________________
ಮೆಕ್ಸಿಕನ್ ೧೨೯ ಸ್ಟಾಂಪು ಕೊಳ್ಳುವವರಿಗೆ ಅಂಚೆಮನೆಯಲ್ಲಿ ಯಾವ ಸಾಲವೂ ದೊರಕುವಂತಿಲ್ಲ. ಆಗ ಅದೇ ರಿವೆರ ಟೋಪಿ ಧರಿಸಿ ಹೊರಕ್ಕೆ ಹೊರಟನು. ಹಿಂತಿರುಗಿ ಬಂದಾಗ ಕೈಯಲ್ಲಿ ಎರಡು ಸೆಂಟುಗಳ ಸ್ಟಾಂಪು ಒಂದು ಸಾವಿರವಿತ್ತು; ಅವನ್ನು ಮೇಸೇಕ್ಬೈಯಳ ಡೆಸ್ತಿನ ಮೇಲಿಟ್ಟನು. “ನನಗೆ ಆಶ್ಚರ್ಯವಾಗಿದೆ ; ಇಷ್ಟೊಂದು ಹಣ ಡಯಾಸನ ಶಾಪಗ್ರಸ್ತ ಹಣವಾಗಿರಬಹುದೇ ” ಎಂದು ವೆರ ಸಂಗಾತಿಗಳಿಗೆ ಹೇಳಿದನು. ಎಲ್ಲರೂ ತಲೆಯೆತ್ತಿದರು. ಯಾವ ತೀರ್ಮಾನಕ್ಕೂ ಬರಲಿಲ್ಲ. ಹೇಗಾ ದರೂ ಆಗಲಿ ; ಕ್ರಾಂತಿಗಾಗಿ ನೆಲವನ್ನು ತಿಕ್ಕುತಿದ್ದ ಫೆಲಿಸಿ ರಿವರ ಮಾತ್ರ, ಸಂದರ್ಭ ಬಂದಾಗಲೆಲ್ಲ ಸಂಚುಕೂಟದವರ ಉಪಯೋಗಕ್ಕಾಗಿ ಚಿನ್ನ ಬೆಳ್ಳಿ ಗಳನ್ನು ತರುವುದನ್ನು ನಿಲ್ಲಿಸಲಿಲ್ಲ. ಅಷ್ಟಾದರೂ ಅವರು ರಿವರನನ್ನು ಪ್ರೀತಿಸುವ ಗೋಜಿಗೆ ಹೋಗಲಿಲ್ಲ. ಅವನು ಯಾರೆಂಬುದು ಅವರಿಗೆ ತಿಳಿಯದು. ತಮಗೂ ಅವನಿಗೂ ರೀತಿನೀತಿ ಗಳಲ್ಲಿ ವ್ಯತ್ಯಾಸವಿದೆ. ಅವನು ಅಂತರಂಗದ ಗುಟ್ಟುಗಳನ್ನು ಬಿಟ್ಟು ಕೊಡುವು ದಿಲ್ಲ. ತನ್ನ ವಿಷಯವನ್ನು ಶೋಧನೆಗೂ ನಿಲುಕದಂತೆ ಮಾಡಿಕೊಂಡಿದ್ದಾನೆ. ಅವನನ್ನು ಪ್ರಶ್ನಿಸಲು ಹಿಂಜರಿದರು ; ಎಷ್ಟಾದರೂ ಅವನು ಯುವಕನಲ್ಲವೇ ? “ ಬಹುಶಃ ಏಕಾಂಗವೀರನಿರಬೇಕು. ಮತ್ತೆ ನಾನರಿಯೆ, ನಾನರಿಯೆ ? ಎಂದು ಕೈಲಾಗದವನಂತೆ ಅರೆಲಾನೋ ಹೇಳಿದನು.
- ಅವನು ಮನುಷ್ಯನೇ ಅಲ್ಲ,” ಎಂದನು ರಮೋಸ್.
ಮೇಸೇಕ್ ಬೈ ಹೇಳಿದಳು : “ ಅವನ ಆತ್ಮವು ಒಣಗಿಹೋಗಿದೆ. ದೇಹವು ಕಾಂತಿಹೀನವಾಗಿ ನಗೆಯು ಸುಟ್ಟು ಬೂದಿಯಾಗಿದೆ. ಸತ್ತವನಂತೆ ಕಾಣು ತ್ತಿದ್ದರೂ ಭಯಂಕರನಾಗಿ ಜೀವಿಸಿದ್ದಾನೆ.”
- “ ಅವನ ಮುಖ ನೋಡಿದರೆ ವಿಪರೀತ ಕಷ್ಟ ಪಟ್ಟಿರಬೇಕು. ಕೇವಲ ಹುಡುಗನಾಗಿದ್ದರೂ, ವಯಸ್ಸಾದವರನ್ನು ಮಾರಿಸಿದ್ದಾನೆ....” ಎಂದನು ವೆರ.
ಆದರೂ ಅವನನ್ನು ಪ್ರೀತಿಸಲು ಮನಸ್ಸು ಬಾರದು. ರಿವೆರ ಎಂದೂ ಮಾತನಾಡಿದವನಲ್ಲ ; ವಿಷಯವನ್ನು ವಿಚಾರಿಸಿದವನಲ್ಲ; ಹಾಗೆಯೆ ಹೊಸ ಸೂಚನೆಗಳನ್ನು ಕೊಟ್ಟವನೂ ಅಲ್ಲ. ಸುಮ್ಮನೆ ನಿಂತು ಆಲಿಸುತ್ತಿದ್ದನು. ಕ್ರಾಂತಿಯ ಮಾತುಕಥೆ ಬಿಸಿ ಬಿಸಿಯಾಗಿ ಏರುತಿದ್ದರೆ, ಅವನ ಕಣ್ಣುಗಳು ಒಳಗೊಳಗೇ ಉರಿಯುತಿದ್ದವು ; ಒಬ್ಬೊಬ್ಬರ ಮುಖದ ಕಡೆಯೂ ತಿರುಗಿಸುತ್ತ ಕ್ರಮಭಂಗಮಾಡುವಂತೆ ಗಲಿಬಿಲಿಮಾಡುತಿದ್ದೆವು.