ಮೂರೋ,......ಹನ್ನೆರಡೋ."ಎಂದವರೇ ಮುಂದಕ್ಕೆ ಸಾಗಿದರು. ಮಾರ್ಕೆಟು ರೋಡಿನೊಳಗೆ ದೊಡ್ಡ ದೊಡ್ಡ ಗೋಡೆಗಳಿಗಂಟಿಸಿದ ಬಗೆ ಬಗೆಯ ಜಾಹೇರಾತುಗಳನ್ನು ಓದುವದು, ಬರದಿದ್ದರೆ ಓದಲೆತ್ನಿಸು- ವದು, ಆದೂ ಆಗದಿದ್ದರೆ ಕಡೆಗೆ ಸಿನೇಮಾದ ಚಿತ್ರಗಳನ್ನು ಸ್ವಲ್ಪ- ಸ್ವಲ್ಪ ನೋಡಿಕೊಳ್ಳುತ್ತ ಮುಂದೆ ನಡೆಯುವದು, ಹೀಗೆಯೇ? ಸಾಗಿದರು.ಉಡಪೀ ಬ್ರಾಹ್ಮಣರ ಚಹಾದ ಅಂಗಡಿಯೊಂದರ ಎದುರಿಗೆ ಬಂದರು. ಕೃಷ್ಟಿಯು:
“ ಏ ಸ್ವಲ್ಪು ನಿಂದರ್ರೇ,ಫೊನೋಗ್ರಾಸ ಹಚ್ಯಾರ, ಸದಾ ಏನ ಇಂಪಾಗೇದ, ಕೇಳೋಣಾ? " ಎರಡು ನಿಮಿಷ ನಿಂತರು. ಅಷ್ಟರಲ್ಲಿ ಶಾಂತೆಯು, "ಅಲ್ಲೆ ನೋಡು ಮಧುಮತೀ, ಈ ಕೃಷ್ಟೀ ಮಾತ ಕೇಳಿ ನಾವೆಲ್ಲಾ ಸದಾ ಕೇಳ್ಳಿಕ್ಕೆ ನಿಂತ್ವೀ ಖರೇ, ಆದರ ಒಳಗಿಂದ ಯಾರೋ ಇಬ್ರು, ನಮ್ಮಕಡೇ ನೋಡಕೋತ ನೋಡಕೋತ ಏನೇನರ ಮಾತಾಡಕೊಳೊಕ್ಹತ್ಯಾರ ನೋಡು."
ಆಗ ಮಧುಮತಿಯು “ ಹೌದವ್ವಾ, ನಾವು ಹಾಡ ಕೇಳಿದ್ವೆಂತ ಅಂಗಡೀಯವರಿಗೆ ಗೊತ್ತಾತ ಕಾಣಸ್ತದ, ನಮಗೆ ರೊಕ್ಕಾ ಕೇಳಬೇಕಂತ ಸಿಟ್ಲೇ: ನೊಡ್ಲಿಕ್ಹತ್ಯಾರ ನಮ್ಮ ಕಡೇ."
ಶಾಂತಿ "ಹೌದೇ? ಕೃಷ್ಟೀ, ನಾವೇನ ಗಂಡಸರ್ಹಾಂಗ ರೊಕ್ಕಾ ಕೊಟ್ಟು, ಚಹಾ ಕುಡೀಲಿಕ್ಕೆ ಬಂ ದಾ ವ್ರ, ನಡೀರಿ ಹೋಗೋಣಾ ?” ಎಂದಳು.
ಸ್ವಲ್ಪ ಮುಂದಕ್ಕೆ ಹೋಗುವಷ್ಟರಲ್ಲಿ, ಪೋಲೀಸ ಚೌಕಿಯ ಎದುರಿಗೊಂದು ಭರಮಪ್ಪ ದೇವರ ಕಲ್ಲನ್ನು ಕಂಡರು ಶಾಂತಿಯೆಂದಳು:
“ಏ ಕೃಷ್ಟೀ, ಹ್ಯಾಂಗೂ ಇಲ್ಲೀತನಕಾ ಬಂದೇವಿ, ಪರೀಕ್ಷಾದ ಫಲಾ ಕಟ್ಟೋಣ ಬರ್ರೇ?"
ಮಧುಮತಿಯ ಕಿಸೆಯಲ್ಲೊಂದು ದುಡ್ಡು ಇತ್ತು. ಎದುರಿಗಿದ್ದ ಮಿಠಾಯಿಗಾರನಲ್ಲಿ ಚುರಮರಿಯನ್ನು ಕೊಂಡರು. ಪ್ರತಿಯೊಬ್ಬಳ್ಳೂ