ವಿಷಯಕ್ಕೆ ಹೋಗು

ಪುಟ:ಪೈಗಂಬರ ಮಹಮ್ಮದನು.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೨ ಪೈಗಂಬರ ಮಹಮ್ಮದನು ಹಿಂದಣ ಒಪ್ಪಂದದ ನಿಯಮಗಳನ್ನೂ ಉಲ್ಲಂಘಿಸಿದರು. ಕೊನೆಗೆ, ಯತ್ನವಿಲ್ಲದೆ ಮಹಮ್ಮದನು ಯುದ್ಧ ಸನ್ನಾಹ ಮಾಡಿ, ಮಕ್ಕಾ ನಗರ ವನ್ನು ಸ್ವಾಧೀನಪಡಿಸಿಕೊಳ್ಳಬೇಕೆಂದು ಯೋಚಿಸಿದನು. ಆದರೆ, ಶತ್ರುಗಳೂ ಯುದ್ಧಕ್ಕೆ ಸಿದ್ದರಾದರೆ ರಕ್ತಪಾತವು ತಪ್ಪದೆಂಬ ಶಂಕೆಯಿಂದ ಮಹಮ್ಮದನು ಯುದ್ಧ ಸನ್ನಾಹವನ್ನು ಬಹಳ ರಹಸ್ಯವಾಗಿ ನಡೆಯ ಸಿದನು. ಈ ಮಧ್ಯೆ ಹತೀಬನೆಂಬ ದ್ರೋಹಿಯೊಬ್ಬನು ಈ ಸಂದರ್ಭ ವನ್ನರಿತು ಮಹಮ್ಮದನು ಮಕ್ಕಾ ನಗರದ ಮುತ್ತಿಗೆಗೆ ಸಿದ್ಧಮಾಡಿ ಕೊಳ್ಳುತ್ತಿರುವನೆಂದು ಕಾಗದವನ್ನು ಬರೆದು ಅದನ್ನು ಶತ್ರುಗಳಿಗೆ ಮುಟ್ಟಿಸಲು ಮಕ್ಕಾ ನಗರಕ್ಕೆ ದೂತನನ್ನಟ್ಟಿದನು. ಆದರೆ, ಇಂತಹ ಕೃತ್ಯಗಳಿಗೆ ಅವಕಾಶವಾಗದಂತೆ, ಕಾರ್ಯ ಚಟುವಾದ ಮಹಮ್ಮದನು ತಕ್ಕ ಏರ್ಪಾಡನ್ನು ಮಾಡಿದ್ದುದರಿಂದ, ಅವನ ಸೈನಿಕರು ಆ ದೂತನನ್ನು ಪತ್ರ ಸಹಿತವಾಗಿ ಹಿಡಿದು ಕಾರಾಗೃಹಕ್ಕೆ ಸೇರಿಸಿದರು. ತಮ್ಮವನೇ ತನಗೆ ಎರಡು ಬಗೆದನೆಂಬ ರೋಷದಿಂದ ಮಹಮ್ಮದನ ಕಡೆಯವರು ಹತೀಬನ ಮೇಲೆ ಹಲ್ಲು ಕಡಿಯುತ್ತಿರುವಲ್ಲಿ, ಕರುಣಾಳುವಾದ ಮಹ ಮೃದನು ಅಪರಾಧಿಯಾದ ಹತೀ ಬನನ್ನೂ ಅವನ ದೂತನನ್ನ ಕ್ಷಮಿಸಿ, ಅವರಿಬ್ಬರೂ ತಮ್ಮ ಕಾರ್ಯಕ್ಕಾಗಿ ಪಶ್ಚಾತ್ತಾಪಪಡುವಂತೆ ಮಾಡಿದನು. ಯುದ್ಧ ಸನ್ನಾಹವು ಮುಗಿದೊಡನೆಯೇ ಮಹಮ್ಮದನು ಕ್ರಿ. ಶ. ೬೩೦ನೆಯ ವರ್ಷದಲ್ಲಿ, ಸುಸಜ್ಜಿತವಾದ ದೊಡ್ಡ ಸೈನ್ಯದೊಡನೆ ನಕ್ಷಾ ನಗರಕ್ಕೆ ಪ್ರಯಾಣ ಮಾಡಿದನು. ಅವನ ಕಾರ್ಯ ಮುತ್ತಿಗೆ ದಲ್ಲಿ ಪ್ರಾಣವನ್ನ ರ್ಪಿಸಲು ಸಿದ್ಧರಾಗಿ ಹತ್ತು ಸಾವಿರ ಮಂದಿ ಯೋಧರು ಆ ಸೈನ್ಯದಲ್ಲಿದ್ದರು. ಸಾಧ್ಯ ವಾದರೆ ರಕ್ತಪಾತವಿಲ್ಲದೆಯೇ ಮಕ್ಕಾ ನಗರವನ್ನು ಸ್ವಾಧೀನಪಡಿಸಿಕೊಳ್ಳ ಬೇಕೆಂದೂ, ಇಲ್ಲದೆ, ಅವಶ್ಯ ಕಂಡುಬಂದರೆ, ತಾವೆಲ್ಲರೂ ತಮ್ಮ ಉದ್ದೇಶ ಸಾಧನೆಯ ಪ್ರಯತ್ನದಲ್ಲಿ ಸಾಯಲು ಸಿದ್ದರಾಗಿರಬೇಕೆಂದೂ ಮಹ ಮ್ಮದನು ದೃಢ ಸಂಕಲ್ಪ ಮಾಡಿದನು. ಆಕಸ್ಮಿಕವಾಗಿ ಶತ್ರುಗಳು ತಮ್ಮ ನಗರಕ್ಕೆ ಮುತ್ತಿಗೆ ಹಾಕಿದುದನ್ನು ಕಂಡು ಮಕ್ಕಾ ನಿವಾಸಿಗಳು ಆಶ್ಚರ್ಯ