ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ XIX

                   - 354 -
 ದೋಷ, ಔಷಧ, ದೇಶಸ್ಥಿತಿ, ಕಾಲಸ್ಥಿತಿ, ರೋಗಿಯ ಬಲ, ಶರೀರ, ಆಹಾರ, ಸಾತ್ಮ್ಯ, ಸತ್ವ, ಪ್ರಕೃತಿ, ಮತ್ತು ಪ್ರಾಯ, ಈ ವಿಷಯಗಳಲ್ಲಿರುವ ಅವಸ್ಥಾಭೇದಗಳು ಬಹು ಸೂಕ್ಷ್ಮವಾದದ್ದರಿಂದ, ಅವುಗಳನ್ನು ಆಲೋಚಿಸುವಾಗ್ಗೆ ಹೆಚ್ಚು ಬುದ್ಧಿವಂತನಾದವನ ನಿರ್ಮಲವಾದ ಬುದ್ಧಿ ಸಹ ಭ್ರಮೆಗೊಳ್ಳುವದು; ಇನ್ನು ಅಲ್ಪ ಬುದ್ಧಿಯವನ ಅವಸ್ಥೆ ಏನು?
 27. ವ್ಯಾಧಿವಿಶೇಷಾಸ್ತು ಪ್ರಾಗಭಿಹಿತಾಃ | ಸರ್ವ ಏವೈತೇ ತ್ರಿವಿಧಾಃ ಸಾಧ್ಯಾ  

ಯಾಪ್ಯಾಃ ಪ್ರತ್ಯಾಖ್ಯೇಯಾಶ್ಚ | ತತ್ರೈತಾನ್ ಭೂಯಸ್ತ್ರಿಧಾ ಪರೀಕ್ಷೇತ ಕಿಮಸಾವೌಪಸರ್ಗಿಕಃ ಪ್ರಾಕ್ಕೇವಲೋನ್ಯಲಕ್ಷಣ ಇತಿ | ತತ್ರೌ ಪಸರ್ಗಿಕೋ ಯಃ ಪೂರ್ವೋತ್ಪನ್ನಂ ವ್ಯಾಧಿಂ ಜಘನ್ಯಕಾಲಜಾತೋ ವ್ಯಾಧಿರುಪಸೃಜತಿ ಸತನ್ಮೂಲ ಏವೋಪದ್ರವಸಂಜ್ಞಃ | ಪ್ರಾಕ್ಕೇವಲೋ ಯಃ ಪ್ರಾಗೇವೋತ್ಪನ್ನೋ ವ್ಯಾಧಿರಪೂರ್ವರೂಪೋನುಪದ್ರವಶ್ಚ | ಅನ್ಯ ಲಕ್ಷಣೋ ಯೋ ಭವಿಷ್ಯದ್ವ್ಯಾಧಿಖ್ಯಾಪಕಃ ಸಪೂರ್ವರೂಪಸಂಜ್ಞಃ | ತತ್ರ ಸೋಪದ್ರವಮನ್ಯೋನ್ಯಾವಿರೋಧೇನೋಪಕ್ರಮೇತ ಬಲವಂತ ಮುಪದ್ರವಂ ವಾ | ಪ್ರಾಕ್ಕೇವಲಂ ಯಧಾಸ್ವಂ ಪ್ರತಿಕುರ್ವೀತ | ಅನ್ಯಲಕ್ಷಣೇ ತ್ವಾದಿವ್ಯಾಧೌ ಪ್ರಯತೇತ | (ಸು. 129.)

   [ವ್ಯಾಧಿಯಲ್ಲಿ ಪ್ರಧಾನ, ಔಪಸರ್ಗಿಕ, ಅನ್ಯ ಅಕ್ಷಣ ಎಂಬ ಭೇದಗಳು]
ವ್ಯಾಧಿಭೇದಗಳನ್ನು ಮೊದಲೇ ಹೇಳಲಾಗಿದೆ. ಅವುಗಳೆಲ್ಲಾ ಸಾಧ್ಯ, ಯಾಪ್ಯ, ಅಸಾಧ್ಯ, ಎಂತ ಮೂರು ವಿಧ. ಇವುಗಳನ್ನೆಲ್ಲಾ ಪುನಃ ಮೂರು ವಿಧವಾಗಿ ಪರೀಕ್ಷಿಸಬೇಕು. ಇದು ಔಪಸರ್ಗಿಕವೋ, ಪ್ರಾಕ್ಕೇವಲವೋ (ಅಂದರೆ ಶುದ್ಧವಾದ ಪ್ರಧಮವ್ಯಾಧಿಯೋ), ಅಥವಾ ಅನ್ಯವ್ಯಾಧಿಯ ಲಕ್ಷಣವೋ ಎಂತ. ಅವುಗಳೊಳಗೆ ಔಪಸರ್ಗಿಕ ಎಂಬದು ಮೊದಲು ಉತ್ಪನ್ನವಾದ ವ್ಯಾಧಿಯನ್ನನುಸರಿಸಿ ಅದರ ಮೂಲವಾಗಿ ಅನಂತರ ಬಂದ ವ್ಯಾಧಿ, ಅದಕ್ಕೆ ಉಪದ್ರವ ಎನ್ನುತ್ತಾರೆ. ಹಿಂದೆ ಪೂರ್ವರೂಪವಾದ ವ್ಯಾಧಿಯಾಗಲಿ, ಮುಂದೆ ಹುಟ್ಟಿದ ಉಪದ್ರವವಾಗಲಿ ಇಲ್ಲದೆ, ಆರಂಭದಲ್ಲಿಯೇ ಹುಟ್ಟಿದ ಶುದ್ಧ ವ್ಯಾಧಿಯು ಪ್ರಾಕ್ಕೇವಲ ಎಂಬದು. ಅನ್ಯಲಕ್ಷಣ ಎಂಬದು ಅನಂತರ ಬರಲಿಕ್ಕಿರುವ ವ್ಯಾಧಿಯನ್ನು ಪ್ರಕಟಿಸುವ ವ್ಯಾಧಿ; ಅದಕ್ಕೆ ಪೂರ್ವರೂಪ ಎನ್ನುತ್ತಾರೆ. ಅವುಗಳಲ್ಲಿ ಉಪದ್ರವದಿಂದ ಕೂಡಿಕೊಂಡಿರುವ ವ್ಯಾಧಿಯನ್ನು ಪರಸ್ಪರ ವಿರೋಧವಾಗದಂತೆ ಉಪಕ್ರಮಿಸುವದು; ಅಧವಾ ಉಪದ್ರವವೇ ಬಲವಾಗಿದ್ದರೆ, ಅದನ್ನು (ಮುಖ್ಯವ್ಯಾಧಿಗೆ ವಿರೋಧವಿಲ್ಲದಂತೆ) ಉಪಕ್ರಮಿಸುವದು. ಪ್ರಾಕ್ಕೇವಲವ್ಯಾಧಿಯಾದರೆ ಅದಕ್ಕೆ ತಕ್ಕವಾದ ಪ್ರತಿಕ್ರಿಯೆಯನ್ನು ಮಾಡುವದು. ಅನ್ಯ ಲಕ್ಷಣ ಎಂಬದರಲ್ಲಿ ಉತ್ಪನ್ನವಾದ ವ್ಯಾಧಿಯ ಪರಿಹಾರಕ್ಕೆ (ಬರಲಿಕ್ಕಿರುವ ವ್ಯಾಧಿಗೆ ವಿರೋಧವಿಲ್ಲದಂತೆ) ಪ್ರಯತ್ನಿಸುವದು.
 28. ನಿದಾನಾರ್ಧಕರೋ ರೋಗೋ ರೋಗಸ್ಯಾಪ್ಯುಪಜಾಯತೇ | 
     ತದ್ಯಧಾ ಜ್ವರಸಂತಾಪಾದ್ರಕ್ತಪಿತ್ತಮುದೀರ್ಯತೇ || 
     ರಕ್ತಪಿತ್ತಾಜ್ಜ್ವರಸ್ತಾಭ್ಯಾಂ ಶ್ವಾಸಶ್ಚಾಪ್ಯುಪಜಾಯತೇ | 
     ಪ್ಲೀಹಾಭಿವೃದ್ಧ್ಯಾ ಜರರಂ ಜರರಾಚ್ಛೋಫ ಏವ ಚ ||