ಪುಟ:ಭಾರತ ದರ್ಶನ.djvu/೩೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯ ಅಂಕ ೨

೩೬೭

ರೂಸಸುತ್ತೇನೆಂದು ಹೊರಟ ಪ್ರಯತ್ನವೆಲ್ಲ ವ್ಯರ್ಥ. ಯಾವುದೋ ಬೇರೊಂದು ಬಲಿಷ್ಠ ರಾಜ್ಯದ ಆರ್ಥಿಕ ಅಧೀನ ವಾಗುವುದರ ಹೊರತು ದೇಶದ ಮೂಲ ಸಮಸ್ಯೆಯ ಪರಿಹಾರಕ್ಕೆ ಆಗಲಿ, ಸ್ವಾತಂತ್ರ ಉಳಿಸಿಕೊಳ್ಳುವುದಕ್ಕೆ ಆಗಲಿ ಅಥವ ಪ್ರಪಂಚದ ಆರ್ಥಿಕ ಚೌಕಟ್ಟಿನ ಒಳಗೆ ಹೊಂದಿಕೊಳ್ಳುವುದಕ್ಕೆ ಆಗಲಿ ಸಾಧ್ಯವಾಗುವುದಿಲ್ಲ.

ಒಂದೇ ದೇಶದಲ್ಲಿ ಪೂರ್ಣ ಭಿನ್ನ ರೀತಿಯ ಎರಡು ಬಗೆಯ ಆರ್ಥಿಕ ನೀತಿಗಳಿಗೆ ಸ್ಥಾನವಿದೆಯೆ ?ಒಂದು ದೊಡ್ಡ ಯಂತ್ರಗಳನ್ನು ಮತ್ತು ಕೈಗಾರಿಕೋದ್ಯಮಗಳನ್ನು ಅವಲಂಬಿಸಿದ್ದು, ಎರಡನೆಯದು ಗ್ರಾಮ ಕೈಗಾರಿಕೆಗಳನ್ನು ಅವಲಂಬಿಸಿದ್ದು. ಒಂದನ್ನು ಇನ್ನೊಂದು ಕವಳಿಸುವುದು ಅನಿವಾರವಾದ್ದರಿಂದ ಅದೂ ಸಾಧ್ಯವಿಲ್ಲ. ಬಲವಾದ ತಡೆ ಇದ್ದರೆ ಹೊರತು ದೊಡ್ಡ ಯಂತ್ರೋಪಕರಣಗಳ ಗ್ರಾಮ ಕೈಗಾರಿಕೆಗಳು ಉಳಿಯಲು ಸಾಧ್ಯವಿಲ್ಲ. ಆದ್ದರಿಂದ ವಸ್ತು ನಿರ್ಮಾಣ ರೀತಿಯಲ್ಲಿ, ಆರ್ಥಿಕ ನೀತಿಯಲ್ಲಿ ಎರಡರ ಸಮಜೋಡಣೆ ಪ್ರಶ್ನೆಯಲ್ಲದೆ, ಒಂದು ಪ್ರಮುಖವೂ ಪ್ರಬಲವೂ ಇರಬೇಕು; ಇನ್ನೊಂದು ಅದಕ್ಕೆ ಪೂರಕವಿದ್ದು ಎಲ್ಲಿ ಸಾಧ್ಯವೋ ಅಲ್ಲಿ ಹೊಂದಿಕೊಳ್ಳ ಬೇಕು. ಇಂದಿನ ಅತ್ಯಾಧುನಿಕ ಉದ್ಯೋಗ ಪ್ರಗತಿಯನ್ನವಲಂಬಿಸಿದ ಆರ್ಥಿಕ ನೀತಿಯೇ ಪ್ರಮುಖವಿರಬೇಕು. ಉದ್ಯೋಗ ಕೌಶಲ್ಯದ ದೃಷ್ಟಿಯಿಂದ, ಇಂದು ಬಹುಮಟ್ಟಿಗೆ ಅವಶ್ಯವಿರುವಂತೆ, ದೊಡ್ಡ ಯಂತ್ರೋಪಕರಣಗಳೇ ಅವಶ್ಯವಾದರೆ ಅದರ ಸಾಧ್ಯಾಸಾಧ್ಯತೆಯ ಕಷ್ಟ ಅಥವ ಪರಿಣಾಮ ಏನೇ ಇರಲಿ ಅದಕ್ಕೆ ಸಿದ್ಧರಿರಬೇಕು. ಆ ಉದ್ಯೋಗ ನೈಪುಣ್ಯದ ದೃಷ್ಟಿಯಿಂದ ವಸ್ತು ನಿರ್ಮಾಣಕಾರದ ವಿಕೇಂದ್ರೀಕರಣ ಅವಶ್ಯವಾದರೆ ಸಾಧ್ಯವಾದ ಎಲ್ಲಕಡೆ ಆ ರೀತಿ ಮಾಡಬೇಕು. ಎಲ್ಲ ಸಂದರ್ಭಗಳಲ್ಲೂ ಆಧುನಿಕ ಪದ್ಧತಿಯನ್ನೇ ಅವಲಂಬಿಸಬೇಕು. ತಾತ್ಕಾಲಿಕ ವಿನಾ ಪುರಾತನ ಜೀರ್ಣಪದ್ದತಿಗಳಿಂದ ವಸ್ತು ನಿರ್ಮಾಣಕಾರ್ಯ ಆರಂಭಿಸುವುದೆಂದರೆ ಬೆಳವಣಿಗೆ ಮತ್ತು ಪ್ರಗತಿಗೆ ಅಡ್ಡಗಟ್ಟಿದಂತೆ.

ಇಡೀ ಪ್ರಪಂಚವೂ ಮತ್ತು ಅದರ ಎದುರಿನ ಉತ್ಕಟಪರಿಸ್ಥಿತಿಯ ಜಟಿಲಸಮಸ್ಯೆಗಳೂ ದೊಡ್ಡ ಕೈಗಾರಿಕೋದ್ಯಮಗಳನ್ನೇ ಅವಲಂಬಿಸಿರುವಾಗ ದೊಡ್ಡ ಕೈಗಾರಿಕೆಗಳು ಉತ್ತಮವೋ ಸಣ್ಣ ಕೈಗಾರಿಕೆಗಳು ಉತ್ತಮವೋ ಎಂಬ ತಾತ್ವಿಕ ಚರ್ಚೆ ಅಪ್ರಕೃತ. ಈ ಸನ್ನಿವೇಶಗಳೇ ಭಾರತದ ನಿರ್ಧಾರವನ್ನೂ ಪೂರೈಸಿವೆ. ಸಧ್ಯದಲ್ಲಿ ಭಾರತದಲ್ಲಿ ಭಾರಿ ಕೈಗಾರಿಕೋದ್ಯಮವು ಮುಂದುವರಿಯುತ್ತೆಂಬುದರಲ್ಲಿ ಸಂದೇಹವೇ ಇಲ್ಲ. ಆ ದಾರಿಯಲ್ಲಿ ಆಗಲೇ ಭಾರತ ಮುನ್ನಡೆ ಇಟ್ಟಿದೆ. ನಿರಾತಂಕ ಯೋಜನಾರಹಿತ ಕೈಗಾರಿಕಾ ಪ್ರಗತಿ ತುಂಬ ಹಾನಿಕರ. ಈ ದೊಡ್ಡ ಕೈಗಾರಿಕೋದ್ಯಮದ ಅನಿವಾರ ಪರಿಣಾಮವೋ ಅಥವ ಅದರ ಹಿಂದಿನ ಆರ್ಥಿಕ ಮತ್ತು ಸಾಮಾಜಿಕ ರಚನೆಯ ಫಲವೋ ಅದು ಬೇರೆ ವಿಷಯ. ಆರ್ಥಿಕ ರಚನೆಯೇ ಅದಕ್ಕೆ ಮುಖ್ಯ ಕಾರಣವಾದರೆ ಅನಿವಾರವೂ, ಅತ್ಯವಶ್ಯವೂ ಆದ ಕೈಗಾರಿಕೋದ್ಯಮದ ಕೌಶಲವನ್ನು ನಿರಾಕರಿ ಸುವಬದಲು ಆ ಆರ್ಥಿಕರಚನೆ ಬದಲಾಯಿಸಬೇಕು.

ಆದ್ದರಿಂದ ಈಗ ನಿಜವಾದ ಮುಖ್ಯ ಪ್ರಶ್ನೆ ಎಂದರೆ ವಿವಿಧ ಅಸಂಬದ್ದ ವಸ್ತು ನಿರ್ಮಾಣ ಸಲಕರಣೆ ಮತ್ತು ರೀತಿಗಳನ್ನು ಯಾವರೀತಿ ಯಾವ ಪ್ರಮಾಣದಲ್ಲಿ ಜೋಡಿಸಬೇಕು, ಮತ್ತು ಸಮ ತೂಗಿಸಬೇಕು, ಎಂಬುದಲ್ಲ; ಆದರೆ ವಿಶೇಷ ಸಾಮಾಜಿಕ ಪರಿಣಾಮಗಳು ದೊರೆಯುವ ಹೊಸ ಪ್ರತ್ಯೇಕಮಾರ್ಗದಲ್ಲಿ ಒಂದು ಉತ್ತಮ ಪರಿವರ್ತನೆಯನ್ನೇ ಮಾಡುವುದು. ಈ ಪರಿವರ್ತನೆಯ ಆರ್ಥಿಕ ರಾಜಕೀಯ ಬದಲಾವಣೆಗಳೇನೋ ಅತಿ ಮುಖ್ಯವಾದವು. ಆದರೆ ಸಾಮಾಜಿಕ ಮಾನಸಿಕ ಬದಲಾವಣೆಗಳೂ ಅಷ್ಟೇ ಮುಖ್ಯವಾದವು. ಬಹುಕಾಲದಿಂದ ಭಾರತದಲ್ಲಿ ನಮ್ಮ ಭಾವನೆ ಮತ್ತು ಕಾವ್ಯ ರೀತಿಗಳಲ್ಲಿ ಪ್ರಾಚೀನ ಪದ್ದತಿಯನ್ನೇ ಅವಲಂಬಿಸಿದೇವೆ. ಆದ್ದರಿಂದ ಹೊಸಭಾವನೆಗಳನ್ನು ಮತ್ತು ಹೊಸ ದಿಗಂತಗಳನ್ನು ಕಾಣುವ ಹೊಸಮಾರ್ಗಗಳು ಮತ್ತು ಹೊಸ ಅನುಭವಗಳು ಅತ್ಯವಶ್ಯಕ: ನಮ್ಮ ಇಂದಿನ ತಟಸ್ಥ ಜೀವನರೀತಿ ಶಕ್ತಿಪೂರ್ಣನೂ ಜೀವಂತವೂ ಆಗಿ ನಮ್ಮ ಭಾವನೆಗಳು ಸಾಹಸಯುಕ್ತವೂ ಧೀರೋದಾತ್ತವೂ ಆಗಬೇಕಾದರೆ ಅದೊಂದೇ ಮಾರ್ಗ, ಹೊಸ ಸಮಸ್ಯೆಗಳನ್ನು ಬಿಡಿಸಲು ಮನಸ್ಸು ಯೋಚಿಸಲೇಬೇಕು.