________________
ಚರಿತ್ರಗಳು ಮಾತ್ರ ತುಂಡುತುಂಡಾಗಿದ್ದು ಜನರ ಹೇಳಿಕೆಯ ಮಾತಿನ ಮೇಲೆ ಬರೆದಹಾಗೆ ಕಾಣುತ್ತವೆ. ಆದುದರಿಂದ ಅವುಗಳಲ್ಲಿ ಯಾವು ದಕ್ಕೂ ಗಮನ ಕೊಡಬೇಕಾದುದಿಲ್ಲ. ಆದರೆ ಇಲ್ಲಿ ಹೇಳಿರುವ ವಿಜಯ ನಗರದ ಚರಿತ್ರೆ ಮಾತ್ರ ಸ್ವಲ್ಪ ವಿಚಾರಾರ್ಹವಾಗಿದೆ. ಈ ಹೇಳಿಕೆಗೆ ಎಸ್ಮರಮಟ್ಟಿಗೆ ಪ್ರಾಮಾಣ್ಯವನ್ನು ಕೊಡಬೇಕೆಂದು ತಿಳಿಯಬೇಕಾ ದರೆ ಕೆಳದಿನೃಪವಿಜಯಕ್ಕೆ ಮೂಲಗ್ರಂಥವಾವುದು, ಅದರಲ್ಲಿಯೂ ಈ ವಿಜಯನಗರದ ಚರಿತ್ರೆಯನ್ನು ಗ್ರಂಥಕರ್ತನು ಎಲ್ಲಿಂದ ಸಂಗ್ರಹ ನಿದನು ಎಂಬುದನ್ನು ತಿಳಿದುಕೊಳ್ಳಬೇಕು. ಶಕ ೧೬.೦೦ ರಿಂದ ೧೬೩೭ರ ವರೆಗೆ ಆಳಿದ ಹಿರಿಯ ಬಸಪ್ಪ ನಾಯಕನು “ ಶಿವತತ್ತ್ವರತ್ನಾಕರ ” ಎಂಬ ಸಂಸ್ಕೃತ ಗ್ರಂಥವನ್ನು [ಕ್ರಿ. ಶ. 1799ರಲ್ಲಿ ಬರೆದಿದ್ದಾನೆ. ಇದು ನಾನಾಶಾಸಾ ರ್ಥಸಾರ ವನ್ನು ಒಳಗೊಂಡಿದೆ. ಇದರ ನಾಲ್ಕನೆಯ ಕಲ್ಲೋಲದ ಹನ್ನೆರ ಡನೆಯ ತರಂಗದಲ್ಲಿ ವಿಜಯನಗರದ ರಾಜಸ್ಥಾಪನೆಯಾದ ಸಂದರ್ಭ, ಅಲ್ಲಿಂದ ಮುಂದೆ ಆಳಿದ ರಾಜರ ಪರಂಪರೆ ಕಾಲು ಮುಂತಾದುವುಗಳು ಹೇಳಲ್ಪಟ್ಟಿವೆ. ಇದರಿಂದ ಎಂಟು ಕಿ ಲಗಳ ವರೆಗೂ ಅಲ್ಲಲ್ಲಿ ಸುಮಾರು ಇಪ್ಪತ್ತು ತರಂಗಗಳಲ್ಲಿ ಕೆಳದಿಯ ರಾಜರ ಚರಿತ್ರೆಯೂ ಬರುತ್ತದೆ1, ಕೆಳದಿನೃಪವಿಜಯವು ಈ ಸಂಸ್ಕೃತಗ್ರಂಥದ ಆಧಾರದ ಮೇಲೆ ಬರೆದುದೋ ಅಥವಾ ಇವೆರಡಕ್ಕೂ ಮೂಲವಾಗಿ ಮತ್ತಾವುದಾದರೂ ಗ್ರಂಥವಿದ್ದಿತೋ ಗೊತ್ತಾಗುವುದಿಲ್ಲ. ಅಂತು ನಾಲ್ಕನೆಯ ಕಲ್ಲೋಲದ ಹನ್ನೆರಡನೆಯ ತರಂಗದಲ್ಲಿ ನರಪತಿ ಸಿಂಹಾಸನ ವೃತ್ತಾಂತವನ್ನು ಹೇಳುವಾಗ : ಹ ಬು ಹೋ ವಿ ಬು ದೇ ರಾ ವಿ ದೇ ವಿ ಮಾ ರಾ ವಿ ಸ೦ ೯ ತಾ & | ತ್ರಯೋದಶಮಹೀ
- 1 ವ|| ರಾ|| ಎಸ, ಕೃಷ್ಟಸ್ವಾಮಯ್ಯಂಗಾರೈರ ' Sources of Vijayanagar History' ಎಂಬ ಗ್ರಂಥದ ೧೯-೨೨, ೩೩೬-೩೬೪ ಪುಟಗಳನ್ನು ನೋಡಿ, ಆದರೆ ಮೈಸೂರು ಓರಿಯಂಟಲ್ ಲೈಬ್ರರಿಯಲ್ಲಿರುವ ಶಿವತತ್ತ್ವ ರತ್ನಾಕ ರದ ಪುತಿಯಲ್ಲಿ ಕೆಳದಿಯ ಅರಸುಗೆ ಸಂಬಂಧಪಟ್ಟ ಪದಗಳಲ್ಲಿ ಸಂಪೂರ್ಣ ವಾಗಿ ಬಿಟ್ಟು ಹೋಗಿವೆ. ಏನುಕರಣವೋ ತಿಳಿಯದು
K. N. VIJAYA