________________
ಭಾರತ ದರ್ಶನ ಬೇಕಾಯಿತು. ಆದರೆ ಇದು ದೇಶಾದ್ಯಂತ ಬಹುಸಂಖ್ಯಾತರ ಮನಸ್ಸಿನಲ್ಲಿ ಸಾಮಾನ್ಯವಾಗಿ ಮೂಡಿದ್ದ ರಾಷ್ಟ್ರೀಯ ಭಾವನೆಯಾಗಿರಲಿಲ್ಲ. ಇನ್ನೂ ಪಾಳೆಯಗಾರಿಕೆಯ ಹಿನ್ನೆಲೆಯು ಇತ್ತು. ಸ್ಥಳದ ನಾಯಕನ ಸುತ್ತಲೂ ಜನರು ನೆರೆಯುತ್ತಿದ್ದರು. ಸೇನಾಪತಿಗಳ ಒಳಯುದ್ಧದ ಕಾಲದಲ್ಲಿ ಚೀನಾದಲ್ಲಿದ್ದಂತೆ ಇಲ್ಲಿಯೂ ದೇಶದಲ್ಲಿ ಕೋಭೆಯುಂಟಾದ ಕಾರಣ ಯಾರು ಸರಿಯಾಗಿ ಸಂಬಳ ಕೊಡುತ್ತಿದ್ದರೋ ಅಥವ ಕೊಳ್ಳೆ ಹೊಡೆಯಲು ಹೆಚ್ಚು ಅವಕಾಶಕೊಡುತ್ತಿದ್ದರೋ ಆ ಸೇನಾಪತಿಯ ಕೆಳಗೆ ಜನರು ಕೆಲಸಕ್ಕೆ ಸೇರಬೇಕಾಗಿ ಬಂದಿತು. ಈಸ್ಟ್ ಇಂಡಿಯ ಕಂಪನಿಯ ಸೈನ್ಯದಲ್ಲಿ ಭಾರ ತೀಯ ಸೈನಿಕರೇ ಹೆಚ್ಚು ಜನರು ಇದ್ದರು. ಮರಾಠರಲ್ಲಿ ಮಾತ್ರ ಸೇನಾಪತಿಯ ವ್ಯಕ್ತಿತ್ವದ ಸ್ವಾಮಿ ನಿಷ್ಠೆಗಿಂತ ಹೆಚ್ಚಾದ ಒಂದು ರಾಷ್ಟ್ರೀಯ ಭಾವನೆಯು ಇತ್ತು. ಆದರೆ ಅದೂ ಸಂಕುಚಿತವಿತ್ತು ಮತ್ತು ಅದಕ್ಕೂ ಒಂದು ಮಿತಿ ಇತ್ತು. ಅವರು ಶೂರರಾದ ರಾಜಪುತ್ರರಿಗೆ ಕಿರುಕುಳ ಕೊಟ್ಟು ವೃಥಾ ಅವರನ್ನು ರೇಗಿಸಿದರು. ಅವರನ್ನು ಒಲಿಸಿಕೊಂಡು ಮಿತ್ರರನ್ನಾಗಿ ಮಾಡಿಕೊಳ್ಳದೆ ಶತ್ರುಗಳನ್ನಾಗಿ ಅಥವ ಅಸಮಾಧಾನ ಮತ್ತು ಅತೃಪ್ತಿಗೊಂಡ ಅಧೀನರನ್ನಾಗಿ ಮಾಡಿ ಅವರೊಡನೆ ಹೋರಾಡಬೇಕಾ ಯಿತು. ಮರಾಠ ಸೇನಾಪತಿಗಳಲ್ಲಿ ಪರಸ್ಪರ ಸ್ವಾರ್ಥಬೆಳೆಯಿತು : ಹೆಸರಿಗೆ ಪೇಳ್ವೆಯ ನಾಯಕತ್ವ ವಿದ್ದರೂ ಆಗಾಗ್ಗೆ ಅಂತರ್ಯುದ್ದಗಳಾಗುತ್ತಿದ್ದವು. ಸಂದಿಗ್ಧ ಸಮಯಗಳಲ್ಲಿ ಪರಸ್ಪರ ಸಹಾಯ ವಾಗದೆ ಕೊನೆಯಲ್ಲಿ ಒಬ್ಬೊಬ್ಬರಾಗಿ ಸೋತುಹೋದರು. ಆದರೂ ಮರಾಠರಲ್ಲಿ ಕೆಲವು ಮಹಾವ್ಯಕ್ತಿಗಳು, ರಾಜಕಾರಣ ಪಟುಗಳು, ಮಹಾಸೇನಾನಿಗಳು ಹುಟ್ಟಿದರು. ನಾನಾಫಡ್ಡ ವೀಸ್, ಮೊದಲನೆಯ ಬಾಜಿರಾವ್ ಪೇಷ್ಟ, ಗ್ವಾಲಿಯರ್ನ ಮಹಾರಾಜ ಸಿಂಧ್ಯ, ಇಂದೂರಿನ ಯಶವಂತರಾವ್ ಹೋಲ್ಕರ್ ಮತ್ತು ಇಂದೂರಿನ ಅದ್ಭುತ ವ್ಯಕ್ತಿಯಾದ ಅಹಲ್ಯಾಬಾಯಿ ಅವರಲ್ಲಿ ಪ್ರಮುಖರು. ಅವರ ಸೈನಿಕರ ಶಿಸ್ತೂ, ಕಾರ್ಯನಿಷ್ಠ ಯೂ ಅದ್ಭುತವಿತ್ತು. ಪ್ರಾಣಕೊಡಬೇಕಾಗಿ ಬಂದರೂ ತಮ್ಮ ಸ್ಥಳದಿಂದ ಕದಲುತ್ತಿರಲಿಲ್ಲ. ಆದರೂ ಈ ಎಲ್ಲ ಧೈರ್ಯದ ಹಿಂದೆ ಯುದ್ದ ಸಮಯದಲ್ಲಾಗಲಿ, ಶಾಂತಿ ಸಮಯದಲ್ಲಾಗಲಿ ಒಂದು ಬಗೆಯ ಅಲಕ್ಷವೂ, ಅಪಕ್ವವೂ ಆದ ಮನೋಭಾವವಿದ್ದುದು ಆಶ್ಚರ್ಯಕರವಿದೆ. ಅವರ ಪ್ರಪಂಚಜ್ಞಾನವು ಅತ್ಯಲ್ಪವಿತ್ತು; ಅವರ ಭಾರತದ ಭೌಗೋಲಿಕ ಜ್ಞಾನಕ್ಕೂ ಮಿತಿ ಇತ್ತು. ಬೇರೆ ಕಡೆ ಏನೇನು ಆಗುತ್ತಿದೆ, ತಮ್ಮ ಶತ್ರುಗಳು ಏನು ಮಾಡುತ್ತಿದ್ದಾರೆ ಎಂಬ ಆಸಕ್ತಿಯೇ ಇಲ್ಲದಿದ್ದುದು ಒಂದು ದೊಡ್ಡ ಕೊರತೆಯಾ ಯಿತು. ಈ ಸಂಕುಚಿತ ಪರಿಮಿತಿಯಲ್ಲಿ ದೂರದೃಷ್ಟಿಯ ರಾಜಕಾರಣ ನೈಪುಣ್ಯವಾಗಲಿ, ಯುದ್ದ ನೈಪುಣ್ಯವಾಗಲಿ ಸಾಧ್ಯವಿರಲಿಲ್ಲ. ಅವರ ಸೈನ್ಯದ ಚಲನ ಶಕ್ತಿ ಮತ್ತು ವೇಗವು ಶತ್ರುಗಳನ್ನು ಸ್ತಂಭ ತರನ್ನಾಗಿ ಮಾಡಿ ನಿಕ್ಷೇತನರನ್ನಾಗಿ ಮಾಡುತ್ತಿದ್ದವು. ಆದರೆ ಯುದ್ದವೆಂದರೆ ಈ ರೀತಿ ಕೆಲವು ಬಾರಿ ಧೈರ್ಯದಿಂದ ಮುನ್ನುಗ್ಗುವುದು ಮಾತ್ರ ಎಂದು ಭಾವಿಸಿದ್ದರು. ಅವರು ಉತ್ತಮ ಗೆರಿಲ್ಲ ಯೋಧರಾಗಿದ್ದರು. ಕೊನೆಕೊನೆಗೆ ಸಂಪ್ರದಾಯ ರೀತಿಯಲ್ಲಿ ತಮ್ಮ ಸೈನ್ಯವನ್ನು ಕಟ್ಟಿದರು, ಆದರೆ ಆಯುಧ ಶಕ್ತಿ ಹೆಚ್ಚಿದಂತೆ ಚಲನ ವೇಗವೂ ಚಾಕಚಕ್ಯತೆಯೂ ಕಡಮೆಯಾದವು ; ಹೊಸ ಸನ್ನಿ ವೇಶಗಳಿಗೆ ಹೊಂದಿಕೊಳ್ಳಲು ಸಾಧ್ಯವಾಗಲಿಲ್ಲ, ತಾವು ಬಹಳ ಬುದ್ದಿವಂತರೆಂಬ ಹೆಮ್ಮೆಯ ಭಾವನೆ ಇತ್ತು. ಬುದ್ದಿವಂತರೇನೋ ನಿಜ. ಆದರೆ ಯುದ್ದದಲ್ಲಾಗಲಿ, ಶಾಂತಿ ಸಮಯದಲ್ಲಾಗಲಿ ಅವರನ್ನು ಮಾರಿಸುವುದು ಕಷ್ಟವಿರಲಿಲ್ಲ. ಏಕೆಂದರೆ ಅವರ ಮನೋಭಾವನೆಯು ಒಂದು ಹಳೆಯ ಜೀರ್ಣವಾದ ಚೌಕಟ್ಟಿನೊಳಗೆ ಸಂಕುಚಿತವಾಗಿತ್ತು; ಆದನ್ನು ವಿರಿಬರಲು ಅವರಿಗೆ ಸಾಧ್ಯವಾಗಲಿಲ್ಲ, - ವಿದೇಶೀಯರಿಂದ ಶಿಕ್ಷಣ ಪಡೆದ ಸೈನ್ಯದ ಶಿಸ್ತು ಮತ್ತು ಯುದ್ಧ ನೈಪುಣ್ಯತೆಯ ಶ್ರೇಷ್ಠತೆಯನ್ನು ಭಾರತೀಯ ರಾಜರುಗಳು ಬಹಳಮುಂಚೆಯೇ ತಿಳಿದುಕೊಂಡರು. ಸೈನ್ಯದ ಶಿಕ್ಷಣಕ್ಕಾಗಿ ಫ್ರೆಂಚ್ ಮತ್ತು ಇಂಗ್ಲಿಷ್ ಅಧಿಕಾರಿಗಳನ್ನು ನೇಮಿಸಿದರು; ಅವರಲ್ಲಿನ ಪರಸ್ಪರ ವೈಷಮ್ಯದಿಂದ ಭಾರತದ ಸೈನ್ಯಬಲವು ಬೆಳೆಯಿತು. ಹೈದರಾಲಿ ಮತ್ತು ಟೀಪೂ ಇಬ್ಬರಿಗೂ ನಾವಿಕಾಬಲದ ಪ್ರಾಮುಖ್ಯತೆಯು ತಿಳಿದಿತ್ತು. ಇಂಗ್ಲೀಷರನ್ನು ಸಮುದ್ರದಲ್ಲಿ ಎದುರಿಸಲು ಅವರಿಬ್ಬರೂ ನಾವೆಯನ್ನು ಕಟ್ಟಬೇಕೆಂದು