ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ ತೆಂಕಮಟ್ಟು / ೫೧

(ಅಡಿಗೆರೆಯಿಂದ ಗುರುತಿಸಿದ ಪ್ರಸ್ತಾಕ್ಷರಗಳನ್ನು ದೀರ್ಘವಾಗಿ ಉಚ್ಚರಿಸಿದ್ದಾದರೆ ಮಾತ್ರ ಗಣನಿಯಮಕ್ಕೆ ಸರಿಯಾಗುವುದೆಂಬುದನ್ನು ಗಮನಿಸಬೇಕು.)

ಇದನ್ನು ಅನುಸರಿಸಿದ ಪಾರ್ತಿಸುಬ್ಬನ ಸಂಸ್ಕೃತ ವೃತ್ತಗಳಲ್ಲಿಯೂ ಇದೇ ರೀತಿಯ ಶೈಥಿಲ್ಯವನ್ನು ಕಾಣಬಹುದು.

ಉದಾ :
ಧಾತ್ರೀಗುತ್ತಮ ಕಣ್ವನಾಮಪುರದೀ ನಿಂತಿರ್ದ ಶ್ರೀಕೃಷ್ಣನ |
ಎಂದಾ ರಾಯನ ಮಾತ ಕೇಳು ನೃಪತೀ ಸಂದೇಹಮಂ ಮಾಡುತ |
ತಾರಾದೇವಿ ವಿವೇಕದಿಂದ ತಡೆದೂ ತತ್ಕಾಂತಗಿಂತೆಂದಳು | - ಇತ್ಯಾದಿ.

ಇದಲ್ಲದೆ ಸುಬ್ಬನ ಪದ್ಯಗಳಲ್ಲಿ ಕಾಣುವ ಕೆಲವೊಂದು ಪ್ರಾಸಾಕ್ಷರಗಳು ಕನ್ನಡದಲ್ಲಿ ದೋಷವೆಂದೆನಿಸಲ್ಪಡುವಂಥವೂ ಮಲೆಯಾಳ ಭಾಷೆಗೆ ಸಹಜವಾದುವೂ ಇರುತ್ತವೆ. ಎಂಬುದನ್ನೂ ಗಮನಿಸಬಹುದು.

ಉದಾ :
'ತ' ಕಾರಕ್ಕೆ 'ದ' ಕಾರ, 'ಲ' ಕಾರಗಳನ್ನೂ, 'ಪ' ಕಾರಕ್ಕೆ 'ಬ' ಕಾರ, 'ವ ಕಾರಗಳನ್ನೂ, 'ಹ' ಕಾರಕ್ಕೆ 'ಯ', 'ವ', 'ಗ' ಕಾರಗಳನ್ನು 'ಲ' ಕಾರಕ್ಕೆ 'ನ' ಕಾರ, 'ಟ' ಕಾರಕ್ಕೆ 'ಡ' ಕಾರ, 'ಶ' ಕಾರ 'ಕ್ಷ' ಕಾರಗಳಿಗೆ 'ಚ' ಕಾರ ಇತ್ಯಾದಿ ಪ್ರಾಸಾಕ್ಷರಗಳನ್ನು ಆತನ ಕೃತಿಗಳಲ್ಲಿ ಸರ್ವತ್ರ ಕಾಣಬಹುದಾಗಿದೆ. ಇದಲ್ಲದೆ ಮಣಿಪ್ರವಾಳ ಶೈಲಿಯ ಆ ಮಲೆಯಾಳ ರಾಮಾಯಣದಲ್ಲಿರುವ ಕೆಲವೊಂದು ಪದಪ್ರಯೋಗಗಳು ಇದ್ದಕ್ಕಿದ್ದಂತೆಯೇ ಸುಬ್ಬನ ಕೃತಿಗಳಲ್ಲಿ ಬಂದಿರುವುದನ್ನೂ ಲಕ್ಷಿಸಬಹುದು.

ಉದಾ :
ಮನ್ನರಾಧಿಪತಿ, ವಾನವಾಧಿಪ (ದೇವತೆಗಳ ಅರಸ), ಮಾನಿನಿ ಮಾರ್‌ಮಾಲೆ,
ನಂದಿಪೂರದನೆ, ತಳಿರ್ಪದಯುಗೆ, ಮಾಮುನಿಪ, ಮಲರ್‌ಬಾಣ, ಧೈರ್ಯ
ಮಾನಿ, ಆಳುಭೇದ, ವಾಸಿಪಂಥ, ಅತಿಚೆನ್ನು ಇತ್ಯಾದಿ.

ಹೆಚ್ಚೇಕೆ ತನ್ನ ರಾಮಾಯಣ ಕೃತಿಗಳ ಆರಂಭದಲ್ಲಿ ಆ ಕಥಕಳಿ ರಾಮಾಯಣದ ಮೊದಲ ಎರಡು ಸ್ತುತಿವೃತ್ತಗಳನ್ನೇ ಸುಬ್ಬನು ಉದ್ಧರಿಸಿಕೊಂಡಿರುತ್ತಾನೆ. ಈ ವೃತ್ತ ಗಳಿರುವ ಹಳೆಯ ಓಲೆಪ್ರತಿಗಳನ್ನು ಮೈಸೂರು ವಿಶ್ವವಿದ್ಯಾಲಯದ ಗ್ರಂಥ ಸಂಗ್ರಹ ದಲ್ಲಿಯೂ ನೋಡಬಹುದು. ಆ ವೃತ್ತಗಳು ಹೀಗಿವೆ :

ಮದಗಜವದನಂ ತಂ ವಿಘ್ನು ವಿಚ್ಛೇದದಕ್ಷ)
ಸರಸಿಜಭವಜಾಯಾಂ ಭಾರತೀಂ ಸೋಮಮೀಶಂ |
ನಿತಿಚರಕುಲಕಾಲಂ ರಾಘವಂ ಜಾನಕೀಂ ಚ |
ಪ್ರತಿದಿನಮತಿ ಭಕ್ಷ್ಯಾ ನೌಮಿ ವಾಲ್ಮೀಕಿಮಾರ್ಯಂ ǁ

ಪ್ರಾಪ್ತಾನಂತಘನಪ್ರಿಯಃ ಪ್ರಿಯತಮ ಶ್ರೀರೋಹಿಣೀಜನ್ಮನೋ |
ವಂಚಿಕ್ಷಾವರ ವೀರಕೇರಳ ವಿಭೋರಾಜ್‌: ಸ್ವಸೋ: ಸೂನುನಾ |
ಶಿಷ್ಯಣ ಪ್ರವರೇಣ ಶಂಕರಕವೇ ರಾಮಾಯಣಂ ತನ್ಯತೇ |
ಕಾರುಣ್ಯನ ಕಥಾಗುಣೇನ ಕವಯಃ ಕುರ್ವಂತು ತಾಂ ಕರ್ಣಯೋ ǁ