ವಿಷಯಕ್ಕೆ ಹೋಗು

ಪುಟ:ತೊಳೆದ ಮುತ್ತು.pdf/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಪೂರ್ಣ-ಕಥಗಳು ಹೋದರೂ ಮಾನ್ಯನೇ ಆಗುವಿ. ನಿನ್ನ ವಿಷಯವಾಗಿ ನಮಗೆ ಆಲೋಚನವಿಲ್ಲ, ವೃದ್ಧಾಪ್ಯದಲ್ಲಿ ನೀನಿಲ್ಲದೆ ನಮ್ಮ ಗತಿಯೇನಾಗುವದೊ ಕಾಣೆವು ತಿಳಿದ ವನೇ ಇರುವಿ ಹೆಚ್ಚಿಗೇನು ಹೇಳೋಣ? ” ಎಂದು ನುಡಿದು ವರ್ಚಸ್ವಿಗಳಾದ ಆ ಪಂಡಿತರು ಮತ್ತೆ ಕಣ್ಣಿಗೆ ನೀರು ತಂದರು, ತೀರ್ಥರೂಪರ ನಿಃಸೀಮವಾದ ವಾತ್ಸಲ್ಯವನ್ನು ಕಂಡು ಪ್ರದ್ಯುಮ್ಮ ನ ಅಂತಃಕರಣವಾದರೂ ಉಕ್ಕೇರಿ ಬಂದಿತು. *ರವು ಬಿಗಿದದ್ದರಿಂದ ಅವನ ಬಾಯಿಯಿಂದ ಮಾತುಗಳೇ ಹೊಘಚಲೊಲ್ಲವು, ಪಳಪಳನೆ ಉದುರುತ್ತಿರುವ ಕಣ್ಣೀರಿನ ದೊಡ್ಡ ದೊಡ್ಡ ಹನಿಗಳೇ ಅವನ ಉತ್ತರಗಳಾದವು

  • ಪ್ರದ್ಯುಮ್ಮ, ಯೋಚಿಸಬೇಡ ನಾವು ಸಂತೋಷದಿಂದ ನಿನಗೆ

ಸಂಚಾರಕ್ಕೆ ಹೋಗಲು ಅಪ್ಪಣೆ ಕೊಡುತ್ತೇವೆ. ಸದ್ಯಕ್ಕೆ ವಷ೯ರುತಿಂಗಳ ನೀ ನು ಯಥಾ ಸುಖವಾಗಿ ತಿರುಗಾಡಿ ಬರುವದೇ ವಿಹಿತವು ಕೂ{h ಭಾ ಎಂದು ಹೇಳಿ ತಂದೆಯವರು ಮಗನನ್ನು ಹರಿಸಿದರು, ಈ ಪ್ರದ್ಯುಮ್ಮ ವಂಡಿ, ಮುಂಬಯಿ ಪ್ರೊಫೆಸರ್ ಎಸ್‌ಯಿಟನ್ ಮಂಟ ಸಾಹೇಬರು ನಿಮ್ಮ ವಿಷಯವಾಗಿ ಒಳ್ಳೆ ಗೌರವದ ಅಭಿಪ್ರಾಯ ವನ್ನು ತಳೆದದ್ದು ಆಶ್ಚರ್ಯವಲ್ಲ, ನೀವು ನನ್ನ ಬಳಿಯಲ್ಲಿ ಅರ್ಧಶಾಸ್ತ್ರವನ್ನು ಕಲಿಯಲಾರಂಭಿಸಿ ನಕ್ಕೇ ತಿಂಗಳುಗಳಾಗಿದ್ದರೂ ರೂ ಒಮ್ಮೊಮ್ಮೆ ನೀವು ಮಾಡುತ್ತಿರುವ ನೈಪುಣ್ಯದ ಪೂರ್ವಪಕ್ಷಗಳಿಗೆ ಸಮರ್ಪಕವಾದ ಉತ್ತರ ಗಳನ್ನು ಕೊಡಬೇಕಾದರೆ ನನಗೆ ಪರಿಶ್ರಮ ಮಾಡಬೇಕಾಗುತ್ತದೆ. ಈಗ ನೀವು ಗಳಿಸಿಕೊಂಡಷ್ಟು ಜ್ಞಾನದಿಂದ ಅರ್ಥಶಾಸ್ತ್ರ ಪ್ರವೀಣರೆಂದು ನಿಮ್ಮನ್ನು ಕರೆಯಲು ಅಭ್ಯಂತರವಿಲ್ಲ. ಇನ್ನು ಮುಂದೆ ನಾನು ನಿಮಗೆ ಅರ್ಥಶಾಸ್ತ್ರದ ಗುರುವೂ ನೀವು ನನಗೆ ಸಂಸ್ಕೃತಾಧ್ಯಾಪಕರೂ ಆಗಿರತಕ್ಕದ್ದು, ನಿಮ್ಮ ತಂದೆಯವರು ಅದ್ವಿತೀಯರಾದ ಪಂಡಿತರೆಂದು ತರ್ಕವಾಗಿರದು ಹೇಳು ಆವರಲ್ಲಿ ಕಲಿತವರಾದ ನೀವು ಕೂಡ ಸಂಸ್ಕೃತದಲ್ಲಿ ಒಳ್ಳ ಗಟ್ಟಿಗರೆಂದು ನಮ್ಮ ಕಾಲೇಜದ ಶಾಸ್ತ್ರಿಗಳು ಒಪ್ಪಿಕೊಂಡಿದ್ದಾರೆ” ಎಂದು ಕಲಕತ್ತಾ ಕಾಲೇಜದ ಪ್ರಿನ್ಸಿಪಾಲರೆಂದರು. ಹೀಗೆ ಗುರುಶಿಷ್ಯರೀರ್ವರೂ ಪರಸ್ಪರರನ್ನು ಆಚರಿಸುತ್ತ ತಮ್ಮ ತಮ್ಮ ಬುವರು