________________
(ii) ಕೇಸರಿಯೆಂಬ ದೊರೆಯು ಕೆ ಅತಿ ಗೆ ಬರಲು ಮಧಕನು ಓಡಿಹೋ ದನು. ಅರಿಕೇಸರಿಯು ಬಲಾತ್ಕರಿಸಿ ಕನಕಲತೆಯನ್ನು ತನ್ನ ಪಟ್ಟಣಕ್ಕೆ ಎಳೆದುಕೊಂಡು ಹೋದನು. ಬ | ೩ ನೆಯ ಅಂಕಂ-ವಿಕ ಮಸಿಂಹನನ್ನು ಕೊಲ್ಲಬೇಕೆಂದು ಬಂದ ಯಕ್ಷಿಣಿಯು ಅವನನ್ನು ಕಂಡು ಮೋಹಿನಿ ತನ್ನನ್ನು ಮದುವೆ ಮಾಡಿಕೊ ಳ್ಳೆಂದು ಎಷ್ಟು ಹೇಳಿದರೂ ಅವನು ಕೇಳದಿರಲು ಅವನನ್ನು ಕಲ್ಲಿನಂತೆ ನಿಂತಿರುವಹಾಗೆ ಮಾಡಿ ತಾನು ಕನಕಲತೆಯನ್ನು ಹುಡುಕಿಕೊಂಡು ಹೋ ರಟುಹೋದಳು. ವಿಕ್ರಮನಿಂಹನಿಗೆ ಸಹಾಯಮಾಡಿದ ಕನಕಲತೆಯ ಸಖಿ ಯರನ್ನು ಮಾಲಿನಿಯು ರಾಜ್ಯದಿಂದ ಓಡಿಸಿ ಕನಕಲತೆಯ ತಾಯಿಯಾದ ಸ್ವಯಂಪ್ರಭೆಯನ್ನು ಸೆರೆಯಲ್ಲಿ ಹಾಕಿಸಿದಳು. ಕನಕಲತೆಯ ಸಖಿಯರು ವಿಕ ನುಸಿಂಹನ ಬಳಿಗೆ ಬರಬೇಕೆಂದು ಬರುತ್ತಾ ದಾರಿಯಲ್ಲಿ ಬಿದ್ದಿದ್ದ ವಿದೂಷಕನನ್ನೂ ಮಧೂಲಕನ ಮಿತ್ರರನ್ನೂ ತೈತ್ತೋಪಚಾರ ಮಾಡಿ ಎಬಿ ಸಿ ನಡೆದ ಸಂಗತಿಯನ್ನು ತಿಳಿದುಕೊಂಡು ಎಲ್ಲರೂ ವಿಕ ನುಸಿಂಹ ನನ್ನು ಹುಡುಕಿಕೊಂಡು ಹೊರಟರು. ಮಧಲಕನ ಮಿತ್ರರು ಅವನು ತಮಗೆ ಮೋಸಮಾಡಿದ್ದಕ್ಕೆ ಅವನನ್ನು ಹಿಡಿದು ಕೊಲ್ಲಬೇಕೆಂದು ಶಪಥ ಮಾಡಿಕೊಂಡು ಹೊರಟರು, ಅರಣ್ಯದಲ್ಲಿ ಕಲ್ಲಿನಂತೆ ನಿಂತಿರುವ ವಿಕ) ಮಸಿಂಹನನ್ನು ವಿರೂಪಕನು ಕಂಡು ತಿರಸ್ಕರಿಣಿಮಂತ್ರದಿಂದ ಅವನ ಮಾಯಾಪಾಶವನ್ನು ಪರಿಹರಿಸಿದನು. ಬಳಿಕ ಎಲ್ಲರೂ ಕನಕಲತೆಯನ್ನು ಹುಡುಕಿಕೊಂಡು ಹೊರಟರು. ೪ ನೆಯ ಅಂಕಂ-ಯಕ್ಷಿಣಿಯು ಕನಕಲತೆಯನ್ನು ಹುಡುಕಿಕೊ೦ ಡು ಹೋಗಿ ಅರಿಕೇಸರಿಯ ಅಂತಃಪುರದಲ್ಲಿ ಕಂಡು ತನ್ನ ವಿದ್ಯಾಪ್ರಭಾವ ದಿಂದ ಅವಳನ್ನು ಬಿಡಿಸಿಕೊಂಡು ಬರುತ್ತಿರುವಾಗ ದಾರಿಯಲ್ಲಿ ಕಳ್ಳರು ಮಂತ್ರಶಕ್ತಿಯಿಂದ ಯಕ್ಷಿಣಿಯನ್ನು ಕೊಂದು ಕನಕಲತೆಯನ್ನು ತಮ್ಮ ಗುಹೆಯಲ್ಲಿ ಕೂಡಿದರು. ಕನಕಲತೆಯು ತನ್ನ ಪಾತಿವ್ರತ್ಯವನ್ನು ರಕ್ಷಿಸಿ ಕೊಳ್ಳಬೇಕೆಂದು ಆ ಗುಹೆಯ ಹಿಂಭಾಗದಲ್ಲಿ ಹರಿಯುತ್ತಿದ್ದ ಹೊಳೆಯಲ್ಲಿ ಬಿದ್ದಳು. ಅಲ್ಲಿ ತಮ್ಮ ಗುರುವಿಗೆ ಅಗೊದಕವನ್ನು ತೆಗೆದುಕೊಂಡು