ವಿಷಯಕ್ಕೆ ಹೋಗು

ಪುಟ:ಸುಶೀಲೆ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
[3
ಸುಶೀಲೆ
೧೭

ಸುಶೀಲೆ - ಸುಮ್ಮನೇಕೆ ದುರ್ಲಭವಸ್ತುವನ್ನು ಬಯಸುವೆ? ಈ ದುರಾಶೆಯನ್ನು ಬಿಟ್ಟುಬಿಡು.

ತಂತ್ರ - ಹಾಗೆಯೇ ಹೇಳುವೆಯಲ್ಲವೆ? ಸುಶೀಲೆ! ನೀನಾಗಿ ನನ್ನ ಮಾತನ್ನು ನಡೆಯಿಸಿಕೊಡದಿದ್ದರೆ ನಾನು ಬಲವಂತದಿಂದಾದರೂ ನನ್ನ ಇಚ್ಛಾಪೂರ್ತಿಗಾಗಿ, ಇಂದಿಲ್ಲದಿದ್ದರೆ-ಎಂದಾದರೊಂದುದಿನ, ನಿನ್ನನ್ನು ಭ್ರಷ್ಟಳನ್ನಾಗಿ ಮಾಡದಿರಲಾರೆನು! ಇನ್ನಾದರೂ ನನ್ನ ಅನಂತ....................................

ಸುಶೀಲೆ - ಪಾಪಿ! ನಿನ್ನೀ ಉನ್ಮತ್ತ ಪ್ರಲಾಪಕ್ಕೆ ಧಿಕ್ಕಾರ! ಮತ್ತೆ ಈ ಮಾತೆತ್ತದೆ ಅಲ್ಲಿಂದ ಹಾಗೆಯೇ ಹೊರಟುಹೋಗು. ನನ್ನ ಸುಖದ ಚಿಂತೆ ನನ್ನ ಸ್ವಾಮಿಗೆ ಮಾತ್ರವೇ! ನನ್ನ ಅಭ್ಯದಯಕ್ಕೆ ಕಾರಣವಾದರೂ ಸತೀತ್ವವೊಂದೇ! ನೀನು ನನ್ನನ್ನು ಎಂದಿಗೂ ಮುಟ್ಟಲಾರೆ! ಭ್ರಷ್ಟ! ಹೆಂಗಸು ಎಂದಿನವರೆಗೆ ತನ್ನ ಸತೀತ್ವವನ್ನು ರಕ್ಷಿಸಿಕೊಂಡಿರುವಳೋ, ಅಂದಿನವರೆಗೆ ಅವಳು ಅಬಲೆ, ಆದರೆ ನಿನ್ನಂತಹರ ವಿಚಾರದಲ್ಲಿ ಅವಳು ಅತಿಬಲೆಯೇ! ಸುಳ್ಳಲ್ಲ. ಅವಳು ತನ್ನ ಪಾತಿವ್ರತ್ಯವನ್ನು ಕಡೆಗಣಿಸಿದವಳಾದರೆ, ಆಗ ಅವಳಂತಹ ನೀಚವಸ್ತುವೊಂದೂ ಇರುವುದಿಲ್ಲ. ಇದನ್ನು ಚೆನ್ನಾಗಿ ತಿಳಿದಿರು. ಹೋಗು! ನಿನ್ನ ಆಸೆಯಲ್ಲಿ ಎಳ್ಳಷ್ಟಾದರೂ ಈ ಜನ್ಮದಲ್ಲಿ ಮಾತ್ರವಲ್ಲ; ಎಂದೆಂದಿಗೂ ಕೈ ಕೂಡಲಾರದೆಂದು ತಿಳಿ.

ತಂತ್ರ - ಹಾಗೋ? ನಿಜವೋ? ನಾನೊಬ್ಬನೇ ಹೊರಡಲೋ ನೀನು.............

ಸುಶೀಲೆ - ಚಿಃ! ..... ......ನಿಲ್ಲಬೇಡ, ನನ್ನ ಸ್ವಾಮಿಯ ಅನುಗ್ರಹವು ಪೂರ್ಣವಾಗಿರುವವರೆಗೂ, ಮತ್ತೂ ಗುರುಜನರ ಉಪ