ವಿಷಯಕ್ಕೆ ಹೋಗು

ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೦
ಹೂಬಿಸಿಲು

ಒಂದಾರು ತಿಂಗಳೊಪ್ಪತ್ತಿನಲ್ಲಿಯೆ ಅವಳು ಎಲ್ಲರ ಪ್ರೀತಿಗೆ ಪಾತ್ರಳಾಗಿದ್ದಾಳೆ; ಅವಳೀಗ ಸಂಪೂರ್ಣ ಸ್ವತಂತ್ರಳು.

ಇತ್ತ ಶಂಕರನ ಮದುವೆ ಒಬ್ಬ ಸುಶಿಕ್ಷಿತೆಯೊಡನೆ ಆಗಿಹೋಯಿತು.

ಅವನ ಮದುವೆಗೆ ಲೀಲೆಯು ತನ್ನ ಪತಿಯೊಡನೆ ಬಂದಿದ್ದವಳು ಎರಡು ತಿಂಗಳು ಅಲ್ಲಿಯೇ ಇದ್ದು ಊರಿಗೆ ತೆರಳಿದಳು. ಮುಂದೆ ಮಾತ್ರ, ಪ್ರತಿ ತಿಂಗಳಲ್ಲಿಯೂ ಒಂದು ದಿವಸ ಮಾತ್ರ ಧಾರವಾಡಕ್ಕೆ ಬಂದು ಶಂಕರನಾಮಾನಲ್ಲಿ ಅತ್ಯಾನಂದದಿಂದಿದ್ದು ಹೋಗುವಳು. ಶಂಕರನ ನಗೆಮುಖ ನೋಡಿ ಹಿರಿಹಿರಿ ಹಿಗ್ಗು ವಳು. ಅವಳ ಪತಿಯ ಇದಕ್ಕೆ ಎಂದಿಗೂ ಅಡ್ಡವಾಗಿ ಬರಲಿಲ್ಲ. ದೇವರ ಮೇಲಿನ ಹೂವು ತಪ್ಪೀತು, ಅವಳ ಈ ಪರಿಪಾಠವೆಂದಿಗೂ ತಪ್ಪಲಿಲ್ಲ.