ಪುಟ:ಕವಿಯ ಸೋಲು.pdf/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕವಿಯ ಸೋಲು

ಬೆಳಗಿದೊಡೆ ಸಾಲದೇಂ ? ನೀನಿಂದು ಬಾರಮ್ಮ !
ನಿನ್ನ ಸುಗುಣದ ಸಿರಿಯ, ನಿನ್ನ ಘನತರ ವಿಧಿಯ
ಈ ಹೆಂಗಳಿಗೆ ತೋರಿ ಗುಣವಂತೆಯೆನಿಸಮ್ಮ.
ಅವರಲ್ಪ ಸಂಸಾರವಂ ದುಃಖಸಾಗರವ
ನಿನ್ನೊಲುಮೆಯಂ ಬೀರಿ ಸುಖಜಲಧಿ ಮಾಡಮ್ಮ !
ಕಣ್ಣೀರ ಕೋಡಿಗಳು ಚಿಂತಾಗ್ನಿ ನಂದಿಲ್ಲ
ಕಲಿತ ವಿದ್ಯೆಗಳಿಂದ ಅಜ್ಞಾನವಳಿದಿಲ್ಲ
ಲೋಕವಾಳಿದೊಡೇನು ಆಳಾಗಲೊಪ್ಪುವರು
ಶಾಂತಿ ದೊರೆತೊಡೆ ಸಾಕು, ಏನಾದತಾಗುವರು ;
ಆಳಲ್ಲ ಅರಸಲ್ಲ ಏನುಮಂ ಸೈರಿಸರು
ಪತಿಯ ಬಾಳ್ಳೆಯ ಲತೆಗೆ ವಿಷವಾಗಿ ಹರಿಯುವರು
ಅವರ ಹರುಷದ ಗುಡಿಗೆ ಸಿಡಿಲಾಗಿ ಎರಗುವರು
ಈ ಹೆಂಗಳನು ಕೋಟಿ ಕೌಂಡಿನ್ಯನರಿದವರೆ
ಬ್ರಹ್ಮಂಗೆ ರುದ್ರಂಗೆ ವಿಷ್ಣುವಿಂಗಳವಲ್ಲ!
ವಿಪರೀತೆಯಾದೊಡಂ ಗುಣವಂತೆ ನೀನಮ್ಮ
ಚಂಡಿಯೆನಿಸಿರ್ದೊಡಂ ಹದಿಬದೆಯು ನೀನಮ್ಮ
ವೇದಜಡ ಛಾಂದಸಂ ಸುಖಿಸಿದ ದೂರಿದಂ
ಅರೆಯಾಗಿ ಹೋಗೆಂದು ನೆವಮಿಲ್ಲದುಸುರಿದಂ
ಲೋಕ ನಿನ್ನನು ಹಳಿದು ಮರುಗುವುದು ತಾಪಸಗೆ
ಲೋಕಮತವನು ನಚ್ಚಿ ನಡೆಯೆಂದು ನುಡಿಯುವರು
ಎಂತು ನಚ್ಚುವುದೆಂತು ಮೆಚ್ಚುವುದು ವಿಪರೀತ
ಲೋಕಮಂ, ಎಂತು ನಡೆಯುವುದು ನಾನರಿಯೆನಮ್ಮ.


೬೮