ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
೫೬. ಪೈಗಂಬರ ಮಹಮ್ಮದನು ಮೃದನು ಹೇಗೆ ವರ್ತಿಸಿದ್ದನೆಂದು ಶಿಷ್ಯರು ಕೇಳಿದಾಗ, ಆಕೆಯು ಅದಕ್ಕೆ ಉತ್ತರವಾಗಿ, ಖುರಾಸಿನ ಕೆಲವು ಪದ್ಯಗಳನ್ನು ಓದಿ ಹೇಳುತ್ತಿದ್ದಳಂತೆ. ಹೀಗೆ, ಮಹಮ್ಮದನು ತಾನು ಆಡಿದುದನ್ನು ಮಾಡಿ ತೋರಿಸಿದ ಮಹ ಸೀಯನಾಗಿದ್ದುದರಿಂದಲೇ ಅವನ ಅಧಿನಾಯಕತ್ವವು ಅಷ್ಟು ಫಲಕಾರಿ ಯಾಗಿ ಪರಿಣಮಿಸಿತು.
- ಕೊಟ್ಟ ಭಾಷೆಗೆ ತಪ್ಪದೆ ನಡೆಯುವುದು ಅಧಿನಾಯಕತ್ವದ ಅವಶ್ಯ ಲಕ್ಷಣ. ಮಹಮ್ಮದನು ಇದಕ್ಕೂ ಆದರ್ಶಪ್ರಾಯನಾಗಿದ್ದನು. ಬದರ್ ಕದನದ ವೇಳೆಯಲ್ಲಿ ನಡೆದ ಒಂದು ಚಿತ್ರವಾದ ಸಂಗತಿಯನ್ನು ಇದಕ್ಕೆ ನಿದರ್ಶನವಾಗಿ ಹೇಳಬಹುದು : ಆ ಮಹಮ್ಮದನ ಕಡೆಯ ಸೈಸಿಕರ ಸಂಖ್ಯೆಯು ಬಹಳ ಕಡಿಮೆಯಾಗಿದ್ದಿತು. ಆಗಿನ ಸಂದಿಗ್ಧ ಸ್ಥಿತಿಯಲ್ಲಿ ಒಬ್ಬ ಸೈನಿಕನು ಹೆಚ್ಚಾಗಿ ದೊರೆಯುವುದೆಂದರೆ ಹತ್ತು ಮಂದಿಯ ಬೆಲೆಯಾಗಿದ್ದಿತು. ಹೀಗಿರುವಾಗ, ಇಬ್ಬರು ಸೈನಿಕರು ಅಲ್ಲಿಂದ ಹೊರಟು ಮದೀನಾ ನಗರಕ್ಕೆ ಬರುತ್ತಿರುವ ಸಮಯದಲ್ಲಿ ಶತ್ತು)ಗಳ ಕೈಗೆ ಸಿಕ್ಕಲು, ಶತ್ರುಗಳು ಅವರನ್ನು ತಡೆದರು. ಅವರು ಒಹಳವಾಗಿ ಕೇಳಿಕೊಂಡುದರ ಮೇಲೆ, ಮಹಮ್ಮದನ ಪಕ್ಷವನ್ನು ಬಿಟ್ಟು ಹಿಂದಿರುಗಿ ಬರುವ ಷರತ್ತಿನ ಮೇಲೆ, ಅವರು ಬಿಡುಗಡೆಯಾದರು, ಯಥಾ ಕಾಲದಲ್ಲಿ ಮಹಮ್ಮದನಿಗೆ ಈ ಸಂಗತಿಯು ತಿಳಿದು, ತನಗೆ ಯೋಧರ ಆವಶ್ಯಕತೆಯು ವಿಶೇಷವಾಗಿದ್ದರೂ, ಅಂತಹ ವಿಷಮ ಸಂಕಟದ ವೇಳೆಯಲ್ಲಿಯೂ ಕೂಡ ಅವನು ಆ ಸೈನಿಕರನ್ನು ತನ್ನೊಡನೆ ಸಿಲ್ಲಿಸಿಕೊಳ್ಳದೆ, " ಎಂತಹ ಸಂದರ್ಭಗಳೇ ಒದಗಿದರೂ ನಾವು ಎಂದಿಗೂ ವಚನ ಭ್ರಷ್ಟರಾಗಬಾರದು. ಭಗವಂತನ ದಯೆಯೊಂದು ನಮಗಿದ್ದರೆ ಉಳಿದ ಯಾವ ಸಾಧನವಿಲ್ಲದಿದ್ದರೂ ಚಿಂತೆಯಿಲ್ಲ; ನಮಗೆ ಅವನ ಬಲವೇ ಬಲ; ನೀವು ಹೋಗಿ ಬನ್ನಿರಿ” ಎಂದು ಹೇಳಿ ಅವರನ್ನು ಕಳುಹಿಸಿಕೊಟ್ಟನು. ಮಹಮ್ಮದನ ಇಂತಹ ವರ್ತನೆಯನ್ನು ಕಂಡು ಅವನ ಶತ್ರುಗಳೂ ವಿಸ್ಮಿತರಾದರು. ಮತ್ತೊಂದು ಸಂದರ್ಭದಲ್ಲಿ, ಮಹಮ್ಮದನ ಬಳಿಗೆ ಅವನ ಶತ್ರುಗಳ ಕಡೆಯಿಂದ ರಾಯಭಾರಿಯೊಬ್ಬನು ಒಂದನು. ಆತನು ಮಹಾ ಪುರುಷನಾದ ಮಹಮ್ಮದನ ತೇಜಸ್ವಿತೆ