ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
ಯುಗಾಂತರಗಳು
೧೩೭

ನಾಟಕದಲ್ಲಿ ಪಾತ್ರವಹಿಸುತ್ತಿದ್ದರು. ಈ ಪದ್ಧತಿಯು ಗ್ರೀಕರಲ್ಲಿ ಇರಲಿಲ್ಲ. ಗ್ರೀಕ್ ಮತ್ತು ಸಂಸ್ಕೃತ
ಗಳೆರಡರಲ್ಲೂ ಪ್ರಕೃತಿಯ ಸಾಮೀಪ್ಯದ ಅರಿವು ಇದೆ ಮತ್ತು ಮಾನವಜೀವನ ಪ್ರಕೃತಿಯ ಒಂದು
ಅಂಗ ಎಂಬ ಭಾವನೆ ಇದೆ. ಅವುಗಳಲ್ಲಿ ಒಂದು ವಿಶೇಷಭಾವನಾಶಕ್ತಿ ಇದೆ. ಅವುಗಳಲ್ಲಿ ಚಿತ್ರಿತವಾದ
ಜೀವನವು ಅರ್ಥಗರ್ಭಿತವೂ, ಅರ್ಥಪೂರ್ಣವೂ ಕಾವ್ಯಮಯವೂ ಇದ್ದಂತೆ ತೋರುತ್ತದೆ.
ಗ್ರೀಕ್ ನಾಟಕಗಳ ಮುಖ್ಯ ತಳಹದಿಯು ದುರಂತ, ಮತ್ತು ದೌರ್ಜನ್ಯದ ಪ್ರಶ್ನೆ. ಮನುಷ್ಯನು
ದುಃಖಪಡುವುದೇಕೆ? ಪ್ರಪಂಚದಲ್ಲಿ ಪಾಪ ಇರುವುದೇಕೆ? ಧರ್ಮ ಮತ್ತು ದೇವರ ರಹಸ್ಯವೇನು?
ಸರ್ವಶಕ್ತ ವಿಧಿಯ ಎದುರು ದಾರಿ ಕಾಣದೆ ಗುರಿಯಿಲ್ಲದೆ ಹೋರಾಡುವ ಕ್ಷಣಿಕ ಜೀವನದ ಮನುಷ್ಯನು
ಎಷ್ಟು ದಯಾಪಾತ್ರ ಪ್ರಾಣಿ. ವಿಧಿ ನಿಯಮವನ್ನು ಎಲ್ಲರೂ ಅನುಭವಿಸಲೇಬೇಕು. ಯುಗಯುಗಗಳು
ಕಳೆದರೂ ಆ ನಿಯಮದಿಂದ ಕೂದಲೆಳೆಯಷ್ಟೂ ಕದಲಲು ಸಾಧ್ಯವಿಲ್ಲ. ಕಷ್ಟ ಸಹಿಷ್ಣುತೆಯಿಂದ
ಮನುಷ್ಯನು ಪಾಠ ಕಲಿಯಬೇಕು. ಅದೃಷ್ಟವಿದ್ದರೆ ಕಷ್ಟದಿಂದ ಪಾರಾಗುತ್ತಾನೆ ಎನ್ನುವುದೇ
ಗ್ರೀಕ್ ನಾಟಕಗಳ ಶ್ರುತಿ.
ಏರಿಬಹ ಅಲೆಗಳಲಿ ಬಿರುಗಾಳಿ ಎದುರಿನಲಿ
ದೂರ ತೀರವ ಸೇರ್ದ ಮಾನವನೆ ಸುಖಿಯು;
ಹೋರಾಡಿ ಧೈರ್ಯದಲಿ ಸ್ವಾತಂತ್ರವನ್ನು ಗಳಿಸಿ
ವೀರನಹ ಮಾನವನೆ ಧನ್ಯಾತ್ಮ ಸುಖಿಯು;
ಅಣ್ಣ ತಮ್ಮದಿರಲ್ಲೆ ಭೇದ ತಾ ತೋರುತಿದೆ
ಧನಕನಕವಸ್ತುವಿನಲಿ ಶಕ್ತಿ ಧೈರ್ಯದಲಿ;
ಜೀವನದ ನಾಟಕದ ಕಲೆಯ ವೈಚಿತ್ರ್ಯವಿದು
ವಿಧಿ ಲಿಖಿತ ನಿಯಮವಿದ ಮೀರಿದವರಿಲ್ಲ
ತಿಳಿದವರು ಬಹಳಿಲ್ಲ ಕಾಲಗರ್ಭದಲಿ.
ಜನಕೋಟ, ಆಶೆಯಲಿ ತೇಲುತಿದೆ ಸಾಗುತಿದೆ
ಜಯವಕ್ಕು ಕೆಲಬರಿಗೆ ಸೋಲು ಅನಿಬರಿಗೆ
ಅಳಿವುದು ಆಶೆಯದು ಮೊಳೆತು ತಾ ಚಿಗುರುವುದು.(ಯುರಿಪಿಡೀಸನ 'ಬ್ಯಾಕಿ' ನಾಟಕದಿಂದ)
ಮನುಷ್ಯನು ಸಂಕಟದಲ್ಲಿ ನರಳಿ ಜೀವನವನ್ನು ಎದುರಿಸುವ ಶಕ್ತಿಯನ್ನು ಪಡೆಯುತ್ತಾನೆ. ಆದರೆ
ಯಾರೂ ಬಿಡಿಸಲಾರದ ಅಂತಿಮ ಸಮಸ್ಯೆಯೊಂದಿದೆ; ತನ್ನ ಪ್ರಶ್ನೆಗಳಿಗೆಲ್ಲ ಉತ್ತರ ದೊರೆಯುವುದಿಲ್ಲ.
ಪಾಪ ಪುಣ್ಯದ ಪ್ರಶ್ನೆಯನ್ನು ಬಿಡಿಸಲು ಸಾಧ್ಯವಿಲ್ಲ ಎಂದೂ ಅರಿಯುತ್ತಾನೆ.
ಒಗಟುಗಳೆಷ್ಟೋ ಇರಬಹುದು
ನಿರಾಶೆ ಭಯ ಕವಿದಿರಬಹುದು
ದೇವಸೃಷ್ಟಿಗದು ಮಿತಿಯಿಲ್ಲ
ಮಾನವನೆಣಿಸುವ ದಾರಿಯು ಬೇರೆ
ದೈವ ನಿಯಾಮಕ ದಾರಿಯೇ ಬೇರೆ.(ಯುರಿಪಿಡೀಸನ್ 'ಆಲ್ಸೆಸ್ಟಿಸ್' ನಾಟಕದಿಂದ)
ಗ್ರೀಕ್ ದುರಂತ ನಾಟಕಗಳಲ್ಲಿ ಕಂಡುಬರುವ ಶಕ್ತಿ ಮತ್ತು ಗಾಂಭೀರ್ಯವುಳ್ಳ ನಾಟಕಗಳು ಸಂಸ್ಕೃತ
ದಲ್ಲಿ ಯಾವುದೂ ಇಲ್ಲ. ನಿಜವಾಗಿ ನೋಡಿದರೆ ಸಂಸ್ಕೃತದಲ್ಲಿ ದುರಂತ ನಾಟಕಗಳೇ ಇಲ್ಲ. ಅದಕ್ಕೆ
ಕಾರಣ ನಾಟಕ ದುರಂತದಲ್ಲಿ ಕೊನೆಗಾಣಕೂಡದೆಂದು ನಿಷೇಧವಿತ್ತು. ಜನಸಾಮಾನ್ಯದಲ್ಲಿ
ಬೇರೂರಿದ್ದ ಮತ ಧರ್ಮಗಳನ್ನು ನಾಟಕ ಕರ್ತರು ಒಪ್ಪಿದ್ದರಿಂದ ಅಂತಹ ಮೂಲ ಪ್ರಶ್ನೆಗಳನ್ನು
ನಾಟಕಗಳಲ್ಲಿ ಚರ್ಚಿಸಲು ಅವಕಾಶವೇ ಇರಲಿಲ್ಲ. ಈ ಮತಧರ್ಮದಲ್ಲಿ ಪುನರ್ಜನ್ಮ ಮತ್ತು ಕರ್ಮ
ಫಲ ತತ್ವಗಳು ಮುಖ್ಯವಾದವು. ಆಕಸ್ಮಿಕವಾದ ಅಥವ ಕರ್ಮ ಫಲವಲ್ಲದ ದುಃಖಕ್ಕೆ ಅವಕಾಶವೇ
ಇರಲಿಲ್ಲ. ಏಕೆಂದರೆ ಇಂದಿನ ಜನ್ಮದಲ್ಲಿ ಅನುಭವಿಸುವುದೆಲ್ಲ ಹಿಂದಿನ ಜನ್ಮದ ಕರ್ಮಫಲ. ಗುರಿ