ನಾಸ್ತಿಕ ಕೊಟ್ಟ ದೇವರು/ಹಮಾಲ ಇಮಾಮ್ ಸಾಬಿ
ಕಥೆ : ಮೂರು
ಹಮಾಲ ಇಮಾಮ್ ಸಾಬಿ
ಮೊದಲ ಮಳೆ ಕಳೆದ ಬಳಿಕ, ಸೂರ್ಯ ಧೈರ್ಯಗೊಂಡು ಮತ್ತೊಮ್ಮೆ ಚಕ್ರಕುಣಿತ ಆರಂಭಿಸಿದ್ದ.
ನೀಲಿ ವರ್ಣದ ವೇದಿಕೆಯ ಮೇಲೆ ಹಗಲು, ಕರಿ ಪರದೆಯ ಹಿಂದೆ ರಾತ್ರಿ. ಕತ್ತಲು ಆವರಿಸಿದಾಗ ಚಂದ್ರನೊಂದು ಕಂದೀಲು. ನೀರು ಕುಡಿದ ನೆల ತೃಪ್ತವಾಗಿತ್ತು. ಗಿಡ ಮರಗಳೆಲ್ಲ, ಹಸಿರುಮಯ. ಮನುಷ್ಯ ತುಳಿವ ದಾರಿಗೆರೆಯ ಎರಡು ಪಕ್ಕಗಳಲ್ಲೂ ಗರಿಕೆಹುಲ್ಲು ಟಿಸಿಲೊಡೆದು ಮುಸಿಮುಸಿ ನುಗುತ್ತಿತ್ತು.
ಬಹಳ ಹೊತ್ತು ನೆಲೆಸಿದ ನೀರವತೆಯನ್ನು ಭೇದಿಸಿ ಒಂದು ಸದ್ದುబంತು.
ಫೋನ್ ಯಂತ್ರದ ಖಣಖಣತ್ಕಾರ. ಅದನ್ನು ಹಿಂಬಾಲಿಸಿ :
"ಹಲ್ಲೋ...ಹಲ್ಲೋ...”
ಇನ್ನೊಂದು ನಿಲ್ದಾಣದ ವೃತ್ತಿಬಂಧುವಿನೊಡನೆ ಈ ಮಾಸ್ತರರಸಂವಾದ.
ಹೆಬ್ಬಾಗಿಲ ಹೊರಗೆ ಸಿಮೆಂಟಿನ ಒರಗು ಬೆಂಚಿನ ಮೇಲೆ, ಹೂಬಿಸಿ ಲಲ್ಲಿ ಮೈಕಾಯಿಸುತ್ತ ಇಮಾಮ್ ಸಾಬಿ ಕುಳಿತಿದ್ದ.
" ಅರೇ, ಗಾಡಿ ಔಟಾಯಿತೇನು ಹಾಗಾದರೆ?”
ನಿರ್ಜನವಾಗಿದ್ದ ನಿಲ್ದಾಣ. ಔಟಾಗುವುದೆಂದರೇನು ? ಲೋಕಲನ್ನುಕಳುಹಿಬಂದು ಅರ್ಧ ಘಂಟೆ ಕೂಡಾ ಆಗಲಿಲ್ಲವಲ್ಲ ಇನ್ನೂ?
ಮಾಲ್ ಗಾಡಯೇ ఇರಬೇಕು. ಮು೦ದಿನ ನಿಲ್ದಾಣದಲ್ಲೋ ಅದರಾಚೆಗೋ ಕ್ರಾಸಿಂಗ್. ಇಳಿಸುವ ಸಾಮಾನು ಇದ್ದರಷ್ಟೆ ಅದಿಲ್ಲಿ ನಿಲ್ಲ ಬಹುದು. ಇಲ್ಲವೆಂದಾದರೆ, ಸಿಗ್ನಲಿನ ಗೌರವರಕ್ಷೆ ಸ್ವೀಕರಿಸಿ, ಹಸುರು ನಿಶಾನೆಯಿಂದ ಗಾಳಿ ಹಾಕಿಸಿಕೊಂಡು, ಮುಂದಕ್ಕೆ ಪಯಣ.
ಮಾಲ್ ಗಾಡಿಯೊ೦ದೇ ಅಲ್ಲ. ಮೇಲ್ ಎಕ್ಸ್ ಪ್ರೆಸ್ ಗಾಡಿಗಳೂ ಹಿಂದೆ ಅಲ್ಲಿ ನಿಲ್ಲುತ್ತಿರಲಿಲ್ಲ. ఒಮೆಯಷ್ಟೇ ವಿಶೇಷ ಸಂದರ್ಶಕರು బంದರೆಂದು ಮೇಲ್ ಗಾಡಿ ನಿಂತುದು, ಆಗಿನ ತಳಿರು ತೋರಣಗಳ ಸಂಭ್ರಮ, ಇಮಾಮ್ ಸಾಬಿಗೆ ನೆನಪಿತ್ತು. ಬಂದಿಳಿದಿದು ಒಬ್ಬ ಆ೦ಗ್ಲ ಉಚ್ಚಾಧಿಕಾರಿ. ಅರಸರಲ್ಲ, ವೈಸರಾಯರೋ ರೆಸಿಡೆಂಟರೋ - ಯಾರೋ ಒಬ್ಬರು. ಇಮಾಮ್ ಆಗಿನ್ನೂ ಮೂವತ್ತು ವರ್ಷಗಳ ಜವ್ವನಿಗ.
ಆಗ ಅವನ ವಯಸ್ಸು ಖಚಿತವಾಗಿ ಅಷ್ಟೇ ಎಂದು ಹೇಳಲು ಯಾವ ಆಧಾರವಿತ್ತು ? ಬೀಬಿ ಮನೆಗೆ ಬಂದ ವರ್ಷ ಅದು. ಎರಡನೆಯ ಬೀಬಿ. ಚೊಚ್ಚಲ ಹೆರಿಗೆಗೆಂದು ತವರುಮನೆಗೆ ಹೋದ ಮೊದಲಿನಾಕೆ ಮರಳಿ ಬಂದಿರಲಿಲ್ಲ. ಪ್ರವಸದ ವೇಳೆ, ಬಸಿರಲ್ಲಿದ್ದ ಜೀವದೊಡನೆ ಆಕೆಯೂ ಅಪ ಮೃತ್ಯುವಿಗೆ ಗುರಿಯಾಗಿದ್ದಳು. ಅದು, ಇಮಾಮ್ ಸಾಬಿಯ ಚಿತ್ತಫಲ ಕದ ಮೇಲೆ ಅಳಿಸಲಾಗದ ಚಿತ್ತನ್ನು ಉಳಿಸಿಹೋದ ಘಟನೆ. ಆ ಯಾತನೆಯನ್ನು ಮೂಲೆಗೊತ್ತಿ ಇನ್ನೊಬ್ಬಳ ಕೈಹಿಡಿಯಲು, ಆರೆಂಟು ವರ್ಷಗಳ ಅವಧಿಯೇ ಅವನಿಗೆ ಬೇಕಾಯಿತು. ಆಗ ಆತನ ಸೋದರಮಾವ అందిದ್ದ :
"ಮೂವತ್ತು ವರ್ಷವಾಯ್ತು ನಿನಗೆ. ಇನ್ನೂ ತಡಮಾಡ್ಬೇಡ".
ಅನಂತರವೂ ದಿನ ತಿಂಗಳು ವರ್ಷಗಳ ಲೆಕ್ಕವಿಡುವ ಗೊಡವೆಗೆ ಇಮಾಮ್ ಸಾಬಿ ಹೋದವನಲ್ಲ. ಗಳಿಸಿದ ದುಡ್ಡನ್ನಷ್ಟು ಹೆಂಡತಿಗೆ ದಿನವೂ ಒಪ್ಪಿಸಿದರಾಯ್ತು ಅವನ ಕೆಲಸ. ಬೀಬಿ ಒಳ್ಳೆಯ ಹೆಂಡತಿ, ಒಳ್ಳೆಯ ತಾಯಿ. ಅವಳು ಹೆತ್ತುದು ಒಟ್ಟು ಐದು ಮಕ್ಕಳನ್ನು. [ಒಂದರ ಅನಂತರ ಒಂದಾಗಿ. ಐದೂ ಗಂಡೇ.] ತಮ್ಮ ವಿವಾಹವಾಗಿ ಎಷ್ಟು ಕಾಲವಾಯಿತು? ಮಕ್ಕಳ ವಯಸ್ಸೆಷ್ಟು– ಎಂಬುದನ್ನೆಲ್ಲ ಕೂಡಿಸಿ ಕಳೆದು ಹೇಳುತ್ತಲಿದ್ದವಳು ఇಮಾಮ್ ಸಾಬಿಯ ಹೆ೦ಡತಿಯೇ.
ಇದೇ ಮೊನ್ನೆ ಆಕೆ ಅಂದಿದ್ದಳು :
"ಈ ಬಕ್ರೀದ್ ಗೆ ನಮ್ಮ ಲಗ್ನ ಆಗಿ ಮೂವತ್ತು ವರ್ಸ ಆಯ್ತೂಂದ್ರ"
ಅವನಿಗೆ ಅಚ್ಚರಿಯಾಗಿತ್ತು.
"ಹಾಂ? ಹೌದಾ?... ಹಾಗಾದರೆ ನನಗೆಷ್ಟು ವರ್ಷ ಈಗ?"
"ನನ್ನ ಕೇಳ್ತೀರಲ್ಲ? ಅರವತ್ತು ಆಗ್ಲಿಲ್ವೇನು?"
"ಹೌದಾ ? ಸರಿ! ಮುದುಕ ಆದೆ ಅನ್ನು!"
"ನೀವು ಮುದುಕ, ನಾನು ಮುದುಕಿ."
ಜೀವನದುದ್ದಕ್ಕೂ ಬಡತನದ ಬುತ್ತಿಯೇ ಆದರೂ, ನೇಗಿಲಗೆರೆ ಗಳಿಲ್ಲದ ಸುಕ್ಕುಗಳಿಲ್ಲದ ಸೊಂಪಾದ ಮುಖ, ಮೇಣದ ಬೊಂಬೆಯಂತಹ ದು೦ಡಗಿನ ಮೃದು ಶರೀರ. ಮುಗ್ಧ ಹಸುಳೆಯ ಛಾಯೆ ತುಟಿಗಲ್ಲಗಳಲ್ಲೆಲ್ಲ. ಮುಖದ ಮೇಲೆ ಬಿಳೆಯ ಬೆಳೆಯಿತ್ತು. ಸೋತು ಜೋತ ತೆಳ್ಳಗಿನ ಮೀಸೆ. ವಿರಳವಾಗಿ ಬೆಳೆದು ತಿಂಗಳಿಗೊಮ್ಮೆ ಕ್ಷೌರಿಕನ ಕತ್ತಿಗೆ ಬಲಿಯಾಗುತ್ತಿದ್ದ ಗಡ್ಡ. ಮಗುತನವನ್ನು ಮರೆಸಲು ಎಳೆಯನೊಬ್ಬ ಕೃತ್ರಿಮ ಗಡ್ಡ-ಮಿಾಸೆ ಗಳನ್ನೇ ಅ೦ಟಿಸಿಕೊಂಡ ಹಾಗಿತ್ತು, ಆ ನೋಟ. ಮಹಾ ಸಾತ್ವಿಕನಂತೆತೋರುತ್ತಲಿದ್ದ, ನಡು ಎತ್ತರದ ಈ ಮನುಷ್ಯ...
'ಕುಕ್' 'ಕುಕ್' ಎಂದು ಸದ್ದು ಕೇಳಿಸತೊಡಗಿತು, ದೂರ ದೊಂದು ಹಿಟ್ಟಿನ ಗಿರಣಿಯಿಂದ.
'ಮಿಲ್ ಶುರುವಾಯ್ತು.'
ಗಿರಣಿಯ ಕೂಗಿನಿಂದ ಕೆರಳಿತೆನ್ನುವಂತೆ ಕತ್ತೆಯೊಂದು ಅರಚುತ್ತ ದೂರ ಸಾಗಿತು ಹತ್ತಿರದಿ೦ದ.
ಇಮಾಮ್ ಸಾಬಿ ಕುಳಿತಿದ್ದ ಒರಗು ಬೆಂಚು ಹೊಸದು. ನಿಲ್ದಾಣದ ಹೊರ ಆವರಣದಲ್ಲಿ ಅಂತಹವು ಎರಡು ಇರಲೆಂದು ಇಲಾಖೆಯವರು ತರಿಸಿ ಹಾಕಿದ್ದರು. ಅವುಗಳ ಮೇಲೆ ಕುಳಿತವರ ಕಣ್ಣಿಗೆ, ಹೊಸದಾಗಿನೆಟ್ಟು ಬೆಳಸಿದ್ದ ಹೂವಿನ ಗಿಡಗಳು ಕಾಣುತ್ತಿದ್ದುವು. ದೀಪಸ್ತಂಭದ ಬುಡ ದಲ್ಲಿ ಮುಳ್ಳುತಂತಿಯ ವೃತ್ತದೊಳಗೆ ಬಂದಿಗಳಾಗಿ (ಸುರಕ್ಷಿತವಾಗಿ) ಬಣ್ಣ ಬಣ್ಣದ ಬಗೆಬಗೆಯ ಹೂಗಳಿದ್ದವು. ಮೊಗ್ಗುಗಳು; ಅರೆಬಿರಿದ, ಪೂರ್ಣ ವಾಗಿ ಅರಳಿ ಬಾಡಿ ಜೋಲುತ್ತಿದ್ದ ಹೂಗಳು.
ವಯಸ್ಸಿನೊಡನೆ ಮಂದವಾಗುತ್ತ ನಡದಿದ್ದ ಇಮಾಮ್ ಸಾಬಿಯ ದೃಷ್ಟಿ, ಹೂವಿನ ಸಸಿಗಳ ಮೇಲೆ ಸೋಮಾರಿಯಂತೆ ಎರಗಿತು. ಆ ಸೊಬಗಿನ ಆಸ್ವಾದನೆ ಅವನ ಸಾಮರ್ಥ್ಯಕ್ಕೆ ನಿಲುಕದ್ದು. ನೋಟ ಪುಷ್ಪರಾಶಿಯ ಮೇಲಿದ್ದರೂ ಆತ ಯೋಚಿಸುತ್ತಿದ್ದುದು ಬೇರೆಯೇ ಒಂದು :
ಕಿರಿಯ ಮಗನ ಹೆಂಡತಿ ತುಂಬಿದ ಗರ್ಭಿಣಿ. ಬೀಬಿ ನುಡಿದಿದ್ದಳು,–"ಇವತ್ತೋ ನಾಳೆಯೋ ಆಗಬಹು.” ಚೊಚ್ಚಲು.
ಚೊಚ್ಚಲು––
ಆ ಅಂಶ ಮತ್ತೆ ಮತ್ತೆ ನೆನಪಾಗಿ, ಇಮಾಮ್ ಸಾಬಿಯ ಒಳಗೆ ಚಳಿ ಎನಿಸುತ್ತಿತ್ತು.
ಅವನು ತಾತನಾಗಲಿದ್ದುದು ಅದೇ ಮೊದಲ ಸಲವೇನೂ ಆಗಿರಲಿಲ್ಲ. ಹಾಗೆ ನೋಡಿದರೆ, ರೆಂಬೆಗಳು ವಿಶಾಲವಾಗಿ ಹರಡಿದ್ದ ವೃಕ್ಷ ಆತ. ಆದ ಕೇನು? ಕೊಂಬೆಗಳು ಬಲಿತಂತೆ ಬೇಕೆ ಬೇರೆ ದಿಕ್ಕುಗಳಿಗೆ ಅವುಗಳನ್ನು ಕಡಿ ದೊಯ್ದಿದ್ದರು. ಈಗ ಉಳಿದಿದ್ದುದು ಕಾಂಡ ಮತ್ತು ಕೊನೆಯ ರೆಂಬೆ ಮಾತ್ರ. ಎಲ್ಲ ಗಂಡು ಸಂತಾನವೆಂದೇ ಅಸೂಯೆಪಟ್ಟವರೆಷ್ಟು ಜನ! ಹಾಗೆ ಅವರು ಆಡಿದ್ದೇ ಕೆಡುಕು ಮಾಡಿತೋ ಏನೋ. ಇಮಾಮ್ ಸಾಬಿ ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡಿದ್ದೇ ಬಂತು. ಕಿರಿಯ ಒಬ್ಬನ ಹೊರತಾಗಿ ಯಾರೂ ಅವನಿಗೆ ದಕ್ಕಲಿಲ್ಲ.
ಕೂ ಎಂಜಿನಿನ ಜುಕುಜುಕುಜೂ ಆಟವೇ ಎಳೆಯರಿಗೆ. ಹಿರಿಯವನಿ ಗಿಷ್ಟು ಸಾಲೆ ಓದಿಸಿ ರೈಲ್ವೆಯಲ್ಲಿ ನೌಕರಿ ದೊರಕಿಸಿಕೊಡಬೇಕೆಂದು ಇಮಾಮ್ ಸಾಬಿ ಆಸೆ ಕಟ್ಟಿಕೊಂಡಿದ್ದ. ಆದರೆ, ಹಿರಿಯವನಿಗಷ್ಟೇ ಅಲ್ಲ, ಅವನ ಮಕ್ಕಳು ಯಾರಿಗೂ ಸಾಲೆ ಇಷ್ಟವಾಗಲಿಲ್ಲ.
“ ಅಪ್ಪನಿಗೂ ಹೆಬ್ಬೆಟ್ಟಿನ ಗುರುತು; ಮಕ್ಕಳಿಗೂ ಹೆಬ್ಬೆಟ್ಟಿನ ಗುರುತು. ಅಲ್ಲಾನಿಗೆ ಇದೇ ಇಷ್ಟವೆಂದಾದರೆ ಹಾಗೆಯೇ ಆಗಲಿ,” ಎಂದುಕೊಂಡ ಇಮಾಮ್ ಸಾಬಿ.
ಕುಡಿಮೀಸೆ ಚಿಗುರುವ ವೇಳೆಗೆ ದೊಡ್ಡವನು ಜಟಕಾವಾಲನಾದ. ಮನೆಯ ಸೊಸೆ ತವರಿಗೆ ಹೋಗಿ, ಇಮಾಮ್‌ಸಾಬಿಯ ಮೊಮ್ಮಗನೊಡನೆ ಮರಳಿದಳು.
ಆದರೆ ಆ ಬಗೆಯ ಸಮೃದ್ಧ ಬದುಕಿನ ಸೌಭಾಗ್ಯ ಬಹಳ ದಿನ ಇಮಾಮ್ ಸಾಬಿಗೆ ದೊರೆಯಲಿಲ್ಲ. ಮಗ ಜಗಳವಾಡಿ, ತಾನು ಸಂಪಾ ದಿಸಿ ಕೂಡಿಟ್ಟಿದ್ದ ಹಣದೊಡನೆ, ಮತ್ತೊಮ್ಮೆ ಗರ್ಭಿಣಿಯಾಗಿದ್ದ ಹೆಂಡತಿ ಹಾಗೂ ಮಗುವಿನೊಡನೆ ಮನೆ ಬಿಟ್ಟು ಮುಂಬಯಿಗೆ ಹೊರಟುಹೋದ.
ಅನಂತರ ಇಬ್ಬರು ಜಗಳವಾಡದೆಯೇ ಮನೆಬಿಟ್ಟು ಹೋದರು, ಉತ್ತರ ಹಿಂದೂಸ್ಥಾನಕ್ಕೆಂದು
ಊರಿಗೊಮ್ಮೆ ಸರ್ಕಸ್ ಬಂದು ಬೀಡು ಬಿಟ್ಟಿತ್ತು. ಇಪ್ಪತ್ತು ದಿನ ಅಲ್ಲಿದ್ದು ಡೇರೆ ಕಿತ್ತಾಗ ಇಮಾಮ್ ಸಾಬಿಯ ನಾಲ್ಕನೆಯ ಹುಡುಗ ನಾಪತ್ತೆ ಯಾದ. ಸರ್ಕಸ್ಸಿನವರು ಅಪಹರಿಸಿರಬೇಕೆಂಬ ಶಂಕೆ ತಂದೆಗೆ. ಆ ಶಂಕೆ నిಜವಾಯಿತು.
ಕೊನೆಯ ಮಗನನ್ನು ತಂದೆ ತಾಯಿ ಬಹಳ ಜೋಪಾನವಾಗಿ ಬೆಳೆ ಸಿದರು. ಆರೈಕೆ ಅತಿಯಾಗಿತ್ತೆಂದೇ ಆತ ಬಡಕಲು ಶರೀರದವನಾದ. ಒಮ್ಮೆ ಆತ ವಿಷಮಶೀತಜ್ವರಕ್ಕೆ ತುತ್ತಾದಾಗಲಂತೂ ಇಮಾಮ್ ಸಾಬಿ ಅರೆಹುಚ್ಚನಾದ. ಅವನ ಹೆಂಡತಿ, ಮುಸಲ್ಮಾನ - ಹಿಂದೂ ದೇವರಿಬ್ಬರಿಗೂ ಹರಕೆ ಹೊತ್ತಳು . . . ಹುಡುಗ ಕುತ್ತಿನಿಂದ ಪಾರಾದ . . . ಹಳ್ಳಿಯ ಹುಡುಗಿಯೊಬ್ಬಳು ಅವನ ಮಡದಿಯಾಗಿ ಬಂದಳು.
ಆ ಕಿರಿಯವನೇ, ತನ್ನ ಜೀವನಾಧಾರವಾದ ರೈಲ್ವೆಶಾಖೆಗೆ ಇಮಾಮ್ ಸಾಬಿ ನೀಡಿದ ಕಾಣ್ಕೆ. ಹಿಂದೆ ಇಬ್ಬರೇ ಹಮಾಲರಿದ್ದ ನಿಲ್ದಾಣದಲ್ಲಿ ಈಗ ನಾಲ್ವರಿದ್ದರು. ಇಮಾಮ್ ಸಾಬಿಯ ಮಗ ಕರೀಂ ಐದನೆಯವನಾದ.
"ನನಗೆ ವಯಸ್ಸಾಯ್ತು. ಇನ್ನು ಕರೀಂ ಇರ್ತಾನೆ."
"ನೀನು ರಾತ್ರಿ ನಿದ್ದೆ ಕೆಡ್ಬೇಡ, ದಾದಾ ಮಿಯಾ. ತ್ರೀ-ಆಪ್ ಫೋರ್ ಡೌನ್ ಎಲ್ಲಾ ಕರೀಂ ನೋಡ್ಕೊಳ್ಳಿ."
"ಹೂಂ, ಹೂಂ."
ಹೂಂ-ಎಂದನಾದರೂ, ಸದಾ ಕಾಲವೂ ರಾತ್ರಿಯ ದುಡಿಮೆಯನ್ನು ಮಗನಿಗೇ ವಹಿಸಿ ಕೊಡಲಿಲ್ಲ ಇಮಾಮ್ ಸಾಬಿ. ಒಂದು ವಾರ ಇವನಾದರೆ ಒಂದು ವಾರ ಅವನು.
ಆ ಹುಡುಗಿ, ತನ್ನ ಕಿರಿಯ ಸೊಸೆ, ಈಗ ತುಂಬಿದ ಗರ್ಭಿಣಿ. ಹಳ್ಳಿ ಯಲ್ಲಿ ಬಾಣಂತಿತನಕ್ಕೆ ಅನುಕೂಲವಿರಲಿಲ್ಲವೆಂದು ಇಮಾಮ್ ಸಾಬಿ ಇಲ್ಲಿಯೇ ಇರಿಸಿಕೊಂಡಿದ್ದ. ಅಲ್ಲದೆ, ಹೆಣ್ಣು ಮಕ್ಕಳಿಲ್ಲದ ವೃದ್ಧ ದಂಪತಿ ಗಳು ಆ ಮುಗ್ಧೆಯ ಬಗೆಗೆ ವಿಶೇಷ ಒಲವನ್ನು ತೋರಿಸುತ್ತಲಿದ್ದರು. ಇಮಾಮ್ ಸಾಬಿಯ ಹೆಂಡತಿ ಆ ಹುಡುಗಿಗೆ ಅತ್ತೆಯೂ ಆಗಿದ್ದಳು.
ಚೊಚ್ಚಲ ಹೆರಿಗೆ ಬೇರೆ–
ಬೆನ್ನು ಹುರಿಯನ್ನು ನಡುಕ ಮುತ್ತಿಡಲು ಇಮಾಮ್ ಸಾಬಿ ತನ್ನಷ್ಟಕ್ಕೆ ಅಂದುಕೊಂಡ :
"ಈಗ ಸೂಲಗಿತ್ತಿ ಇದ್ದಾಳೆ. ತಾನೆಲ್ಲಾ ನೋಡ್ಕೊಳ್ತೀನಿ ಅಂದಿ ದಾಳೆ. ಐದು ರೂಪಾಯಿ ಕೊಟ್ಟರಾಯ್ತು."
ಆ ಸಾರೆ, ತನ್ನ ಮೊದಲ ಬೀಬಿಯ ಹೆರಿಗೆಯ ವೇಳೆ, ಸೂಲಗಿತ್ತಿ ಇರಲಿಲ್ಲ.
ತಳವೇ ಇಲ್ಲವೇನೋ ಎನ್ನುವಂತಹ ಆಳದಿಂದ ಇಣಿಕಿ ನೋಡುತಿತ್ತು ನೋವಿನ ಆ ನೆನಪು.
"ಈಗ ಯಾಕೆ ಆ ಇಚಾರ . . ."
ಇದಕ್ಕಿಂತಲೂ ಹಿಂದಕ್ಕೆ ಸರಿಯಿತು ಸ್ಮರಣೆ.
ತಂದೆಯನ್ನು ಕಳೆದುಕೊಂಡಿದ್ದರೂ ಬಾಲ್ಯ ಸುಖಕರವಾಗಿಯೇ ಇತ್ತು, ಸೋದರಮಾವ ನೀಡಿದ ಆಶ್ರಯದ ನೆರವಿನಿ೦ದ.
ಆ ಮಾವನೂ ಹಮಾಲ. ರೈಲ್ವೆ ಸ್ಟೇಷನ್ನಿನ ಮುಕದರ್ಶನ ಏಳು
ಎಂಟರ ಹರೆಯದವನಾಗಿದ್ದಾಗಲೇ ತನಗೆ ಆಗಿತ್ತು. ಪ್ರತಿಯೊಂದು ಗಾಡಿ
ಯನ್ನೂ ಇದಿರು ನೋಡುತ್ತ ತಾನು ಕಳೆಯುತ್ತಿದ್ದ ಆ ದಿನಗಳು ...
ಧಡ ಧಡಾಲ್ !
[ಸಿಡಿಮದ್ದು ಕಲ್ಲುಬಂಡೆಗಳನ್ನು ಒಡೆದಂತಹ, ಬೆಟ್ಟದೊಂದು
ತುಣಕು ಜಾರಿ ಪ್ರಪಾತಕ್ಕೆ ಬಿದ್ದಂತಹ, ಸಹಸ್ರ ತೋಫುಗಳು ಏಕಕಾಲದಲ್ಲೇ
ಗುಂಡಿನ ಮಳೆಗರೆದಂತಹ–ಸದ್ದು.]
"ಆಕ್ಸಿಡೆಂಟ್!"
ಇಮಾಮ್ ಸಾಬಿ ಹೌಹಾರಿ ಬೊಬ್ಬಿಟ್ಟ:
"ಆಕ್ಸಿಡೆಂಟ್!"
ಬೆಂಕಿ ಬಿದ್ದ ಮನೆಯ ಎದುರು ಆರ್ತನಾದ ಮಾಡುವ ಎಳೆಯ ಬಾಲಕನಂತೆ ಅರಚುತ್ತ ಇಮಾಮ್ ಸಾಬಿ, ನಿಲ್ದಾಣದ ಹೆಬ್ಬಾಗಿಲಿನತ್ತ ಧಾವಿಸಿದ.
ಓಡುತ್ತ, ಏದುಸಿರು ಬಿಡುತ್ತ, ಆತ ಕೂಗಿ ಕೇಳಿದ:
“ಎల్లి ? ಏನಾಯ್ತು ?"
ಧ್ವನಿಯನ್ನು ಕೇಳಿ, ತಮ್ಮ ಕೊಠಡಿಯಿಂದ ಹೊರಬಂದ ಸ್ಟೇಶನ್ ಮಾಸ್ತರು, ಓಡಿ ಬರುತ್ತಲಿದ್ದ ಇಮಾಮ್ ಸಾಬಿಯನ್ನು ತಡೆಯುತ್ತ ಅ೦ದರು :
“ಯಾಕಪ್ಪ? ಏನಿದು ? "
ಮಾಸ್ತರು ಅಲ್ಲಿಗೆ ಹೊಸಬರು. ಆದರೂ ಇಮಾಮ್ ಸಾಬಿಯಬಗೆಗೆ ಆಗಲೆ ಅವರು ಸಾಕಷ್ಟು ತಿಳಿದಿದ್ದರು. ಅವರ ನೋಟ ಛೇಡಿಸುತ್ತು. ಮುಗುಳುನಗೆ ಮೂಡಿತ್ತು ಮುಖದಮೇಲೆ.
"ಆಕ್ಸಿಡೆಂಟ್ ಆಗಿಲ್ವ ಮಾಸ್ತರ್ ಸಾಬ್?"
"ಕನಸು ಬಿತ್ತೇನಪ್ಪ?"
ನಿಲ್ದಾಣದೆದುರಿಗೆ ಮೂರನೆಯ ಸಾಲಿನಲ್ಲಿ ಕಟ್ಟೆಗೆ ತಾಗಿ ನಿಂತಿತ್ತುಮಾಲ್ ಗಾಡಿ. ತುಂಬಿದ್ದ ಡಬ್ಬಿಯೊಂದನ್ನು ತಂದು ಎಂಜಿನು, ಗಾಡಿಗೆ ಅಂಟಿಸಿತ್ತು. ಆಗ ಕೊಂಡಿ ತಗಲಿ, ತಮಗೆ ನೋವಾಯಿತೆಂದು ಎಲ್ಲ ಡಬ್ಬಿಗಳೂ ತುಸು ಗದ್ದಲ ಮಾಡಿದ್ದುವು.
ಅದೇ ಸದ್ದು-ಧಡ್ ಧಡಾಲ್.
ಆಕ್ಸಿಡೆಂಟ್.
ನಾಚಿಕೆಯಿಂದ ಇಮಾಮ್ ಸಾಬಿಯ ಮುಖ ಕೆ೦ಪೇರಿತು.
"ವಯಸ್ಸಾಗೋಯ್ತು ನಂಗೆ!" ಎಂದು ನುಡಿದು, ತಲೆ ತಗ್ಗಿಸಿ ನೆಲನೋಡುತ್ತ, ಪ್ಲಾಟ್ ಫಾರ್ಮಿನುದ್ದಕ್ಕೂ ಆತ ನಡೆದುಹೋದ.
ಕಟ್ಟಡ ಮುಗಿದು ಕಪ್ಪು ಪಟ್ಟಿಯ ಬೇಲಿ ಮೊದಲಾದೆಡೆ, ಹೊರಗೆ ಬೆಳೆದು ಒಳಕ್ಕೂ ನೆರಳು ನೀಡಿದ್ದ ಹುಣಿಸೆಮರದ ಕೆಳಗೆ, ಬೇಲಿಗೊರಗಿ ರುಮಾಲು ತೆಗೆದು ಕೆಳಕ್ಕೆಳೆದು, ಸುರುಳಿ ಬಿಚ್ಚಿಕೊಂಡ ತುದಿಯಿಂದ ತಲೆಯನ್ನೂ ಮುಖವನ್ನೂ ಒರೆಸಿದ.
ಹೇಗೆ ಬೇಸ್ತು ಬಿದ್ದೆ ತಾನು!
ಹಿಂದೆಯೂ ಹತ್ತಾರು ಸಾರೆ ಆ ರೀತಿ ಅವನಿಗೆ ಆಗಿತ್ತು. ಗಾಢನಿದ್ರೆಲ್ಲಾ ಕನಸು ಕಂಡು, ಮೂಕನಂತೆ ಅಸ್ಪಶ್ಟ ಸ್ವರ ಹೊರಡಿಸುತ್ತ ಆತ ಗಡಬಡಿಸಿ ಎದ್ದುದಿತ್ತು. ಅವನು ಯುವಕನಾಗಿದಾಗ ಅವನ ಊರಿದ ಕೆಲವೇ ಮೈಲುಗಳಾಚೆ ಸಂಭವಿಸಿದ್ದೊಂದು ರೈಲು ಅವಘಡದ ಪ್ರತಿವನಿ ಅದೆಲ್ಲ. ಅವಘಡವನ್ನು ಕಣ್ಣಾರೆ ಕಂಡಿರಲಿಲ್ಲ ಇಮಾಮ್ ಸಾಬಿ.ಆದರೂ ಅದು ಸಂಭವಿಸಿದ ಕೆಲವೇ ಗಂಟೆಗಳಲ್ಲಿ, ಆತ ಸ್ಥಳಕ್ಕೆ ಬಂದಿದ್ದ. ಕತ್ತಲಲ್ಲಿ ಬರಿಗಾಲಲ್ಲೇ ನಡೆದು ತಲುಪಿದ್ದ. ಮುಂದೆ ಕೆಲವೇ ನಿಮಿಷಗಳಲ್ಲಿ ವೈದ್ಯಕೀಯ ಸಹಾಯವನ್ನೂ ಮತ್ತಿತರ ಪರಿಹಾರವನ್ನೂ ರಿಲೀಫ್‌ಟ್ರೈನು ತಂದಿತ್ತು. ಅದರಲ್ಲಿದ್ದ ನಗರದ ರೈಲ್ವೆ ಆಳುಗಳನ್ನು ಇಮಾಮ್ ಸಾಬಿ ಸೇರಿಕೊಂಡು ಆರ್ತರಿಗೆ ನೆರವು ನೀಡಿದ್ದ. ಮುಳುಗಿ ಸಾಯಲು ಸಾಕಷ್ಟು ನೀರಿಲ್ಲದ ನದಿ. ಆದರೂ ಹಳೆಯ ಸೇತುವೆ ಬಿರುಕು ಬಿಟ್ಟು, ಎಂಜಿನ್ ಹಾಗೂ ಎದುರಿನ ಮೂರು ಡಬ್ಬಿಗಳು ಕೆಳಕ್ಕೆ ಉರುಳಿದ್ದುವು.ಪ್ರಯಾಣಿಕರ ಆಕ್ರಂದನ ಕರ್ಣಭೇದಕವಾಗಿತ್ತು. ಅವಸರ ಅವಸರವಾಗಿ
ವ್ಯವಸ್ಥೆಗೊಳಿಸಿದ ಸರ್ಚ್ ಲೈಟುಗಳ ಬೆಳಕಿನಲ್ಲಿ, ಸಾವಿನ ಬೋನು ಕತ್ತರಿಳಲ್ಲಿ ಸಿಲುಕಿಕೊಂಡವರ–ಬದುಕಿ ಉಳಿದವರ-ರಕ್ಷಣೆಗಾಗಿ ಯತ್ನ ನಡೆತು. ಬಾಹುಗಳಲ್ಲಿ ನೂರು ಜನರ ಬಲವಿದ್ದವರಂತೆ ಇಮಾಮ ಸಾಬಿ ದುಡಿದ. ಬೆಳಕು ಹರಿದು ಸೂರ್ಯ ನಡುನೆತ್ತಿಗೆ ಬರುವ ಹೊತ್ತಿಗೆ ಆ ದುಡಿಮೆ ಮುಗುಯಿತು. ಸತ್ತವರ ಶವಗಳೆಲ್ಲ ದೊರೆತಿದ್ದವು __ಐವತ್ತೆಂಟ
ಜನ. ಗಂಭೀರ ಸ್ವರೂಪದ ಗಾಯಗಳಾಗಿದ್ದುದು ಇಪ್ಪತ್ತೆರಡು ಮಂದಿಗೆ. ಸಣ್ಣ ಪುಟ್ಟ ಗಾಯಗಳು ಇನ್ನೂ ಅನೇಕರಿಗೆ.
ಮುಂದೆ ಅನೇಕ ವರ್ಷಗಳ ಅನಂತರವೂ ಕನಸಿನಲ್ಲಿ ಕಾಣುವಷ್ಟು ಭೀಕರವಾಗಿತ್ತು ಆ ಘಟನೆ.
ಅಂದು ದುಡಿಮೆ ಮುಗಿದಾಗ, ಎಲ್ಲ ಬಳಲಿಕೆಯೂ ಒಟ್ಟಿಗೆ ಕಾಣಿಸಿಕೊಂಡು ಕಾಲು ಕಟ್ಟಿತು. ಅವಘಡದ ಸನ್ನಿವೇಶವನ್ನು ನೋಡಲೆ೦ದುಇಮಾಮ್ ಸಾಬಿ ಕುಳಿತ. ಮೈ ಥರಥರನೆ ನಡುಗುತ್ತಿತ್ತು. ತೀವ್ರಗೊಂಡಿದ್ದ ಎದೆಗುಂಡಿಗೆಯ ಬಡಿತ ಇನ್ನೂ ಕಡಮೆಯಾಗಿರಲಿಲ್ಲ. ತಲೆ, ಮುಖ, ಕಂಕುಳು, ಎದೆ-ಎಲ್ಲಾ ಬೆವತಿದ್ದುವು.
ಕಂಪಿಸುತ್ತಿದ್ದ ಬೆರಳುಗಳಿಂದ ಕೆಂಪು ರುಮಾಲನ್ನು ಸರಿಪಡಿಸುತ್ತಊರಿನಿಂದ ಬಂದಿದ್ದ ಹಲವರೊಡನೆ, ರಾತ್ರಿ ತಾನು ಕಂಡುದನ್ನು ಅವರಿಗೆ ಬಣ್ಣಿಸುತ್ತ, ಇಮಾಮ್ ಸಾಬಿ ಹಿಂದಿರುಗಿದ.
ಅವನನ್ನು ಇದಿರ್ಗೊಂಡವರಲ್ಲಿ ಕೆಲವರು ಹೇಳಿದ್ದರು:
"ಭಾರಿ ಸಂಪಾದನೆಯಾಗಿರ್ಬೇಕು ಇಮಾಮ್ಗೆ!"
ಅದನ್ನು ಕೇಳಿ, ರಕ್ತವೆಲ್ಲ ಮುಖಕ್ಕೇರಿ ಬಂದು ಕಣ್ಣಿಗೆ ಕತ್ತಲು ಕವಿತಾಯಿತು ಈತನಿಗೆ.
ಇವನು ಸ್ವರವೇರಿಸಿ ಅಂದಿದ್ದ:
"ಥೂ ನಿಮ್ಮ ! ನೀವು ಮನುಷ್ಯರೋ ಮೃಗಗಳೋ?"
ಶ್ರೀಮಂತ ಪ್ರಯಾಣಿಕರು ಕೆಲವರು ಅವನಿಗೆ ಹಣ ಕೊಡಲು ಬಂದಿದುದು ನಿಜ. ಆದರೆ ಬಿಡಿಕಾಸನ್ನೂ ಅವನು ಮುಟ್ಟಿರಲಿಲ್ಲ.
ಹಣಕಾಸಿನ ವಿಷಯದಲ್ಲಿ ಅವನಿಗೂ ಅವನ ಸಹೋದ್ಯೋಗಿಗಳಿಗೂದಾ ಕಾಲವೂ ಭಿನ್ನಾಭಿಪ್ರಾಯವಿದ್ದೇ ಇತ್ತು. ಹೊಸ ಮುಖಗಳನ್ನುಕಾಡಿಸಿ ಪೀಡಿಸಿ ಆದಷ್ಟು ಕಿತ್ತುಕೊಳ್ಳಲು ಅವರು ಯತ್ನಿಸುತ್ತಿದ್ದರು.ಎಷ್ಟೋ ಸಾರಿ ಗೆಲ್ಲುತ್ತಿದ್ದರು. ಯಾರಾದರೂ ಗದರಿದರೆ ಜಗಳಕಾಯುತ್ತಿದರು. ಇಮಾಮ್ ಸಾಬಿ ಮಾತ್ರ, ಅಷ್ಟು ಕೊಡಿ-ಇಷ್ಟು ಕೊಡಿ ಎಂದುಕೇಳಿದವನಲ್ಲ. "ಎಷ್ಟು ಕೂಲಿ?" ಎಂದು ಯಾರಾದರೂ ಕೇಳಿದರೆ, ತಿಷ್ಟು-ಎಂದು ನ್ಯಾಯಸಮ್ಮತವಾದುದನ್ನು ತಿಳಿಸುತಿದ್ದ . . .
ಮತ್ತೆ ಹಲ್ಲೋ ! ಹಲ್ಲೋ! [ಫೋನಿನ ಖಣಖಣತ್ಕಾರ]
ನೌಕರ ಘ೦ಟೆ ಬಾರಿಸಿದ.
ಕೆಲ ನಿಮಿಷಗಳ ಅನಂತರ ಬೀಗ ತೆಗೆದು ಹಿಡಿಯನ್ನು ಎಳೆದ.ಕೈಕಂಬ ಮಿಸುಕಿ ಸಿಗ್ನಲ್ ಬಿತ್ತು.
ಘಂಟೆಯ ಸಪ್ಪಳ ಇಮಾಮ್ ಸಾಬಿಗೆ ಕೇಳಿಸಿದುದು ಸ್ವಲ್ಪ ಅಸ್ಪಷ್ಟಗಿಯೇ.ಕೈಕಂಬ ಕಾಣಿಸುತ್ತಿದ್ದುದೂ ಮಸಕು ಮಸಕಾಗಿಯೇ.ಆದರೂ ಸಿಗ್ನಲ್ ಬಿತ್ತೆಂಬುದನ್ನು ಅಭ್ಯಾಸ ಬಲದಿಂದ ಆತ ಬಲ್ಲ.
ನಿಲ್ದಾಣದ ನೀರವತೆ ಮಾಯವಾಗಿ ಗುಸುಗುಸು ಸದ್ದು ಆಗಲೇಕೇಳಿಸತೊಡಗಿತ್ತು. ಸೋಮಾರಿಯಾದೆ ತಾನು__ಎಂದು ಛೀಗಳೆಯುತ್ತಇಮಾಮ್ ಸಾಬಿ ಎದ್ದು ರುಮಾಲು ಸುತ್ತಿದ. ಅವನ ಬರಿಯ ಪಾದಗಳು ಹದ ಭಾರವನ್ನು ಹೊತ್ತು ಮಹಾದ್ವಾರದೆಡೆಗೆ ಚಲಿಸಿದುವು.
ಗೂಡ್ಸ್ ಕಟ್ಟಿಯಲ್ಲಿದ್ದ ಮೂವರು ಹಮಾಲರು ಅದೆಷ್ಟು ಹೊತ್ತಿಗೆಇತ್ತ ಜಿಗಿದರೋ! ಪ್ರಯಾಣಿಕರ ಸುಖದುಃಖ ವಿಚಾರಿಸುವುದರಲ್ಲಿ ಅವಗಲೇ ಮಗ್ನರಾಗಿದ್ದರು. ಯುವಕರು. ಒಬ್ಬನಂತೂ ಮಹಾ ಖದೀಮ.
ಪ್ಯಾಸೆಂಜರ್ ಗಾಡಿ ಹತ್ತುವವರೂ ಕಡಮೆ, ಇಳಿಯುವವರೂ ಡವೆು. ಇಮಾಮ್ ಸಾಬಿ ಹೊರಗೆ ಹೋಗದೆ ಒಳಗೇ ನಿಂತ.
ಲಗುಬಗೆಯಿಂದ ಗಾಡಿ ಬಂತು. ನಿಂತು ಮುಂದಕ್ಕೆ ಸಾಗಿತು. ಕಣ್ಣೆದುರು ಅತ್ತಿತ್ತ ಸರಿದ ಜನರು ತುಂತುರು ಮಳೆಯಂತೆ ಚೆದುರಿಮಾಯವಾದರು. ಅಪರಿಚಿತನಂತೆ ಕಂಡ ಒಬ್ಬರ ಹಗುರವಾದ ಸೂಟ್ಕೇಸನ್ನು ಇಮಾಮ್ ಸಾಬಿ ಹೊರಕ್ಕೊಯ್ದು ಜಟಕಾದಲ್ಲಿರಿಸಿದ. ಅವರಿತ್ತ ಎರಡಾಣೆಯನ್ನು ತನ್ನ ನೀಲಿ ಅಂಗಿಯ ಜೇಬಿಗೆ ಸೇರಿಸಿದ.
ಮೊದಲಾದರೆ, ಹೋಗುತ್ತಿದ್ದವರು ಬರುತ್ತಿದ್ದವರೆಲ್ಲ ಪರಿಚಿತರೇ. ಈಗ ಕೆಲವು ವರ್ಷಗಳಿಂದ ಬೀಡಿ ಕಾರಖಾನೆಗಳಾಗಿ, ಹತ್ತಿ ಹಿಂಜುವ ಒಂದು ಗಿರಣಿಯನೂ ಪಾರಂಭವಾಗಿ, ಊರಿನ ಜನಸಂಖ್ಯೆ ಹೆಚ್ಚಿತ್ತು.ಹಲವು ಹೊಸ ಮುಖಗಳು ನಿಲ್ದಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದುವು.
ಸ್ವತಃ ನಿಲ್ದಾಣವೇ ಎಷ್ಟೊಂದು ಬದಲಾಗಿ ಬಿಟ್ಟಿತ್ತು ! ಸೀಮೆ ಎಣ್ಣೆಯ ಆಗಿನ ಮಿಣಿಮಿಣಿ ದೀಪಗಳೆಲ್ಲಿ, ಢಾಳಾಗಿ ಉರಿಯುವ ಈಗಿನ ವಿದ್ಯುತ್ ಬಲ್ಬುಗಳೆಲ್ಲಿ! ಆಗ ಸ್ಟೇಷನ್ ಮಾಸ್ತರರು ಎಲ್ಲ ಕೆಲಸವನ್ನೂ ಮಾಡಬೇಕಾಗಿತ್ತು. ಟಿಕೆಟ್ ಮಾರುವುದು, ಕೀಲಿಕೈ ಕೊಡುವುದು, ಪಡೆಯುವುದು, ಬಾವುಟ ಬೀಸುವುದು, ಗೇಟು ತೆರೆದು ಇಳಿದವರನ್ನು ಹೊರಬಿಡುವುದು-ಪ್ರತಿಯೊಂದನ್ನೂ. ಈಗ ಅವರಿಗೊಬ್ಬ ಸಹಾಯಕನಿದ್ದ.ಗೂಡ್ಸ್ ವಿಭಾಗವನ್ನು ನೋಡಿಕೊಳ್ಳಲು ಮತ್ತೂ ಒಬ್ಬನಿದ್ದ. ಹಿಂದಿನ ಕಟ್ಟಡವೂ ಗುರುತು ಸಿಗದಂತೆ ಮಾರ್ಪಾಟು ಹೊಂದಿತ್ತು. ಹಂಚುಗಳೆಲ್ಲ ಮಾಯವಾಗಿ ತಾರಸಿ ಛಾವಣಿಗಳು ಎತ್ತರದಲ್ಲಿ ಹರಡಿಕೊಂಡಿದ್ದುವು. ಹಳೆಯ ತಲೆಮಾರಿನ ಮಾಸ್ತರುಗಳೂ ಈಗಿಲ್ಲ. ಇತ್ತಿಚಿನ ಒಬ್ಬಿಬ್ಬರಂತು ಇಮಾಮ್ ಸಾಬಿಯನ್ನು 'ಹಮಾಲ್'ಎನ್ನುತ್ತಿರಲಿಲ್ಲ; 'ಪೋರ್ಟರ್' ಎಂದು ಕರೆಯುತ್ತಿದ್ದರು. ಕೈಗೆ ಕಟ್ಟಿಕೊಳ್ಳಲು ಹಿತ್ತಾಳೆಯ ಬಿಲ್ಲೆಗಳು ಬಂದಿದ್ದುವು. ಪೋರ್ಟರನ ನಂಬರು; ಒಂದು ಮಣವನ್ನು ಮೀರಿದ ಹೇರಿಗೆ ಎರಡಾಣೆ.' ಅದನ್ನು ಧರಿಸಲೇ ಬೇಕಾಗಿ ಬಂದಾಗ ಇಮಾಮ ಸಾಬಿ ಪಟ್ಟ ವ್ಯಥೆ ಅಷ್ಟಿಷ್ಟಲ್ಲ. ಅಷ್ಟು ಮಟ್ಟಿನ ಅವಿಶ್ವಾಸಕ್ಕೂ ಪಾಪ್ತವಾಯಿತೆ ತನ್ನ ವೃತ್ತಿ? ಇಂತಹ ಅವಮಾನವನ್ನೂ ಸಹಿಸಬೇಕೆ ತಾನು ? ಆದರೆ ಅವನ ಮಗ ಕರೀಮನಿಗೆ ಆ ಬಗೆಯ ಯಾವ ಕಸಿವಿಸಿಯೂ ಇಲ್ಲ, "ರೂಲ್ಸ್ ಬಾಬಾ, ರೂಲ್ಸ್,” ಎನ್ನುತ್ತಿದ್ದ ಆತ.
ಎರಡು ತಲೆಮಾರುಗಳ ನಡುವಿನ ಅಂತರವನ್ನು ನೆನೆದು ಇಮಾಮ್ ಸಾಬಿಗೆ ಸೋಜಿಗವೆನಿಸುತ್ತಿತ್ತು.
. . .ಅರಿವಿಲ್ಲದಂತೆಯೇ ತನ್ನ ಮುಖವನ್ನು ಆವರಿಸಿದ ಮಂದಹಾಸವನ್ನು ಬದಿಗೆ ಸರಿಸುತ್ತ ಇಮಾಮ್ ಸಾಬಿ, ಮತ್ತೆ ಹೊರಗಿನ ಒರಗುಬೆಂಚಿ ತ್ತ ಸಾಗೋಣವೇ ಎ೦ದು ನೋಡಿದ. ಆದರೆ ಬಿಸಿಲಿನ ಝಳ ಕಣ್ಣನ್ನು ಕ್ಕಿತು. ಪ್ಲಾಟ್ ಫಾರ್ಮಿನುದ್ದಕ್ಕೂ ಎರಡು ಸಾರೆ ಅತ್ತಿತ್ತ ನಡೆದ.
ಇನ್ನು ಪೂನಾದಿಂದ ಬರುವ ಮೇಲ್ ಗಾಡಿ. ಅದಾದಮೇಲೆ ಡತಿ ತರುವ ಬುತ್ತಿಯೂಟ. ಮುಂದೆ, ಬೆಂಗಳೂరినింದ బರುವ ಲ್ ಗಾಡಿ. ನಾಲ್ಕರ ಸುಮಾರಿಗೊಂದು ಲೋಕಲ್.ಸಂಜೆಗೆ ಕ್ಷಿಣಾಭಿಮುಖವಾಗಿ ಪ್ಯಾಸೆಂಜರ್. ಅದರ ನಿರ್ಗಮನದ ಬಳಿಕ ತಾನು ನೆಗೆ . ..
"ಇವತ್ತೋ ನಾಳೆಯೋ ಆಗಬಹುದು.”
__ಇವತ್ತು ರಾತ್ರಿಯೇ ಆಗಲೂ ಬಹುದು.
ಗೇಟಿನ ಹೊರಗೆ ಗೋಡೆಗೊರಗಿ ಇಮಾಮ್ ಸಾಬಿ ಕುಳಿತ. ಜನ ರತೊಡಗಿದ್ದರು. ಮೂರನೆಯ ತರಗತಿಯವರು.
ಫೋನ್ ಕರೆ.. ಗಂಟೆ.
ಒಂಟಿ ಎತ್ತಿನ ಗಾಡಿಯಲ್ಲಿ ಸಾಮಾನು ಹೇರಿಸಿಕೊಂಡು ಸಂಸಾರವೊಂದು ಬಂತು. ಯಾರು? ಕಾಣಿಸುತ್ತಿಲ್ಲ ಸರಿಯಾಗಿ.
ಅಬ್ದುಲ್ಲನ ಸ್ವರ ಕೇಳಿಸಿತು :
"ಬಾ ದಾದಾ ಮಿಯಾ.”
ಇಮಾಮ್ ಸಾಬಿ ಎದ್ದು ಅಬುಲ್ಲನನ್ನು ಹಿ೦ಬಾಲಿಸಿದ.
"ಒಟ್ಟು ಹನ್ನೊಂದು ಸಾಮಾನು. ಮೊದಲೇ ಹೇಳಿಬಿಡಿ. ಆಮೇಲೆತಕರಾರು ಬೇಡ."
అಬ್ದುಲ್ಲ :
"ಮೂರು ರೂಪಾಯಿ ಕೊಟ್ಬಡಿ బుದ್ದಿ . . ."
"ಮೂರು ರೂಪಾಯಿ ! ಎಲ್ಲಾದರೂ ಉಂಟೆ? ಒಂದು ರೂಪಾಯಿಡ್ತೀని—ఇಬ್ಬరిಗೂ ಸೇರಿಸಿ."
ನರೆಗೂದಲಿಗೆ ಗೌರವ ಕೊಡುವವನಂತೆ ಇಮಾಮ್ ಸಾಬಿಯತ್ತತಿರುಗಿ ಆತ ಮತ್ತೂ ಅಂದ :
"ಸರಿಯೇನಪ್ಪ?”
ಅಬ್ಧುಲ್ಲನ ಕೆಕ್ಕರಗಣ್ಣನ್ನು ಲಕಕ್ಕೆ ತರದೆ ಇಮಾಮ್ ಸಾಬಿಯೆ೦ದ :
"ಅನ್ನೆರಡನ್ನೆರಡಾಣೆ ಕೊಡಿ ಸೋಮಿ.” . . . ರೈಲು ಬಂದು ಹೋಯಿತು. ದೊರೆತ ಒಂದೂವರೆಯಿಂದ ಟಾಣೆಯ ನಾಣ್ಯವನ್ನು ಅಬ್ಧುಲ್ಲ ಇಮಾಮ್ ಸಾಬಿಗೆ ಕೊಟ್ಟು, ಬಳಿಕ ನ್ನ ಜೇಬಿನೊಳಗಿಂದ ಸಣ್ಣ ಪುಟ್ಟ ನಾಣ್ಯಗಳು ಕೆಲವನ್ನು ತೆಗೆದು ದುಕನಿಗೆ ಕೊಡುತ್ತ ಅ೦ದ :
" ಇಪ್ಪತ್ತೆದು ಪೈಸೆ . . . ನೀನು ಬಾಯಿ ಮುಚ್ಕೊಂಡಿದ್ದಿದ್ದರೆ ೦ದೊ೦ದು ರೂಪಾಯಾದರೂ ಬರ್ತಿತ್ತು.”
"ಹೋಗಲಿ ಬಿಡು," ಎ೦ದ ಇಮಾಮ್ ಸಾಬಿ.
ನಯೇ ಪೈಸೆಗಳ ಲೆಕ್ಕ అವನಿಗೆ ತಿಳಿಯದು.ಆದರೆ ತನ್ನ ಕಣ್ಣೆದುರಲ್ಲೇ ಬೆಳೆದ ಅಬ್ಧುಲ್ಲನಾಗಲೀ ಇತರ ಹುಡುಗರಾಗಲೀ ತನಗೆ ಮೋಸ ಮಾಡಲಾರರೆಂಬ ವಿಶ್ವಾಸವಿತ್ತು ಅವನಿಗೆ.
ಇನ್ನೊಬ್ಬ ಹಮಾಲ ಅತ್ತ ಬರುತ್ತ ಅಂದ :
" ಪೂನಾ ಗಾಡಿ ತೊಂಬತ್ತು విునిಟ್ ಲೇಟ್. ”
ಗಾಡಿ ತಡವಾಗುವುದಂತೂ ಹೊಸದಲ್ಲ. ತಡವಾಗದ ದಿನವಾದರೂ ವುದು? ಹತ್ತಿಪ್ಪತ್ತು ವರ್ಷಗಳಿಗೆ ಹಿಂದೆಯೊಂದು ಯುದ್ದ ನಡೆದಿತ್ತಲ್ಲ? ಗ ಅಸ್ತವ್ಯಸ್ತವಾಗಿದ್ದ ರೈಲು ವ್ಯವಸ್ಥೆ ಸರಿ ಹೋಗಿಯೇ ಇರಲಿಲ್ಲ.
ನಿಲ್ದಾಣ ಮತ್ತೆ ನಿರ್ಜನವಾಯಿತು. ಮಾಸ್ತರರು ಊಟಕ್ಕೆಹೋದರು. ಇಬ್ಬರು ಹಮಾಲರು ಊಟಕ್ಕೆ ತೆರಳಿದರು. ಒಬ್ಬ ಪ್ಲಾಟ್ ಫಾರ್ಮಿನ ಮೇಲೆಯೇ ఒంದೆಡೆ ಮೈಚೆಲ್ಲಿ,ಕೆಂಪು ರುಮಾಲನ್ನು ದಿಂಬಾಗಿಮಾಡಿ, ನಿದ್ದೆಹೋದ.
ಇಮಾಮ್ ಸಾಬಿ ಪ್ಲಾಟಫಾರ್ಮ್ಮನ ಉತ್ತರ ತುದಿಗೆ ಸಾಗಿ, ಮರದ ರಳಿನಲ್ಲಿ ಕುಳಿತ. ಅವನ ಬೀಬಿ ಊಟ ತರುತ್ತಿದ್ದುದು ಆ ತಾಣಕ್ಕೆ.ಒಳ ಹಾದಿಯಾಗಿ ಅಲ್ಲಿಗೆ ಬರುತ್ತಿದ್ದಳು ಆಕೆ.
ಮರದ ಕೆಳಗೆ ಕುಳಿತು ಅದೆಷ್ಟು ಹೊತ್ತಾಯಿತೋ, ಬೀಬಿಇಷ್ಟರಲ್ಲೇ ಬರಬೇಕಾಗಿತ್ತು, ಯಾಕೆ ಬರಲಿಲ್ಲ?
ಇಮಾಮ್ ಸಾಬಿಯ ಗುಂಡಿಗೆ ಡವಡವನೆಂದಿತು.
ಬೇಲಿಯ ಪಟ್ಟೆಗಳೆಡೆಯಿಂದ ಅವನ ಕಣ್ಣಗಳು, ಪೊದೆ ಪೊದರುಗಳನ್ನು ಬಳಸುತ್ತ ಸಾಗಿದ್ದ ಕಾಲುದಾರಿಯತ್ತ ಹರಿದುವು. ಮಬ್ಬುಮಬ್ಬಾಗಿ ಕಾಣಿಸುತ್ತಿತ್ತು ಎಲ್ಲವೂ.ಹಸುರು ನೋಡಿ ನೋಡಿ ನೋವಾಗಲು ತ ಎವೆ ಮುಚ್ಚಿದ. ಗುಡ್ಡದಾಚೆಗಿಂದ ತಪ್ಪಿಸಿಕೊಂಡು ಬಂದ ಸಣ್ಣನೆಯ ಗಾಳಿಯೊಂದು ಬೀಸಿದಂತೆ, ಸ್ವಲ್ಪ ಹಾಯೆನಿಸಿತು. ಯೋಚನೆಗಳ ಟ್ಟಿಗೆಯ ಮುಚ್ಚಳ ಮುಚ್ಚಿಕೊಂಡಿತು. ತಲೆ ಎದೆಯ ಮೇಲಕ್ಕೆ ಗಿತು. ತೂಕಡಿಕೆ ಬಂತು.
"ಬಾಬಾ-"
...
"ಬಾಬಾ!"
"ఇಮಾಮ್ ಸಾಬಿ ಹೌಹಾరి ಎದ್ದ.
"ಏನಾಯ್ತು ? ಏನಾಯ್ತು ? "
"ನಾನು, ಬಾಬಾ. ಊಟ ತಂದಿದೀನಿ.”
"ಹ್ಞಾ ..."
ಬೀಬಿಯ ಬದಲು ಮಗ ಕರೀಮನೇ ಬಂದಿದ್ದ.
ತಂದೆ ಕೇಳಲಿದ್ದ ಪ್ರಶ್ನೆಯನ್ನು ಮೊದಲೇ ಗ್ರಹಿಸುತ್ತ ಅವನೆಂದ:
"ಅವಳು ನೋವು ತಿನ್ತಾ ఇದಾಳೆ."
"ವೃದ್ಧನ ಎದೆಗುಂಡಿಗೆ ಮತ್ತೆ ಬಲವಾಗಿ ಬಡಿದುಕೊಂಡಿತು.
"ಎಷ್ಟು ఒತ್ತಾಯ್ತು? "
"ಅತ್ತು ಗಂಟೆಯಿಂದ.”
"ಸೂలಗಿತ್ತಿ?”
"ಬಂದವಳೆ.. ಚೊಚ್ಚಲು; ತಡವಾಗ್ಬೌದು-ಅಂದ್ಲು.”
ಬುತ್ತಿಯನ್ನು ಬಿಚ್ಚುತ್ತ ಇಮಾಮ್ ಸಾಬಿಯೆಂದ :
"ಹೂಂ.. ಹೂಂ.”
ಬೀಬಿ ಬುತ್ತಿ ತಂದಾಗ,'ಕುಡಿಯುವ ನೀರು' ಎಂದು ಬರೆದ ಗಡಿಗೆಯತ್ತ ಇಮಾಮನೇ ಹೋಗಿ ನೀರು ತರುತ್ತಿದ್ದ. ಇಂದು, ಕಾಲುಗಳಲ್ಲಿబలವೇ ఇల్ల–ಎನಿಸಿತು. అಲ್ಲದೆ—బಳಿಯಲ್ಲೆ ಮಗನಿದ್ದ.
"ನೀರು ತಾ.”
ನಜ್ಜುಗುಜ್ಜಾಗಿದ್ದ 'ಎಲ್ಮಿನಿ' ತಟ್ಟೆಯಲ್ಲಿ ಕರೀ೦ ನೀರು ಹಿಡಿದು ತಂದ.
. . . ಊಟ ಮುಗಿದಾಗ ತಂದೆ ಮಗನಿಗೆ ಅಂದ:
"ನೀನು ಮನೇಲೇ ಇರು.”
. . . ಒರಗಿ ಕುಳಿತಲ್ಲೇ, ಸೊಸೆಯನ್ನು ಕುರಿತು ಯೋಚಿಸು ತಿದ್ದಂತೆಯೇ, ಇಮಾಮ್ ಸಾಬಿಗೆ ಜೊಂಪುಹತ್ತಿತು. ಆದರೆ ಹತ್ತಿಪ್ಪತ್ತು ನಿಮಿಷಗಳಲ್ಲೆ ಮಾಸ್ತರರ ಆಳಗಂಟಲ "ಹಲ್ಲೋ __ಹಲ್ಲೋ __ ” ಅವನನ್ನು ಎಚ್ಚರಿಸಿತು.
ನೆರಳು ಸರಿದು, ಕೊಂಬೆಗಳೆಡೆಯಿಂದ ಬಸಿಲು ಅವನ ಅಂಗಾಂಗಳ ಮೇಲೆ ಬಿದ್ದಿತ್ತು.
ಗಾಡಿ ತಡವೆಂದು ತಿಳಿಯದೆ ಜನ ಬರತೊಡಗಿದ್ದರು. ಜಟಕಾ ಬಂಡಿ ಳು ಬಂದುವು.ಅರಳೆ ಹಿಂಜುವ ಗಿರಣಿಯೊಡೆಯರ ಕಾರೂ ಬಂತು.
ಆದರೆ ಇಮಾಮ್ ಸಾಬಿಯನ್ನು ಮೌಢ್ಯ ಆವರಿಸಿಬಿಟ್ಟಿತ್ತು. ಪಾದಗಳು ಚೆಲಿಸುತ್ತಿರಲಿಲ್ಲ. ಪ್ರಯಾಣಿಕರತ್ತ ಅವನ ಗಮನವಿರಲಿಲ್ಲ.
ఒಮ್ಮೆ అಬ್ದುಲ್ಲನೆಂದ:
"ನಿಂತೇ ಬಿಟ್ಟೆಯಲ್ಲ, ದಾದಾ ಮಿಯಾ?”
ಇಮಾಮ್ ಸಾಬಿ ಉತ್ತರವೀಯಲಿಲ್ಲ. ಮುಗುಳುನಗಲು ಯತ್ನಿಸಿದ,ಯತ್ನಿಸಿ ವಿಫಲನಾದ.
ಮನೆಗೆ ಹೊರಟುಬಿಡಬೇಕೆನಿಸಿತು. ರೈಲಿನ ಅವಘಡದ ರಾತ್ರೆ ಅಲ್ಲಿ ಳಿದಂತಹ ಆರ್ತನಾದವೇ ಈಗಲೂ? ಹೋಗಿ ತಾನು ಮಾಡುವುದಾದರೂ ಏನು ?
ಸಂಜೆಯ ಪ್ಯಾಸೆಂಜರ್ ನೋಡಿಕೊಂಡೇ ಹೊರಡುವೆ-ಎಂದು, ಇಮಾಮ್ ಸಾಬಿ ಗಟ್ಟಿ ಮನಸ್ಸು ಮಾಡಿದ.
ಮೇಲ್ ಗಾಡಿ ಬಂದು, ಮುಂದಕ್ಕೆ ಸಾಗಿತು.
ಸದಾ ಚಲಿಸುತ್ತಿರುವ ಜನರು. ಹೆಂಗಸರು, ಗಂಡಸರು, ಮಕ್ಕಳು. ನ್ನಷ್ಟೇ ವಯಸಾದವರು ಕೂಡಾ. ತಾನು ಮಾತ್ರ ಒಮ್ಮೆಯೂರೈಲಿನಲ್ಲಿ ಪ್ರಯಾಣ ಮಾಡಿರಲಿಲ್ಲ. ಜೀವಮಾನವನ್ನೆಲ್ಲಾ ರೈಲುಮನೆಲ್ಲೇ ಸವೆದಿದ್ದರೂ ಗಾಡಿಯಲ್ಲಿ ಮಾತ್ರ ಒಮ್ಮೆಯೂ ಎಲ್ಲಿಗೂ ಎಲ್ಲಿಗೂಹೋಗಿರಲಿಲ್ಲ. [ ವಿಸ್ಮಯಗೊಳಿಸುವಂತಹ ತಥ್ಯ.] ಆದರೆ ತನ್ನಮಕ್ಕಳು__ಮೊದಲಿನ ಮೂವರು-ರೈಲು ಗಾಡಿಯಲ್ಲಿ ಕುಳಿತೇ ದೂರದ ರುಗಳಿಗೆ ಹೋಗಿಬಿಟ್ಟಿದ್ದರು, ತನ್ನ ಕಣ್ಣು ತಪ್ಪಿಸಿ. ಈಗ ಇದ್ದಕ್ಕಿದ್ದಂತೆ ವರು ಬಂದರೆ__! ಹಿರಿಯವನನ್ನು ಪರಿಚಯದವರೊಬ್ಬರು ಮುಂಬಯಿ ಯಲ್ಲಿ ಕಂಡಿದ್ದರಂತೆ. [ ತಂದೆಯಂತೆ ಹಮಾಲನೇ!] ನಾಲ್ವರುಮಕ್ಕಳಂತೆ. ಕೆಲವು ವರ್ಷಗಳೇ ಆಗಿದ್ದುವು ಆ ಮಾತಿಗೆ ಇಮಾಮ್ಸಾಬಿಯ ಆಯುಷ್ಯದಲ್ಲಿ ಅಂಚೆಯ ಮೂಲಕ ಒಂದೇ ಒಂದು ಕಾಗದ ಆತನಿಗೆ ಬಂದಿತ್ತು, ಮೂರನೆಯ ಮಗನಿಂದ. ಅಣ್ಣನೊಡನೆ ಪಾಕಿಸ್ತಾನಕ್ಕೆ ಹೋಗುವುದಾಗಿ ಬರೆದಿದ್ದ. ಅದೊಂದು ಹೊಸ ದೇಶ__ಪಾಕಿಸ್ತಾನ.ಚಾಕು ಕಲ್ಲು ಈಟಿಗಳ ಆ ಕತೆಯನ್ನು ಇಮಾಮ್ ಸಾಬಿ ಕೇಳಿ ತಿಳಿದಿದ್ದ, ವಲ್ಪ ಸ್ವಲ್ಪ··· ಇನ್ನು ನಾಲ್ಕನೆಯವನು. ಆ ಸರ್ಕಸ್ ತಾನು ಬದು ರುವಾಗಲೇ ಒಮ್ಮೆ ಮತ್ತೆ ಈ ಊರಿಗೆ ಬಂದರೆ . . . ಇಮಾಮ್ ಸಾಬಿಯ ಮಗ ಡೊಂಬರಾಟಕ್ಕೂ ಇಳಿದ. ಆಹಾ! . . .
ವೃದ್ಧ ನೀಳವಾಗಿ ಉಸಿರುಬಿಟ್ಟ, ಗೊತ್ತು ಗುರಿ ಇಲ್ಲದೆ ಅತ್ತಿತ್ತನಡೆದಾಡಿದ ಸಿಗ್ನಲ್ ಕಂಬದ ಈಚೆಗಿದ್ದ ನೀರಿನ ಟ್ಯಾಂಕಿನ ಬಳಿಸಾರಿ, ಅಲ್ಲೇ ಕೆಳಗೆ ದಿನ್ನೆಯ ಮೇಲೆ ಕುಳಿತ. ಸೂರ್ಯನ ತಾಪ ಕಡಮೆ ಗತೊಡಗಿತ್ತು. ಅಲ್ಲಿಂದ ಅವನಿಗೆ, ನೀಳವಾಗಿ ಮಲಗಿ ಹಸುರು ರಾಶಿ ಳಗೆಲ್ಲೋ ಮಾಯವಾಗಿದ್ದ ರೈಲು ಕಂಬಿಗಳು ಕಾಣಿಸುತ್ತಿದ್ದುವು.
ಮನೆಯ ನೆನಪು ಮತ್ತೆ ಮತ್ತೆ ಮುದುಕನನ್ನು ಬಾಧಿಸಿತು. " ಅಲ್ಲಾ! ಎಲ್ಲ ಸಸೂತ್ರವಾಗಿ ನಡೆಸ್ಕೊಡು” ಎಂದ ಆತ, ತುಸುಧ್ವನಿ ತೆಗೆದೇ ಅನನ್ಯ ಭಕ್ತಿಯಿಂದ, ಬಿಕ್ಕುತ್ತ ಪ್ರಾರ್ಥಿಸಿದ.
. . . ಲೋಕಲ್ ಬಂದು ಹೋಯಿತು.
. . . ಇನ್ನು ಉತ್ತರದಿಂದ ಬರುವ ಪ್ಯಾಸೆಂಜರ್.
. . . ಆಕಳು, ಮೇಕೆ, ಕುರಿಗಳು ಹಿಂಡು ಹಿ೦ಡಾಗಿ ಹಾದುಹೋದುವು.ಗೃಹಾಭಿಮುಖವಾಗಿ.
ಇಮಾಮ್ ಸಾಬಿ, ಸಿಗ್ನಲ್ ಕಂಬಿಯ ರುಂಯ್ ಸಪ್ಪಳ ಕೇಳಿಸಿದಂತಾಗಿ, ಎದ್ದ. ಪ್ರಯತ್ನಪೂರ್ವಕವಾಗಿ ಚುರುಕಾಗಿ ನಡೆಯುತ್ತ ನಿಲ್ದಾಣದತ್ತ ಬಂದ.
ಹೊರಗೆ, ಬೆಳಗ್ಗೆ ಕುಳಿತಿದ್ದಲ್ಲೇ ಒರಗುಬೆಂಚಿನ ಮೇಲೆ ಆಸೀನನಾದ.
ಒಂದು ಜಟಕಾ ಅವನ ಹತ್ತಿರದಿಂದಲೇ ಬಂತು. ಅದನ್ನು ಕಂಡೂ ಕಾಣದವನಂತಿದ್ದ ಇಮಾಮ್ ಸಾಬಿ. ಕೆಳಕ್ಕೆ ಇಳಿದವನು ಸಿಗರೇಟು ಸೇದುತಲಿದ್ದ ಯುವಕನೊಬ್ಬ. ತಾನು ಏಳದೆ ಕುಳಿತೇ ಇದ್ದುದನ್ನು ಕ೦ಡು ಆತ ಅಚ್ಚರಿಗೊಂಡಂತೆ ಇಮಾಮ್ ಸಾಬಿಗೆ ಭಾಸವಾಯಿತು. ಜಟಕಾದವನು ಕರೆದ :
" ಆವೋ ದಾದಾ ಮಿಯಾ."
ಹ್ಞಾ–ಹೋಗಬೇಕು ತಾನು.
ಒಂದು ಸೂಟ್ ಕೇಸು;ಒಂದು ಕಿಟ್.
"ಇಂಟರ್,ಸಾಬ್? "
ಯುವಕ ಅಬ್ಬರಿಸಿದ:
"ಸೆಕೆಂಡ್ ಕ್ಲಾಸ್! ಇಂಟರಂತೆ---"
ಇಮಾಮ್ ಸಾಬಿಯ ಮುಖ ಕೆಂಪೇರಿತು. ಇಂಟರ್ ತರಗತಿ ಇತ್ತೆಲ್ಲಿ ಗ? ಆದರೂ, ಮತ್ತೆ ಮತ್ತೆ ಹಳೆಯದಕ್ಕೇ ಅ೦ಟಿಕೊಳ್ಳುತ್ತಿತ್ತು, ಅವನ ನಸ್ಸು.
ಬೇರೆಯೂ ಕೆಲ ಪ್ರಯಾಣಿಕರಿದ್ದರು. ಆದರೆ ಇಮಾಮ್ ಸಾಬಿ ಅತ್ತ ನೋಡಲೂ ಇಲ್ಲ.
ಜುಕುಜುಕು ಧ್ವನಿ...
ನಿಲ್ಲುವುದೇ ಇಲ್ಲವೇನೋ ಎನ್ನುವಂತೆ ನೇರವಾಗಿ ಮುಂದಕ್ಕೋಡಿನಿಂತು ಬಿಡುವ ಗಾಡಿ.
ಎಲ್ಲಿತ್ತು ಸೆಂಕೆಂಡ್ ಕ್ಲಾಸ್?
"ಎಲ್ಲಯ್ಯಾ ಇದೆ?”
ಇಮಾಮ್ ಸಾಬಿಗೆ ಏನೂ ಕಾಣಿಸುತ್ತಿರಲಿಲ್ಲ.
ರೇಗುತ್ತ ಯುವಕನೇ ಅತ್ತ ಓಡಿದ, ಇತ್ತ ಓಡಿದ. ವಿನೀತನಾಗಿ ಅವನನ್ನು ಹಿಂಬಾಲಿಸಿದ, ವೃದ್ಧ.
"ಇಲ್ಲೇ ಒಳಗಿಡು! "
ಇನ್ನು ಎರಡಾಣೆಗೆ [ಎಷ್ಟು ನಯೇ ಪೈಸೆಗೋ?] ಕೈ ನೀಡಬೇಕು.
ನಾಣ್ಯ ನಾಲ್ಕಾಣೆಯ ತುಣುಕಿನಂತೆ ಕಂಡಿತು.
ಯುವಕನೆಂದ :
" ಮುದುಕನಾದೆ ನೀನು. ಹೋಗು!”
ಇಮಾಮ್ ಸಾಬಿಗೆ ಇದ್ದಕ್ಕಿದಂತೆ ಅಳು ಬಂತು. ಅದನ್ನಾತ ಕಷ್ಟ ಪಟ್ಟ ಅದುಮಿ ಹಿಡಿದು, ಗಾಡಿ ಚಲಿಸಿದಂತೆ ನಿಲ್ಮನೆಯಿಂದ ಹೊರಕ್ಕೆ ಲಿರಿಸಿದ.
ಇಳಿದವರನ್ನು ಹೊತ್ತುಕೊಂಡೋ ಬರಿದಾಗಿಯೋ ಜಟಕಾ ಗಾಡಿಗಳು ತೆರಳುತ್ತಿದ್ದುವು. ನಡೆದೇಹೋಗುತ್ತಿದ್ದರು ಹಲವರು. ಮತ್ತೊಮ್ಮೆಎಲ್ಲವೂ ಶಾಂತವಾಗತೊಡಗಿತ್ತು, ಸೂರ್ಯ ಗುಡ್ಡಗಳಾಚೆ, ಅವಿತಿದ್ದ.
ಮಬ್ಬು ಬೆಳಕು ಎಲ್ಲವನ್ನೂ ಆವರಿಸಿತು.
ಇಮಾಮ್ ಸಾಬಿಗೆ ಇದ್ದುದೊಂದೇ ಯೋಚನೆ-ಮನೆಗೆ ತಾನು ಗಬೇಕು, ನೇರವಾಗಿ, ಮಗುವಿಗೆ ಎಷ್ಟು ಸಂಕಟವಾಗುತ್ತಿದೆಯೋ ನೋ, ಪಾಪ !
ಎಷ್ಟು ಬೇಗನೆ ಹೆಜ್ಜೆ ಇರಿಸಿದರೂ ಮಾರ್ಗಕ್ರಮಣ ನಿಧಾನ ವಾಗಿಯೇ ಆಗುತ್ತಲಿತ್ತು, ಹೃದಯವೊಂದು ಭಾರಗೊಂಡು, ಅದರ ರಗೆ ದೇಹವೇ ಕುಸಿಯುವುದೇನೋ ಎನ್ನಿಸುತ್ತಿತ್ತು.
ಮೂರು ಫರ್ಲಾಂಗುಗಳ ದೂರ ಸಾಗಲು ಅದೆಷ್ಟು ಹೊತ್ತು ಡಿಯಿತೋ?
ಅದೇ ಮನೆ [ಗುಡಿಸಲು], ಯಾರು ಬರುತ್ತಿರುವವರು? ಕರೀಂ? ಏನಾಯ್ತು ?
ಓಡುತ್ತ ಬರುತ್ತಿದ್ದ ಹುಡುಗ.
ಆ_
" ಬಾಬಾ ! "
ಓ ದೇವರೆ–
"ಗಂಡು ಮಗು!"
" ಹ್ಹಾ!"
ಬವಳಿ ಬಂದಂತಾಯಿತು ಇಮಾಮ್ ಸಾಬಿಗೆ. ಪೂರ್ಣಚಂದ್ರನಂತೆ ಮುಖ ಅಗಲಗೊಂಡಿತು. ಕಣ್ಣುಗಳಿಂದ ಆನಂದಾಶ್ರು ಒಸರಿತು.
ಆತ ಕೈಯನ್ನು ಮುಂದಕ್ಕೆ ಚಾಚಿದ.
ಕರೀಂ ಅದನ್ನು ಹಿಡಿದುಕೊಂಡ.
ಏನನ್ನೋ ಹೇಳುತ್ತಲೇ ಇದ್ದ ಮಗ––
ಏನನ್ನೋ. ಹುಚ್ಚು ಸಂತಸದ ತೊದಲು ಮಾತಿನ ಹಾಗಿತ್ತು ಅದು.
ನಾಲ್ಕು ಹೆಜ್ಜೆ, ಮನೆ.
"ಅಮ್ಮಾಜಾನ್! ಬಾಬಾ ಬಂದ್ರು !"
ಶೇಖರಿಸಿ ಇಟ್ಟಿದ್ದ ಸಕ್ಕರೆಯಿಂದೊಂದು ಚಿಟಕಿ ತೆಗೆದು ಬೀಬಿ ಹೊರಕ್ಕೆ ಓಡಿಬಂದಳು.
ಇಮಾಮ್ ಸಾಬಿ ನಿಲ್ಲಲಾಗದೆ, ಗೋಡೆ ಹಿಡಿದು, ಕುಸಿದು ಕುಳಿತಿದ್ದ, ಬಾಗಿಲ ಚೌಕಟ್ಟಿಗೊರಗಿ.
ಬೀಬಿ ಸಕ್ಕರೆಯನ್ನು ಆತನ ಬಾಯಿಗೆ ಹಾಕಲೆಂದು ಬಾಗಿದಳು.
ಬಾಗಿದವಳೇ ಚೀರಿದಳು.
ಕೆಂಪು ರುಮಾಲು, ನೀಲಿ ಅಂಗಿ, ಕೊಳಕು ಧೋತರ,ಎಲ್ಲವೂ ಇದ್ದುವು. ತೆರೆದ ಜೇಬಿನಲ್ಲಿ ನಾಣ್ಯಗಳಿದ್ದುವು––ದಿನದ ಸಂಪಾದನೆ.
ಇಮಾಮ್ ಸಾಬಿ ಮಾತ್ರ ಇರಲಿಲ್ಲ.