ವಿಷಯಕ್ಕೆ ಹೋಗು

ಪುಟ:ಬಾಳ ನಿಯಮ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨೪ ಬಾಳ ನಿಯಮ ಎಲ್ಲವೂ ವ್ಯರ್ಥ ಪ್ರಯತ್ನವಾಗಿತ್ತು. “ಕೊಳಕು ಮನುಷ್ಯ, ದಗಾಕೋರ, ಸುಳ್ಳುಗಾರ !” “ದೇವರಾಣೆ ! ಅವನಲ್ಲಿ ಸ್ವಲ್ಪವೂ ಒಳ್ಳೆಯತನವಿಲ್ಲ.” ಕಳ್ಳ !” “ಇಂಡಿಯನ್ಗಿಂತಲೂ ಕೀಳು !” ಈ ಮಾತುಗಳಿಂದ ಅವರು ಕೋಪಗೊಂಡಿದ್ದಾರೆಂದು ಸ್ಪಷ್ಟ ವಾಗಿತ್ತು. ಅದಕ್ಕೆ ಎರಡು ಕಾರಣಗಳು : ಒಂದನೆಯದಾಗಿ, ಅವರು ಮೋಸ ಕೀಡಾದ ರೀತಿ ಹಾಸ್ಯಾಸ್ಪದವಾಗಿತ್ತು. ಎರಡನೆಯದು, ಉತ್ತರದೇಶದವರ ನೀತಿ ನಿಯಮಾವಳಿಗಳ ವಿಪರೀತ ಕಲ್ಪನೆ; ಅಲ್ಲಿಯ ಮನುಷ್ಯನಿಗೆ ಪ್ರಾಮಾಣಿಕತೆಯೆಂಬುದು ಎಲ್ಲವನ್ನೂ ಮೀರಿಸಿದ ಭೂಷಣವಂತೆ ! “ ಹೌದು ; ಸಂಕಟಕ್ಕೀಡಾದ ವ್ಯಕ್ತಿಗೆ ಸಹಾಯ ಮಾಡಿದೆವು. ಅದೂ ಅವನು ಮಾಡಿದ್ದೆಲ್ಲವನ್ನು ತಿಳಿದ ಮೇಲೆ ? ” ಎಲ್ಲ ಕಣ್ಣು ಗಳೂ ತಕ್ಷಣ ಮೆಲ್ ಮೂಟ್ ಕಿಡ್ನ ಕಡೆ ತಿರುಗಿದವು. ಮುಖಗಳು ಗಂಟುಹಾಕಿದವು. ಮೂಲೆಯಲ್ಲಿ ಬ್ಯಾ ಬಟೆ ನಾಯಿಯನ್ನು ಸುಧಾರಿಸುತಿದ್ದ ಕಿಡ್ ಎದ್ದು ನಿಂತನು. ಇನ್ನೇನು ಕೊನೆಯ ಸಲ - ಪಂಚ್ ' ಹಂಚಬೇಕು ! ಮೌನವಾಗಿ ಪಾತ್ರೆಯನ್ನು ಬರಿದು ಮಾಡುತಿದ್ದನು. “ ಹುಡುಗರಿರಾ, ಇದೊಂದು ಚಳಿಯ ರಾತ್ರಿ-ಚುಚ್ಚುವಂಥ ಚಳಿ....” ಎಂದು ಕಿಡ್ ತನ್ನ ಪರ ವಾದಿಸಲು ಅಸಂಬದ್ದವಾಗಿ ಆರಂಭಿಸಿದನು. “ ನೀವೆಲ್ಲಾ ಆ ದಾರಿಯಲ್ಲಿ ನಡೆದವರು. ಅದರ ಕಷ್ಟಸುಖ ತಿಳಿದೇ ಇದೆ. ಅವನು ಕೆಳಕ್ಕೆ ಬಿದ್ದಾಗ ನಾಯಿಯನ್ನು ಹಾರಿಸಬೇಡಿ. ನೀವು ಕೇಳಿರುವುದು ಕೇವಲ ಒಂದು ಪಕ್ಷದ ಮಾತು. ಆದರೆ....? ಇರಲಿ, ಜಾಕ್ ವೆಸ್ಟನ್ಡೇಲಿನಂಥ ಮತ್ತೊಬ್ಬ ಬಿಳೀ ಮನುಷ್ಯನನ್ನು ತೋರಿಸಿ ; ನೋಡೋಣ. ಅವನು ಒಂದು ದಿನವಾದರೂ ಮತ್ತೊಬ್ಬರ ಆಶ್ರಯಕ್ಕೆ ಹಾತೊರೆದವನಲ್ಲ. ನಾನೂ ನೀವೂ ಎಲ್ಲರೂ ಅವನಿಗೆ ಹೊಸಬರು....ಕಡೆಯ ಪಂದ್ಯದ ಹೋರಾಟ ದಲ್ಲಿ ಅವನಿಗೆ ನಲವತ್ತು ಸಾವಿರ ಆದಾಯವಾಗಿ ಬಂತು. ಜುಯೋಕ್ಯಾಸ್ಟೆಲ್ ಮಧ್ಯಸ್ಥಗಾರನಾಗಿದ್ದನು. ಡೊಮಿನಿಯನ್ ಕುದುರೆಯನ್ನು ಹರಾಜಿನಲ್ಲಿ ಕೊಂಡುಕೊಳ್ಳಲು ಜಾಕ್ ಇಷ್ಟ ಪಟ್ಟನು. ಆ ಕೆಲಸಕ್ಕಾಗಿ ಜುಯೋನನ್ನು ನೇಮಿಸಿ ಸಂಪೂರ್ಣ ನಲವತ್ತು ಸಾವಿರವನ್ನು ಅವನು ಕೈಗೆ ಕೊಟ್ಟನು. ಇವತ್ತು ಅವನು ಕೋಟ್ಯಾಧೀಶನಾಗಬಹುದಿತ್ತು. ಆದರೆ ಅದೃಷ್ಟವಿಲ್ಲ; ಏಕೆಂದರೆ ತನ್ನ ಪ್ರತಿಸ್ಪರ್ಧಿಗೆ ಕೈಕಾಲು ನೋವು ವಿಪರೀತವಾದ್ದರಿಂದ, * ಸರ್ಕಲ್ ಸಿಟಿ ಯಲ್ಲೇ ಆತನ ಶುಶ್ರತೆಗಾಗಿ ಜಾಕ್ ಉಳಿದುಕೊಂಡನು.