ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ ವಿಮರ್ಶೆಯ ನೆಲೆಗಳು / ೧೦೭

ನಡೆದಾಗಲೇ ವಿಮರ್ಶೆ ಸಾರ್ಥಕವಾಗುತ್ತದೆ. ಇಂತಹ ಪ್ರಯತ್ನಗಳು ಸ್ವಲ್ಪಮಟ್ಟಿಗೆ ಆಗಿದ್ದರೂ, ಅವು ಒಂದು ಪರಂಪರೆಯಾಗಿ ಬೆಳೆದಿಲ್ಲ.

ಇಂತಹ ಸಾಮೂಹಿಕ ಚರ್ಚೆ, ಅಭಿಪ್ರಾಯ ಸಂಗ್ರಹಗಳ ಮೂಲಕ ಪ್ರಚಲಿತವಿರುವ ಎಷ್ಟೋ ಅಭಿಮತಗಳು ಪರಿಶೀಲನೆಗೆ ಒಳಗಾಗ ಬಹುದು. ಒಂದು ಉದಾಹರಣೆಯನ್ನು ತೆಗೆದುಕೊಳ್ಳೋಣ. "ಜನರ ಅಭಿಪ್ರಾಯ", "ಪ್ರೇಕ್ಷಕರ ಬಯಕೆ", "ಜನರೇ ಇದನ್ನು ಬೇಕು, ಯಾ ಬೇಡ ಎಂದಿದ್ದಾರೆ"- ಎಂಬಂತಹ ಜನಾಭಿಪ್ರಾಯವನ್ನು ವಹಿಸಿಕೊಂಡು ಮಾತಾಡುವ ಅಭಿಪ್ರಾಯಗಳಿವೆ. ಇಲ್ಲಿ ನೋಡಬೇಕಾದದ್ದು ಈ ಅನಿಸಿಕೆಗಳು ನಿಜಕ್ಕೂ ಪ್ರಾತಿನಿಧಿಕವೆ? ಜನರು ಏನನ್ನು ಬಯಸಿದ್ದಾರೆ? ಸದ್ಯ ಯಾವುದೇ ಸಂಗತಿಗೆ ಸಿಕ್ಕಿರುವ ಪ್ರೋತ್ಸಾಹ ಅಥವಾ ನಿರುತ್ಸಾಹವು ಜನಾಭಿಪ್ರಾಯದ ಸಂಕೇತವೆ? ಪ್ರೋತ್ಸಾಹವೆಂಬುದು ಬೇರೆ ಸಿಗದಿದ್ದ ರಿಂದ ಇದ್ದುದರಲ್ಲಿ ತೃಪ್ತಿಪಡುವ ಅಭಿರುಚಿಯಿಂದ ಬಂದುದೆ? ಜನರ ಒಲವಿನ ಸೂಚ್ಯಂಕ ಯಾವುದು?

ಇದಕ್ಕಿಂತ ಮೇಲಾಗಿ, “ಜನರು”, “ಪ್ರೇಕ್ಷಕರು" ಎಂದು ಹೇಳು ವಾಗ, ಸಮಗ್ರ ಸಾಮಾನ್ಯಕರಣ (generalisation) ಆಗುತ್ತದೆ. ಜನರೆಂದರೆ ಒಬ್ಬ ವ್ಯಕ್ತಿ ಅಲ್ಲ. ಏಕಾಭಿಪ್ರಾಯದ ಒಂದು ಗುಂಪಲ್ಲ. ಹಾಗಾಗಿ ಜನರ ಅಭಿಪ್ರಾಯವೆಂದು ಯಾರದೋ ಒಂದು ಅಭಿಮತವನ್ನು ಒಟ್ಟಾಗಿ ಹೇಳುವುದು ಸರಿಯಲ್ಲ. ವಿವಿಧಭಿಪ್ರಾಯಗಳಿರುವವರಲ್ಲಿ ಏನೇನು ಯೋಚನೆಗಳಿವೆ? ಜನ ಎಂದರೆ ಯಾರು? ಯಾವ ಅಭಿಪ್ರಾಯಕ್ಕೆ ಹೆಚ್ಚು ಮಹತ್ವ? ಯಾವುದಕ್ಕೆ ಚಾಲನೆ ನೀಡಬೇಕು? ಯಾವುದನ್ನು ತಿದ್ದಬೇಕಾದದ್ದು? ಅಭಿಪ್ರಾಯದ ರೂಪೀಕರಣ ಹೇಗಾಗಿದೆ? ಅದಕ್ಕೆ ಹೇಗೆ ತಿರುವು ನೀಡಬಹುದು? ಎಂಬ ಬಗೆಗಳಿಗೆ ವೈಜ್ಞಾನಿಕವಾದ ಸಂಗ್ರಹ ಸರ್ವೇಕ್ಷಣೆ, ವಿಶ್ಲೇಷಣೆ ನಡೆಯಬೇಕು. ಇದು ವಿಮರ್ಶಕರ ಮುಂದೆ ಇರುವ ಒಂದು ಆಹ್ವಾನ.

ವಿಮರ್ಶೆ - ಮರುವಿಮರ್ಶೆ

ವಿಮರ್ಶೆಯೆಂಬುದು ಒಂದು ನಿರಂತರ ಪ್ರಕ್ರಿಯೆ, ವಿಮರ್ಶಕನು ವಿವಿಧ ಅಂಶಗಳನ್ನು ಪರಿಶೀಲಿಸಿ, ಸಾಕಾರವಾಗಿ, ವ್ಯವಸ್ಥಿತವಾಗಿ, ತಾತ್ವಿಕ ಹಿನ್ನೆಲೆಯಲ್ಲಿ, ಅಭಿಪ್ರಾಯವನ್ನು ಮಂಡಿಸುತ್ತಾನೆ. ಆದರೆ ಅವನದು ಆಚಾರ್ಯಪೀಠವಲ್ಲ, ವಿಮರ್ಶಕನನ್ನು ಮತ್ತೊಬ್ಬ ಚಿಂತಕನು ಪ್ರಶ್ನಿಸ