ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೪ / ಕುಕ್ಕಿಲ ಸಂಪುಟ









great man ಎಂದು ಅರ್ಥವಿದೆ; ಅಲ್ಲದೆ (ತೆಲುಗಿನ) 'ಎಕ್ಕಾಡು' ಎಂಬ ಶಬ್ದವನ್ನು ಕಿಟ್ಟೆಲರು ಉದಾಹರಿಸಿ, ಅದರ ಅರ್ಥವನ್ನು greatness ಎಂದೂ ಕೊಟ್ಟಿದ್ದಾರೆ. ಹಾಗಾದರೆ, 'ಎಕ್ಕಡಿಗ' ಎಂದರೆ ಶ್ರೀಮಂತ ದೊಡ್ಡ ಮನುಷ್ಯ- ಎಂಬರ್ಥವೆಂದಾಯಿತು. ಮೇಲೆ ತೋರಿಸಿದ ಸಂದರ್ಭಕ್ಕೆ ಈ ಅರ್ಥವು ಸಂಪೂರ್ಣ ಉಚಿತವಾಗಿದೆಯೆಂಬುದನ್ನು ವಿವರಿಸಬೇಕಾಗಿಲ್ಲ. ಮುಂದೆ ಅಲ್ಲಿ ಪ್ರದರ್ಶಿತ ವಾದುದೂ ನರ್ತಕಿಯರಿಬ್ಬರ ಕೇವಲ ನರ್ತನ; 'ಯಕ್ಷಗಾನ'ದ ವೈಶಿಷ್ಟ್ಯಗಳಾವುವೂ ಅಲ್ಲಿ ಗೋಚರವಾಗುವುದಿಲ್ಲ. ಮತ್ತು 'ಯಕ್ಷಗಾನ' ಪ್ರದರ್ಶನಗಳಲ್ಲಿ ಸ್ತ್ರೀವೇಷ ಗಳು ಹೊರತು, ಜಾತಿಗೆ ಅದರಲ್ಲಿ ಪ್ರವೇಶವೇ ಎಲ್ಲಿಯೂ ಇಲ್ಲವೆಂಬುದೂ ಗಮನಾರ್ಹ.

ಸೊರಬದ ೧೩೮ನೆಯ ಶಾಸನದಲ್ಲಿ ಉತ್ಕಲದೇವನೆಂಬ ರಾಜನ ಸ್ತುತಿ ಇದೆ-

ಚಾಲುಕ್ಯ ಜಗದೇಕ ಮಲ್ಲನ ಆಳ್ವಿಕೆಯಲ್ಲಿ (೧೦೧೮-೧೦೪೨) ಬರೆದ ಶಾಸನ ಕಚ. ಪ್ರಥಮ ಭಾಗ, ಪರಿಶಿಷ್ಟ ಪುಟ – ೩೬೧.

ಸೊರಬದ ೧೪೦ನೆಯ ಶಾಸನದಲ್ಲಿ ಸಿಂಗದೇವ ಕವಿಯು (ಶಕ ೧೧೧೯ನೇ ಶಾಸನ) ಜಡ್ಡುಳಿಗೆಯ ಎಕ್ಕಲದೇವನಿಗೂ ಚಟ್ಟಳದೇವಿಗೂ ಮಗನೆಂದು ಹೇಳಿದೆ. ಕ.ಚ. ಪುಟ ೩೯೧.


(ರಾಷ್ಟ್ರಮತ, ವಿಶೇಷ ಸಂಚಿಕೆ, ೨೬ ಜನವರಿ ೧೯೬೧.)