೧೯b - ವೈಜ್ಞಾನಿಕ ಸಮಾಜವಾದ ಮೇಲ್ಕಂಡ ವಿವರಣೆಯಿಂದ ಮಾರ್ಕ್ಸ್‌ವಾದಕ್ಕೂ ಭಾರತದಲ್ಲಿ ಈಗ ಪ್ರಚಾರದಲ್ಲಿರುವ ಸಮಾಜವಾದಕ್ಕೂ ಇರುವ ವ್ಯತ್ಯಾಸಗಳು ಎದ್ದು ಕಾಣುತ್ತವೆ, ಮಾರ್ಕ್ಸ್‌ವಾದ ಬಂಡವಾಳಶಾಹಿ ವ್ಯವ ಕೈಯನ್ನು ವಿಮರ್ಶೆಗೆ ಒಳಪಡಿಸಿ, ಅದು ವಿರಸಪೂರಿತವಾದದ್ದೆಂದೂ, ವಿರಸಗಳಿಂದ ಆದು ಪಾರಾಗಲಿಕ್ಕೆ ಸಾಧ್ಯವೇ ಇಲ್ಲ ವೆಂದೂ, ಅದರ ವಿನಾಶವನ್ನು ಅತೀ ಸಿದ್ದಗೊಳಿಸಿಕೊಂಡಿದೆ ಎಂದೂ, ಅದು ಜನನ ವಿತ್ತಿರುವ ಕಾರ್ಮಿಕ ವರ್ಗ ಆಡು ವಿನಾಶಕನೆಂದೂ ಉತ್ಪಾದನಾ ಸಾಧನಗಳಲ್ಲಿ ರುವ ಖಾಸಗೀ ಸ್ವಾಮ್ಯದ ನಾಶ ವಿರಸಗಳನ್ನು ತೊಡೆಯಲಿಕ್ಕೆ ಅಗತ್ಯವೆಂದೂ, ಖಾಸಗಿ ಸ್ವಾಮ್ಯದ ನಾಶ ಹೊಸ ವ್ಯವಸ್ಥೆಗೆ ನಾಂದಿ ಎಂದೂ ತಿಳಿಸಿದೆ. ಕಾಂಗ್ರೆಸ್ ಪಕ್ಷ ಸುಧಾರಣಾ ಕಾರ್ಯಕ್ರಮದಲ್ಲಿ ಸಮಾಜವಾದೀ ವ್ಯವಸ್ಥೆಯ ಆಗ ಮನ ಅಡಗಿರುವುದಾಗಿ ತಿಳಿಸಿದೆ. ಎರಡನೆಯದಾಗಿ, ಮಾರ್ಕ್ಸ್‌ವಾದದಲ್ಲಿ ಬಂಡವಾಳಶಾಹಿ ವ್ಯವಸ್ಥೆಯ ಹುಟ್ಟು, ಬೆಳವಣಿಗೆ ಮತ್ತು ಅದರ ಐತಿಹಾಸಿಕ ಪಾತ್ರ ಇವುಗಳ ವಿವರಣೆ ಇದೆ. ಸಮಾಜ ವಿಕಾಸದಲ್ಲಿ ಬಂಡವಾಳಶಾಹಿ ವ್ಯವಸ್ಥೆ ಆಗಮಿಸುವ ವರೆಗೂ ಸಮಾಜದ ಉತ್ಪಾದನಾಸಾಧನಗಳ ಸಮಾಜೇ ಕರಣದ ಆವಶ್ಯಕತೆ ಬರುವುದಿಲ್ಲವೆಂದು ಹೇಳಿದೆ. ಸುಧಾರಣಾ ಕಾರ್ಯಕ್ರಮ ಸರಕಾಲಕ್ಕೂ ಅನ್ವಯವಾಗುವ ರೀತಿಯಲ್ಲಿದ್ದು ಸಮಾಜವಾದದ ಆಗಮನ ಬಂಡ ವಾಳಶಾಹಿ ವ್ಯವಸ್ಥೆಯ ಕಾಲಕ್ಕೆ ಮಾತ್ರವೇ ಮಾಸಲಲ್ಲವೆಂದು ತಿಳಿಸಿದೆ. ಒಂದು ಮಾತಿನಲ್ಲಿ ಮಾರ್ಕ್ಸ್‌ವಾದಕ್ಕೂ ಇತರ ಸಮಾಜವಾದಗಳಿಗೂ ಇರುವ ವ್ಯತ್ಯಾಸವನ್ನು ಹೇಳುವುದಾದರೆ ವೈಜ್ಞಾನಿಕ ಮಾರ್ಗಕ ಕಲ್ಪನೆಯ ಮಾರ್ಗಕ್ಕೂ ಇರುವ ವ್ಯತ್ಯಾಸವಾಗಿದೆ. ಇತಿಹಾಸದಲ್ಲಿ ವ್ಯಕ್ತಪ ವಾಸ್ತವ ಪರಿಸ್ಥಿತಿಗಳನ್ನು ಪರಿಶೀಲಿಸುವುದರ ಮೂಲಕ ಸಮಾಜವ್ಯವಸ್ಥೆಯಲ್ಲಿ ವಿಕಾಸ ವನ್ನೂ ಮತ್ತು ಸಮಾಜವಾದದ ಅನಿಸಾರ್ಯತೆಯನ್ನೂ ಮಾರ್ಕ್ಸ್‌ವಾದ ಚಿತ್ರಿಸಿ ದ್ದರೆ, ಇನ್ನೊಂದರ ಮಾರ್ಗ ಆದರ್ಶ ಸಮಾಜವನ್ನು (Ideal Society) ಕಲ್ಪಿಸಿ ಕೊಳ್ಳುವುದಾಗಿದೆ. ಇಂತಹ ಸಮಾಜ ವ್ಯವಸ್ಥೆಯಲ್ಲಿ ಬಡತನ, ನಿರುದ್ಯೋಗ, ಶೋಷಣೆ, ಇತ್ಯಾದಿ ಇರಕೂಡದಾದ್ದರಿಂದ ಅವುಗಳನ್ನು ತಡೆಯಲು ಸುಧಾ ರಣೆಯನ್ನು ಕೈಗೊಳ್ಳಬೇಕು. ಅಂತಹ ಮಾರ್ಗದಲ್ಲಿ ಖಾಸಗೀ ಸ್ವಾಮ್ಯದ ವಿನಾಶ - ಒಂದು. ಈ ಗುರಿಯನ್ನು ಮುಟ್ಟಲು ಶ್ರಮಿಸಬೇಕು ಕಾಂಗ್ರೆಸ್ ಪಕ್ಷ ಕೈಗೊಂಡಿರುವ ಸುಧಾರಣೆಯ ಕಾರ್ಯಕ್ರಮ ಸಮಾಜ ವಾದದ ಇತಿಹಾಸದಲ್ಲಿ ಹೊಸದೇನೂ ಅಲ್ಲ, ಸುಧಾರಣೆಗಳ ದೂಲಕ ಸಮಾಜ ವಾದೀ ವ್ಯವಸ್ಥೆಯನ್ನು ತರಲೆತ್ನಿಸಿದ ಇಂಗ್ಲಿಷ್ ಮತ್ತು ಇತರ ಸುಧಾರಕ ಪಕ್ಷಗಳ ರೀತಿ ನೀತಿಗಳನ್ನು ಈಗಾಗಲೇ ನೋಡಿದ್ದೇವೆ, (ದ, ಅಧ್ಯಾಯ 7 ಮತ್ತು 8, ನೋಡಿ).
ಪುಟ:ಕಮ್ಯೂನಿಸಂ.djvu/೨೦೪
ಗೋಚರ