ವಿಷಯಕ್ಕೆ ಹೋಗು

ಪುಟ:ಪೈಗಂಬರ ಮಹಮ್ಮದನು.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

IV. ಮಕ್ಕಾ ನಗರ ಪರಿತ್ಯಾಗ ಮಾಡುತ್ತ ಕೊಬಾ ಗ್ರಾಮವನ್ನು ಸೇರಿದನು. ಕೆಲವು ದಿನಗಳು ಕಳೆದ ಬಳಿಕ, ಯಾತ್ರಿಬ್ ನಗರದಲ್ಲಿದ್ದ ಮಹಮ್ಮದನ ಶಿಷ್ಯರು ಕೋಬಾ ಗ್ರಾಮಕ್ಕೆ ಬಂದು, ಅವನನ್ನು ಅಟ್ಟಹಾಸದಿಂದ ಮೆರವಣಿಗೆ ಮಾಡಿ ಕೊಂಡು ತವರಿಗೆ ಕರೆದುಕೊಂಡು ಹೋದರು. ಕ್ರಿಸ್ತ ಶಕ ೬೨೨ನೆಯ ಸಂವತ್ಸರದ ಜೂಲೈ ತಿಂಗಳು ೨ನೆಯ ತಾರೀಖಿನ ದಿನ ಮಹಮ್ಮದನು ಯಾತ್ರಿಬ್ ನಗರವನ್ನು ಸೇರಿದನು. ಅಂದಿನಿಂದ ಹಿ ಜಿ ರಾ ಎಂಬ ಮಹ ಮ್ಮದಿಯ ಶಕವು ಪ್ರಾರಂಭವಾಯಿತು. ಅಂದಿನಿಂದ ಯಾತ್ರಿಬ್ ನಗರವೇ ಮಹಮ್ಮದನ ವಾಸಸ್ಥಾನವಾಯಿತು.