ವಿಷಯಕ್ಕೆ ಹೋಗು

ಪುಟ:ಪೈಗಂಬರ ಮಹಮ್ಮದನು.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

CLV ಪೈಗಂಬರ ಮಹಮ್ಮದನು ನಿನ್ನ ಪಾಪವು ಪರಿಹಾರವಾಗುವುದು' ಎಂದು ತಿಳಿಸಿ ಶಿಷ್ಯನನ್ನು ಕಳುಹಿಸಿಬಿಟ್ಟನು. ಅತಿಥಿ ಸತ್ಕಾರ-ಮಹಮ್ಮದನು ತಾನಾದರೂ ಹಸಿವಿನಿಂದಿದ್ದು ಅತಿಥಿಗಳನ್ನು ಸತ್ಕರಿಸುತ್ತಿದ್ದ ಧರ್ಮಾತ್ಮನೆಂಬುದನ್ನು ಹಿಂದೆಯೇ ತಿಳಿದಿದ್ದೇವೆ. ಇಸ್ಲಾಂ ಮತದಲ್ಲಿ ಅತಿಥಿ ಸತ್ಕಾರಕ್ಕೆ ಉಚ್ಚಸ್ಥಾನವಿರು ವುದು. ಭಗವಂತನಿರುವನೆಂಬ ನಂಬಿಕೆಯುಳ್ಳವರು ಅತಿಥಿಗಳನ್ನು ಅಗತ್ಯವಾಗಿ ಸತ್ಕರಿಸಬೇಕೆಂದೂ, ಅತಿಥಿಯಾಗಿ ಬಂದವನು ಗೃಹಸ್ಥನಿಗೆ ತೊಂದರೆಯಾಗುವಷ್ಟು ಕಾಲ ಅಲ್ಲಿ ನಿಲ್ಲಕೂಡದೆಂದೂ, ಪರ ಲೋಕದಲ್ಲಿ ಸದ್ಧತಿಯನ್ನು ಪಡೆಯಲಿಚ್ಛಿಸುವವರೆಲ್ಲರೂ ಅತಿಥಿ ಸತ್ಕಾರ ಮಾಡ ಬೇಕೆಂದೂ ಖುರಾನಿನ ಉಪದೇಶ, ಆಸ್ತಿಕರು ಅನುಸರಿಸಬೇಕಾದ ಸಭ್ಯ ವರ್ತನೆಯ ವಿಷಯವಾಗಿ ಮಹಮ್ಮದನು ಹೀಗೆ ಹೇಳಿದ್ದಾನೆ :- ಭಗವದ್ವಿಚಾರವಾಗಿ ಅಂತರಂಗ ದಲ್ಲಿಯೂ ಬಹಿರಂಗದಲ್ಲಿಯೂ ಗೌರವವನ್ನು ತೋರಿಸು, ವಿಪತ್ತು, ವೈಭವಗಳೆರಡರಲ್ಲಿಯ ಸತ್ಯವನ್ನೇ ನುಡಿ, ಬಡತನ ಬಂದಾಗಲೂ, ಸಿರಿತನವಿರುವಾಗಲೂ ಯಥೋಚಿತವಾಗಿ ವಿವೇಕದಿಂದ ವರ್ತಿಸು. ಬಂಧು ವರ್ಗದವರು ನಿನಗೆ ಉಪಕಾರ ಮಾಡದಿದ್ದರೂ, ಅವರು ಕಷ್ಟ ದಲ್ಲಿದ್ದರೆ, ಅವರ ಪೋಷಣೆಯ ಭಾರವನ್ನು ಅಗತ್ಯವಾಗಿ ವಹಿಸು. ನಿನಗೆ ಭಿಕ್ಷ ಕೊಡದೆ ನಿರಾಕರಿಸಿದ್ದವನೇ ನಿನ್ನ ಮನೆಗೆ ಭಿಕ್ಷಕ್ಕೆ ಬರುವಂತಾದರೆ ಅವನ ಅಪಕಾರವನ್ನೆಣಿಸದೆ ಅವನಿಗೆ ಭಿಕ್ಷವನ್ನು ನೀಡು, ನಿನಗಪಕಾರ ಮಾಡಿದವರನ್ನು ಮನ್ನಿ ಸು. ಭಗವತ್ಸಂಬಂಧವಾದ ದಿವ್ಯ ಜ್ಞಾನವನ್ನು ಮೌನದಿಂದಿದ್ದು ಪಡೆ, ಮಾತನಾಡುವಾಗ ಭಗವಂತನ ನಾಮವ ನ್ನು ಚರಿಸು. ಭಗವಂತನು ಸೃಷ್ಟಿಸಿರುವ ಪ್ರಾಣಿಗಳಲ್ಲಿ ದಯೆಯನ್ನು ತೋರಿಸಿ ಆದರ್ಶ ಪ್ರಾಯನಾಗಿ ಪರಿಣಮಿಸು.” ಮಹಮ್ಮದನು ವಿದ್ಯಾವಂತನಾಗಿರಲಿಲ್ಲ; ಅವನಿಗೆ ಅಕ್ಷರ ಜ್ಞಾನವೇ ಇರಲಿಲ್ಲವೆಂದು ಕೆಲವರು ಹೇಳುವರು. ಆದರೂ ಅವನು ನೆರವೇರಿಸಿರುವ ಮಹತ್ಕಾರ್ಯಗಳನ್ನು ನೋಡಿದರೆ *** ** ಪೂರ್ಣ ಪಾಂಡಿತ್ಯವುಳ್ಳವರೂ ಮುಗ್ಗರಾಗುವಂತಿರು 3 W