ವಿಷಯಕ್ಕೆ ಹೋಗು

ಗದುಗಿನ ಭಾರತ ಪದಕೋಶ -ಹ,

ವಿಕಿಸೋರ್ಸ್ದಿಂದ

<ಗದುಗಿನ ಭಾರತ ಪದಕೋಶ

  • 1. ಸ್ವೇದಜಲ, ಬೆವರು, ಭೀಷ್ಮ ಪರ್ವ,3,4
  • 2. ಹಂಗ, ಶಕುನ ಪಕ್ಷಿ, ಉದ್ಯೋಗ ಪರ್ವ,1,18
  • 3. ಹಂಗ, ಕಳಿಂಗ ಪಕ್ಷಿ, ಸಭಾ ಪರ್ವ,13,2
  • 4. ಹಂಗನ ಗರಿ, ಶಕುನದ ಪಕ್ಷಿಯ ಗರಿ, ದ್ರೋಣ ಪರ್ವ,5,13
  • 5. ಹಂಗಿಗ, ದಾಕ್ಷಿಣ್ಯಕ್ಕೆ ಒಳಗಾದವನು, ವಿರಾಟ ಪರ್ವ,9,29
  • 6. ಹಂಗಿಗರು, ಋಣಿಗಳು, ವಿರಾಟ ಪರ್ವ,8,8
  • 7. ಹಂಗಿನ, ಋಣದ, ಭೀಷ್ಮ ಪರ್ವ,9,42
  • 8. ಹಂಗು, ದಾಕ್ಷಿಣ್ಯ., ಉದ್ಯೋಗ ಪರ್ವ,5,7
  • 9. ಹಂಜರಕೂಳಿ, ಮೀನು ಹಿಡಿಯುವ ಬುಟ್ಟಿ, ಕರ್ಣ ಪರ್ವ,22,28
  • 10. ಹಂತಿ, ಪಂಕ್ತಿ, ಕರ್ಣ ಪರ್ವ,4,22
  • 11. ಹಂತಿಕಾರ, ಸಾಲಿನಲ್ಲಿ ನಿಲ್ಲುವವನು, ಕರ್ಣ ಪರ್ವ,22,26
  • 12. ಹಂತಿಯ ಕೂಳು, ಸಾಲಿನಲ್ಲಿ ಕುಳಿತು ಮಾಡುವ ಊಟ, ಗದಾ ಪರ್ವ,11,54
  • 13. ಹಂಬಲಿಸು, ಉತ್ಕಟವಾಗಿ ಆಶಿಸು, ಆದಿ ಪರ್ವ,8,42
  • 14. ಹಂಸ ಡಿಬಿಕರ ಪೌಂಡ್ರಕರ, ಹಂಸ , ಸಭಾ ಪರ್ವ,2,24,
  • 15. ಹಂಸಗಳ ತೂಳ, ತುಪ್ಪಳದಿಂದ ಮಾಡಿದ ಮೃದು ಹಾಸಿಗೆ, ಗದಾ ಪರ್ವ,3,21
  • 16. ಹಂಸತೂಳ, ಹಂಸತೂಲಿಕಾತಲ್ಪ, ಗದಾ ಪರ್ವ,3,21
  • 17. ಹಂಸತ್ವ, ಮೋಕ್ಷ, ಸಭಾ ಪರ್ವ,9,24
  • 18. ಹಕ್ಕರಿಕೆ, ಪಕ್ಕ ರಕ್ಷೆ, ಗದಾ ಪರ್ವ,3,13
  • 19. ಹಕ್ಕರಿಕೆ, ಆನೆ ಕುದುರೆಗಳನ್ನು ರಕ್ಷಿಸುವ ಸಾಧನ, ದ್ರೋಣ ಪರ್ವ,8,45
  • 20. ಹಕ್ಕರಿಕೆ, ಕುದುರೆಯ ಜೇನು, ದ್ರೋಣ ಪರ್ವ,15,18
  • 21. ಹಕ್ಕರಿಕೆ, ಕುದುರೆಯ ಹಲ್ಲಣ (ಪಕ್ಷರಕ್ಷ, ಶಲ್ಯ ಪರ್ವ,2,33
  • 22. ಹಕ್ಕರಿಕೆ, ಕುದುರೆಗಳನ್ನು ರಕ್ಷಿಸುವ ಸಾಧನÉ, ಗದಾ ಪರ್ವ,1,16
  • 23. ಹಕ್ಕರಿಕೆ, ಗುಳ, ಭೀಷ್ಮ ಪರ್ವ,5,37
  • 24. ಹಕ್ಕಲಾಗು, ನಿರ್ಜನವಾಗು, ಭೀಷ್ಮ ಪರ್ವ,4,43
  • 25. ಹಕ್ಕಲಾದವರು, ಚದುರಿದವರು, ದ್ರೋಣ ಪರ್ವ,13,45
  • 26. ಹಕ್ಕಲು, ಬೆಳೆಕೊಯ್ದಿರುವ ಜಮೀನು, ಶಲ್ಯ ಪರ್ವ,1,26
  • 27. ಹಕ್ಕಲು, ಬೆಳೆಕೊಯ್ದ, ಗದಾ ಪರ್ವ,1,67
  • 28. ಹಕ್ಕೆ, ಹಾಸಿಗೆ, ಉದ್ಯೋಗ ಪರ್ವ,9,35
  • 29. ಹಗರಣ, ನಿಂದೆ, ಗದಾ ಪರ್ವ,11,40
  • 30. ಹಗರು, ಹುರುಪು, ದ್ರೋಣ ಪರ್ವ,1,42
  • 31. ಹಗಲ ಹೂಳಿದರು, ಬಾಣದ ಮಳೆಯಿಂದ ಕತ್ತಲೆ ಉಂಟು ಮಾಡಿದರು, ಭೀಷ್ಮ ಪರ್ವ,4,99
  • 32. ಹಗಲುಳುಕು, ಹಗಲಿನಲ್ಲಿ ನಡುಕ, ಗದಾ ಪರ್ವ,8,4
  • 33. ಹಗಿನ, ಮರದಲ್ಲಿ ಜಿನುಗುವ ಅಂಟು, ಸಭಾ ಪರ್ವ,10,47
  • 34. ಹಗೆ, ಶತ್ರುತ್ವ, ಗದಾ ಪರ್ವ,11,40
  • 35. ಹಗೆ, ಶತ್ರುತ್ವ, ಗದಾ ಪರ್ವ,5,29
  • 36. ಹಗೆಬೆಳೆದ, ವೈರತ್ವ ಬೆ, ಗದಾ ಪರ್ವ,12,2
  • 37. ಹಗೆಯಾದವರು, ಶತ್ರುಗಳಾಗಿದ್ದವರು, ಸಭಾ ಪರ್ವ,2,67
  • 38. ಬಾಹೆ, ಹೊರಗೆ, ಶಲ್ಯ ಪರ್ವ,2,9
  • 39. ಹಚ್ಚಿಕೊಟ್ಟನು, ತಂದುಕೊಟ್ಟನು, ಭೀಷ್ಮ ಪರ್ವ,6,46
  • 40. ಹಜ್ಜೆಯನು ಇತ್ತು ತೆಗೆವg, ಹೆಜ್ಜೆ ಮುಂದಿಟ್ಟು ಹಿಂದಕ್ಕೆ ಸರಿವರೆ, ಭೀಷ್ಮ ಪರ್ವ,9,6
  • 41. ಹಡಪ, ತಾಂಬೂಲದ ಚೀಲ , ಅರಣ್ಯ ಪರ್ವ,8,7
  • 42. ಹಡಪಗ, ತಾಂಬೂಲ ಹಿಡಿದಿರುವವನು, ಕರ್ಣ ಪರ್ವ,24,32
  • 43. ಹಡಪವಳ, ಸಂಚಿ ಜನ, ಸಭಾ ಪರ್ವ,1,58
  • 44. ಹಡಪಿಗ, ಅವಶ್ಯ ವಸ್ತುಗಳನ್ನುಳ್ಳ ಚರ್ಮದ ಚೀಲವನ್ನು ಒಯ್ಯುವವನು, ಶಲ್ಯ ಪರ್ವ,1,8
  • 45. ಹಡಪಿಗ, ರಾಜರು ಮುಂತಾದ ಹಿರಿಯರಿಗೆ ಅವಶ್ಯವಾದ ವಸ್ತುಗಳನ್ನು ಚರ್ಮದ ಚೀಲದಲ್ಲಿ (ಹಡಪ) ಹಾಕಿಕೊಂಡು ಅವರ ಸಮೀಪದಲ್ಲಿರುತ್ತಿದ್ದವ, ಗದಾ ಪರ್ವ,2,2
  • 46. ಹಡಪಿಗ, ತಮ್ಮ ಯಜಮಾನರಿಗೆ ಅವಶ್ಯವುಳ್ಳ ವಸ್ತುಗಳನ್ನು ಹೊಂದಿರುವ ಚರ್ಮದ ಚೀಲ, ಗದಾ ಪರ್ವ,2,40
  • 47. ಹಡೆಯಿರಿ, ಗಳಿಸಿರಿ, ಭೀಷ್ಮ ಪರ್ವ,9,30
  • 48. ಹಣಗಿ, ಬಾಗಿ, ಭೀಷ್ಮ ಪರ್ವ,4,21
  • 49. ಹಣಗಿದರು, ಅಡಗಿಕೊಂಡರು, ಸಭಾ ಪರ್ವ,16,57
  • 50. ಹಣವಿಗೆ, ಹಣಕ್ಕಾಗಿ, ಭೀಷ್ಮ ಪರ್ವ,1,38
  • 51. ಹಣಿ, ಬಡಿದುಹಾಕು, ಸಭಾ ಪರ್ವ,14,41
  • 52. ಹಣಿ, ಧ್ವಂಸಮಾಡು, ಆದಿ ಪರ್ವ,8,40
  • 53. ಹಣಿಗು, ಹೊಂಚುಹಾಕು, ಆದಿ ಪರ್ವ,8,40
  • 54. ಹಣಿದ, ಗುಂಪು, ಗದಾ ಪರ್ವ,4,47, ,
  • 55. ಹಣಿದವಾಡಲಿ, ಕತ್ತರಿಸಿಹಾಕಲಿ, ಗದಾ ಪರ್ವ,8,33
  • 56. ಹಣಿದವಾಡು, ಕತ್ತರಿಸು, ಗದಾ ಪರ್ವ,3,19
  • 57. ಹಣಿದು, ಹೊಡೆದು, ಆದಿ ಪರ್ವ,7,58
  • 58. ಹಣಿಯಲಿ, ನಾಶವಾಗಲಿ, ಗದಾ ಪರ್ವ,11,47
  • 59. ಹಣುಗು, ಹಿಂದೆಗೆ, ಕರ್ಣ ಪರ್ವ,25,9
  • 60. ಹಣುಗು, ಇಣುಕು, ಗದಾ ಪರ್ವ,4,47
  • 61. ಹತಮಹೀಶರು, ಮರಣ ಹೊಂದಿದ ರಾಜರು., ಗದಾ ಪರ್ವ,12,21
  • 62. ಹತಿ, ತಾಳ., ಕರ್ಣ ಪರ್ವ,7,23
  • 63. ಹತ್ತರಿಕೆ, ಹೊಳಪಾದ ಮೈ., ಶಲ್ಯ ಪರ್ವ,2,62
  • 64. ಹತ್ತಲಿ, ಆರಂಭವಾಗಲಿ, ಆದಿ ಪರ್ವ,15,42
  • 65. ಹತ್ತಳ, ಚಾವಳಿ, ಉದ್ಯೋಗ ಪರ್ವ,11,18
  • 66. ಹತ್ತಾಹತ್ತಿ, ಮಲ್ಲಯುದ್ಧ, ಸಭಾ ಪರ್ವ,2,93
  • 67. ಹತ್ತಿಗೆ, ಸೇರಿಕೆಯಾದ ಜಾಗ, ಶಲ್ಯ ಪರ್ವ,2,6
  • 68. ಹತ್ತಿಗೆ, ಬಂಧನ, ಗದಾ ಪರ್ವ,11,10
  • 69. ಹತ್ತಿಗೆ, ಕಟ್ಟುಗಳು, ಕರ್ಣ ಪರ್ವ,3,31
  • 70. ಹತ್ತಿದವು, ಲೆಕ್ಕಕೆ ಸಿಕ್ಕಿದವು, ಶಲ್ಯ ಪರ್ವ,2,7
  • 71. ಹತ್ತಿದವು, ಹತ್ತಿಬಿಟ್ಟವು, ಸಭಾ ಪರ್ವ,3,30
  • 72. ಹತ್ತಿಸು, ಅಂಟಿಸು, ಅರಣ್ಯ ಪರ್ವ,3,18
  • 73. ಹತ್ತು, ಮುಟ್ಟು, ಆದಿ ಪರ್ವ,13,59
  • 74. ಹತ್ತುಗೆ, ಸೇರಿಕೆ, ಶಲ್ಯ ಪರ್ವ,2,26
  • 75. ಹತ್ತೆ, ಸಮೀಪ , ಗದಾ ಪರ್ವ,12,16
  • 76. ಹದನ, ಸಮಾಚಾರ , ಗದಾ ಪರ್ವ,4,2
  • 77. ಹದನ, ಸಂಗತಿ, ಗದಾ ಪರ್ವ,11,46
  • 78. ಹದನ, ಸ್ಥಿತಿ , ಗದಾ ಪರ್ವ,6,4, , , ಕೆಲಸ.,
  • 79. ಹದನ, ವಾರ್ತೆ, ಗದಾ ಪರ್ವ,4,29, ,
  • 80. ಹದನ, ರೀತಿ , ವಿರಾಟ ಪರ್ವ,7,26
  • 81. ಹದನ, ಕೆಲಸ , ಗದಾ ಪರ್ವ,11,32
  • 82. ಹದನಹುದು, ಆ ರೀರಿ ಕಾಣುತ್ತದೆ., ವಿರಾಟ ಪರ್ವ,4,42
  • 83. ಹದನಾಯ್ತು, ಹೀಗಾಯಿತು, ದ್ರೋಣ ಪರ್ವ,7,26
  • 84. ಹದನು, ಸರಿಯಾದ ರೀತಿ., ಉದ್ಯೋಗ ಪರ್ವ,6,2
  • 85. ಹದನು, ಪ್ರಕೃತ ಕಾರ್ಯ, ಭೀಷ್ಮ ಪರ್ವ,1,3
  • 86. ಹದನು, ಔಚಿತ್ಯ, ಆದಿ ಪರ್ವ,18,24
  • 87. ಹದವಳೆ, ಒಳ್ಳೆಯ ಮಳೆ, ವಿರಾಟ ಪರ್ವ,10,37
  • 88. ಹದವಿಲ್ಲು, ಯೋಗ್ಯವಾದ ಬಿಲ್ಲು, ಆದಿ ಪರ್ವ,15,28
  • 89. ಹದಿರ, ಹದವಾದ, ದ್ರೋಣ ಪರ್ವ,3,11
  • 90. ಹದಿರು, ವ್ಯಂಗ್ಯ, ಸಭಾ ಪರ್ವ,14,29
  • 91. ಹದುಳ, ನೆಮ್ಮದಿ, ಉದ್ಯೋಗ ಪರ್ವ,7,3
  • 92. ಹದುಳ, ಕ್ಷೇಮ (ಗೆಲುವಾಗು , ವಿರಾಟ ಪರ್ವ,8,57
  • 93. ಹದುಳವಿಡÀು, ಕ್ಷೇಮದಿಂದಿರಿಸು , ಗದಾ ಪರ್ವ,11,32
  • 94. ಹದುಳಿಸಿ, ಸಮಾಧಾನಪಟ್ಟುಕೊಂಡು, ದ್ರೋಣ ಪರ್ವ,1,7
  • 95. ಹದುಳಿಸು, ಸಮಾಧಾನ ಮಾಡಿಕೋ (ಹದುಳ, ಶಲ್ಯ ಪರ್ವ,1,4
  • 96. ಹದುಳಿಸು, ಸಮಾಧಾನÀದಿಂದಿರು, ಗದಾ ಪರ್ವ,8,58
  • 97. ಹದುಳಿಸು, ಸರಿಹೊಂದಿಸಿಕೋ, ಸಭಾ ಪರ್ವ,1,79
  • 98. ಹದುಳಿಸು, ಕಾಯು, ಉದ್ಯೋಗ ಪರ್ವ,3,103
  • 99. ಹದುಳಿಸು, ಕ್ಷೇಮದಿಂದಿರು, ಕರ್ಣ ಪರ್ವ,1,9
  • 100. ಹನನ, ವಿನಾಶ, ಗದಾ ಪರ್ವ,12,19
  • 101. ಹನನ, ವಧೆ, ಆದಿ ಪರ್ವ,8,53
  • 102. ಹನುಮಿಸಲು, ಕೆನೆಯುತ್ತ, ಭೀಷ್ಮ ಪರ್ವ,8,2
  • 103. ಹಬ್ಬಿದುದು, ಹಿಗ್ಗಿತು, ಭೀಷ್ಮ ಪರ್ವ,8,11
  • 104. ಹಬ್ಬುಗೆ, ಹರಡಿದ, ಉದ್ಯೋಗ ಪರ್ವ,11,15
  • 105. ಹಮ್ಮ, ಸೊಕ್ಕು/ಅಹಂಕಾರ, ಉದ್ಯೋಗ ಪರ್ವ,9,22
  • 106. ಹಮ್ಮಿದ, ಸಂಭವಿಸಿದ, ಭೀಷ್ಮ ಪರ್ವ,1,10
  • 107. ಹಮ್ಮೀರ ರಾವುತರ, ಹಮ್ಮೀರ ದೇಶದ ಕುದುರೆ ಸವಾರರ, ಭೀಷ್ಮ ಪರ್ವ,4,65
  • 108. ಹಮ್ಮು, ಸೊಕ್ಕು, ಉದ್ಯೋಗ ಪರ್ವ,9,13
  • 109. ಹಮ್ಮುಗೆ, ಕಟ್ಟು, ಕರ್ಣ ಪರ್ವ,24,25
  • 110. ಹಮ್ಮೈಸಿ, ಮೂರ್ಛೆಹೋಗಿ, ವಿರಾಟ ಪರ್ವ,7,33
  • 111. ಹಮ್ಮೈಸು, ಮೂಛೆ ಹೋಗು, ದ್ರೋಣ ಪರ್ವ,1,59
  • 112. ಹಮ್ಮೈಸು, ಮೂರ್ಛೆಹೋಗು, ಕರ್ಣ ಪರ್ವ,27,26
  • 113. ಹಮ್ಮೈಸು, ಅಪೇಕ್ಷಿಸು, ದ್ರೋಣ ಪರ್ವ,19,29
  • 114. ಹಯ ಅಬ್ಬರಣೆ, ಅಶ್ವದ ಹೇಷಾರವ, ಭೀಷ್ಮ ಪರ್ವ,8,5
  • 115. ಹಯಾವಳಿ, ಕುದುರೆಗಳು, ಭೀಷ್ಮ ಪರ್ವ,3,4
  • 116. ಹರ, ನಾಶಮಾಡುವುದು, ಗದಾ ಪರ್ವ,13,16
  • 117. ಹರಗಿರಿ, ಕೈಲಾಸ, ಆದಿ ಪರ್ವ,14,5
  • 118. ಹರಚರಣನಿಕ್ಷಿಪ್ತ, ಈಶ್ವರನ ಪಾದದಲ್ಲಿ ಇಟ್ಟಿರುವ, ಅರಣ್ಯ ಪರ್ವ,5,9
  • 119. ಹರಡು, ಹಿಂದಿಕ್ಕಿ ಕೊಳ್ಳು, ಭೀಷ್ಮ ಪರ್ವ,6,30
  • 120. ಹರಡೆ, ಒಂದು ಜಾತಿಯ ನೀರು ಹಕ್ಕಿ, ಸಭಾ ಪರ್ವ,13,2
  • 121. ಹರಡೆ, ಹರಡೆಹಕ್ಕಿ, ಅರಣ್ಯ ಪರ್ವ,4,33
  • 122. ಹರಡೆ, ಕೊಕ್ಕರೆ, ಆದಿ ಪರ್ವ,20,53
  • 123. ಹರಣ, ಪ್ರಾಣ(ಸಂ.) ಕೇವಣಿಸು, ಗದಾ ಪರ್ವ,10,10
  • 124. ಹರಣ ಭರಣ ಕ್ಷಮೆ, ಪ್ರಾಣವನ್ನು ಉಳಿಸುವ ಸಾಮಥ್ರ್ಯ, ವಿರಾಟ ಪರ್ವ,6,32
  • 125. ಹರಣದವಾಣಿ, ಪ್ರಾಣದ ಅಂಜಿಕೆಯುಳ್ಳವರು, ಭೀಷ್ಮ ಪರ್ವ,8,15
  • 126. ಹರತನಿಜ, ಸುಬ್ರಹ್ಮಣ್ಯ, ಅರಣ್ಯ ಪರ್ವ,6,35
  • 127. ಹರದ ಮಾತು, ವ್ಯಾವಹಾರಿಕ ನೆಲೆಯ ಮಾತು, ವಿರಾಟ ಪರ್ವ,4,8
  • 128. ಹರದರು, ವರ್ತಕರು, ಅರಣ್ಯ ಪರ್ವ,20,2
  • 129. ಹರದೆರಕೆ, ಹರಿದೆರಕೆ ಇರಬಹುದು (ಹರಿದ=ಕತ್ತರಿಸಿ ಹಾಕಿದ) ಎರಕೆ, ವಿರಾಟ ಪರ್ವ,3,37
  • 130. ಹರನ ಕಣ್ಗಿಚ್ಚು, ಶಿವನ ಮೂರನೇ ಕಣ್ಣಿನ ಬೆಂಕಿ, ಭೀಷ್ಮ ಪರ್ವ,6,34
  • 131. ಹರನ ಹೋಲುವ ಸುಭಟ, ಅಶ್ವತ್ಥಾಮ , ವಿರಾಟ ಪರ್ವ,8,39,
  • 132. ಹರವರಿ, ವಿಹಾರ, ಭೀಷ್ಮ ಪರ್ವ,4,16
  • 133. ಹರವಸ, ಪರವಶತೆ, ಸಭಾ ಪರ್ವ,16,57
  • 134. ಹರವಿ, ನೀರು ತುಂಬುವ ಮಣ್ಣಿನ ಪಾತ್ರೆ, ಆದಿ ಪರ್ವ,10,17
  • 135. ಹರವಿ, ಮಣ್ಣಿನ ಪಾತ್ರೆಗಳು, ಆದಿ ಪರ್ವ,10,25
  • 136. ಹರಸಿ, ಹರಕೆ ಹೊತ್ತು, ಗದಾ ಪರ್ವ,6,3
  • 137. ಹರಹಿ, ಚಾಚಿ, ಭೀಷ್ಮ ಪರ್ವ,3,72
  • 138. ಹರಹಿಕೊ, ತನ್ನನ್ನೇ ಅರ್ಪಿಸಿಕೊ, ವಿರಾಟ ಪರ್ವ,10,63
  • 139. ಹರಹಿಕೊಳ್ಳು, ರಕ್ಷಿಸು, ಗದಾ ಪರ್ವ,3,30
  • 140. ಹರಹಿನ, ಅತಿಶಯವಾದ, ಭೀಷ್ಮ ಪರ್ವ,7,34
  • 141. ಹರಹಿನಲಿ, ಹರಡಿಕೊಂಡು, ಭೀಷ್ಮ ಪರ್ವ,9,9
  • 142. ಹರಹು, ಹಬ್ಬು, ಆದಿ ಪರ್ವ,12,6
  • 143. ಹರಹುಗಳ ಪೂರ, ಪ್ರವಾಹದ ಸಾಗರ, ಭೀಷ್ಮ ಪರ್ವ,6,3
  • 144. ಹರಹುಗೆಡು, ಚಲನೆಗೆಡು, ಕರ್ಣ ಪರ್ವ,1,15
  • 145. ಹರಳು, ಕಲ್ಲಿನ ಚೂರುಗಳು, ಗದಾ ಪರ್ವ,11,26
  • 146. ಹರಳುತೆಕ್ಕೆ, ಕಲ್ಲಿನ ಚೂರು, ಭೀಷ್ಮ ಪರ್ವ,3,69
  • 147. ಹರಿ, ಸಾಗು, ವಿರಾಟ ಪರ್ವ,4,35
  • 148. ಹರಿ, ನಿವಾರಣೆಯಾಗು, ಆದಿ ಪರ್ವ,16,2
  • 149. ಹರಿ, ಸಿಂಹ, ವಿರಾಟ ಪರ್ವ,6,55
  • 150. ಹರಿ, ಶ್ರೀಕೃಷ್ಣ, ಭೀಷ್ಮ ಪರ್ವ,8,21
  • 151. ಹರಿ, ಆಂಜನೇಯ, ದ್ರೋಣ ಪರ್ವ,3,50
  • 152. ಹರಿ, ಕೃಷ್ಣ, ಕರ್ಣ ಪರ್ವ,21,19, ,
  • 153. ಹರಿ, ಚಲಿಸು, ದ್ರೋಣ ಪರ್ವ,3,13
  • 154. ಹರಿ, ಧಾವಿಸು, ಆದಿ ಪರ್ವ,11,15
  • 155. ಹರಿಕುಣಿ, ಕಾಲುವೆ, ಕರ್ಣ ಪರ್ವ,1,9
  • 156. ಹರಿಗೆ, ಶ್ರೀಹರಿಗೆ, ಭೀಷ್ಮ ಪರ್ವ,4,7
  • 157. ಹರಿಗೆ, ಒಂದು ಬಗೆ ಗುರಾಣಿ, ಭೀಷ್ಮ ಪರ್ವ,3,20
  • 158. ಹರಿಗೆ, ಹಲಗೆ, ಶಲ್ಯ ಪರ್ವ,2,38
  • 159. ಹರಿಗೆ, ಡೋಲು, ಭೀಷ್ಮ ಪರ್ವ,2,4
  • 160. ಹರಿಗೆ, ಗುರಾಣಿ , ವಿರಾಟ ಪರ್ವ,8,5
  • 161. ಹರಿಗೆ, ಗುರಾಣಿ., ದ್ರೋಣ ಪರ್ವ,15,18
  • 162. ಹರಿಗೆಯ, ಗುರಾಣಿಯ, ಭೀಷ್ಮ ಪರ್ವ,4,38
  • 163. ಹರಿಗೋಲು, ದೋಣಿ, ಕರ್ಣ ಪರ್ವ,22,31
  • 164. ಹರಿಣಪಕ್ಷ, ಶುಕ್ಲಪಕ್ಷ, ಆದಿ ಪರ್ವ,3,11
  • 165. ಹರಿತಂದ, ಹರಿತರು ಬಾ (ಬಂದ) ಧಾವಿಸು, ವಿರಾಟ ಪರ್ವ,5,4
  • 166. ಹರಿತಂದು, ಮುಂದೆ ಸಾಗಿ, ಭೀಷ್ಮ ಪರ್ವ,7,2
  • 167. ಹರಿತನೂಜ, ಭೀಮ (ಹರಿ, ಗದಾ ಪರ್ವ,13,7
  • 168. ಹರಿತರು, ಓಡಿ ಬಾ, ವಿರಾಟ ಪರ್ವ,3,94
  • 169. ಹರಿತಹ, ಮೇಲೇರಿ ಬರುವ, ದ್ರೋಣ ಪರ್ವ,1,58
  • 170. ಹರಿತಹುದು, ಬೆನ್ನಟ್ಟಿಕೊಂಡು ಬರುವುದು, ಭೀಷ್ಮ ಪರ್ವ,6,39
  • 171. ಹರಿದರು, ಸಾಗಿದರು, ಭೀಷ್ಮ ಪರ್ವ,1,17
  • 172. ಹರಿದರು, ಓಡಾಡಿದರು, ಗದಾ ಪರ್ವ,12,6
  • 173. ಹರಿದವು, ಚಲಿಸಿದವು, ದ್ರೋಣ ಪರ್ವ,1,51
  • 174. ಹರಿದಳ, ಕುದುರೆಗಳ ಸೈನ್ಯ, ಗದಾ ಪರ್ವ,1,42
  • 175. ಹರಿದಳು, ಓಡಿ ಬಂದಳು, ಆದಿ ಪರ್ವ,11,34
  • 176. ಹರಿದಾಡು, ಓಡಾಡು, ಉದ್ಯೋಗ ಪರ್ವ,8,11
  • 177. ಹರಿದಿನ, ಏಕಾದಶಿ ದ್ವಾದಶಿ, ವಿರಾಟ ಪರ್ವ,7,13
  • 178. ಹರಿದು, ವೇಗವಾಗಿ, ಗದಾ ಪರ್ವ,8,32
  • 179. ಹರಿದು ಹಬ್ಬುವ, ಹೊರಬಂದು ಹರಡುತ್ತಿದ್ದ, ಭೀಷ್ಮ ಪರ್ವ,6,33
  • 180. ಹರಿದುದು, ಕಾಣೆಯಾಯಿತು, ಗದಾ ಪರ್ವ,7,30
  • 181. ಹರಿದುದು, ಚೆದರಿತು, ಆದಿ ಪರ್ವ,15,37
  • 182. ಹರಿದೂರ, ಹರದಾರಿ, ಗದಾ ಪರ್ವ,3,35
  • 183. ಹರಿದೇರ, ಹರಿದ +ಏರ, ಗದಾ ಪರ್ವ,3,11
  • 184. ಹರಿದೊರೆವೆದ್ದ, ಕೃಷ್ಣಜೋಯಿಸರ ಪಾಠ ಹ¾Éದೊ¾ವೆದ್ದ, ವಿರಾಟ ಪರ್ವ,7,38
  • 185. ಹರಿನಂದನ, ವಾಯುಪುತ್ರ, ಆದಿ ಪರ್ವ,9,12
  • 186. ಹರಿನಂದನ, ಇಂದ್ರ ಪುತ್ರ ಅರ್ಜುನ, ಭೀಷ್ಮ ಪರ್ವ,6,21
  • 187. ಹರಿನಿಭ, ಇಂದ್ರಸಮಾನನಾದ, ಆದಿ ಪರ್ವ,19,11
  • 188. ಹರಿಬ, ಸೇಡು, ಗದಾ ಪರ್ವ,9,26
  • 189. ಹರಿಬ, ಮುಯ್ಯಿ, ಅರಣ್ಯ ಪರ್ವ,1,23
  • 190. ಹರಿಬ, ಆಶ್ರಯ , ದ್ರೋಣ ಪರ್ವ,1,8, ,
  • 191. ಹರಿಬ, ಹೊಣೆ, ಶಲ್ಯ ಪರ್ವ,3,70
  • 192. ಹರಿಬ, ಹೊಣೆಗಾರಿಕೆ, ಕರ್ಣ ಪರ್ವ,8,34
  • 193. ಹರಿಬ, ಕಾರ್ಯ, ಕರ್ಣ ಪರ್ವ,19,25
  • 194. ಹರಿಬ, ಕರ್ತವ್ಯÀ, ದ್ರೋಣ ಪರ್ವ,10,17
  • 195. ಹರಿಬ, ಕೆಲಸ, ಗದಾ ಪರ್ವ,2,33, ,
  • 196. ಹರಿಬ, ಕೆಲಸ, ಶಲ್ಯ ಪರ್ವ,3,27, ,
  • 197. ಹರಿಯ, ಕೃಷ್ಣನ, ದ್ರೋಣ ಪರ್ವ,5,2
  • 198. ಹರಿಯಣ, ಹರಿವಾಣ ಪಾತ್ರೆ, ವಿರಾಟ ಪರ್ವ,3,36
  • 199. ಹರಿಯದು, ಸಾಧ್ಯವಾಗದು, ಶಲ್ಯ ಪರ್ವ,1,31
  • 200. ಹರಿಯದು, ಮುಗಿಯುವುದಿಲ್ಲ, ಗದಾ ಪರ್ವ,2,9
  • 201. ಹರಿಯದು, ಕೈಲಾಗದು , ಗದಾ ಪರ್ವ,10,16
  • 202. ಹರಿಯಬಿಡು, ಮುಂದೆ ನುಗ್ಗಲು ಬಿಡು. ಬೇವು ಬಿಕ್ಕೆ, ವಿರಾಟ ಪರ್ವ,9,40
  • 203. ಹರಿಯುದಯಿಸಿದನು, ಕೃಷ್ಣನು ಹುಟ್ಟಿದ, ಸಭಾ ಪರ್ವ,5,42
  • 204. ಹರಿಯೆಚ್ಚಡೆ, ಕತ್ತರಿಸುವ ಹಾಗೆ ಹೊಡೆಯಲು, ದ್ರೋಣ ಪರ್ವ,6,54
  • 205. ಹರಿವ, ನಾ±ವನ್ನುÀ, ಆದಿ ಪರ್ವ,8,41
  • 206. ಹರಿವ, ಪರಿಹಾರವನ್ನು, ದ್ರೋಣ ಪರ್ವ,8,25
  • 207. ಹರಿವ, ಹರಿಬ, ಕರ್ಣ ಪರ್ವ,26,19
  • 208. ಹರಿವ, ಕೊನೆಗಾಣಿಸು, ಗದಾ ಪರ್ವ,2,22
  • 209. ಹರಿವ ಹೆಜ್ಜೆಯ, ನಡಿಗೆಯ ಗುರುತನ್ನು (ತಿಳಿಯಲು), ವಿರಾಟ ಪರ್ವ,4,8
  • 210. ಹರಿವಾಗು, ಮುಗಿ, ವಿರಾಟ ಪರ್ವ,8,38
  • 211. ಹರಿವಾಣ, ಅಗಲದ ತಟ್ಟೆ, ಆದಿ ಪರ್ವ,16,28
  • 212. ಹರಿವಾಯ್ತು, ಮುಗಿಯಿತು, ವಿರಾಟ ಪರ್ವ,8,38
  • 213. ಹರಿವು, ವಿನಾಶ, ಗದಾ ಪರ್ವ,3,19
  • 214. ಹರಿವು, ಕೊನೆಗಾಣಿಸುವ ಉಪಾಯ, ದ್ರೋಣ ಪರ್ವ,11,17
  • 215. ಹರಿಸು, ಹೋಗಬಿಡು, ಗದಾ ಪರ್ವ,4,45, ,
  • 216. ಹರಿಸೂನು, ಇಂದ್ರನ ಮಗ ಅರ್ಜುನ, ಅರಣ್ಯ ಪರ್ವ,6,9
  • 217. ಹರಿಹಂಚಾಗು, ಪಾಲಾಗು, ಉದ್ಯೋಗ ಪರ್ವ,1,29
  • 218. ಹರಿಹಯ, ದೇವೇಂದ್ರ, ಉದ್ಯೋಗ ಪರ್ವ,4,60
  • 219. ಹರಿಹರಿದು, ಓಡಿ, ವಿರಾಟ ಪರ್ವ,7,51
  • 220. ಹರಿಹರಿದು, ಓಡಿ ಓಡಿ, ವಿರಾಟ ಪರ್ವ,5,4
  • 221. ಹರುಕ, ಇದು ಒಂದು ಗ್ರಾಮೀಣ ಬೈಗುಳ, ವಿರಾಟ ಪರ್ವ,6,21, ,
  • 222. ಹರುಗೋಲು, ನೀರನ್ನು ದಾಟಲು ಬಿದಿರು ಮತ್ತು ಚರ್ಮದಿಂದ ಮಾಡಿದ ದೊಡ್ಡ ಕುಕ್ಕೆಯಂತಹ ಸಾಧನ, ದ್ರೋಣ ಪರ್ವ,4,38
  • 223. ಹರುವು, ಅಪಾಯ, ಅರಣ್ಯ ಪರ್ವ,3,17
  • 224. ಹರುವು, ಅಂತ್ಯ: ಫ¾Âವು, ವಿರಾಟ ಪರ್ವ,3,94
  • 225. ಹರುವು, ಉಪಾಯ/ನೀತಿ, ಉದ್ಯೋಗ ಪರ್ವ,6,29
  • 226. ಹರುಷಜಲಧಿ ಉಕ್ಕಿಸಲುಬೇಕು, ಸಂತೋಷಹುಟ್ಟಿಸಬೇಕು, ಭೀಷ್ಮ ಪರ್ವ,1,22
  • 227. ಹರುಷಲತೆ, ಹರ್ಷವೆಂಬ ಬಳ್ಳಿ, ಸಭಾ ಪರ್ವ,1,3
  • 228. ಹರೆಗಡಿ, ಸಂಪೂರ್ಣವಾಗಿ ನಾಶಮಾಡು, ದ್ರೋಣ ಪರ್ವ,18,27
  • 229. ಹರೆಗಡಿ, ಛಿದ್ರಿಸು, ವಿರಾಟ ಪರ್ವ,7,36
  • 230. ಹರೆಗಡಿ, ಕಡಿದು ಚೆಲ್ಲು, ಕರ್ಣ ಪರ್ವ,19,33
  • 231. ಹರೆಗಡಿ, ಕೊಚ್ಚಿಹಾಕು.... ಭೂತಳ, ವಿರಾಟ ಪರ್ವ,8,52
  • 232. ಹರೆಗಡಿ, ಚಲ್ಲಾಪಿಲ್ಲಿಮಾಡು , ಗದಾ ಪರ್ವ,4,31
  • 233. ಹರೆಗಡಿ, ಚಲ್ಲಾಪಿಲ್ಲಿಮಾಡಿ ಕತ್ತರಿಸು., ಗದಾ ಪರ್ವ,1,1
  • 234. ಹರೆದ ಬಲ, ಚೆದುರಿದ ಸೇನೆ, ದ್ರೋಣ ಪರ್ವ,2,50
  • 235. ಹರೆದರು, ಓಡಿದರು, ಭೀಷ್ಮ ಪರ್ವ,8,28
  • 236. ಹರೆದರೆ, ತೊಲಗಿದರೆ, ಭೀಷ್ಮ ಪರ್ವ,8,45
  • 237. ಹರೆದವು, ಚೆದರಿದವು, ಭೀಷ್ಮ ಪರ್ವ,4,11
  • 238. ಹರೆದು, ಡಿಕ್ಕಿ ಹೊಡೆದು, ಭೀಷ್ಮ ಪರ್ವ,4,91
  • 239. ಹರೆದುದು, ನಿವಾರಣೆ ಆಯಿತು, ಭೀಷ್ಮ ಪರ್ವ,7,34
  • 240. ಹರೆದುದು, ಪ್ರಕಟವಾಯಿತು, ಗದಾ ಪರ್ವ,4,10
  • 241. ಹರೆದುದು, ಮುಗಿಯಿತು, ದ್ರೋಣ ಪರ್ವ,4,12
  • 242. ಹರೆದುದು, ಹರಿದುಹೋಯಿತು, ಗದಾ ಪರ್ವ,10,4
  • 243. ಹಲ, ನೇಗಿಲು, ಆದಿ ಪರ್ವ,7,29
  • 244. ಹಲಗೆ, ಪಗಡೆಯಾಟದ ಮಣೆ (ಪಗಡೆ ಹಾಸು), ಗದಾ ಪರ್ವ,2,34
  • 245. ಹಲಗೆ, ಫಲಕ, ಭೀಷ್ಮ ಪರ್ವ,3,15
  • 246. ಹಲಧರ, ನೇಗಿಲನ್ನು ಹಿಡಿದಿರುವವನು , ಗದಾ ಪರ್ವ,6,1, ,
  • 247. ಹಲಧರ, ಬಲರಾಮ (ನೇಗಿಲನ್ನು ಕೈಯಲ್ಲಿ ಹಿಡಿದಿರುವವನು) ಕಳಚಿ, ಆದಿ ಪರ್ವ,14,27
  • 248. ಹಲಧರ, ಬಲರಾಮ (ಇವನ ಆಯುಧ `ಹಲ' ವಾದ್ದರಿಂದ), ಆದಿ ಪರ್ವ,19,41
  • 249. ಹಲಧರನುಳಯೆ, ಬಲರಮನನ್ನು ಬಿಟ್ಟು, ಸಭಾ ಪರ್ವ,2,87
  • 250. ಹಲಬರು, ಅನೇಕ ಜನರು, ಉದ್ಯೋಗ ಪರ್ವ,9,64
  • 251. ಹಲಾಯುಧ, ಬಲರಾಮ (ನೇಗಿಲನ್ನು ಆಯುಧವಾಗಿ ಉಳ್ಳವನು), ಆದಿ ಪರ್ವ,15,22
  • 252. ಹಲುಬಿದನು, ದುಃಖಿಸಿದನು., ಭೀಷ್ಮ ಪರ್ವ,6,34
  • 253. ಹಲುಮೊರೆ, ಹಲ್ಲನ್ನು ಕಡಿ, ದ್ರೋಣ ಪರ್ವ,1,64
  • 254. ಹಲ್ಲಣ, ಜೀನು, ಕರ್ಣ ಪರ್ವ,24,14
  • 255. ಹಲ್ಲಣಿಸಿ, ಯುದ್ಧ ಸಾಮಗ್ರಿ ಸಿದ್ಧಪಡಿಸಿ, ಭೀಷ್ಮ ಪರ್ವ,7,2
  • 256. ಹಲ್ಲಣಿಸಿದವು, ಕುದುರೆಗಳು ಸಜ್ಜುಗೊಳಿಸಲ್ಪಟ್ಟವು., ಸಭಾ ಪರ್ವ,8,39
  • 257. ಹಲ್ಲಣಿಸು, ಲಗಾಮನು ಹಾಕಿ ಕುದುರೆಯನ್ನು ಸಿದ್ಧಗೊಳಿಸುವುದು, ದ್ರೋಣ ಪರ್ವ,4,22
  • 258. ಹಲ್ಲಣಿಸು, ಸಿದ್ಧವಾಗು, ಆದಿ ಪರ್ವ,15,44
  • 259. ಹಲ್ಲಣಿಸು, ಹಲ್ಲಣ ಹಾಕಿ ಸಿದ್ಧ ಪಡಿಸು, ವಿರಾಟ ಪರ್ವ,4,41
  • 260. ಹಲ್ಲಣಿಸು, ಹಲ್ಲಣ ಕಟ್ಟಿಕೊ, ವಿರಾಟ ಪರ್ವ,4,27
  • 261. ಹಲ್ಲಣಿಸು, ಹಲ್ಲಣವನ್ನು ತೊಡಿಸು, ಗದಾ ಪರ್ವ,9,38
  • 262. ಹಲ್ಲಣೆ, ಜೀನು, ಕರ್ಣ ಪರ್ವ,22,17
  • 263. ಹಲ್ಲಳ, ಇವು ಆನೆ, ಸಭಾ ಪರ್ವ,5,46
  • 264. ಹಲ್ಲಳ, ಜೀನು, ಕರ್ಣ ಪರ್ವ,5,3
  • 265. ಹವಣ, ನೆಲೆ, ಉದ್ಯೋಗ ಪರ್ವ,4,2
  • 266. ಹವಣನು, ರೀತಿಯನ್ನು, ದ್ರೋಣ ಪರ್ವ,6,15
  • 267. ಹವಣಲ್ಲ, ಕೈವಶವಲ್ಲ, ಭೀಷ್ಮ ಪರ್ವ,7,12
  • 268. ಹವಣಿನ, ಸಾಹಸಕ್ಕೆ ತಕ್ಕ, ಭೀಷ್ಮ ಪರ್ವ,1,37
  • 269. ಹವಣಿಲ್ಲ, ನಿಯಂತ್ರಣಕ್ಕೆ ಮೀರಿದ್ದು, ದ್ರೋಣ ಪರ್ವ,3,17
  • 270. ಹವಣಿಸು, ಪ್ರಯತ್ನಿಸು, ಭೀಷ್ಮ ಪರ್ವ,5,16
  • 271. ಹವಣು, ಹಿಡಿತ, ದ್ರೋಣ ಪರ್ವ,4,25
  • 272. ಹವಣು, ಅಳತೆ, ದ್ರೋಣ ಪರ್ವ,10,44
  • 273. ಹವಳದ ಹಲಗೆಗಳ ಮಾಳಿಗೆಯ, ಹವಳದ ಹಲಗೆಗಳನ್ನು ಜೋಡಿಸಿದ ಮೇಲ್ಛಾವಣಿಯ, ಸಭಾ ಪರ್ವ,5,29
  • 274. ಹವಿಸ್ಸು, ಯಜ್ಞಾಹುತಿ., ಉದ್ಯೋಗ ಪರ್ವ,4,89
  • 275. ಹವ್ಯಕವ್ಯ, ದೇವತೆಗಳಿಗೆ ಹಾಗೂ ಪಿತೃಗಳಿಗೆ ಅರ್ಪಿಸುವ ಪದಾರ್ಥಗಳು, ಆದಿ ಪರ್ವ,20,42
  • 276. ಹವ್ಯವಾಹನ, ಅಗ್ನಿ (ಹವಿಸ್ಸನ್ನು ಒಯ್ಯುವವನು) ಭಾರ, ಆದಿ ಪರ್ವ,20,16
  • 277. ಹಸನ, ಒಳ್ಳಿತು, ಆದಿ ಪರ್ವ,8,48
  • 278. ಹಸರ, ಪ್ರಸರ, ಶಲ್ಯ ಪರ್ವ,2,49
  • 279. ಹಸರ, ಹರಡಿರುವಿಕೆ, ಉದ್ಯೋಗ ಪರ್ವ,3,47
  • 280. ಹಸಾದ, ಪ್ರಸಾದ, ಆದಿ ಪರ್ವ,8,78
  • 281. ಹಸಾದ, ಮಹಾಪ್ರಸಾದ, ಗದಾ ಪರ್ವ,11,35
  • 282. ಹಸಾದ, ಅನುಗ್ರಹ (ಒಪ್ಪಿಗೆ), ಭೀಷ್ಮ ಪರ್ವ,7,13
  • 283. ಹಸಾದವ ಹಾಯ್ಕಿ, ಪ್ರಸಾದವೆಂದು ಸ್ವೀಕರಿಸಿ, ಸಭಾ ಪರ್ವ,5,24
  • 284. ಹಸುಗೆ, ವಿಭಾಗ , ಗದಾ ಪರ್ವ,6,7
  • 285. ಹಸುಗೆ, ಪಸುಗೆ ಹಂಚಿಕೆ, ದ್ರೋಣ ಪರ್ವ,1,26
  • 286. ಹಸುಬ, ಶಕುನದ ಹಕ್ಕಿ, ಅರಣ್ಯ ಪರ್ವ,17,33
  • 287. ಹಸುಬ, ಒಂದು ಬಗೆಯ ಶಕುನದ ಹಕ್ಕಿ, ಅರಣ್ಯ ಪರ್ವ,13,21
  • 288. ಹಸುಬ, ಒಂದು ಜಾತಿಯ ಹಕ್ಕಿ, ಸಭಾ ಪರ್ವ,13,2
  • 289. ಹಸುಬ, ಹಾರೀತ, ಅರಣ್ಯ ಪರ್ವ,4,33
  • 290. ಹಳಕು, ಹಳುಕು , ವಿರಾಟ ಪರ್ವ,2,54
  • 291. ಹಳಚಲು, ಹೋರಾಡಲು, ಭೀಷ್ಮ ಪರ್ವ,3,1
  • 292. ಹಳಚಿ, ಅಪ್ಪಳಿಸಿ, ದ್ರೋಣ ಪರ್ವ,3,78
  • 293. ಹಳಚಿ, ಹೋರಾಡಿ, ದ್ರೋಣ ಪರ್ವ,5,42
  • 294. ಹಳಚಿ, ತಾಗಿ, ಭೀಷ್ಮ ಪರ್ವ,4,7
  • 295. ಹಳಚಿದನು, ಹೊಡೆದನÀು, ದ್ರೋಣ ಪರ್ವ,3,34
  • 296. ಹಳಚಿದರು, ಹೋರಾಡಿದರು, ಭೀಷ್ಮ ಪರ್ವ,5,0
  • 297. ಹಳಚಿದುದು, ಹೋರಾಡಿದವು., ಭೀಷ್ಮ ಪರ್ವ,4,0
  • 298. ಹಳಚಿದೊಡೆ, ಬಡಿದಾಡಿದಾಗ, ಭೀಷ್ಮ ಪರ್ವ,4,4
  • 299. ಹಳಚು, ಪಳಂಚು, ವಿರಾಟ ಪರ್ವ,4,46
  • 300. ಹಳಚು, ಮೇಲೆಬೀಳು, ಕರ್ಣ ಪರ್ವ,11,15
  • 301. ಹಳಚು, ಆಕ್ರಮಣಮಾಡು, ಕರ್ಣ ಪರ್ವ,13,0
  • 302. ಹಳಚು, ಹಣಚು , ಗದಾ ಪರ್ವ,7,0, , ,
  • 303. ಹಳಚು, ಹಣಚು , ಗದಾ ಪರ್ವ,2,12, , , ಹೊಡೆ,
  • 304. ಹಳಚು, ಕಾದಾಡು, ಭೀಷ್ಮ ಪರ್ವ,4,36
  • 305. ಹಳದಿಯ ಪಾರಿ, ಹಳದಿ ವಸ್ತ್ರ. ಜೋನೆಗಪಳಿ, ಭೀಷ್ಮ ಪರ್ವ,4,52
  • 306. ಹಳವಿಗೆ, ಹೊಯ್ದಾಟ, ದ್ರೋಣ ಪರ್ವ,3,52
  • 307. ಹಳಹಳಿಕೆ, ಪ್ರಖರ, ಕರ್ಣ ಪರ್ವ,23,5
  • 308. ಹಳಹಳಿಕೆ, ಆವೇಶÀ, ಶಲ್ಯ ಪರ್ವ,2,1
  • 309. ಹಳಹಳಿಕೆ, ತಳಮಳ, ಅರಣ್ಯ ಪರ್ವ,8,50
  • 310. ಹಳಹಳಿಕೆ, ತೀವ್ರತೆ, ಕರ್ಣ ಪರ್ವ,24,53
  • 311. ಹಳಿವು, ನಿಂದೆ , ವಿರಾಟ ಪರ್ವ,3,2
  • 312. ಹಳಿವು, ನಿಂದೆ., ಉದ್ಯೋಗ ಪರ್ವ,6,4
  • 313. ಹಳಿವು, ಅಪಮಾನ, ಗದಾ ಪರ್ವ,5,23, , , ವಿನಾಶ,
  • 314. ಹಳಿವು, ಅಪಕೀರ್ತಿ, ವಿರಾಟ ಪರ್ವ,2,25
  • 315. ಹಳುಕು, ಚೂರು, ಕರ್ಣ ಪರ್ವ,21,4
  • 316. ಹಳುವ, ಅರಣ್ಯ, ಗದಾ ಪರ್ವ,4,25
  • 317. ಹಳುವ, ಅಡವಿ, ಆದಿ ಪರ್ವ,8,93
  • 318. ಹಳುಹಳುವಾಯಿ, ಸುಲಭವಾದ ದಾರಿ, ಕರ್ಣ ಪರ್ವ,20,36
  • 319. ಹಳೂಹಳು, ಮೆಚ್ಚುಗೆ ಸೂಚಿಸುವ ಒಂದು ಪದ, ದ್ರೋಣ ಪರ್ವ,17,11
  • 320. ಹಾಣಾಹಾಣಿ, ಹಣಾಹಣಿ , ಭೀಷ್ಮ ಪರ್ವ,4,27
  • 321. ಹಾಯಿ, ನುಗ್ಗು, ವಿರಾಟ ಪರ್ವ,5,38
  • 322. ಹಾಯಿದರು, ಮುನ್ನುಗ್ಗಿದ್ದರು, ಗದಾ ಪರ್ವ,9,3
  • 323. ಹಾಯಿದರು, ಓಡಿಹೋದರು, ಕರ್ಣ ಪರ್ವ,4,24
  • 324. ಹಾಯಿದು, ಮೇಲುಬೀಳು, ಆದಿ ಪರ್ವ,2,32
  • 325. ಹಾಯ್ಕಿದೆ, ಬಿಸಾಡಿದೆ, ಭೀಷ್ಮ ಪರ್ವ,3,35
  • 326. ಹಾಯ್ದನು, ವೇಗವಾಗಿ ನಡೆದ, ಗದಾ ಪರ್ವ,3,1
  • 327. ಹಾಯ್ದನು, ಹಾರಿದನು, ಗದಾ ಪರ್ವ,8,50
  • 328. ಹಾಯ್ವೆವು, ಹೋಗುತ್ತೇವೆ, ಗದಾ ಪರ್ವ,8,58
  • 329. ಹಾರ, ಆರಾಮ, ಆದಿ ಪರ್ವ,7,1
  • 330. ಹಾರಚಯ, ಹಾರಗಳ ಗುಂಪು, ಗದಾ ಪರ್ವ,11,19
  • 331. ಹಾರಲೇಕೆ, ನಿರೀಕ್ಷಿಸುವುದೇಕೆ, ಉದ್ಯೋಗ ಪರ್ವ,2,10
  • 332. ಹಾರಿದವು, ದೂರ ಸರಿದವು, ಭೀಷ್ಮ ಪರ್ವ,7,8
  • 333. ಹಾರುವತಿ, ಬ್ರಾಹ್ಮಣಸ್ತ್ರೀ, ಆದಿ ಪರ್ವ,15,36
  • 334. ಹಾ¾ು, ಸೂಸು, ಕರ್ಣ ಪರ್ವ,11,15
  • 335. ಹಾಲಾಹಲ, ಘೋರ ವಿಷ, ಉದ್ಯೋಗ ಪರ್ವ,6,11
  • 336. ಹಾವಸೆ, ಪಾಚಿಸಸ್ಯ, ಅರಣ್ಯ ಪರ್ವ,5,14
  • 337. ಹಾವಿನ ಹಳವಿಗೆ, ಸರ್ಪಧ್ವಜ, ಭೀಷ್ಮ ಪರ್ವ,3,15
  • 338. ಹಾವುಮೆಕ್ಕೆ, ಕಹಿಯಾದ ಹಣ್ಣು ಬಿಡುವ ಒಂದು ಗಿಡ., ಅರಣ್ಯ ಪರ್ವ,17,15
  • 339. ಹಾಸ, ಪಾಶ, ಕರ್ಣ ಪರ್ವ,22,31
  • 340. ಹಾಸಂಗಿ, ಪಗಡೆಯ ಹಾಸು, ವಿರಾಟ ಪರ್ವ,9,12
  • 341. ಹಾಸಂಗಿ, ಪಗಡೆಯದಾಳ, ಆದಿ ಪರ್ವ,13,42
  • 342. ಹಾಸರೆ, ಹಾಸು ಬಂಡೆ, ವಿರಾಟ ಪರ್ವ,3,58
  • 343. ಹಾಸರೆ, ಹಾಸುಗಲ್ಲು, ಸಭಾ ಪರ್ವ,13,30
  • 344. ಹಾಸರೆ, ಕಲ್ಲಿನ ಚಪ್ಪಡಿ, ಅರಣ್ಯ ಪರ್ವ,22,42
  • 345. ಹಾಸುಗಳು, ನೆಲಕ್ಕೆ ಹಾಸುವ ಬಟ್ಟೆಗಳು ಅಥವ ಹಾಸಿಗೆಯ ಮೇಲೆ ಹಾಸುವ ಬಟ್ಟೆಗಳು, ಗದಾ ಪರ್ವ,4,14
  • 346. ಹಾಹಾವಿರಾವ, ಹಾಹಾಕಾರ, ಗದಾ ಪರ್ವ,10,14
  • 347. ಹಾಹೆ, ಬೊಂಬೆ, ಕರ್ಣ ಪರ್ವ,19,45
  • 348. ಹಾಹೆ, ನೆರಳು, ವಿರಾಟ ಪರ್ವ,10,66
  • 349. ಹಾಳಿ, ಪಾಳಿ, ದ್ರೋಣ ಪರ್ವ,1,26
  • 350. ಹಾಳು ಹೊರು, ಸರ್ವನಾಶವಾಗು, ಅರಣ್ಯ ಪರ್ವ,16,24
  • 351. ಹಿಂಗಿದನು, ಹಿಂದಿರುಗಿದನು, ದ್ರೋಣ ಪರ್ವ,6,22
  • 352. ಹಿಂಗಿದನು, ಅಡಗಿದನು, ಭೀಷ್ಮ ಪರ್ವ,6,22
  • 353. ಹಿಂಗಿದವು, ಕಾಣದಾದವು, ಗದಾ ಪರ್ವ,6,28
  • 354. ಹಿಂಗು, ಹಿಂದೆ ಸರಿ, ಆದಿ ಪರ್ವ,14,22
  • 355. ಹಿಂಗುವ, ತಪ್ಪಿಸಿಕೊಳ್ಳುವ, ಗದಾ ಪರ್ವ,7,51
  • 356. ಹಿಂಚಿತು, ಹಿಮ್ಮೆಟ್ಟಿಸಿತು, ಆದಿ ಪರ್ವ,7,39
  • 357. ಹಿಂಚು, ಹಿಂದೆ ಬೀಳು, ಸಭಾ ಪರ್ವ,1,3
  • 358. ಹಿಂಡಾಕಳು, ಗೋ ಸಮೂಹ, ವಿರಾಟ ಪರ್ವ,7,35
  • 359. ಹಿಂಡೆಯ, ಪಿಂಡದ, ಆದಿ ಪರ್ವ,8,73
  • 360. ಹಿಂದಣ ಕೊರತೆಯ, ಹಿಂದಿನ ದಿನಗಳ ನಷ್ಟದ, ಭೀಷ್ಮ ಪರ್ವ,9,21
  • 361. ಹಿಂದಿಕ್ಕಿ ಕೊಂಬರೆ, ನಮ್ಮನ್ನು ರಕ್ಷಣೆಯಲ್ಲಿ ಇರಿಸಿಕೊಂಡರೆ, ಭೀಷ್ಮ ಪರ್ವ,1,22
  • 362. ಹಿಂದುಗಳೆ, ಹಿಂದೆಗೆ, ಕರ್ಣ ಪರ್ವ,8,29
  • 363. ಹಿಂದುಗಳೆಯದೆ, ನಿರ್ಲಕ್ಷಿಸದೆ, ಉದ್ಯೋಗ ಪರ್ವ,5,11
  • 364. ಹಿಂದೆ ಹತ್ತದೆ, ಜೊತೆಯಲ್ಲೇ ಅಂಟಿಕೊಳ್ಳದೆ, ವಿರಾಟ ಪರ್ವ,3,31
  • 365. ಹಿಂಬೆಳೆ, ಹಿಂದೆಸರಿ , ಗದಾ ಪರ್ವ,5,33
  • 366. ಹಿಂಸಾಗಮ, ಹಿಂಸೆಯೆಂಬ ಶಾಸ್ತ್ರ, ಕರ್ಣ ಪರ್ವ,15,12
  • 367. ಹಿಕ್ಕಳಿಸು, ಹೆಮ್ಮೆ ಪಡು, ಆದಿ ಪರ್ವ,11,28
  • 368. ಹಿಕ್ಕು, ಸಿಕ್ಕು ಬಿಡಿಸು, ವಿರಾಟ ಪರ್ವ,1,33
  • 369. ಹಿಕ್ಕು, ಛೇದಿಸು, ವಿರಾಟ ಪರ್ವ,7,41
  • 370. ಹಿಟ್ಟುಗುಟ್ಟು, ಧ್ವಂಸಮಾಡು, ಉದ್ಯೋಗ ಪರ್ವ,3,104
  • 371. ಹಿಡಿಂಬಕನೆಂಬ ಅಸುರಪತಿ, ಹಿಡಿಂಬನೆಂಬ ರಾಕ್ಷಸ ರಾಜ, ಸಭಾ ಪರ್ವ,5,34
  • 372. ಹಿಡಿಕಿ, ಹಿಸುಕಿ, ಆದಿ ಪರ್ವ,9,7
  • 373. ಹಿಡಿಯಾಳು, ಸೆರೆಯಾಳು, ಆದಿ ಪರ್ವ,19,18
  • 374. ಹಿಡಿಹಿಂಗೆ, ನಿಯಂತ್ರಣಕ್ಕೆ, ದ್ರೋಣ ಪರ್ವ,3,37
  • 375. ಹಿಡಿಹು, ಹತೋಟಿ, ಆದಿ ಪರ್ವ,19,37
  • 376. ಹಿಡುಹು, ಮುಷ್ಠಿ, ಆದಿ ಪರ್ವ,11,28
  • 377. ಹಿಣಿಲ, ಜಡೆಯ, ದ್ರೋಣ ಪರ್ವ,6,62
  • 378. ಹಿಣಿಲಬಾವುಲಿಗಾರರು, ಶೌರ್ಯದ ಬಿರುದುಗಾರರು., ಭೀಷ್ಮ ಪರ್ವ,4,40
  • 379. ಹಿಣಿಲಿರಿದು, ಸಿಕ್ಕು ಬಿಡಿಸಿ, ವಿರಾಟ ಪರ್ವ,6,49
  • 380. ಹಿಣಿಲು, ನವಿಲುಗರಿ, ಉದ್ಯೋಗ ಪರ್ವ,11,16
  • 381. ಹಿಣಿಲು, ಜಡೆ, ವಿರಾಟ ಪರ್ವ,3,80
  • 382. ಹಿಣಿಲು, ಜಡೆಯ ಗಂಟು, ಕರ್ಣ ಪರ್ವ,22,25
  • 383. ಹಿಣಿಲು, ಜೊಂಡೆ, ಭೀಷ್ಮ ಪರ್ವ,4,82
  • 384. ಹಿಣಿಲು, ಹೆರಳು, ಗದಾ ಪರ್ವ,11,16
  • 385. ಹಿಣಿಲುಕರುಳು, ಗೊಂಚಲು ಕರುಳು, ಭೀಷ್ಮ ಪರ್ವ,4,47
  • 386. ಹಿನ್ನೆಲೆ, ಹಿಂಭಾಗ, ಆದಿ ಪರ್ವ,15,50
  • 387. ಹಿಪ್ಪೆಗರ, ಸತ್ವ ಹೀನರ, ದ್ರೋಣ ಪರ್ವ,2,53
  • 388. ಹಿಮ, ಶೀತ, ಆದಿ ಪರ್ವ,9,24
  • 389. ಹಿಮಕರ, ಚಂದ್ರ (ಹಿಮವನ್ನುಂಟುಮಾಡುವವ) ಮಹಾನ್ವಯ, ಗದಾ ಪರ್ವ,4,33
  • 390. ಹಿಮಕರಕುಲಲಲಾಮ, ಚಂದ್ರ ವಂಶದ ರಾಜಶ್ರೇಷ್ಠರು, ಭೀಷ್ಮ ಪರ್ವ,3,
  • 391. ಹಿಮಾಲಯವಾಗಪರಜಲಧಿ, ಹಿಮಾಲಯದಿಂದ ಸಮುದ್ರದವರೆಗೂ ಹಬ್ಬಿರುವ, ಅರಣ್ಯ ಪರ್ವ,7,42
  • 392. ಹಿಮ್ಮಡಿಗೊಗುವ ಕುಂತಳ, ಹಿಮ್ಮಡಿಯನ್ನು ಮುಟ್ಟುತ್ತಿರುವ ಕೂದಲು, ಅರಣ್ಯ ಪರ್ವ,16,22
  • 393. ಹಿಮ್ಮೆಟ್ಟು, ಹಿಂದಕ್ಕೆ ಸರಿ, ಆದಿ ಪರ್ವ,15,50
  • 394. ಹಿಯ್ಯಾಳಿ, ನಿಂದನೆ, ದ್ರೋಣ ಪರ್ವ,6,18
  • 395. ಹಿರಿದು, ಪಿರಿದು , ಆದಿ ಪರ್ವ,2,19
  • 396. ಹಿರಿಯುಬ್ಬಣ, ಉಬ್ಬಿದ ಮಾಂಸಖಂಡಗಳು(?), ಗದಾ ಪರ್ವ,2,13
  • 397. ಹಿಸುಣ, ಚಾಡಿ, ಉದ್ಯೋಗ ಪರ್ವ,9,18
  • 398. ಹಿಸುಣಿಕೆ, ಚಾಡಿ, ಭೀಷ್ಮ ಪರ್ವ,1,19
  • 399. ಹಿಳಿ, ಹಿಪ್ಪೆಮಾಡು, ಉದ್ಯೋಗ ಪರ್ವ,3,120
  • 400. ಹಿಳಿ, ನಾಶವಾಗು, ದ್ರೋಣ ಪರ್ವ,10,3
  • 401. ಹಿಳಿ, ಬಿರಿ, ಭೀಷ್ಮ ಪರ್ವ,4,38
  • 402. ಹಿಳಿ, ಸೀಳು, ಕರ್ಣ ಪರ್ವ,24,38
  • 403. ಹಿಳಿ, ಕುಸಿ ಹೇರಾಳಿಸು, ಕರ್ಣ ಪರ್ವ,8,24
  • 404. ಹಿಳಿದ, ನಾಶವಾದ, ಅರಣ್ಯ ಪರ್ವ,2,2
  • 405. ಹಿಳಿದು, ಹಿಸುಕಿ, ಭೀಷ್ಮ ಪರ್ವ,5,31
  • 406. ಹಿಳಿದು ಹಿಂಡು, ಹಿಂಡಿರಸವನ್ನು ತೆಗೆ, ವಿರಾಟ ಪರ್ವ,3,22
  • 407. ಹಿಳಿದೆವು, ನಾಶಮಾಡಿದೆವು, ಉದ್ಯೋಗ ಪರ್ವ,1,37
  • 408. ಹಿಳಿಯಲಿ, ಕುಂಭ ಸ್ಥಳ, ದ್ರೋಣ ಪರ್ವ,2,27
  • 409. ಹಿಳಿಯೆ, ಸಿಡಿಯಲು, ದ್ರೋಣ ಪರ್ವ,9,27
  • 410. ಹಿಳುಕು, ಬಾಣಗಳ ಹಿಂತುದಿಯ ಗರಿ, ವಿರಾಟ ಪರ್ವ,8,37
  • 411. ಹಿಳುಕು, ಬಾಣದ ಹಿಂಭಾಗದ ಗರಿಭಾಗ, ಭೀಷ್ಮ ಪರ್ವ,8,42
  • 412. ಹಿಳುಕು, ಬಾಣದ ಹಿಂದಿನ ಭಾಗ, ಶಲ್ಯ ಪರ್ವ,2,33
  • 413. ಹಿಳುಕು, ಬಾಣದ ಗರಿ, ಉದ್ಯೋಗ ಪರ್ವ,11,13
  • 414. ಹಿಳುಕು, ಬಾಣದ ಗರಿ, ಸಭಾ ಪರ್ವ,10,68, , , ಗುರಿತಾಗಿಸು , ಹಿಳುಕಿಡು, ಬೆಸು ಹರಿಕು, ಭೇದಿಸು ಇತ್ಯಾದಿ ಪದಗಳು ಬಾಣಸಂಧಾನ ಮತ್ತು ಪ್ರಯೋಗಕ್ಕೆ ಸಂಬಂಧಿಸಿದ ಶಬ್ದಗಳು.,
  • 415. ಹಿಳುಕುಗಳು, ಬಾಣದ ಹಿಂಬದಿಯ ಗರಿಗಳು, ಭೀಷ್ಮ ಪರ್ವ,4,20
  • 416. ಹೀನ ಇಂದು, ಶುಕ್ಲ ಬಿದಿಗೆ ಚಂದ್ರ ( ಕ್ಷೀಣವಾಗಿರುವ ಚಂದ್ರ), ಭೀಷ್ಮ ಪರ್ವ,4,76
  • 417. ಹೀನಗತಿ, ದುರ್ಗತಿ, ಗದಾ ಪರ್ವ,8,30
  • 418. ಹೀರಾವಳಿ, ವಜ್ರಸಮೂಹ, ದ್ರೋಣ ಪರ್ವ,1,14
  • 419. ಹೀರಾವಳಿ, ವಜ್ರರಾಶಿ, ದ್ರೋಣ ಪರ್ವ,13,3
  • 420. ಹೀರಾವಳಿ, ವಜ್ರದ ಸರ, ಕರ್ಣ ಪರ್ವ,15,30
  • 421. ಹೀಲಿ, ನವಿಲುಗರಿ, ದ್ರೋಣ ಪರ್ವ,3,6
  • 422. ಹೀಲಿ, ನವಿಲುಗರಿಗಳಿಂದ ತಯಾರಿಸಿದ ಉಡುಪು, ಅರಣ್ಯ ಪರ್ವ,5,28
  • 423. ಹೀಹಾಳಿ, ನಿಂದೆ, ಕರ್ಣ ಪರ್ವ,11,39
  • 424. ಹೀಹಾಳಿ, ಪಂಥ , ವಿರಾಟ ಪರ್ವ,3,34,
  • 425. ಹೀಹಾಳಿ, ಹುರುಡು, ದ್ರೋಣ ಪರ್ವ,15,70
  • 426. ಹೀಹಾಳಿ, ಹಠ, ಕರ್ಣ ಪರ್ವ,15,7
  • 427. ಹೀಹಾಳಿಕಾರರು, ಸ್ಪರ್ಧೆಯೊಡ್ಡುವವರು., ದ್ರೋಣ ಪರ್ವ,5,82
  • 428. ಹುಗಿಲು, ಸೀಳು, ದ್ರೋಣ ಪರ್ವ,5,55
  • 429. ಹುಗ್ಗಿಗರು, ಸೊಕ್ಕಿನವರು, ದ್ರೋಣ ಪರ್ವ,10,31
  • 430. ಹುಗ್ಗಿಗರು, ಉತ್ಸಾಹಿಗಳು (ಜಂಭಗಾರರು), ಭೀಷ್ಮ ಪರ್ವ,1,58
  • 431. ಹುಟ್ಟಿ, ಜೇನು ಹುಟ್ಟಿ, ದ್ರೋಣ ಪರ್ವ,6,40
  • 432. ಹುಡಿ, ಪುಡಿ, ದ್ರೋಣ ಪರ್ವ,1,60
  • 433. ಹುಡಿ, ದೂಳು, ವಿರಾಟ ಪರ್ವ,3,15
  • 434. ಹುದಿದ, ಅಡಗಿದ, ಗದಾ ಪರ್ವ,11,1
  • 435. ಹುದು, ನಂಟು , ಗದಾ ಪರ್ವ,8,20, , , ಹೊಂದಿಕೆ,
  • 436. ಹುದು, ಹಂಚಿಕೊಂಡು ಬಾಳುವುದು, ಸಭಾ ಪರ್ವ,16,18
  • 437. ಹುದು=ಪುದುವು, ಸಾಮೂಹಿಕ ಸ್ವಾಮಿತ್ವ, ಆದಿ ಪರ್ವ,8,48
  • 438. ಹುದುಗು, ಮುಚ್ಚಿಕೊಳ್ಳು, ಆದಿ ಪರ್ವ,16,62
  • 439. ಹುದುಗು, ಮುಚ್ಚು, ಆದಿ ಪರ್ವ,15,48
  • 440. ಹುದುಗು, ಅಡಗಿಕೊಳ್ಳು, ಗದಾ ಪರ್ವ,1,13
  • 441. ಹುದುಗು, ಇಂಗಿಹೋಗು, ಅರಣ್ಯ ಪರ್ವ,13,38
  • 442. ಹುದುನೆಲ, ಪ್ರೀತಿಯ ನೆಲ , ಶಲ್ಯ ಪರ್ವ,2,54
  • 443. ಹುದುವಿನ ಗಂಡತನ, ಐವರು ಒಬ್ಬಳನ್ನು ಹಂಚಿಕೊಂಡಿದ್ದು. ಇಂಥ ಹಂಚಿಕೆಯ ಗಂಡತನ, ವಿರಾಟ ಪರ್ವ,3,43
  • 444. ಹುಯ್ಯಲು, ದೂರು, ಅರಣ್ಯ ಪರ್ವ,5,25
  • 445. ಹುಯ್ಯಲುಗಾರ, ಬೊಬ್ಬೆಯಿಡುತ್ತಿದ್ದವ, ವಿರಾಟ ಪರ್ವ,5,6
  • 446. ಹುರಿ, ಧಾನ್ಯಗಳನ್ನು ಬಾಣಲೆಯಲ್ಲಿ ಹುರಿಯಯುವುದು, ಗದಾ ಪರ್ವ,11,26
  • 447. ಹುರಿ ಹುರಿ, ಭೇಷ್ ಭೇಷ್ ಎಂಬ ಕೊಂಡಾಟದ ಮಾತು, ಅರಣ್ಯ ಪರ್ವ,1,31
  • 448. ಹುರಿಗೂಡಿ, ಒಂದಾಗಿ, ಭೀಷ್ಮ ಪರ್ವ,1,58
  • 449. ಹುರಿಗೊಂಡುದು, ಪ್ರಖರವಾಗಿ ಕಾಣಿಸಿತು, ಗದಾ ಪರ್ವ,8,22
  • 450. ಹುರಿಗೊಳ್, ಹುರುಪುಗೊಳ್ಳು ಉತ್ಸಾಹಗೊಳ್ಳು, ಗದಾ ಪರ್ವ,4,6
  • 451. ಹುರಿಬಿಡದೆ, ಒಗ್ಗಟ್ಟನ್ನು ಬಿಡದೆ, ದ್ರೋಣ ಪರ್ವ,6,18
  • 452. ಹುರಿಯೇರು, ಅಧಿಕವಾಗು, ಗದಾ ಪರ್ವ,7,13
  • 453. ಹುರಿಯೇರು, ಹೆಚ್ಚಾಗು/ಬಲವಾಗ, ಕರ್ಣ ಪರ್ವ,25,3
  • 454. ಹುರಿಯೊಡೆದು, ಶಕ್ತಿಗುಂದಿ, ದ್ರೋಣ ಪರ್ವ,5,12
  • 455. ಹುರಿಯೊಡೆದು, ಒಗ್ಗಟ್ಟು ತಪ್ಪಿ (ಹಿಮ್ಮೆಟ್ಟಿ), ಭೀಷ್ಮ ಪರ್ವ,6,12
  • 456. ಹುರುಡಿಗ, ಹೊಟ್ಟೆಕಿಚ್ಚುಪಡುವವನು, ಸಭಾ ಪರ್ವ,1,33
  • 457. ಹುರುಡಿಸು, ಆಸೆ ಪಡು, ಅರಣ್ಯ ಪರ್ವ,21,54
  • 458. ಹುರುಡೇ, ಸ್ಪರ್ಧೆಯೆ, ದ್ರೋಣ ಪರ್ವ,4,28
  • 459. ಹುರುಳುಗೆಟ್ಟುದು, ಸತ್ವಹೀನವಾಯಿತು, ದ್ರೋಣ ಪರ್ವ,5,35
  • 460. ಹುರುಳುಗೆಡಿಸು, ಸತ್ವಗುಂದಿಸು, ವಿರಾಟ ಪರ್ವ,8,91
  • 461. ಹುರುಳೆನಿಪ, ನೆಲೆಯಾದ, ಭೀಷ್ಮ ಪರ್ವ,3,62
  • 462. ಹುಲಿಸಾಯ್ತು, ಹುಲುಸಾಗಿದೆ, ಭೀಷ್ಮ ಪರ್ವ,4,13
  • 463. ಹುಲು, ಸಾಮಾನ್ಯ, ವಿರಾಟ ಪರ್ವ,4,34
  • 464. ಹುಲು, ಸಣ್ಣ, ಆದಿ ಪರ್ವ,11,23
  • 465. ಹುಲು, ಅಲ್ಪ, ವಿರಾಟ ಪರ್ವ,6,28
  • 466. ಹುಲು, ಕ್ಷುಲ್ಲಕ, ಆದಿ ಪರ್ವ,15,39
  • 467. ಹುಲು, ಕ್ಷುದ್ರ, ವಿರಾಟ ಪರ್ವ,6,47
  • 468. ಹುಲುದಳದೊಳಗೆ, ಕ್ಷುಲ್ಲಕ ಸೇನೆಯೊಂದಿಗೆ, ಭೀಷ್ಮ ಪರ್ವ,9,30
  • 469. ಹುಲುಮೃಗ, ಕ್ಷುಲ್ಲಕ ಜಿಂಕೆ, ವಿರಾಟ ಪರ್ವ,8,1
  • 470. ಹುಲುವಟ್ಟೆ, ಕ್ಷುದ್ರಮಾರ್ಗ, ಉದ್ಯೋಗ ಪರ್ವ,9,13
  • 471. ಹುಲುಸಾಯ್ತೆ, ಹುಲುಸಾದ ಬೆಳೆಬಂತೆ, ಗದಾ ಪರ್ವ,7,53
  • 472. ಹುಲ್ಲುಕೈ, ಹುಲ್ಲುಹಿಡಿದ, ಆದಿ ಪರ್ವ,19,2
  • 473. ಹುಸಿ, ಸುಳ್ಳಾಡುವುದು, ಆದಿ ಪರ್ವ,18,17
  • 474. ಹುಸಿಕ, ಸುಳ್ಳುಗಾರ, ಸಭಾ ಪರ್ವ,1,32
  • 475. ಹುಳುಕ, <ಪು¿ುಕ, ವಿರಾಟ ಪರ್ವ,2,30, , ,
  • 476. ಹುಳುವುದು, ಹುಳುವುದು (ಹುಳ ಸುರಿದೀತು), ವಿರಾಟ ಪರ್ವ,3,13
  • 477. ಹೂಟÉ, ತಯಾರಿ, ಭೀಷ್ಮ ಪರ್ವ,8,59
  • 478. ಹೂಡಿತು, ನೆಲಸಿದವು, ಭೀಷ್ಮ ಪರ್ವ,9,41
  • 479. ಹೂಡಿದೈ, ಉಂಟುಮಾಡಿದೆ., ಭೀಷ್ಮ ಪರ್ವ,6,39
  • 480. ಹೂಡು, ಪ್ರಯೋಗಿಸು, ಆದಿ ಪರ್ವ,7,6
  • 481. ಹೂಡು, ಪ್ರಾರಂಭಿಸು, ಗದಾ ಪರ್ವ,10,23
  • 482. ಹೂಡು, ಸಿದ್ಧಗೊಳಿಸು, ಆದಿ ಪರ್ವ,20,21
  • 483. ಹೂಡು, ಕಟ್ಟು, ಉದ್ಯೋಗ ಪರ್ವ,7,6
  • 484. ಹೂಡುವನು, ಸೃಷ್ಟಿಸುವನು, ಭೀಷ್ಮ ಪರ್ವ,7,32
  • 485. ಹೂಣಿಗ, ಸಾಹಸಿ, ದ್ರೋಣ ಪರ್ವ,5,64
  • 486. ಹೂಣಿಗ, ಶಪಥವೀರ, ಭೀಷ್ಮ ಪರ್ವ,7,7
  • 487. ಹೂಣಿಗ, ವೀರ , ವಿರಾಟ ಪರ್ವ,7,36
  • 488. ಹೂಣಿಗ, ಪ್ರತಿಜ್ಞೆ ಮಾಡಿದವನು, ಗದಾ ಪರ್ವ,2,5
  • 489. ಹೂಣಿಗ, ಪ್ರತಿಜ್ಞೆಮಾಡುವವನು, ಶಲ್ಯ ಪರ್ವ,1,26
  • 490. ಹೂಣಿಗತನ, ಶಪಥ ಮಾಡುವ ರೀತಿ, ದ್ರೋಣ ಪರ್ವ,16,14
  • 491. ಹೂಣು, ಬಾಣ ಹೂಡು, ಆದಿ ಪರ್ವ,7,6
  • 492. ಹೂಣು, ಪ್ರತಿಜ್ಞೆಮಾಡು, ಆದಿ ಪರ್ವ,20,40
  • 493. ಹೂಣೆ, ನುಗ್ಗು, ದ್ರೋಣ ಪರ್ವ,5,4
  • 494. ಹೂಣೆ, ಪ್ರತಿಜ್ಞೆ, ದ್ರೋಣ ಪರ್ವ,4,31
  • 495. ಹೂಣೆ, ಛಲ, ವಿರಾಟ ಪರ್ವ,2,39
  • 496. ಹೂಣೆಹೊಗು, ಸುತ್ತುಗಟ್ಟಿ ದಾಳಿಮಾಡು, ಕರ್ಣ ಪರ್ವ,13,41
  • 497. ಹೂಣೆಹೊಗು, ಶಪಥ ಮಾಡಿ ಮುನ್ನುಗ್ಗು, ಸಭಾ ಪರ್ವ,3,40
  • 498. ಹೂತ, ಹೂ ಬಿಟ್ಟ, ಸಭಾ ಪರ್ವ,10,47
  • 499. ಹೂತುದು, ಹೂ ಬಿಟ್ಟಿತು, ಭೀಷ್ಮ ಪರ್ವ,10,14
  • 500. ಹೂತುದು, ಹೂಬಿಟ್ಟಿತು, ಸಭಾ ಪರ್ವ,1,3
  • 501. ಹೂರಿಗೆ, ಪೂರಿಗೆ, ಆದಿ ಪರ್ವ,15,7
  • 502. ಹೂಲಿ, ಎಚ್ಚರಿಕೆ, ಅರಣ್ಯ ಪರ್ವ,2,2
  • 503. ಹೂವಲಿ, ರಂಗವಲ್ಲಿ (ಯಂತೆ ಮಾಡಿದ ಅಲಂಕಾರ), ವಿರಾಟ ಪರ್ವ,10,47
  • 504. ಹೂವಳೆ, (ಹೂ+ಮಳೆ) ಹೂವಿನ ಮಳೆ, ಗದಾ ಪರ್ವ,13,15
  • 505. ಹೂಸಕ, ಸುಳ್ಳು, ದ್ರೋಣ ಪರ್ವ,6,20
  • 506. ಹೂಸಕ, ತೋರಿಕೆ, ಕರ್ಣ ಪರ್ವ,1,30
  • 507. ಹೂಸಿ, ಪೂಸಿಕೊಂಡು, ಗದಾ ಪರ್ವ,1,26
  • 508. ಹೂಸಿಕ, ಆಡಂಬರ, ದ್ರೋಣ ಪರ್ವ,16,25
  • 509. ಹೂಸು, ಹಚ್ಚು, ಆದಿ ಪರ್ವ,20,60
  • 510. ಹೂಸುಕ, ಹೂಸಕ , ಕರ್ಣ ಪರ್ವ,23,44
  • 511. ಹೂಹೆ, ಬೊಂಬೆ, ದ್ರೋಣ ಪರ್ವ,5,78
  • 512. ಹೂಹೆ, ಮರಿ, ಆದಿ ಪರ್ವ,20,32
  • 513. ಹೂಹೆ, ಆಕಾರ, ವಿರಾಟ ಪರ್ವ,9,25
  • 514. ಹೂಹೆ, ಗೊಂಬೆ, ವಿರಾಟ ಪರ್ವ,10,66
  • 515. ಹೂಳಿದ, ಮರೆಯಾದ, ಅರಣ್ಯ ಪರ್ವ,2,2
  • 516. ಹೂಳಿದ, ಹೂತುಹೋದ, ಗದಾ ಪರ್ವ,11,1
  • 517. ಹೂಳಿದ, ತುಂಬಿದ, ಉದ್ಯೋಗ ಪರ್ವ,2,14
  • 518. ಹೂಳಿದವು, ಆವರಿಸಿದವು, ಭೀಷ್ಮ ಪರ್ವ,8,56
  • 519. ಹೂಳು, ತುಂಬು , ಶಲ್ಯ ಪರ್ವ,3,5, ,
  • 520. ಹೂಳೆ ಬೀಸಿದ ಗುಳ, ಬಲವಾಗಿ ಅಕ್ಕ ಪಕ್ಕಕ್ಕೆ ಬಿಗಿದ ಹಕ್ಕರಿಕೆ, ಭೀಷ್ಮ ಪರ್ವ,8,44
  • 521. ಹೃತ್ಕಮಲ, ಹೃದಯ ಕಮಲ, ಗದಾ ಪರ್ವ,3,43
  • 522. ಹೃತ್ಸಂವಾದ, ಮನಸ್ಸಿನ ಸ್ವಗತ, ಭೀಷ್ಮ ಪರ್ವ,1,27
  • 523. ಹೃದಯಸಂಚಿತ, ಹೃದಯದಲ್ಲಿ ಶೇಖರಗೊಂಡಿದ್ದ, ಗದಾ ಪರ್ವ,12,25
  • 524. ಹೆಕ್ಕಳ, ಪೀಡೆ, ಸಭಾ ಪರ್ವ,11,15
  • 525. ಹೆಕ್ಕಳ, ಬಾಧೆ, ಆದಿ ಪರ್ವ,9,3
  • 526. ಹೆಕ್ಕಳ, ಸೊಕ್ಕು, ಭೀಷ್ಮ ಪರ್ವ,6,14
  • 527. ಹೆಕ್ಕಳವಿಕ್ಕಿದ, ಮೆರೆದಾಡಿದ., ಸಭಾ ಪರ್ವ,13,57
  • 528. ಹೆಕ್ಕಳಿಸು, ಹೆಚ್ಚಾಗು , ಗದಾ ಪರ್ವ,1,51, ,
  • 529. ಹೆಗ್ಗಹಳೆಗಳು, ದೊಡ್ಡ ಕಹಳೆಗಳು, ಭೀಷ್ಮ ಪರ್ವ,2,4
  • 530. ಹೆÉಗ್ಗಾಳೆ, ಒಂದು ವಾದ್ಯ, ದ್ರೋಣ ಪರ್ವ,9,16
  • 531. ಹೆಗ್ಗೊಂಬೆ, ಮರದ ದೊಡ್ಡ ಕೊಂಬೆ, ಅರಣ್ಯ ಪರ್ವ,6,22
  • 532. ಹೆಚ್ಚಾಳು, ಹಿರಿಮೆಯುಳ್ಳವನು, ಆದಿ ಪರ್ವ,11,21
  • 533. ಹೆಚ್ಚಾಳುತನ, ದೊಡ್ಡ ವೀರನೆಂಬ ಭಾವ, ಗದಾ ಪರ್ವ,5,49
  • 534. ಹೆಚ್ಚಿ, ಗರ್ವಿಸಿ, ಗದಾ ಪರ್ವ,5,9
  • 535. ಹೆಚ್ಚು, ಉಬ್ಬು, ವಿರಾಟ ಪರ್ವ,3,73
  • 536. ಹೆಡಗೆ, ಬುಟ್ಟಿ, ಆದಿ ಪರ್ವ,10,25
  • 537. ಹೆಡಗೈ, ಹಿಂಗೈ, ವಿರಾಟ ಪರ್ವ,7,35
  • 538. ಹೆಡತಲೆ, ಶಿಖರ, ದ್ರೋಣ ಪರ್ವ,1,44
  • 539. ಹೆಡತಲೆ, ತಲೆಯ ಹಿಂಭಾಗ., ದ್ರೋಣ ಪರ್ವ,14,21
  • 540. ಹೆಡೆತಲೆ, ಕತ್ತಿನ ಹಿಂಭಾಗ, ಉದ್ಯೋಗ ಪರ್ವ,1,20
  • 541. ಹೆಣಗು, ಹಿಡಿತದಿಂದ ತಪ್ಪಿಸಿ ಕೊಳ್ಳಲು ಪ್ರಯಾಸಪಡು, ಆದಿ ಪರ್ವ,5,13
  • 542. ಹೆಣದಿನಿಹಿ, ಹೆಣಗಳನ್ನು ತಿನ್ನುವವುಗಳು , ಗದಾ ಪರ್ವ,12,4, , , ಭೂತ , ಭೇತಾಳ , ಶಾಕಿನಿ ಇತ್ಯಾದಿಗಳು,
  • 543. ಹೆದರೆದೆಯ, ಪುಕ್ಕಲ, ದ್ರೋಣ ಪರ್ವ,10,9
  • 544. ಹೆಬ್ಬಟ್ಟೆ, ಹೆದ್ದಾರಿ, ಭೀಷ್ಮ ಪರ್ವ,9,38
  • 545. ಹೆಬ್ಬಲ, ದೊಡ್ಡ ಸೇನೆ, ದ್ರೋಣ ಪರ್ವ,5,40
  • 546. ಹೆಬ್ಬಿದಿರು, ದೊಡ್ಡ ಬೊಂಬು, ಆದಿ ಪರ್ವ,20,57
  • 547. ಹೆಬ್ಬೆಳಸು, ಸಮೃದ್ಧ ಬೆಳೆ, ಭೀಷ್ಮ ಪರ್ವ,9,13
  • 548. ಹೆಮ್ಮಕ್ಕಳು, ಹೆಣ್ಣುಮಕ್ಕಳು, ಭೀಷ್ಮ ಪರ್ವ,8,31
  • 549. ಹೆಮ್ಮಳೆ, ಭಾರಿಯ ಮಳೆ, ಅರಣ್ಯ ಪರ್ವ,12,44
  • 550. ಹೆರತೆಗೆ, ಹೊರಬರುವುದು, ಗದಾ ಪರ್ವ,6,23
  • 551. ಹೆರದೆಗೆ, ಹಿಂದೆಗೆ , ಗದಾ ಪರ್ವ,7,3
  • 552. ಹೆರಸಾರು, ಪಕ್ಕಕ್ಕೆ ಸರಿ, ಗದಾ ಪರ್ವ,7,7
  • 553. ಹೆರೆ, ಎಣ್ಣೆ ಹಾಕು, ಕರ್ಣ ಪರ್ವ,8,12
  • 554. ಹೇಮಗಿರಿ, ಮೇರುಗಿರಿ, ಆದಿ ಪರ್ವ,18,10
  • 555. ಹೇರಂಬ, ಗಣಪತಿ, ಅರಣ್ಯ ಪರ್ವ,6,12
  • 556. ಹೇರಡವಿ, ದಟ್ಟಡವಿ, ಭೀಷ್ಮ ಪರ್ವ,5,8
  • 557. ಹೇರಾನೆ, ಹಿರಿದಾದ ಆನೆ , ಗದಾ ಪರ್ವ,3,9
  • 558. ಹೇರಾಸಿ, ದೊಡ್ಡರಾಸಿ, ದ್ರೋಣ ಪರ್ವ,2,69
  • 559. ಹೇರಾಳ, ಅಧಿಕ, ಕರ್ಣ ಪರ್ವ,24,32
  • 560. ಹೇರಾಳ, ಧಾರಾಳ, ಆದಿ ಪರ್ವ,10,21
  • 561. ಹೇರಿತು, ತುಂಬಿತು, ಗದಾ ಪರ್ವ,7,28, ,
  • 562. ಹೇರುಗಳು, ಗಾಯದಿಂದಾದ ತೂತುಗಳು, ಗದಾ ಪರ್ವ,5,40
  • 563. ಹೇರುರ, ವಿಶಾಲವಕ್ಷ ಸ್ಥಳ, ಆದಿ ಪರ್ವ,13,37
  • 564. ಹೇವ, ದಾಕ್ಷಿಣ್ಯ, ದ್ರೋಣ ಪರ್ವ,6,25
  • 565. ಹೇವಗೆಡಿಸಿದವರು, ಅವಮಾನಗೊಳಿಸಿದವರು, ಸಭಾ ಪರ್ವ,16,10
  • 566. ಹೇವಮಾರಿ, ಮಾನಗೇಡಿ, ಕರ್ಣ ಪರ್ವ,4,27
  • 567. ಹೇವರಿಸು, ಅಸಹ್ಯ ಪಡು, ಕರ್ಣ ಪರ್ವ,19,54
  • 568. ಹೇಷಾನಿನದ, ಕೆನೆತ, ಭೀಷ್ಮ ಪರ್ವ,4,98
  • 569. ಹೇಷಾರವ, ಕುದುರೆಗಳ ಧ್ವನಿ, ವಿರಾಟ ಪರ್ವ,10,54
  • 570. ಹೇಷಿತರವ, ಕುದುರೆಗಳು ಕೆನೆಯುವ ಸದ್ದು, ಭೀಷ್ಮ ಪರ್ವ,2,3
  • 571. ಹೇಳಿಕೆ ಆಯ್ತು, ಸುದ್ದಿ ಹಬ್ಬಿತು, ಭೀಷ್ಮ ಪರ್ವ,6,4
  • 572. ಹೇಳಿಕೆ ಆಯ್ತು, ಅಪ್ಪಣೆ ಆಯಿತು, ಭೀಷ್ಮ ಪರ್ವ,9,50
  • 573. ಹೇಳಿಗೆ, (ಹಾವುಗಳನ್ನಿಡುವ) ಬಿದಿರಿನ ಬುಟ್ಟಿ, ಕರ್ಣ ಪರ್ವ,1,1
  • 574. ಹೇಳಿಗೆ, ಬುಟ್ಟಿ, ಸಭಾ ಪರ್ವ,16,24
  • 575. ಹೈಡಿಂಬ, ಘಟೋತ್ಕಚ, ದ್ರೋಣ ಪರ್ವ,3,21
  • 576. ಹೊಂಗರಿ, ಚಿನ್ನದಗರಿ (ಬಾಣದ ಹಿಂದಿನ ಗರಿ) ಬಾಯಿಧಾರೆ, ಶಲ್ಯ ಪರ್ವ,3,65
  • 577. ಹೊಂಗಿದ, ಉಬ್ಬಿದ, ದ್ರೋಣ ಪರ್ವ,1,22
  • 578. ಹೊಂಗು, ಹಿಗ್ಗು., ಉದ್ಯೋಗ ಪರ್ವ,8,8
  • 579. ಹೊಂಗು, ಉಬ್ಬು, ವಿರಾಟ ಪರ್ವ,1,28
  • 580. ಹೊಂಗು, ಉಕ್ಕಿಚಿಮ್ಮು, ಆದಿ ಪರ್ವ,16,62
  • 581. ಹೊಂಗು, ಹೊಮ್ಮು ಉಬ್ಬು, ಭೀಷ್ಮ ಪರ್ವ,3,72
  • 582. ಹೊಂಗು, ದೊಡ್ಡದಾಗು, ಆದಿ ಪರ್ವ,13,25
  • 583. ಹೊಂಗೊಡ, ಬಂಗಾರದ ಕೊಡ, ದ್ರೋಣ ಪರ್ವ,1,37
  • 584. ಹೊಂತಕಾರಿ, ವೀರರು, ಕರ್ಣ ಪರ್ವ,10,9
  • 585. ಹೊಂತಕಾರಿ, ಚತುರರು, ದ್ರೋಣ ಪರ್ವ,12,7
  • 586. ಹೊಂದಂಡಿಗೆ, ಬಂಗಾರದ ಪಲ್ಲಕ್ಕಿ, ದ್ರೋಣ ಪರ್ವ,8,55
  • 587. ಹೊಂದಾಳ, ಚಿನ್ನದ ಬಣ್ಣದ ತಾಳ, ವಿರಾಟ ಪರ್ವ,6,58
  • 588. ಹೊಂದಿಕೆ ಬಿರುಬು, ಕಾಠಿಣ್ಯ , ಶಲ್ಯ ಪರ್ವ,2,26
  • 589. ಹೊಂಪುಳಿ, ಪುಲಕಿತ, ಆದಿ ಪರ್ವ,13,61
  • 590. ಹೊಂಪುಳಿಯೋದನು, ರೋಮಾಂಚಗೊಂಡನು., ಭೀಷ್ಮ ಪರ್ವ,7,17
  • 591. ಹೊಂಪುಳಿವೋಗಿ, ರೋಮಾಂಚನ , ಅರಣ್ಯ ಪರ್ವ,11,5
  • 592. ಹೊಂಬರಹ, ಚಿನ್ನದ ರೇಖೆಗಳಲ್ಲಿನ ಬರಹ, ಗದಾ ಪರ್ವ,5,41
  • 593. ಹೊಂಬಳಿ, ಚಿನ್ನವನ್ನು ಲೇಪಿಸಿದ ವಸ್ತ್ರ (ಪಳಿ, ಗದಾ ಪರ್ವ,4,14
  • 594. ಹೊಂಬಾಳೆ, ಅಡಕೆ ಅಥವಾ ತೆಂಗಿನ ಹೂವಿನ ಗೊಂಚಲು, ಆದಿ ಪರ್ವ,12,11
  • 595. ಹೊಂಬೆಳೆ, ಹೊನ್ನಿನ ಬೆಳೆ, ಆದಿ ಪರ್ವ,16,64
  • 596. ಹೊಕ್ಕರು, ಪ್ರವೇಶಿಸಿದರು, ಆದಿ ಪರ್ವ,11,0
  • 597. ಹೊಕ್ಕವರು, ಮುನ್ನುಗ್ಗಿದವರು, ಭೀಷ್ಮ ಪರ್ವ,4,43
  • 598. ಹೊಕ್ಕು, ರಣರಂಗ ಪ್ರವೇಶಿಸಿ, ಭೀಷ್ಮ ಪರ್ವ,1,22
  • 599. ಹೊಕ್ಕುದು, ಮುನ್ನುಗ್ಗಿತು, ಭೀಷ್ಮ ಪರ್ವ,4,34
  • 600. ಹೊಗರಿಡುತ್ತ, ಉರಿಬೀರುತ್ತಾ, ಭೀಷ್ಮ ಪರ್ವ,9,39
  • 601. ಹೊಗರಿನ, ಕಾಂತಿಯ, ದ್ರೋಣ ಪರ್ವ,3,56
  • 602. ಹೊಗರುತೀಡು, ಫಳಫಳಗೊಳಿಸು, ಭೀಷ್ಮ ಪರ್ವ,4,94
  • 603. ಹೊಗರೇರಿತು, ಕಳೆಯೇರಿತು, ಭೀಷ್ಮ ಪರ್ವ,10,14
  • 604. ಹೊಗರೇಳು, ಉತ್ಸಾಹಿತನಾಗು, ಕರ್ಣ ಪರ್ವ,13,22
  • 605. ಹೊಗರೊಗು, ಕಾಂತಿ ಸೂಸು, ವಿರಾಟ ಪರ್ವ,7,32
  • 606. ಹೊಗಲಿ, ಪ್ರವೇಶಿಸಲಿ, ಭೀಷ್ಮ ಪರ್ವ,8,21
  • 607. ಹೊಗಳು, ವರ್ಣಿಸು, ವಿರಾಟ ಪರ್ವ,5,9
  • 608. ಹೊಗಳು<ಪುಗಳ್ ಹಳೆಗನ್ನಡದಲ್ಲಿ ಪುಗಳ್, ಹೊಗಳು ಎಂದರೆ ವಿವರ ಹೇಳು ಎಂದರ್ಥ ಅಷ್ಟೇ. ಈಗಲೂ ಸಬ್ ರಿಜಿಸ್ಟ್ರಾರರ ಕಛೇರಿಯಲ್ಲಿ ಜಮೀನಿನ ಚೆಕ್ಕು ಬಂದಿ ಇತ್ಯಾದಿಗಳನ್ನು ಹೊU, ವಿರಾಟ ಪರ್ವ,5,9
  • 609. ಹೊಗಿಸು, ಹೋಗುವಂತೆ ಮಾಡು , ಗದಾ ಪರ್ವ,5,25,
  • 610. ಹೊಗು, ಪ್ರವೇಶಿಸು., ಗದಾ ಪರ್ವ,3,39
  • 611. ಹೊಗುವತ್ತ, ಹೋದ ಕಡೆಗೆ, ದ್ರೋಣ ಪರ್ವ,1,2
  • 612. ಹೊಗೆದನು, ಹೊಗೆಯಾಡಿದನು, ಭೀಷ್ಮ ಪರ್ವ,9,7
  • 613. ಹೊಗೆದುದಂಬರ, ಆಕಾಶದಲ್ಲಿ ಹೊಗೆ ಕಾಣಿಸಿತು, ವಿರಾಟ ಪರ್ವ,4,29
  • 614. ಹೊಗೆದುದು, ಹೊಗೆ ತುಂಬಿತು, ಸಭಾ ಪರ್ವ,1,1
  • 615. ಹೊಗೆದುದು, ಕಾಂತಿಹೀನವಾಯ್ತು, ಆದಿ ಪರ್ವ,8,91
  • 616. ಹೊಗೆದೆಗೆದ, ಹೊಗೆಯಿಂದಾದ ಕಪ್ಪನ್ನು ತೆಗೆದು ಶುದ್ಧೀಕರಿಸಿದ, ಶಲ್ಯ ಪರ್ವ,2,6
  • 617. ಹೊಗೆವಂದು, ಹೊಗೆ ಕಾರುವ ಹಾಗೆ (ಸುಡುವ) ಖತಿ, ಭೀಷ್ಮ ಪರ್ವ,9,22
  • 618. ಹೊಗೆವೆರಸಿ, (ಹೊಗೆ+ಬೆರಸಿ), ಗದಾ ಪರ್ವ,11,67
  • 619. ಹೊಟ್ಟನೂಕಿ, ಜಳ್ಳಿನಂತಿರುವ ರಾಜರನ್ನು ಮುಂದೆ ನೂಕಿ ಇಟ್ಟಳಿಸು ಆಕ್ರಮಿಸು, ಕರ್ಣ ಪರ್ವ,11,34
  • 620. ಹೊಟ್ಟುಗ, ಬಲಹೀನ, ದ್ರೋಣ ಪರ್ವ,5,43
  • 621. ಹೊಟ್ಟುಗರ, ಸತ್ವವಿಲ್ಲದವರ, ದ್ರೋಣ ಪರ್ವ,2,71
  • 622. ಹೊಟ್ಟುಗುಟ್ಟು, ವ್ಯರ್ಥಾಲಾಪ ಮಾಡು. ಬತ್ತವನ್ನು ಕುಟ್ಟಿದರೆ ಅಕ್ಕಿ ಬರುತ್ತದೆ. ಬರಿಯ ತವುಡನ್ನೇ ಕುಟ್ಟಿದರೆ....? ಇದೊಂದು ನಾಣ್ಣುಡಿ., ವಿರಾಟ ಪರ್ವ,6,17
  • 623. ಹೊಟ್ಟೆ ಹೊರೆಕ, ವೃಥಾ ಹೊಟ್ಟೆ ಹೊರೆಯುವವರು, ದ್ರೋಣ ಪರ್ವ,10,58
  • 624. ಹೊಡಕರಿಸಿ, ಸ್ಫೂರ್ತಿಗೊಂಡು, ಭೀಷ್ಮ ಪರ್ವ,9,18
  • 625. ಹೊಡಕರಿಸು, ಮುಖತೋರಿಸು , ಗದಾ ಪರ್ವ,5,43
  • 626. ಹೊಡಮರಳಿ, ಹೊರಳು , ವಿರಾಟ ಪರ್ವ,3,17
  • 627. ಹೊಡವಂಟು, ಪೊಡಮಟ್ಟು, ಶಲ್ಯ ಪರ್ವ,3,31
  • 628. ಹೊಡವಂಡಿಸು, ನಮಸ್ಕಾರ ಮಾಡಿಸು, ಆದಿ ಪರ್ವ,16,7
  • 629. ಹೊಡೆ, ಪೈರಿನಲ್ಲಿ ತೆನೆ ಬರುವುದಕ್ಕಿಂತ ಮೊದಲಿನ ಸ್ಥಿತಿ, ಆದಿ ಪರ್ವ,16,64
  • 630. ಹೊಡೆ ಮರಳಿದ, ಅಡಿ ಮೇಲಾದ, ಭೀಷ್ಮ ಪರ್ವ,8,18
  • 631. ಹೊಡೆ ಮರಳೆ, ಬುಡ ಮೇಲಾಗು, ದ್ರೋಣ ಪರ್ವ,15,36
  • 632. ಹೊಡೆಗೆಡೆ, ಉದ್ದಕ್ಕೆ ಬೀಳು, ದ್ರೋಣ ಪರ್ವ,10,10
  • 633. ಹೊಡೆಗೆಡೆದವು, ಕೆಳಕ್ಕೆ ಬೀಳಿಸಿದವು, ಭೀಷ್ಮ ಪರ್ವ,4,14
  • 634. ಹೊಡೆಗೊಳಿಸಲು, ಅಪ್ಪಳಿಸಲು, ಭೀಷ್ಮ ಪರ್ವ,4,28
  • 635. ಹೊಡೆಮಗುಳ್, ಚೇತರಿಸು, ಕರ್ಣ ಪರ್ವ,24,57
  • 636. ಹೊಡೆಮರಳು, ತಿರುಗು, ವಿರಾಟ ಪರ್ವ,6,64
  • 637. ಹೊಡೆಸೆಂಡು, ಚಂಡಿನಲ್ಲಿ ಹೊಡೆದಾಡುವ ಆಟ, ಶಲ್ಯ ಪರ್ವ,3,11
  • 638. ಹೊಣಕಿಗರು, ಹೋರಾಟಗಾರರು, ಭೀಷ್ಮ ಪರ್ವ,4,21
  • 639. ಹೊಣಕೆ, ಏರಾಟ, ದ್ರೋಣ ಪರ್ವ,15,60
  • 640. ಹೊಣಕೆ, ಕಾಳಗ, ಗದಾ ಪರ್ವ,4,38
  • 641. ಹೊಣಕೆಯಿಂದ, ಶಪಥಪೂರ್ಣನಾಗಿ, ಭೀಷ್ಮ ಪರ್ವ,8,26
  • 642. ಹೊಣೆ, ಜವಾಬ್ದಾರಿ (ಇಲ್ಲಿ 'ಸೇಡು' ಎಂಬರ್ಥ) ಸೂಠಿ, ಗದಾ ಪರ್ವ,10,16
  • 643. ಹೊಣೆಗಾರ, ಜವಾಬ್ದಾರ, ಆದಿ ಪರ್ವ,9,11
  • 644. ಹೊತ್ತ ಅಸು, ಹೊತ್ತ ಜೀವ, ವಿರಾಟ ಪರ್ವ,4,38
  • 645. ಹೊತ್ತು, ಪ್ರಾಪ್ತ, ಆದಿ ಪರ್ವ,11,3
  • 646. ಹೊತ್ತುಗಳೆ, ಕಾಲ ಕಳೆ, ಆದಿ ಪರ್ವ,15,20
  • 647. ಹೊದಕುಳಿ, ಬೇಗುದಿ, ಆದಿ ಪರ್ವ,8,3
  • 648. ಹೊದರ, ಗುಂಪಿನ, ದ್ರೋಣ ಪರ್ವ,2,70
  • 649. ಹೊದರಡಿಸಿ, ಗುಂಪಾಗಿ ಸೇರಿ, ಭೀಷ್ಮ ಪರ್ವ,9,37
  • 650. ಹೊದರಹೊಯಿಲಿನಲ್ಲಿ, ಸಮೂಹವನ್ನು ಹರಡಿ, ಭೀಷ್ಮ ಪರ್ವ,3,66
  • 651. ಹೊದರಿನ ಹೊರಳಿ, (ಆಭರಣಗಳ) ಗುಂಪಿನ ಕಾಂತಿ., ವಿರಾಟ ಪರ್ವ,10,10
  • 652. ಹೊದರಿನ ಹೊರಳಿ, ಹಿಂಡು ಹಿಂಡಾಗುವ, ವಿರಾಟ ಪರ್ವ,4,34
  • 653. ಹೊದರು, ಪೊದರು, ಗದಾ ಪರ್ವ,2,12
  • 654. ಹೊದರು, ದಟ್ಟ, ಆದಿ ಪರ್ವ,20,27
  • 655. ಹೊದರುದೆಗೆ, ಪ್ರಕಾಶಿಸು, ಶಲ್ಯ ಪರ್ವ,2,26
  • 656. ಹೊದರೆದ್ದು ಮುಗಿದ, ಗುಂಪು ಗುಂಪಾಗಿ ಮುಗ್ಗರಿಸಿದ, ಭೀಷ್ಮ ಪರ್ವ,6,3
  • 657. ಹೊದರೇಳು, ಹೊದ¾ು +ಏಳು = ಗುಂಪಾಗು, ವಿರಾಟ ಪರ್ವ,6,63
  • 658. ಹೊದಸು, ಮುಚ್ಚು, ಕರ್ಣ ಪರ್ವ,17,1
  • 659. ಹೊದೆ, ಬತ್ತಳಿಕೆ, ಶಲ್ಯ ಪರ್ವ,3,67
  • 660. ಹೊದೆ, ಕಟ್ಟು, ಕರ್ಣ ಪರ್ವ,18,20
  • 661. ಹೊದೆ, ಕಟ್ಟುಗಳು, ಶಲ್ಯ ಪರ್ವ,2,34
  • 662. ಹೊದೆ, ಕೈಗವಸು, ಭೀಷ್ಮ ಪರ್ವ,4,12
  • 663. ಹೊದೆಗಳ ಕೆದರಿ, ಕಟ್ಟನ್ನು ಬಿಚ್ಚಿ, ಭೀಷ್ಮ ಪರ್ವ,8,34
  • 664. ಹೊದೆಗೆದರಿ, ಬತ್ತಳಿಕೆಯಿಂದ ಹೊರಬಿದ್ದು, ದ್ರೋಣ ಪರ್ವ,1,58
  • 665. ಹೊದೆಗೆದರು, ಎಲ್ಲೆಡೆ ಹರಡು, ಕರ್ಣ ಪರ್ವ,13,22
  • 666. ಹೊದೆಸಿದವು, ಆವರಿಸಿದವು, ಭೀಷ್ಮ ಪರ್ವ,9,37
  • 667. ಹೊದ್ದದೆ, ಹೋಗದೆ, ಆದಿ ಪರ್ವ,8,93
  • 668. ಹೊದ್ದಿ, ಸಮೀಪಿಸಿ, ದ್ರೋಣ ಪರ್ವ,1,21
  • 669. ಹೊದ್ದಿಗ, ಹತ್ತಿರದವನು, ಭೀಷ್ಮ ಪರ್ವ,8,21
  • 670. ಹೊದ್ದಿತಕೆ, ಹಿಡಿದುದಕ್ಕೆ , ಗದಾ ಪರ್ವ,7,53
  • 671. ಹೊದ್ದಿದನು, ಸೇರಿದನು, ಭೀಷ್ಮ ಪರ್ವ,7,4
  • 672. ಹೊದ್ದಿದರು, ಬಳಿ ಸಾರಿದರು, ಭೀಷ್ಮ ಪರ್ವ,4,74
  • 673. ಹೊದ್ದಿಸು, ಅನ್ವಯಿಸು, ವಿರಾಟ ಪರ್ವ,6,25
  • 674. ಹೊದ್ದು, (ಪೊರ್ದು) ಉಂಟಾಗು , ವಿರಾಟ ಪರ್ವ,2,25
  • 675. ಹೊದ್ದು, ಹತ್ತಿರಬಾ, ವಿರಾಟ ಪರ್ವ,10,68
  • 676. ಹೊನಲುಗಿಡಿ, ಕಿಡಿಗಳ ಪ್ರವಾಹ, ಆದಿ ಪರ್ವ,11,33
  • 677. ಹೊನ್ನ ಸಾರಿ, ಚಿನ್ನದ ಪಗಡೆಕಾಯಿ, ವಿರಾಟ ಪರ್ವ,1,17
  • 678. ಹೊನ್ನಾಯುಗ, ಚಿನ್ನದ ಹಿಡಿಕೆ, ವಿರಾಟ ಪರ್ವ,6,35
  • 679. ಹೊಮ್ಮಿಣಿ, ಚಿನ್ನದ ಬಣ್ಣದ ಹಗ್ಗ, ಸಭಾ ಪರ್ವ,12,97
  • 680. ಹೊಯ್, ವರ್ಷಿಸು, ಕರ್ಣ ಪರ್ವ,13,4
  • 681. ಹೊಯಿ, ಹೊಡಿ, ಭೀಷ್ಮ ಪರ್ವ,4,31
  • 682. ಹೊಯಿದಾಡಿದರು, ಹೋರಾಡಿದರು, ಭೀಷ್ಮ ಪರ್ವ,4,71
  • 683. ಹೊಯಿಲಿನ, ಶಬ್ದದ, ಭೀಷ್ಮ ಪರ್ವ,4,10
  • 684. ಹೊಯಿಲು, ಪೆಟ್ಟಿನ ದನಿ, ಭೀಷ್ಮ ಪರ್ವ,4,78
  • 685. ಹೊಯ್ಕಂಬಿ, ಹೊಡೆಯುವ ಕೋಲು, ಆದಿ ಪರ್ವ,7,16
  • 686. ಹೊಯ್‍ಕೆಯ್, ಸರಿಸಮಾನ, ದ್ರೋಣ ಪರ್ವ,3,34
  • 687. ಹೊಯ್ಕೈಯ್, ಸರಿಸಮಾನ, ಸಭಾ ಪರ್ವ,13,27
  • 688. ಹೊಯ್ಗಳು, ಹೊಡೆತಗಳು, ಗದಾ ಪರ್ವ,6,20
  • 689. ಹೊಯ್ದಾಡಿ, ಯುದ್ಧಮಾಡಿ, ಭೀಷ್ಮ ಪರ್ವ,9,36
  • 690. ಹೊಯ್ದಾಡಿ, ಹೊಡೆದಾಡಿ, ಕರ್ಣ ಪರ್ವ,3,0
  • 691. ಹೊಯ್ದು, ಸದೆಬಡಿದು, ಭೀಷ್ಮ ಪರ್ವ,1,22
  • 692. ಹೊಯ್ದು, ಪೆಟ್ಟು ನೀಡು, ಉದ್ಯೋಗ ಪರ್ವ,4,87
  • 693. ಹೊಯ್ಯು, ಬಲಿಹಾಕು., ಶಲ್ಯ ಪರ್ವ,3,42
  • 694. ಹೊಯ್ಲ, ಹೊಯ್ಯುವಿಕೆಯನ್ನು, ಸಭಾ ಪರ್ವ,1,74
  • 695. ಹೊಯ್ಲ, ಹೊಡೆತದ, ಗದಾ ಪರ್ವ,6,30
  • 696. ಹೊಯ್ಲ ಹೊದರೆದ್ದವು, ಹೊಡೆತಗಳು ಅಧಿಕವಾದುವು, ಸಭಾ ಪರ್ವ,2,108
  • 697. ಹೊಯ್ಲ ಹೋರಟೆ, ಹೊಡೆತದ ಆರ್ಭಟ, ವಿರಾಟ ಪರ್ವ,3,89
  • 698. ಹೊಯ್ಲಲಿ, ಏಟಿನಿಂದ, ದ್ರೋಣ ಪರ್ವ,5,2
  • 699. ಹೊಯ್ಲಿನ, ಪ್ರಹಾರದ, ಭೀಷ್ಮ ಪರ್ವ,4,37
  • 700. ಹೊರಗುಂದಿದರು, ಹೊರಗುಳಿದರು (?), ಆದಿ ಪರ್ವ,14,25
  • 701. ಹೊರಗುಗಣೆ, ಬಾಣಗಳ ಹೊರಭಾಗ, ಶಲ್ಯ ಪರ್ವ,3,5
  • 702. ಹೊರಬಾಹೆ, ಆಚಿನ , ಗದಾ ಪರ್ವ,6,28
  • 703. ಹೊರಬಾಹೆ, ಹೊರಭಾಗ, ಆದಿ ಪರ್ವ,7,65
  • 704. ಹೊರಬಿಗ, ಹೊರಗಡೆಯವನು, ಗದಾ ಪರ್ವ,6,19
  • 705. ಹೊರಬಿನೊಳು, ಉತ್ಸಾಹದಲ್ಲಿ, ದ್ರೋಣ ಪರ್ವ,6,59
  • 706. ಹೊರಬೀಸಿ, ತನ್ನ ದೇಹದ ಹೊರಕ್ಕೆ ಬೀಸುವಂತೆ ಮಾಡಿ, ಗದಾ ಪರ್ವ,6,31
  • 707. ಹೊರಬೀಳು, ಪಾರಾಗು, ಆದಿ ಪರ್ವ,8,21
  • 708. ಹೊರವಂಟ, ಹೊರಟ, ಗದಾ ಪರ್ವ,11,15
  • 709. ಹೊರವಂಡಿಸು, ಹೊರಡಿಸು, ಆದಿ ಪರ್ವ,10,29
  • 710. ಹೊರವಡಿಸು, ಹೊರಗೆ ಓಡಿಸು, ವಿರಾಟ ಪರ್ವ,5,17
  • 711. ಹೊರಳಿ, ಸಮೂಹ , ವಿರಾಟ ಪರ್ವ,2,50, ,
  • 712. ಹೊರಳಿ ಹೊದರು, ಸಮೂಹ ಒಗ್ಗೂಡು, ಭೀಷ್ಮ ಪರ್ವ,2,12
  • 713. ಹೊರಳಿಗಟ್ಟು, ಒಟ್ಟುಸೇರು, ಕರ್ಣ ಪರ್ವ,4,28
  • 714. ಹೊರಳಿಚು, ಮಗ್ಗುಲು ಸರಿಸು, ವಿರಾಟ ಪರ್ವ,8,91
  • 715. ಹೊರಳಿತು, ಹಿಂದಕ್ಕೆ ಸರಿಯಿತು, ಭೀಷ್ಮ ಪರ್ವ,9,12
  • 716. ಹೊರಳಿಯ ನರವ, ನರಸಮೂಹವ, ಭೀಷ್ಮ ಪರ್ವ,5,33
  • 717. ಹೊರಳಿಸು, ನೆಲದ ಮೇಲೆ ಹೊರಳಾಡಿಸು, ಶಲ್ಯ ಪರ್ವ,3,76
  • 718. ಹೊರಿಗೆ, ಪದರ, ಗದಾ ಪರ್ವ,7,31
  • 719. ಹೊರಿಗೆ, ಜವಾಬ್ದಾರಿ., ಉದ್ಯೋಗ ಪರ್ವ,4,117
  • 720. ಹೊರಿಗೆ, ಹೊಣೆ, ಸಭಾ ಪರ್ವ,1,41
  • 721. ಹೊರಿಗೆ, ಕೆಲಸ , ಗದಾ ಪರ್ವ,9,11
  • 722. ಹೊರಿಗೆವಾಳ, ರಕ್ಷಕ, ಅರಣ್ಯ ಪರ್ವ,16,18
  • 723. ಹೊರಿಸು, ಹೊರೆಯನ್ನು ಹಾಕು, ಗದಾ ಪರ್ವ,11,59
  • 724. ಹೊರುವೆನು, ಸೈರಿಸುವೆನು, ಭೀಷ್ಮ ಪರ್ವ,10,5
  • 725. ಹೊರೆ, ಸಲಹು, ಉದ್ಯೋಗ ಪರ್ವ,10,32
  • 726. ಹೊರೆ, ಪೋಷಿಸು, ಆದಿ ಪರ್ವ,10,15
  • 727. ಹೊರೆ, ಪೊರೆ, ವಿರಾಟ ಪರ್ವ,10,38
  • 728. ಹೊರೆ, ಕಟ್ಟು, ಗದಾ ಪರ್ವ,4,14
  • 729. ಹೊರೆಗೆ, ಸಮೀಪಕ್ಕೆ., ಗದಾ ಪರ್ವ,4,28
  • 730. ಹೊರೆದ, ಲೇಪಿಸಿದ, ಆದಿ ಪರ್ವ,15,35
  • 731. ಹೊರೆದವನ, ಪೋಷಿಸಿದವರ, ಭೀಷ್ಮ ಪರ್ವ,8,66
  • 732. ಹೊರೆದು, ಕಾಪಾಡಿ., ವಿರಾಟ ಪರ್ವ,10,20
  • 733. ಹೊರೆದೆಗೆದು, ಹಗುರ ಮಾಡಿ, ಗದಾ ಪರ್ವ,11,10
  • 734. ಹೊರೆಯಲು, ಕಾಪಾಡಲು, ಉದ್ಯೋಗ ಪರ್ವ,4,60
  • 735. ಹೊರೆಯೇರಿ, ಉಬ್ಬಿ, ಭೀಷ್ಮ ಪರ್ವ,7,34
  • 736. ಹೊರೆಯೇರು, ಪುಳಕಗೊಳ್ಳು, ಅರಣ್ಯ ಪರ್ವ,5,1
  • 737. ಹೊರೆಯೇರು, ಆನಂದವನ್ನು ಹೊಂದು, ದ್ರೋಣ ಪರ್ವ,1,22
  • 738. ಹೊರೆಯೊಳಗೆ, ಸಮೀಪದಲ್ಲಿ, ಭೀಷ್ಮ ಪರ್ವ,3,62
  • 739. ಹೊರೆವ, ರಕ್ಷಿಸುವ, ಭೀಷ್ಮ ಪರ್ವ,7,16
  • 740. ಹೊರೆವವರು, ಕಾಪಾಡುವವರು., ಗದಾ ಪರ್ವ,11,54
  • 741. ಹೊರೆಹೊಗದೆ, ಮೋಸಹೋಗದೆ, ಆದಿ ಪರ್ವ,18,2
  • 742. ಹೊರೆಹೊಗದೆ, ದಾಕ್ಷಿಣ್ಯವಿಲ್ಲದೆ, ದ್ರೋಣ ಪರ್ವ,1,39
  • 743. ಹೊಲಗೆ, ಹೊಲಿಗೆ, ದ್ರೋಣ ಪರ್ವ,12,8
  • 744. ಹೊಲಬು, ನೆಲೆ, ಉದ್ಯೋಗ ಪರ್ವ,4,13
  • 745. ಹೊಲಬುಗೆಡಿಸು, ದಿಕ್ಕುತಪ್ಪಿಸು, ಶಲ್ಯ ಪರ್ವ,3,57
  • 746. ಹೊಲಬುಹೊದ್ದದ, ತನ್ನ ನೆಲೆ ಕಾಣಿಸದ, ಭೀಷ್ಮ ಪರ್ವ,3,65
  • 747. ಹೊಲೆ, ಮಲಿನತೆ, ಭೀಷ್ಮ ಪರ್ವ,3,48
  • 748. ಹೊಲೆಯ, ಅಸ್ಪøಶ್ಯ, ಭೀಷ್ಮ ಪರ್ವ,3,48
  • 749. ಹೊಲ್ಲೆಹ, ನೀಚತನ., ಗದಾ ಪರ್ವ,9,7
  • 750. ಹೊಲ್ಲೆಹ, ರೀತಿ/ಬಗೆ, ಉದ್ಯೋಗ ಪರ್ವ,3,124
  • 751. ಹೊಲ್ಲೆಹ, ಕೆಟ್ಟದ್ದು, ಆದಿ ಪರ್ವ,19,33
  • 752. ಹೊಲ್ಲೆಹವು, ಅಧರ್ಮವಾದುದು, ಭೀಷ್ಮ ಪರ್ವ,7,30
  • 753. ಹೊಲ್ಲೆಹವೆ, ತಪ್ಪೆ ?, ವಿರಾಟ ಪರ್ವ,9,18
  • 754. ಹೊಳಕು, ಪ್ರಕಾಶಿಸು, ವಿರಾಟ ಪರ್ವ,4,32
  • 755. ಹೊಳಕು, ಕಾಣಿಸು, ಆದಿ ಪರ್ವ,7,32
  • 756. ಹೊಳಕೆಗಳೊ, ಕಾಂತಿಯೋ, ಭೀಷ್ಮ ಪರ್ವ,1,47
  • 757. ಹೊಳಲ ಪರಿವಾರ, ಕಾವಲು ಸೇನೆ, ಭೀಷ್ಮ ಪರ್ವ,1,8
  • 758. ಹೊಳಲು, ಪಟ್ಟಣ., ವಿರಾಟ ಪರ್ವ,1,22
  • 759. ಹೊಳಹು, ಹೊಳಪು, ಆದಿ ಪರ್ವ,16,3
  • 760. ಹೊಳಹು ದೂವಾಳಿ, ಕುದುರೆಯ ಗತಭೇದಗಳು, ಕರ್ಣ ಪರ್ವ,14,35
  • 761. ಹೊಳಹುಮಿಗೆ, ಕಾಂತಿ ಉಕ್ಕಲು, ವಿರಾಟ ಪರ್ವ,10,51
  • 762. ಹೊಳೆ, ಪ್ರಕಾಶಿಸು, ಆದಿ ಪರ್ವ,13,63
  • 763. ಹೊಳ್ಳಾಗದು, ಸುಳ್ಳಾಗದು, ದ್ರೋಣ ಪರ್ವ,8,51
  • 764. ಹೊಳ್ಳಿಸಬಹುದೆ, ಪಡೆದುಕೊಳ್ಳಬಹುದೆ, ದ್ರೋಣ ಪರ್ವ,3,49
  • 765. ಹೊಳ್ಳಿಸಿ, ಹೋಳುಮಾಡಿ, ದ್ರೋಣ ಪರ್ವ,2,33
  • 766. ಹೊಳ್ಳಿಸು, ಖಾಲಿಮಾಡು, ವಿರಾಟ ಪರ್ವ,7,14
  • 767. ಹೊಳ್ಳಿಸುತ್ತಿದೆ, ಬಲಗುಂದಿಸುತ್ತಿದೆ, ಭೀಷ್ಮ ಪರ್ವ,10,4
  • 768. ಹೊಳ್ಳಿಸೆ, ಹೊರಳಿಸುತ್ತ, ಭೀಷ್ಮ ಪರ್ವ,4,33
  • 769. ಹೊಳ್ಳು, ನಿಸ್ಸತ್ವ, ದ್ರೋಣ ಪರ್ವ,2,47
  • 770. ಹೊಳ್ಳು, ನಿಷ್ಪ್ರಯೋಜಕ, ಆದಿ ಪರ್ವ,14,34
  • 771. ಹೊಳ್ಳು, ಪೊಟರೆ, ಆದಿ ಪರ್ವ,19,23
  • 772. ಹೊಳ್ಳುಗ, ಟೊಳ್ಳಾಗಿರುವವರು, ಕರ್ಣ ಪರ್ವ,24,40
  • 773. ಹೊಳ್ಳುಗರನು, ಸತ್ವ ಹೀನರನ್ನು, ದ್ರೋಣ ಪರ್ವ,2,30
  • 774. ಹೊಳ್ಳುಗಳೆ, ವ್ಯರ್ಥವೆಂದು ತಿರಸ್ಕರಿಸು, ಕರ್ಣ ಪರ್ವ,5,2
  • 775. ಹೊಳ್ಳುಗಳೆ, ಕಡೆಗಣಿಸು, ಆದಿ ಪರ್ವ,14,13
  • 776. ಹೊಳ್ಳುವಾರು, ಅಪ್ರಯೋಜಕ, ಕರ್ಣ ಪರ್ವ,25,16
  • 777. ಹೋತು+ತರಿಹಿಗಳು, ಹೋತಗಳನ್ನು ಬಲಿಕೊಡುವವರು, ಕರ್ಣ ಪರ್ವ,22,25
  • 778. ಹೋದರು, ನಾಶಹೊಂದಿದರು, ಗದಾ ಪರ್ವ,11,43
  • 779. ಹೋರಟಿ, ಹೋರಾಟ/ಕಾದಾಟ, ಉದ್ಯೋಗ ಪರ್ವ,3,75
  • 780. ಹೋರಬೇಕೇ, ಯುದ್ಧ ಮಾಡಬೇಕೇ ? ಆರಯಿದು, ಭೀಷ್ಮ ಪರ್ವ,8,35
  • 781. ಹೋರಿ, ಪ್ರಯತ್ನಿಸಿ, ಆದಿ ಪರ್ವ,14,0
  • 782. ಹೋರಿಕೆ, ಹೋರಾಟ, ಗದಾ ಪರ್ವ,1,64
  • 783. ಹೋರಿದು, ಹೋರಾಡಿ, ದ್ರೋಣ ಪರ್ವ,3,37
  • 784. ಹೋರಿಸು, ಹೆಣಗಿಸು, ಆದಿ ಪರ್ವ,8,62
  • 785. ಹೋರು, ವಿರೋಧ, ಕರ್ಣ ಪರ್ವ,26,37
  • 786. ಹೋರುಗಳೆ, ಸೀಳುವುದು, ಶಲ್ಯ ಪರ್ವ,3,38
  • 787. ಹೋರೆಗ, ಜ್ಯೋತಿಷಿ , ಆದಿ ಪರ್ವ,13,5
  • 788. ಹೋಲ, ಹೊಲಿಕೆ, ಕರ್ಣ ಪರ್ವ,4,31
  • 789. ಹೋಲುವಿಕೆಯಿಂಬಿಡಿಯಲಾರದೆ, ಹೋಲುವಿಕೆಯ + ಇಂಬು ಇಡಿಯಲಾರದೆ , ವಿರಾಟ ಪರ್ವ,4,1
  • 790. ಹೋಳುಗಳೆವೆ, ಹೋಳು ಮಾಡು, ದ್ರೋಣ ಪರ್ವ,10,31
  • 791. ಅಸಮಸೆಗೆ-, ಅಡ್ಡಾದಿಡ್ಡಿಗೆ, ಸಭಾ ಪರ್ವ,2,105
  • 792. ದಿಷ್ಟಿವಾಳ, ಸೂಕ್ಷ್ಮ ನೋಟವುಳ್ಳ ಗುರಿಕಾರರು, ಸಭಾ ಪರ್ವ,2,105
  • 793. ಹಾರುವಿಕೆ, ಬ್ರಾಹ್ಮಣಿಕೆ, ಆದಿ ಪರ್ವ,15,36

[][][]

ಪರಿವಿಡಿ

[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ

[ಸಂಪಾದಿಸಿ]
  1. ಕುಮಾರವ್ಯಾಸ ಕೋಶ
  2. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
  3. ಸಿರಿಗನ್ನಡ ಅರ್ಥಕೋಶ