ವಿಷಯಕ್ಕೆ ಹೋಗು

ಪುಟ:ಸುಶೀಲೆ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೮
ಸತೀಹಿತೈಷಿಣಿ

ದೇಶಾಮೃತವು ನನ್ನ ಹೃದಯದಲ್ಲಿ ನೆಲೆಗೊಂಡಿರುವವರೆಗೂ ಆತ್ಮದ್ರೋಹ, ಗುರುದ್ರೋಹ, ಪತಿದ್ರೋಷಾದಿಗಳಿಗೆಂದಿಗೂ ನಾನು ಎಡೆಕೊಡಲಾರೆನು, ಹೊರಟುಹೋಗು.

ತಂತ್ರ-ಹಾಗಾದರೆ ನೀನು ಸಾಯುವೆ | ನಿನಗಾಗಿ ನಿನ್ನ ಗಂಡನೂ ಸಾಯುವನು, ಇದು ನಿಜವು.

ಸುಶೀಲೆ-ಸಾಯುವೆನು; ನನ್ನ ಸತಿಯ ಸಂಗಡ ನಾನು ಸಾಯುವು ದೆಂದರೆ ಸಂತೋಷವೇ ಸರಿ, ಹಗಲನ್ನು ಬಿಟ್ಟು ಇರಳ, ನೆರಳನ್ನು ಬಿಟ್ಟು ವಸ್ತುವೂ ಹೇಗೆ ಇರಲಾರದೋ, ಹಾಗೆಯೇ ಹುಟ್ಟು (ಜನ್ಮ) ಸಾವನ್ನು ಬಿಟ್ಟಿರಲಾರದು, ನನ್ನ ಪತಿಯ ಸಾವಿಗೆ ನೀನು ಕಾರಣೀಭೂತವಾದರೆ ಇಹಪರಗಳಲ್ಲಿ ಎಂತಹ ಯಾತನೆಗಳಿಗೆ ಗುರಿಯಾಗುವೆಯೆಂಬುದನ್ನು ಕ್ಷಣಕಾಲ ಭಾವಿಸಿ ನೋಡು ? ಇನ್ನು ಹೇಳಲಾರೆನು ಇಲ್ಲಿಂದ ಮೊದಲು ಹೊರಗು.

ತಂತ್ರ-ಕೈ ಬೆರಳುಗಳನ್ನು ಕಚ್ಚಿಕೊಳ್ಳುತ್ತ ಕರ್ಕಶಸ್ವರದಿಂದ-ಪಾಪಿ! ಚoಡಿ!! ಹೀಗೆ ಹೇಳಿದೆಯಲ್ಲವೆ ? ಇರಲಿ, ಇನ್ನು ಒಂದು ವಾರದೊಳಗಾಗಿಯೇ ನಿನ್ನೀ ಕಾಠಿಣ್ಯಕ್ಕೆ ತಕ್ಕ ಪ್ರತೀಕಾರ ವನ್ನು ಹೊಂದುವೆ! ಎಂದುಸಿರಿ ಅಲ್ಲಿ ನಿಲ್ಲದೆ ಉನ್ಮತ್ತನಂತೆ ಹೊರಟುಹೋದನು.

ಪಾಪ ! ಸುಶೀಲೆಗೆ ಚಿಂತೆ-ಅನುತಾಪ,-ಕಳವಳಗಳು ಮಿತಿ ಮೀರಿದ್ದುವು. ಚದರಿರುವ ಧೈರ್ಯವನ್ನು ಮತ್ತೆ ಹೊಂದಲು ಅವಕಾಶವಿಲ್ಲ, ಮುಂದೆ ಮಾಡುವುದನೇನೆಂಬುದನ್ನರಿಯಲಾರದೆ ಕಾತರಿಸಿ, ಕಣ್ಣೀರಸುರಿಸುತ್ತ ಮತ್ತೆ ದೇವತಾಪ್ರಾರ್ಥನೆಗೆ ತೊಡಗಿ-ದೇವರ ಜಗುಲಿಯ ಮೇಲೆಯೇ ತಲೆಯಿಟ್ಟು ಮಲಗಿ ಪರವಶಳಾದಳು.