ವಿಷಯಕ್ಕೆ ಹೋಗು

ಪುಟ:ಕನಕಲತಾಪರಿಣಯ ನಾಟಕಂ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ನಾಟಕ ಗ್ರಂಥಮಾಲೆ. (ಅನ.ತ೦ ನಳಿನಿ ರಂಗವ.೦ ಪ್ರವೇಶಿಸಿ ) ಮಾಲಿನಿ-ಚಂಡವಿಕ್ರಮ ಮಹಾರಾಜಂ ತನ್ನಗಿಯಾದ ಕನಕಲತೆಯಂ ಮೈದುನನಾದ ಮಧೂಕಂಗಿತ್ತು ಮದುವೆಗೆಯ್ಯಳಸಿರ್ದ೦. ಅಂತಾದೆಡೆ ಚಂಡವಿಕಮಂಗೆ ಕುವರರಿತ ದಿರ್ಪಸರಿಸಿ ಬಳಿಯಂ ರಾಜ್ಯಮೆಲ್ಲ ಮುಮಳಯನೆನಿಸುವೀ ಮಧೂಲಕಂಗೆ ಕೈಸಾರ್ಗುಂ. ಆಗ ನಾನೆ ಮಧಲಕನಂ ಕೆಯಿಡಿದು ಪಟ್ಟಮಹಿಷಿಯಾಗುವೆಂ (ವಿಂದು ನಿಟ್ಟಸಿ) ಇದೇಂ ! ಸಾಧನಿಕೆ ಇತ್ತಿತರುತಿರ್ಪಳ ಬಳ್ಳಿತ್ತು ( ಎಂದು ದಂತಕ್ಕ ಪೋಗಿ ) ಎಲೆ ಸಾಧನಿಕೆ ! ಇದೆಲ್ಲಿಗೆ ಪೋಪೆ ? ಸುಧನಿಕ-( ಪ್ರವೇಶಿಸಿ ) ಎಲೆಗೆ ! ಮಾಲಿನಿ ! ರಾಯಗುವರಿಯಾದ ಕನಕಲ ತೆಗೆ ಶಿಶಿರೊಪಚಾರ ಸಾಮಗ್ರಿಯಂ ಕೊಂಡುಬರಲೆಂದು ಪೊಸೆಂ. ಮಾಲಿನಿ-ಅವಳೇಕೆ ? ಸುಧನಿಕ- ಅದಂ ನೀನರಿಯೆಯೇಂ ? ಶೀಪುರಾಧಿಪನ ವಸಂತೋತ್ಸವ ದರ್ಸಕೋದ್ಯಾನದೊಳಿರ್ಪ ಗೌರಿದೇವಾಲಯಕೆ ಸಟ್ಟಾಣಿಯಂ ಪೂಜೆಸಿಂತವಳ ಪೋಗಿರ್ದಾಗಳಲ್ಲಿ ರ್ಸ ಬಳ್ಳಿವನೆಯೊಳ್ ವಿಮಲ ನಗರದಾಳ್ನಪ್ಪ ವಿಕ್ರಮಸಿಂಹ ಮಹಾರಾಜಂ ತನ್ನ ಕೆಳೆಯನಾದ ಗೌರೇಯಕನೊಡಂ ಬಿಹರಿಸುತಿರ್ದುದಂ ಕಂಡು ಮೋಹಿಸಿದ. ಆತನುಮೆನ್ನ ಕೆಳದಿಯ ಚೆಲ್ವನಭೀಕ್ಷಿಸಿ ರೋಡಾಡಿದನಾದಂ. ಕನಕಲತೆ ಲಲನಾಜನ ಸುಲಭವಾದ ಲಜ್ಜೆಯಿಂ ತನ್ನಭಿಪ್ರಾಯ ಮನವಂಗರಿಸ ಬಗೆಯೊಳಂಜಿ ವಿಂದಿರುಗಿ ಬಂದಳ'. ಈಗ ಳವಳ' ನಿದ್ರಾಹಾರಂಗಳನುಳಿದು ಪಗಲಿರುಳು ನವನಂಜಾನಿಸುತೆ ಪಲುಂಬಿ ಪಂಬಲಿಸಿ ಬಸವಳಿದಿರ್ಪy. ಮಾಲಿನಿ – ( ನಕ್ಕು) ಅವಳೆಳಪು ಕೈಸಾರದುಗಡ. - ಸುಧನಿಕ-ಅದೇಕೆ ?