ವಿಷಯಕ್ಕೆ ಹೋಗು

ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಸ್ಕೃತಕಏಚರಿತ [ಕ್ರಿಸ್ತ ಕಾಲೀನರು, ಎಂದರೆ ಕ್ರಿ. ಶ. ೧೧ನೆಯ ಶತಮಾನಾಂತ್ಯದವರು, ವೇದಾಂತದೇಶಿ ಕನು ೧೩ನೆಯ ಶತಮಾನ ಮತ್ತು ೧೪ನೆಯ ಶತಮಾನಾಂತ್ಯದಲ್ಲಿದ್ದವನಾದುದರಿಂದ ಪರಸ್ಪರ ಸಂಬಂಧವಿರದು. (೩) ಅಕ್ಟೋಭ್ಯತೀರ್ಥರವಾದ:- ವಿಜಯನಗರದಲ್ಲಿ ತತ್ವವಾದಿಗಳಾದ ಆಕ್ಷೇಭ್ಯತೀರ್ಥರಿಗೂ ಮಾಯಾವಾ ದಿಗಳಾದ ವಿದ್ಯಾರಣ್ಯರಿಗೂ ವೇದಾಂತವಿಚಾರದಲ್ಲಿ ಚರ್ಚೆಹುಟ್ಟಿ ಇವರಿವ್ವರ ಅಭಿ ಪ್ರಾಯಗಳನ್ನು ರಾಜಪತ್ರಿಕೆಯಮೂಲಕ ವಿಮರ್ಶೆಗಾಗಿ ವೇದಾಂತದೇಶಿಕರಬಳಿಗೆ ಕಳುಹಿಸಿಕೊಡಲು ಅವರು ಪ್ರತ್ಯುತ್ತರವಾಗಿ:- (1 ಅಸಿನಾತನಸಿನು ಪರಜೀವಪ್ರಭೇ ದಿನಾ ವಿದ್ಯಾರಣ್ಯ ಮಹಾರಣ್ಯ ಮ ಧ್ಯ ಮುನಿರಚ್ಛನತ್ || ಎಂದು ಬರೆದು ಕಳುಹಿಸಿದುದಾಗಿಯೂ, ಇದನ್ನು ನೋಡಿ ವಿದ್ಯಾರಣ್ಯರು ಖತಿಗೊಂಡು ವೆಂಕಟನಾಥನು ಬರೆದುದಾದ “ಶತದೂಷಣಿ” ಎಂಬಗ್ರಂಥವನು ನಿರಸನಮಾಡುವುದಾಗಿ ಹೇಳಿ ಕಳುಹಿಸಲು, ಅದರಂತೆ ಕಳುಹಿಸಿ ಕೊಟ್ಟ ಶತದೂಷಣೀ ಗ್ರಂಥವನ್ನು ಆಮೂಲಾಗ್ರವಾಗಿನೋಡಿ ದೋಷಗಳಾವುವೂ ದೊರೆ ಯದೆ ಅಲ್ಲಿ ದೊರೆತ (ಚ” ಕಾರವಿಚಾರವಾಗಿ ಖಂಡನೆಯನ್ನು ಮಾಡಲು, ವೆಂಕಟ ನಾಥನು ಅದನ್ನು ನೋಡಿ (ಚಕಾರಸಮರ್ಥನ"ಎಂಬ ಗ್ರಂಥವನ್ನು ಬರೆದು ಕಳುಹಿಸಿ ದುದನ್ನು ನೋಡಿ, ವಿದ್ಯಾರಣ್ಯರು ಪರಾಜಯವನೊಪ್ಪಿಕೊಂಡುದಾಗಿ ಗುರುಪರಂ ಪರಾಪಭಾವವು ಹೇಳುತ್ತದೆ. ಇದು ನಮಗೆಸಮಂಜಸವೆನಿಸುವುದಿಲ್ಲ. ವಿಜಯ ನಗರದ ರಾಜನಾರೆಂಬುದಾಗಲಿ, ರಾಜಸಮ್ಮುಖದಲ್ಲಿ ಇವರಿಶ್ವರೂಕಲೆತು ನಾದ ಮಾಡಿದ ವಿಚಾರವೇನೆಂಬುದಾಗಲಿ, ಕರೆಯಿಸಿಕೊಂಡಕಾರಣವಾಗಲಿ ಯಾವುದೂ ತಿಳಿಯಬರುವಂತಿಲ್ಲ. ಮೇಲಣ ಶ್ಲೋಕವನ್ನು ಅಕ್ಟೋಭ್ಯತೀರ್ಥರ ಅನುಯಾಯಿ ಗಳು ಹೇಳುವರು. ವಿದ್ಯಾರಣ್ಯರ ಅನುಯಾಯಿಗಳು:- ಅಕ್ಟೋಭ೦ಕ್ಕೂಭಯಾಮಾಸ ವಿದ್ಯಾರಣೆ ಮಹಾಗುರುಃ || ಎಂದು ಹೇಳುವರು. ಇದರಲ್ಲಿ ನಿಜವಾವುದೆಂಬುದು ತಿಳಿಯುವುದಿಲ್ಲ, ವೆಂಕಟನಾಶಕೃತ ಗ್ರಂಥಗಳಲ್ಲಿ ಹೇಳಿರುವಂತೆ ಎಲ್ಲಿಯೂ ಕಂಡುಬರುವುದಿಲ್ಲ. ಈ ವಿಚಾರವಾಗಿ ನಿಜಾಂಶವನ್ನು ಸೂಚಿಸುವ ಚರಿತ್ರಾಧಾರಗಳು ದೊರೆಯವು. ಇನ್ನು ಅಕ್ಷೇಭ್ಯತೀರ್ಥರ ಕಾಲವಾವುದೆಂಬುದನ್ನು ಹೇಳಬೇಕಾಗಿರುವುದು, - ಶ್ರೀಮಧ್ವಾಚಾದ್ಯರಿಗೆ ಪದ್ಮನಾಭತೀರ್ಥ, ನರಹರಿತೀರ್ಥ, ಮಾಧವತೀರ್ಥ, ಅಕ್ಟೋಭ್ಯತೀರ್ಥರೆಂಬ ನಾಲ್ಕು ಜನಶಿಷ್ಯರಿದ್ದರೆಂದೂ ಇವರೆಲ್ಲರೂ ಆಚಾರರಿಂದಲೇ