ವಿಷಯಕ್ಕೆ ಹೋಗು

ಪುಟ:ಹಳ್ಳಿಯ ಚಿತ್ರಗಳು.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೮
ಹಳ್ಳಿಯ ಚಿತ್ರಗಳು

ಗುಂಡನು "ಅಂದರೆ?" ಎಂದ.

ನಾನು "ಅಂದರೆ? ಅಂದರೆ" ಎಂದೆ.

“ಹಾಗಾದರೆ ದಾರಿಯಲ್ಲಿ ಬರುತ್ತಿರುವಾಗ ದೂರದಿಂದ ಎಲ್ಲಿಯೋ ನೋಡಿರಬೇಕು."

“ಏನೂ ಇಲ್ಲ. ಹಳೇಬೀಡನ್ನು ನೋಡುವುದಕ್ಕಾಗಿಯೇ ಹಳೆಬೀಡಿಗೆ ಹೋದೆ."

“ನೀನೆ ವಾಸಿಕಣೋ, ಹಳೇಬೀಡು ದೇವಸ್ಥಾನವನ್ನು ನೋಡಿ ಬಂದುಬಿಟ್ಟಿದ್ದೀಯೆ.

“ದೇವಸ್ಥಾನವನ್ನು ನೋಡಲಿಲ್ಲ.”

ಹಳೇಬೀಡಿಗೆ ಹೋಗಿ ದೇವಸ್ಥಾನ ನೋಡದೆ ಬರೋದುಂಟೇನೋ? ಯಾವುದೋ ಬೇರೆ ಕೆಲಸಕ್ಕೆ ಹೋಗಿದ್ದೆ ಅಂತ ಕಾಣುತ್ತೆ. ಆದರೂ ದೇವಸ್ಥಾನ ನೋಡಿಬರಬಹುದಾಗಿತ್ತು."

ನಾನು ಸಹಿಸಲಾರದೆ “ಇಲ್ಲ ಮಹರಾಯ, ದೇವಸ್ಥಾನಾನ ನೋಡೋದಕ್ಕೆ ಹೋದೆ. ಆದರೆ ದೇವಸ್ಥಾನ ಮಾತ್ರ ನೋಡಲಿಲ್ಲ. ಜ್ಞಾಪಿಸಿಕೊಂಡರೆ ಈಗಲೂ ಹೊಟ್ಟೆ ಉರಿಯುತ್ತೆ" ಎಂದೆ.

ಗುಂಡನ ಮುಖದಲ್ಲಿ ಚೇಷ್ಟೆಯ ನಗೆ ತೋರಿತು. ಹಿ೦ದಲ ಅನುಭವ ಜ್ಞಾಪಕಕ್ಕೆ ಬಂದು ಹೊಟ್ಟೆ ಉರಿಯುತ್ತಿದ್ದುದರಿಂದ, ಅವನನ್ನು ತಿಂದುಬಿಡಬೇಕೆಂದು ನನಗೆ ಅನ್ನಿಸುತ್ತಿತ್ತು. ಗುಂಡುವು ನನ್ನ ಹೆಗಲಿನಮೇಲೆ ಕಯ್ಯಿಟ್ಟು,

“ಏನೋ ಅದು ನಿನ್ನ ಒಗಟು ನನಗೆ ಗೊತ್ತಾಗೋದೆ ಇಲ್ಲವಲ್ಲ. ಸ್ವಲ್ಪ ಸ್ಪಷ್ಟವಾಗಿ ಹೇಳು. ನನ್ನ ಮೇಲೆ ಯಾಕೆ ಉರಿದುಬೀಳುತ್ತೀಯೆ?" ಎಂದ.

ನಾನು ಹೇಳಿದೆ. “ನೋಡು ಈಗ ೧೦ ವರ್ಷದ ಮಾತು. ಆಗ ನಾನು ಸ್ಕೌಟ್ ಆಗಿದ್ದೆ. ನಮ್ಮ ಗ್ರೂಪಿನಲ್ಲಿ ನಾನು, ಮತ್ತೊಬ್ಬ ನಮ್ಮ ತರಗತಿಯ ವಿದ್ಯಾರ್ಥಿ ಇಬ್ಬರೇ ಬ್ರಾಹ್ಮಣರಿದ್ದುದು. ಉಳಿದವರೆಲ್ಲಾ ೧೮ ಜನ ಬ್ರಾಹ್ಮಣೇತರರು. ನಮ್ಮ ಮೇಷ್ಟ್ರೂ, ಬ್ರಾಹ್ಮಣ. ಆದರೆ ಕಾಸ್ಮೊಪಾಲಿಟನ್ ಅನ್ತಾರಲ್ಲ ಹಾಗೆ. ನನಗೆ ಆಗ ವಯಸ್ಸು