ಸನ್ನಿಪಾತದ ನಾಡಿ ಸನ್ನಿಪಾತೋತ್ತರಾ ನಾಡೀ ಶೀತೋಷ್ಣಾ ಚ ಪ್ರವರ್ತತೇ || (ಗ್ರಂಥಾಂತರ) (ವೈ. ಸಾ. ಸಂ. 4.) ಸನ್ನಿಪಾತದ ನಾಡಿಯು ಮೇವು ತಿಂದ ನರಿಯಂತೆಯೂ, ಚಂಚಲವಾಗಿಯೂ, ಕ್ಷಣಕ್ಕೆ ಬಿಸಿ, ಕ್ಷಣಕ್ಕೆ ತಣ್ಣಗೆ, ಈ ರೀತಿಯಾಗಿಯೂ ನಡೆಯುವದು (0) ಉಷ್ಣಸ್ಪರ್ಶಾತಿವೇಗಾ ಚ ಜ್ವರನಾಡೀ ನಿಗದ್ಯತೇ ಜ್ವರದ ನಾಡಿ ಅಲ್ಪವೇಗಾ ಶೀತನಾಡೀ ತದಾ ಜೀರ್ಣ೦ ಎನಿರ್ದಿಶೇತ್ || (ವೈ ನಾ. ಸಂ. 3-) ಜ್ವರದಲ್ಲಿ ನಾಡಿಯು ಬಿಸಿಯಾಗಿಯೂ, ಹೆಚ್ಚು ವೇಗವುಳ್ಳದ್ದಾಗಿಯೂ ಇರುವದು. ನಾಡಿಯ ವೇಗವೂ ಅಲ್ಪವಾಗಿ, ಮುಟ್ಟುವಿಕೆಗೆ ತಣ್ಣಗಾಗಿ ಕಂಡರೆ, ಜ್ವರವೂ ಜೀರ್ಣವಾಯಿ ತೆಂತ ತಿಳಿಯುವದು. ತದ ನಾಡಿ (2) ಅತಿತಪ್ತಾ ಸವೇಗಾ ಸನ್ನಿಪಾತೇ ಹ್ಯಸಾಧ್ಯಕೀ || ಅಸಾಧ್ಯ ಸನ್ನಿಪಾ ಅತಿಸೂಕ್ಷ್ಮತರಾ ನಾಡೀ ಶೂನ್ಯಲಿಂಗಾ ತ್ರಿದೋಷಚಾ ತದ ನಾಡಿ || - (ವೈ ಸಾ. ಸಂ. 4) ತ್ರಿದೋಷಗಳಿಂದ ಹುಟ್ಟಿದ ಅಸಾಧ್ಯವಾದ ಸನ್ನಿಪಾತಜ್ವರದಲ್ಲಿ ನಾಡಿಯು ಅತಿಬಿಸಿ ಯಾಗಿಯೂ, ಅತಿವೇಗವುಳ್ಳದ್ದಾಗಿಯೂ, ಅತಿಸೂಕ್ಷ್ಮವಾಗಿಯೂ, ಶೂನ್ಯಲಕ್ಷಣವುಳ್ಳದ್ದಾಗಿ (ವಾತಾದಿ ಗತಿಭೇದ ತಿಳಿಯಲಸಾಧ್ಯವಾಗಿ)ಯೂ. ಇರುವದು ಅತಿಸ್ಫುರತಿ ವೇಗಾಚ್ಚ ಅಂತರ್ದಾಹಾಪಿ ದೃಶ್ಯತೇ | ಶೀತಲಾ ಸ್ನಿಗ್ದ ರೋಮಾ ಚ ಹಂತಿ ನಾಡೀ ಚ ರೋಗಿಣಂ || (ವೈ ಸಾ. ಸಂ. 5 ) ಒಳಗೆ ಉರಿಯಿದ್ದು, ರೋಮವು ಜಿಡ್ಡಾಗಿ, ನಾಡಿಯು ಶೀತವಾಗಿ ಅತಿವೇಗದಿಂದ ಹಾರುತ್ತಿದ್ದರೆ, ಆ ರೋಗಿಯು ಸಾಯುವನು. ನಾಡಿ (4) ಜ್ವರೋ ವಹ್ನಿಸಮೋತ್ಯರ್ಕಸಮಃ ಪಂಚದಿನಂ ಯದಿ | ಅಸಾಧ್ಯ ಜ್ವರದ ಅತಿಶೀಘ್ರಾ ಯದಾ ನಾಡೀ ತದಾ ಮೃತ್ಯುಂ ವಿನಿರ್ದಿಶೇತ್ || (ವೈ, ಸಾ. ಸಂ. 7,) ಜ್ವರವು ಬೆಂಕಿಗೆ ಸಮವಾಗಿ, ಅಧವಾ ಅತಿಯಾದ ಸೂರ್ಯನ ಬಿಸಿಲಿಗೆ ಸಮವಾಗಿ, ಐದು ದಿನ ಕಾದುಯಿದ್ದು, ನಾಡಿಯು ಅತಿವೇಗವಾಗಿ ನಡೆದರೆ, ಆ ರೋಗಿಯು ಸಾಯುವ ನೆಂದು ಹೇಳಬೇಕು 4*