ವಿಷಯಕ್ಕೆ ಹೋಗು

ಪುಟ:ಪೈಗಂಬರ ಮಹಮ್ಮದನು.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪೈಗಂಬರ ಮಹಮ್ಮು ದನು ವುದನ್ನಂತು ಅವನು ಎಂದೂ ಕಂಡರಿಯನು, ಮಹಮ್ಮದೀಯರ ಅಸಮಾಧಾನ ಆದಕಾರಣ, ತನ್ನ ಕಡೆಯವರಿಗೆ ಕೇವಲ ಪ್ರತಿಕೂಲ ವಾಗಿದ್ದ ಈ ಒಪ್ಪಂದಕ್ಕೆ ನಿರ್ವಾಹವಿಲ್ಲದೆ ಅವನು ಸಮ್ಮತಿಸಬೇಕಾಯಿತು. . ಕೇವಲ ಅಪಮಾನಕರವಾದ ಈ ಒಪ್ಪಂದ ದಿಂದ ತಮ್ಮ ಕೈಕಾಲುಗಳನ್ನು ತಾವೇ ಕಟ್ಟಿಹಾಕಿಕೊಂಡಂತಾಯಿ ತೆಂದು ಅವನ ಶಿಷ್ಯರಲ್ಲನೇಕರಿಗೆ ಅಸಮಾಧಾನವಾಯಿತು. ಅವರ ಅಭಿಪ್ರಾಯವೂ ಸಾಧುವೆಂಬುದಕ್ಕೆ ಒಂದು ನಿದರ್ಶನವೂ ದೊರೆಯಿತು : ಒಪ್ಪಂದವನ್ನು ಬರೆದು ಷರತ್ತುಗಳ ಪತ್ರಕ್ಕೆ ಉಭಯತ್ರರ ರಾಜುಗಳೂ ಬೀಳುವ ವೇಳೆಗೆ, ಮಕ್ಕಾ ನಗರ ನಿವಾಸಿಯಾದ ಅಬೂ ಜಂಡಲನೆಂ ಬೊಬ್ಬ ಮಹಮ್ಮದೀಯನು ಅಲ್ಲಿಗೆ ಬಂದು, ತಾನು ಇಸ್ಲಾಂ ಮತಾವ ಲಂಬಿಯಾದುದಕ್ಕಾಗಿ ಕೊರೈಷ್ ಮನೆತನದವರು ತನ್ನನ್ನು ಹಿಂಸಿಸು ತಿದ್ದಾರೆಂದೂ, ಮಹಮ್ಮದನು ತನ್ನನ್ನು ಮದೀನಾ ನಗರಕ್ಕೆ ಕರೆ ದೊಯ್ಯಬೇಕೆಂದೂ ಮೊರೆಯಿಟ್ಟು ತನ್ನ ಮೈ ಕೈಗಳ ಮೇಲೆ ಶತ್ರು ಗಳ ಪುಹಾರದಿಂದುಂಟಾದ ಗಾಯಗಳ ಗುರುತುಗಳನ್ನು ತೋರಿ ಸಿದನು. ಮಹಮ್ಮದನ ಅಂತ:ಕರಣವು ನೆನೆದು ನೀರಾಗಿ, ಷರತ್ತು ಗಳಿಗೆ ಆತನೊಬ್ಬ ನಿಷಯವನ್ನು ಮಾತ್ರ ಅಪವಾದವಾಗಣಿಸಿ ಆತನನ್ನು ತನ್ನೊಡನೆ ಕಳುಹಿಸಬೇಕೆಂದು ಮಹಮ್ಮದನು ಶತ್ರುಗಳನ್ನು ಕೇಳಿದರು. ಅವರು ಅದಕ್ಕೆ ಸಮ್ಮತಿಸದೆಹೋಗಲು, ಮಹಮ್ಮದನು ನಿರುಪಾಯನಾಗಿ ಸುಮ್ಮನಾಗಬೇಕಾಯಿತು. ಮಹಮ್ಮದನ ಈ ವಿಧದ ವರ್ತನೆಯನ್ನು ಕಂಡು, ಅವನ ಶಿಷ್ಯರೆಲ್ಲರ ಸೈರಣೆಯ ಅಳಿದು ಹೋಯಿತು ; ಉಮಾರನೆಂಬೊಬ್ಬನ ಹೊರತು ಉಳಿದವರೆಲ್ಲರೂ ಮಹಮ್ಮದನಲ್ಲ ತಮಗಿದ್ದ ವ್ಯಕ್ತಿ, ಗೌರವದ ದೆಸೆಯಿಂದ ಸುಮ್ಮ ನಿದ್ದರು. ಉಮಾರನಿಗೆ ಮಾತ್ರ ಅದು ಸಾಧ್ಯವಾಗಲಿಲ್ಲ; ಮಹಮ್ಮದನ ವರ್ತನೆಯು ನ್ಯಾಯವಾದುದಲ್ಲವೆಂದು ಅವನು ಆಕ್ಷೇಪಿಸಿಯೇಬಿಟ್ಟನು. ಮಹಮ್ಮದನು ಆಗಲೂ ಅವನಲ್ಲಿ ಕೋಪಗೊಳ್ಳದೆ ನಸು ನಗುತ್ತ, * ಆಯಾ ! ನಾನು ಭಗವದಿಚ್ಚೆಗೆ ಅಧೀನನಾಗಿ ಕೆಲಸಮಾಡುವನಲ್ಲವೆ ? ಆಡಿದ ಭಾಷೆಯನ್ನು ನಾವು ಉಳಿಸಿಕೊಳ್ಳುವವರು ಅಹುದೋ ಅಲ್ಲವೋ